ತುಮಕೂರುಪಾವಗಡ

ಶನಿಮಹಾದೇವರ ಭಕ್ತಿರಿಗೆ ವೈದ್ಯ ಡಾ.ಎಂ.ಹೆಚ್ ನಾರಾಯಣಪ್ಪರವರಿಂದ ಅನ್ನದಾಸೋಹ

 

ಪಾವಗಡ : ಪಾವಗಡ ಪಟ್ಟಣದ ಪುರಸಭೆಯ ಪಕ್ಕದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಕ್ಲಬ್ ನೇತೃತ್ವದಲ್ಲಿ ಪಾವಗಡ ಪಟ್ಟಣದ ಶ್ರೀ ಹರ್ಷ ನರ್ಸಿಂಗ್ ಹೊಂ ಖ್ಯಾತ ವೈದ್ಯರಾದ ಡಾಕ್ಟರ್ ಎಂ ಹೆಚ್ ನಾರಾಯಣಪ್ಪ ರವರ ಸಹಕಾರದೊಂದಿಗೆ ಕ್ಲಬ್ ನ ಆವರಣದಲ್ಲಿ ಶ್ರಾವಣ ಮೂರನೇ ಶನಿವಾರ ಶನಿಮಹಾತ್ಮ ದೇವಸ್ಥಾನಕ್ಕೆ ಬಂದಿರುವ ಭಕ್ತರಿಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಈ ಅನ್ನದಾಸೋಹದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಪಿ ಎಚ್ ರಾಜೇಶ್, ಕ್ಲಬ್ ನ ಸದಸ್ಯರಾದ
ನಾಗರಾಜ್ ನಾಯಕ, ಕಾವಲಗೆರೆ ನರಸಿಂಹಮೂರ್ತಿ, ನಂಜುಂಡಸ್ವಾಮಿ,ಶ್ಯಾಮಣ್ಣ, ಬ್ಯಾಂಕ್ ನಾರಾಯಣಪ್ಪ, ಸಿ ಕೆ ಪುರ ವೆಂಕಟೇಶ್ ಇನ್ನು ಮುಂತಾದವರು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker