kunigal Archives » ಸುವರ್ಣ ಪ್ರಗತಿ https://suvarnapragathi.in/archives/tag/kunigal ಕನ್ನಡ ದಿನ ಪತ್ರಿಕೆ Mon, 26 Dec 2022 18:19:47 +0000 en-US hourly 1 https://wordpress.org/?v=7.0 https://suvarnapragathi.in/wp-content/uploads/2021/08/cropped-suvarna-pragathi-logo-2-32x32.png kunigal Archives » ಸುವರ್ಣ ಪ್ರಗತಿ https://suvarnapragathi.in/archives/tag/kunigal 32 32 ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ https://suvarnapragathi.in/archives/5289 Mon, 26 Dec 2022 18:19:47 +0000 https://suvarnapragathi.in/?p=5289 ಕುಣಿಗಲ್ :  ವಿದ್ಯಾಭ್ಯಾಸಕ್ಕೆಂದು ತುಮಕೂರಿಗೆ  ತೆರಳುವ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಬಸ್ಸಿಲ್ಲದೆ ಪರದಾಡಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗೆ ಇಳಿದ ಘಟನೆ ಸೋಮವಾರ ನಡೆಯಿತು.  ಕುಣಿಗಲ್ ತಾಲೂಕಿನ ವಿದ್ಯಾರ್ಥಿಗಳು ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಉನ್ನತ ವ್ಯಾಸಂಗ  ಮಾಡಲೆಂದು ತುಮಕೂರಿನ ಜಿಲ್ಲಾ ಕೇಂದ್ರದ ವಿವಿಧ  ಕಾಲೇಜುಗಳಿಗೆ ತೆರಳುತ್ತಾರೆ  ಆದರೆ ಕುಣಿಗಲ್ ಕೆಎಸ್ಆರ್ಟಿಸಿ ಡಿಪೋನ್ನ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸುಗಳಿಲ್ಲದೆ ಕಾಲೇಜುಗಳಿಗೆ ತೆರಳಲು ತುಂಬಾ ತೊಂದರೆಯಾಗಿತ್ತು ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ …

The post ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ appeared first on ಸುವರ್ಣ ಪ್ರಗತಿ.

]]>

ಕುಣಿಗಲ್ :  ವಿದ್ಯಾಭ್ಯಾಸಕ್ಕೆಂದು ತುಮಕೂರಿಗೆ  ತೆರಳುವ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಬಸ್ಸಿಲ್ಲದೆ ಪರದಾಡಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗೆ ಇಳಿದ ಘಟನೆ ಸೋಮವಾರ ನಡೆಯಿತು.

 ಕುಣಿಗಲ್ ತಾಲೂಕಿನ ವಿದ್ಯಾರ್ಥಿಗಳು ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಉನ್ನತ ವ್ಯಾಸಂಗ  ಮಾಡಲೆಂದು ತುಮಕೂರಿನ ಜಿಲ್ಲಾ ಕೇಂದ್ರದ ವಿವಿಧ  ಕಾಲೇಜುಗಳಿಗೆ ತೆರಳುತ್ತಾರೆ  ಆದರೆ ಕುಣಿಗಲ್ ಕೆಎಸ್ಆರ್ಟಿಸಿ ಡಿಪೋನ್ನ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸುಗಳಿಲ್ಲದೆ ಕಾಲೇಜುಗಳಿಗೆ
