
ಪಾವಗಡ :15 79ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶನೇಶ್ವರ ದೇವಸ್ಥಾನ ಹಿಂಭಾಗವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶಾಂತಿ ಮೆಡಿಕಲ್ಸ್ ಮಾಲೀಕರಾದಂತಹ ಗಂಗಿನೇನಿ ದೇವರಾಜ್ ರವರು ಎಲ್ಲಾ ಕ್ರೀಡೆ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಿದರು ಸ್ವತಂತ್ರ ದಿನಾಚರಣೆಯ ಧ್ವಜಾರೋಹಣ ಮಾಡಿ ಮಾಡಿ ಮಾತನಾಡಿದ ಅವರು ನಮ್ಮ ಮಾವನರಾದಂತಹ ಡಾಕ್ಟರ್ ಪಿ. ನಾರಾಯಣಪ್ಪ ರವರ ಆಶೀರ್ವಾದದೊಂದಿಗೆ ಈ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಅಭ್ಯಾಸ ಮಾಡಿ ತಾಲೂಕು ಮತ್ತು ಜಿಲ್ಲಾಮಟ್ಟಗಳಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಶಾಲೆಗೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೊರ್ ನ ವ್ಯವಸ್ಥಾಪಕರಾದಂತಹ ಕುಮಾರ್ ನಾಯಕ್ ರವರು ಈ ಶಾಲೆಗೆ ಪ್ರಿಂಟರ್ ಅನ್ನು ಕೊಡುಗೆ ನೀಡಿ ಮಾತನಾಡಿದ ಅವರು ನಾನು ಪಾವಗಡ ತಾಲೂಕಿನಲ್ಲಿ ಕೆಲಸ ಮಾಡುವವರೆಗೂ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಮಾರುತೀಶ್ ರವರು ಮಾತನಾಡಿ ಹಿಂದಿನ ವರ್ಷ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಗಾಯತ್ರಿ ಭಾಯಿ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸ್ಕೂಲ್ ಬ್ಯಾಗ್ ನೋಟ್ ಬುಕ್ ಗಳನ್ನು ವಿತರಣೆ ಮಾಡಿದ್ದರು ಹಾಗೂ ಭೂನ್ಸ್ ಆಸ್ಪತ್ರೆಯ ಪ್ರಖ್ಯಾತ ವೈದ್ಯರಾದಂತಹ ಶ್ರೀಮತಿ ಬದ್ರು ಜಮಾ ಖಾನಂ ರವರು ಡಿಜಿಟಲ್ ಸ್ಮಾಟ್೯ ಬೋಡ್೯ ಕೊಡುಗೆಯಾಗಿ ಕೊಟ್ಟಿರುತ್ತಾರೆ.
ಇವರೆಲ್ಲರಿಗೂ ನಮ್ಮ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ ಸನ್ಮಾನ ಮಾಡಿ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯಾದ ಆದಿ ಲಕ್ಷ್ಮಮ್ಮ ಹಾಗೂ ಶಾಲಾ ಸಿಬ್ಬಂದಿಯವರು ಹಾಜರಿದ್ದರು.