ಮಂಗಳ ಡ್ಯಾಮ್ ತೂಬಿನ ಬಳಿ ಸಣ್ಣ ರಂಧ್ರ ಬಿದ್ದು ನೀರು ಪೋಲು : ಡ್ಯಾಮ್ ಸಂರಕ್ಷಣೆಗೆ ಗೇಟ್ ತೆರೆದು ನೀರು ಹೊರಕ್ಕೆ..!
ಕುಣಿಗಲ್ ::ಮಂಗಳ ಡ್ಯಾಮ್ ತೂಬಿನ ಬಳಿ ಸಣ್ಣ ರಂಧ್ರ ಬಿದ್ದು ನೀರು ಪೋಲಾಗುತ್ತಿದ್ದು ಡ್ಯಾಮ್ ಸಂರಕ್ಷಣೆಗೆ 5 ಗೇಟ್ಗಳನ್ನು ತೆರೆದು ನೀರು ಹೊರಕ್ಕೆ ಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ತಾಲೂಕಿನ ಮಾರ್ಕೋನಹಳ್ಳಿ ಸಮೀಪದ ಮಂಗಳ ಡ್ಯಾಮ್ ನಿಂದ ರೈತರಿಗೆ ನೀರು ಕೊಡುವ ತೂಬಿನ ಬಳಿಯ ಒಳಭಾಗದಲ್ಲಿ ತೂಬಿನ ಪಕ್ಕದಲ್ಲಿ ಮಾಳೇ ಬಿದ್ದು ನೀರು ಹೋಗುತ್ತಿರುವುದು ಬುಧವಾರ ಬೆಳಗಿನ ಜಾವ ಕಂಡು ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಅವಘಡಕ್ಕೆ ಕಾರಣವಾಗಿದ್ದು ರೈತರು ಆತಂಕಕ್ಕೆ ಒಳಗಾಗಿ ಕೊಡಲೇ ವಿಷಯವನ್ನು ಯಡಿಯೂರು ಹೇಮಾವತಿ ಇಂಜಿನಿಯರ್ ಗಳ ಗಮನಕ್ಕೆ ತಂದಿದ್ದಾರೆ.
ತಕ್ಷಣ ಎಚ್ಚೆತ್ತ ಹೇಮವತಿ ಅಧಿಕಾರಿಗಳು ಸ್ಥಳೀಯ ರೈತರು ಡ್ಯಾಮ್ ಬಳಿಯಲ್ಲಿ ಸೇರಿಕೊಂಡು ತೂಬಿನ ಬಳಿಯಲ್ಲಿ ಮಾಳೆ ಬಿದ್ದು ನೀರು ಪೋಲಾಗುತ್ತಿರುವುದನ್ನು ತಡೆಯಲು ಪ್ರಯತ್ನಪಟ್ಟಿದ್ದಾರೆ. ಡ್ಯಾಮ್ ಸಂರಕ್ಷಣೆ ಹಿತದೃಷ್ಟಿಯಿಂದ ಯಡಿಯೂರು ಹೇಮಾವತಿ ಇಂಜಿನಿಯರ್ಗಳು ಮಂಗಳ ಡ್ಯಾಮ್ ನ 5 ಗೇಟ್ಗಳನ್ನು ಸಾಧಾರಣವಾಗಿ ತೆರೆದು ನೀರನ್ನು ನದಿಗೆ ಬಿಟ್ಟಿದ್ದಾರೆ ಒಟ್ಟಾರೆ ಈ ಘಟನೆಯಿಂದ ಕಾವೇರಿ ನೀರಾವರಿ ನಿಗಮದ ಯಡಿಯೂರು ವಿಭಾಗದ ಹೇಮಾವತಿ ಅಧಿಕಾರಿಗಳು ತಬ್ಬಿಬಾಗಿದ್ದಾರೆ.
Oplus_16908288
ನದಿಗೆ ಬಿಟ್ಟಿರೋ ನೀರನ್ನು ನೋಡಿದ ರೈತರು ಆತಂಕಕ್ಕೆ ಒಳಗಾಗಿರುವುದು ಕಂಡುಬಂದಿದೆ.
ಒಟ್ಟಾರೆ ತೂಬಿನ ಬಳಿಯಲ್ಲಿ ದುರಸ್ತಿ ಕಾರ್ಯ ಬರದಿಂದ ಸಾಗಿದೆ.ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಸಿ ಇ, ಎಸ್ ಸಿ, ಕುಣಿಗಲ್ ತಾಸಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ರೇಣುಕಾ ಪ್ರಸಾದ್ ಬಿ.ಎನ್