ತೆರಳಲು ತುಂಬಾ ತೊಂದರೆಯಾಗಿತ್ತು ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಸುಮಾರು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ವಿಷಯ ತಿಳಿಸಿದರು ಕೆ ಎಸ್ ಆರ್ ಟಿ ಸಿ ಯ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ತುಮಕೂರಿಗೆ ವಿದ್ಯಾಭ್ಯಾಸಕ್ಕೆಂದು ತೆರಳುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಸುಗಳಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಅಧಿಕಾರಿಗಳ ನಿರ್ಲಕ್ಷದಿಂದ ಬೇಸತ್ತ ವಿದ್ಯಾರ್ಥಿಗಳು ಸೋಮವಾರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಗೆ ಇಳಿದು ಅವ್ಯವಸ್ಥೆಯ ಬಗ್ಗೆ ಧಿಕ್ಕಾರ ಕೂಗಿ ತುಮಕೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಮಾಡುವವರೆಗೂ ಪ್ರತಿಭಟನೆಯನ್ನು   ಕೈ ಬಿಡುವುದಿಲ್ಲ ಎಂದು ಅಧಿಕಾರಿಗಳ ನಿರ್ಲಕ್ಷ ಖಂಡಿಸಿ  ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಈ ಸಂಬಂಧ ಕೆಲವು ವಿದ್ಯಾರ್ಥಿಗಳು  ಮಾತನಾಡಿ  ಸರ್ಕಾರ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉಚಿತ  ಬಸ್ ಪಾಸ್ ನೀಡಿದರು ಏನು ಪ್ರಯೋಜನ ಎಂದು ಪ್ರಶ್ನಿಸಿ  ಸರ್ಕಾರಕ್ಕೆ ವಿದ್ಯಾರ್ಥಿಗಳು ಇಡೀ ಶಾಪ ಹಾಕಿ ಸಕಾಲಕ್ಕೆ ಬಸ್ ಗಳನ್ನು ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಮುಂದುವರೆಸಿದ್ದರು ತಕ್ಷಣ ಎಚ್ಚೆತ ಕೆ ಎಸ್ ಆರ್ ಟಿ ಸಿ  ಅಧಿಕಾರಿಗಳು  ಸ್ಥಳಕ್ಕೆ ಆಗಮಿಸಿ ಸಕಾಲಕ್ಕೆ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.ಪ್ರತಿಭಟನೆಗೆ ಜೆಡಿಎಸ್ ತಾಲೂಕ ಅಧ್ಯಕ್ಷ ಜಗದೀಶ್ ನಾಗರಾಜಯ್ಯ ಸಾತ್ ನೀಡಿ ಅಧಿಕಾರಿಗಳನ್ನು ಬಸ್ ಅವ್ಯವಸ್ಥೆಯ ಬಗ್ಗೆ ತರಾಟೆಗೆ ತೆಗೆದುಕೊಂಡ ಘಟನೆಯು ಜರುಗಿತು.   ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಗುರುಪ್ರಸಾದ್ ಪೊಲೀಸ್ ಬಂದೋಬಸ್ ಕೈಗೊಂಡಿದ್ದರು.

The post ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ appeared first on ಸುವರ್ಣ ಪ್ರಗತಿ.

]]>
ಜೆ.ಡಿ.ಎಸ್.ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ತೊರೆದು ಪಕ್ಷವನ್ನು ಅಧಿಕಾರಕ್ಕೆ ತನ್ನಿ : ಡಿ ನಾಗರಾಜಯ್ಯ https://suvarnapragathi.in/archives/5275 Sat, 24 Dec 2022 18:38:27 +0000 https://suvarnapragathi.in/?p=5275 ಕುಣಿಗಲ್ : ರಾಜ್ಯದಲ್ಲಿ  ಜೆಡಿಎಸ್  ಪಕ್ಷದ ಪೂರ್ಣಾವಧಿ   ಸರ್ಕಾರ ತರಲು 123 ಹೆಚ್ಚಿನ  ಶಾಸಕರನ್ನ ಗೆಲ್ಲಿಸುವ ಮೂಲಕ  ಹೆಚ್‍ಡಿ  ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತೊರೆದು ಜೆಡಿಎಸ್ ಸರ್ಕಾರವನ್ನು  ಅಧಿಕಾರಕ್ಕೆ ತರಬೇಕೆಂದು ಮಾಜಿ ಮಂತ್ರಿ ಡಿ ನಾಗರಾಜಯ್ಯ ಮನವಿ ಮಾಡಿದರು. ಪಟ್ಟಣದ ನಕ್ಷತ್ರ ಪ್ಯಾಲೇಸಿನಲ್ಲಿ ತಾಲೂಕು ಜಾತ್ಯಾತೀತ ಜನತಾದಳ ಪಂಚರತ್ನ ಯಾತ್ರೆ ಬರುವ 30 ರಂದು ಆಗಮಿಸುವುದರಿಂದ   ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು …

The post ಜೆ.ಡಿ.ಎಸ್.ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ತೊರೆದು ಪಕ್ಷವನ್ನು ಅಧಿಕಾರಕ್ಕೆ ತನ್ನಿ : ಡಿ ನಾಗರಾಜಯ್ಯ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ರಾಜ್ಯದಲ್ಲಿ  ಜೆಡಿಎಸ್  ಪಕ್ಷದ ಪೂರ್ಣಾವಧಿ   ಸರ್ಕಾರ ತರಲು 123 ಹೆಚ್ಚಿನ  ಶಾಸಕರನ್ನ ಗೆಲ್ಲಿಸುವ ಮೂಲಕ  ಹೆಚ್‍ಡಿ  ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ತೊರೆದು ಜೆಡಿಎಸ್ ಸರ್ಕಾರವನ್ನು  ಅಧಿಕಾರಕ್ಕೆ ತರಬೇಕೆಂದು ಮಾಜಿ ಮಂತ್ರಿ ಡಿ ನಾಗರಾಜಯ್ಯ ಮನವಿ ಮಾಡಿದರು.
ಪಟ್ಟಣದ ನಕ್ಷತ್ರ ಪ್ಯಾಲೇಸಿನಲ್ಲಿ ತಾಲೂಕು ಜಾತ್ಯಾತೀತ ಜನತಾದಳ ಪಂಚರತ್ನ ಯಾತ್ರೆ ಬರುವ 30 ರಂದು ಆಗಮಿಸುವುದರಿಂದ   ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪೂರ್ಣಾವಧಿ ಮುಖ್ಯಮಂತ್ರಿ ಯಾಗಿ ಪ್ರಧಾನಮಂತ್ರಿಯಾಗಿ ಅಧಿಕಾರ ಮಾಡಲಿಲ್ಲ ಆದರೂ ಸಹ ಸಿಕ್ಕಿದ ಕಾಲಾವಕಾಶದಲ್ಲಿ   ರೈತರು, ಹಿಂದುಳಿದ ವರ್ಗದವರು, ದೀನದಲಿತರ   ಅಲ್ಪಸಂಖ್ಯಾತರ ಏಳಿಗೆಗೆ  ಹಲವಾರು ಜನಪ್ರಿಯಯೋಜನೆಗಳನ್ನ ಜಾರಿಗೆ ತಂದಂತಹ ಅವುಗಳು ಪೂರ್ಣ  ಯಶಸ್ಸು ಸಿಗದೇ ಇರುವುದರಿಂದ  ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷವನ್ನ  ಐದು ವರ್ಷಗಳ ಕಾಲ ಪೂರ್ಣ ಅಧಿಕಾರ ಮಾಡಲು 123ಕ್ಕೂ ಹೆಚ್ಚು ಸ್ಥಾನ  ಗೆಲ್ಲಿಸುವ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಇವರ ಆಡಳಿತ ಅವಧಿಯಲ್ಲಿ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ ಶ್ರೀ ಶಕ್ತಿ ಸಂಘಗಳು ಸಾಲಮನ್ನಾ  ಪರಿಶಿಷ್ಟ ಜಾತಿ ಜನಾಂಗದವರ ಅಭಿವೃದ್ಧಿ ಕೈಗೊಳ್ಳಲು ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು  ಬಿಜೆಪಿ ಪಕ್ಷವು ಗ್ಯಾಸ್ ಸಿಲಿಂಡರ್  ಗೊಬ್ಬರ ಸಬ್ಸಿಡಿ ನೀಡುವ ಮೂಲಕ ಜನರಿಗೆ ಮಹಿಳೆಯರಿಗೆ ದ್ರೋಹ ಬಗೆದು ನಾಟಕವಾಡಿ ಇದನ್ನು ಈಗ ತೆಗೆದು ಹಾಕಿದೆ ಎಂದು ಆರೋಪಿಸಿದವರು   ಮುಂದಿನ ದಿನಗಳಲ್ಲಿ ಬೆಸ್ಕಾಂ ಇಲಾಖೆಯನ್ನು  ಖಾಸಗಿಕರಣ ಗೊಳಿಸಿ ರೈತರ ಕೊಳವೆಬಾವಿ ಗಳಿಗೆ ವಿದ್ಯುತ್ ಮೀಟರ್  ಅಳವಡಿಸುತ್ತಾರೆ ಎಂದು ಎಚ್ಚರಿಸಿ  ಶಾಸಕ ಡಾ ರಂಗನಾಥ್ ಹಾಗೂ ಲೋಕಸಭಾ ಸದಸ್ಯ ಡಿಕೆ ಸುರೇಶ್ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿ ಮಹಿಳೆಯರನ್ನು ಚುನಾವಣೆ ಹತ್ತಿರವಾದಂತೆ  ಗುಡಿಗೋಪರ ದರ್ಶನ  ಮಾಡಿಸಿ ಆಣೆ ಪ್ರಮಾಣ ಮಾಡಿಸಿ   ಜನರ ಮತಗಳಿಸಲು ಅಂಗಲಾಚುತಿದ್ದಾರೆ     ಹಾಲಿ  ಶಾಸಕರನ್ನ ಶಾಶ್ವತವಾಗಿ ಮನೆಗೆ ಕಳುಹಿಸಿ  ಎಂದ ಅವರು  ಇನ್ನು  ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ತಮ್ಮನಾಗಿ ಎಲ್ಲಾ ರೀತಿಯ ಅಧಿಕಾರವನ್ನು ಜೆಡಿಎಸ್ ಪಕ್ಷದಿಂದ ಅನುಭವಿಸಿ ರಾಜಕೀಯವಾಗಿ ಬೆಳೆಸಿದ  ಸ್ವಂತ ಅಣ್ಣನಿಗೆ ದ್ರೋಹ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಸೋತಿ ಸುಣ್ಣವಾದರೂ ಬುದ್ಧಿ ಬಂದಿಲ್ಲ ಎಂದ ಅವರು  ಜೆಡಿಎಸ್ ಪಕ್ಷವನ್ನ ಕಾರ್ಯಕರ್ತರು ಹಗಲಿರುಳು ಎನ್ನದೆ ಶ್ರಮಪಟ್ಟು ತಮ್ಮ ಸಣ್ಣಪುಟ್ಟ ವೈಶಮ್ಗಳು ಏನಾದರೂ ಇದ್ದರೆ ಅವುಗಳನ್ನು ಬದಿಗೊತ್ತಿ  ಪಕ್ಷಕ್ಕಾಗಿ ದುಡಿದು ರಾಜ್ಯದ ಏಳಿಗೆಗೆ  ಕುಮಾರಸ್ವಾಮಿಯವರನ್ನು ಪೂರ್ಣಾವಧಿ ಮುಖ್ಯಮಂತ್ರಿ ಯನ್ನಾಗಿ ಮಾಡಬೇಕೆಂದರು.
ಮಾಜಿ ಜಿಲ್ಲಾ ಪಂಚಾಯಿತಿ  ಅಧ್ಯಕ್ಷ ಡಾ, ರವಿಬಾಬು ಮಾತನಾಡಿ  ತಾಲೂಕಿನ ರೈತರ ರೇಷ್ಮೆ ಸಮಸ್ಯೆ ಕಾಡುತ್ತಿದೆ  ರೈತರ ಕಡೆ ಗಮನಹರಿಸಿ ಅವರ ಕಷ್ಟ ಸುಖಗಳನ್ನು ನೋಡದೆ  ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಕೈ ಬಿಟ್ಟು  ಪಟ್ಟಣದಲ್ಲಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜನರು ಇದಕ್ಕೆಲ್ಲ ತಕ್ಕ ಉತ್ತರ ನೀಡುತ್ತಾರೆ ಎಂದು ದೂರುತ್ತಾ
 ಹಾಲಿ ಶಾಸಕರು ಎಷ್ಟೇ ಹಣ ಖರ್ಚು ಮಾಡಿ ಪಲ್ಟಿ ಹೊಡೆದರು ಮುಂದಿನ ಚುನಾವಣೆಯಲ್ಲಿ ಹಾಲಿ  ಶಾಸಕರ ಗೆಲುವು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
 ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ  ಜಗದೀಶ್ ನಾಗರಾಜಯ್ಯ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಣ್ಣಯ್ಯ, ಶಿವಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಮನಹಳ್ಳಿ ರಾಮಣ್ಣ,ಜಿಯ ಉಲ್ಲಾ,ಅನ್ಸರ್ ಪಾಷಾ,ದಲಿತ ಮುಖಂಡ ವರದರಾಜು,ಪುರಸಭಾ ಮಾಜಿ ಅಧ್ಯಕ್ಷರಾದ ಕೆ ಎಲ್ ಹರೀಶ್ ಮತ್ತು  ಐಷಾಬಿ,   ಜೆಡಿಎಸ್ ಪಕ್ಷದ ವಕ್ತಾರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ  ತರೀಕೆರೆ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ  ಕಾಂಗ್ರೆಸ್ ಪಕ್ಷದ ನೂರಾರು  ಕಾರ್ಯಕರ್ತರು ಪಕ್ಷವನ್ನು  ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

The post ಜೆ.ಡಿ.ಎಸ್.ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ತೊರೆದು ಪಕ್ಷವನ್ನು ಅಧಿಕಾರಕ್ಕೆ ತನ್ನಿ : ಡಿ ನಾಗರಾಜಯ್ಯ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ಖಂಡನೆ https://suvarnapragathi.in/archives/1570 Wed, 15 Sep 2021 07:58:08 +0000 https://suvarnapragathi.in/?p=1570 ಕುಣಿಗಲ್ : ರಾಷ್ಟ್ರದ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಹಿಂದಿ ಭಾಷೆಗೆ ಗುಲಾಮರಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೊರೆ ಹಾಕುತ್ತಿರುವುದು ಖಂಡನೀಯ ಎಂದು ತಾಲ್ಲೂಕ್ ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ ಎನ್ ಜಗದೀಶ್ ಕಟುವಾಗಿ ಟೀಕಿಸಿದರು.                            ಪಟ್ಟಣದ ಹುಚ್ಚಮಾಸ್ತಿಗೌಡ ರ‍್ಕಲ್ ನಿಂದಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ್ ಅವರ ನೇತೃತ್ವದಲ್ಲಿ ಕರ‍್ಯರ‍್ತರು ಹಿಂದಿ ದಿವಸ್ ಆಚರಣೆ ಸಂಬಂಧ …

The post ಕುಣಿಗಲ್ : ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ಖಂಡನೆ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ರಾಷ್ಟ್ರದ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಹಿಂದಿ ಭಾಷೆಗೆ ಗುಲಾಮರಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೊರೆ ಹಾಕುತ್ತಿರುವುದು ಖಂಡನೀಯ ಎಂದು ತಾಲ್ಲೂಕ್ ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ ಎನ್ ಜಗದೀಶ್ ಕಟುವಾಗಿ ಟೀಕಿಸಿದರು.                            ಪಟ್ಟಣದ ಹುಚ್ಚಮಾಸ್ತಿಗೌಡ ರ‍್ಕಲ್ ನಿಂದಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ್ ಅವರ ನೇತೃತ್ವದಲ್ಲಿ ಕರ‍್ಯರ‍್ತರು ಹಿಂದಿ ದಿವಸ್ ಆಚರಣೆ ಸಂಬಂಧ ಪ್ರತಿರೋಧ ವ್ಯಕ್ತಪಡಿಸಿ ತಾಲ್ಲೂಕು ಕಚೇರಿವರೆಗೂ ರಸ್ತೆಯುದ್ದಕ್ಕೂ ರ‍್ಯಾಲಿ ನಡೆಸಿ ಕೇಂದ್ರ ರ‍್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗುತ್ತ ತಾಲ್ಲೂಕು ಕಚೇರಿ ಮುಂಭಾಗ ಜಮಾವಣೆಗೊಂಡು ಪ್ರತಿಭಟಿಸಿ ಮಾತನಾಡಿದ ಅಧ್ಯಕ್ಷರು ರಾಜ್ಯದಲ್ಲಿ ಕನ್ನಡಕ್ಕೆ ಸಾವಿರಾರು ರ‍್ಷಗಳ ಇತಿಹಾಸವಿದೆ ಇದು ಗೊತ್ತಿದ್ದರೂ ಕೇಂದ್ರದ ಬಿಜೆಪಿ ರ‍್ಕಾರ ಕನ್ನಡಿಗರ ಮೇಲೆ ಹಿಂದಿಯನ್ನು ಬಲವಂತವಾಗಿ ಏರುತ್ತಿರುವುದನ್ನು ಜೆಡಿಎಸ್ ಪಕ್ಷ ಕಟುವಾಗಿ ಟೀಕಿಸುತ್ತದೆ ಎಂದ ಅವರು ಕೇಂದ್ರದ ಬಿಜೆಪಿ ರ‍್ಕಾರಕ್ಕೆ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ ರಾಜ್ಯದಲ್ಲಿ ಹಿಂದೀ ದಿವಸ ಆಚರಣೆ ಮಾಡುವುದನ್ನು ನಾವು ಕನ್ನಡಿಗರಾಗಿ ಕಟುವಾಗಿ ಟೀಕಿಸುತ್ತೇವೆ ಆದರೆ ಹಿಂದಿ ಭಾಷೆ ಮಾತನಾಡಲು ನಮ್ಮ ವಿರೋಧವಿಲ್ಲ ಆದರೆ ಅದನ್ನೇ ರಾಜ್ಯದಲ್ಲಿ ಹಿಂದೀ ದಿವಸ ಆಚರಣೆ ಮಾಡುತ್ತಾರೆ ಎಂದರೆ ಇದು ಕನ್ನಡಿಗರಿಗೆ ಮಾಡಿದ ಅಪಮಾನ ಇದೆಲ್ಲ ಗೊತ್ತಿರುವ ರಾಷ್ಟ್ರದ 2 ರಾಷ್ಟ್ರೀಯ ಪಕ್ಷಗಳು ಇದಕ್ಕೆ ಉತ್ತೇಜನ ನೀಡುತ್ತವೆ ಎಂದರೆ ಎರಡೂ ಪಕ್ಷಗಳಿಗೂ ನಾಚಿಕೆಯಾಗಬೇಕು ಇದಕ್ಕೆ ಮುಂದಿನ ದಿನಗಳಲ್ಲಿ ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆ ಎಂದರು.ಆದ್ದರಿಂದ ರಾಜ್ಯದ ಕನ್ನಡಿಗರು ಈಗಲಾದರೂ ಎಚ್ಚೆತ್ತುಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಹೆಚ್ಚು ಮನ್ನಣೆ ನೀಡಿ ರಾಜ್ಯದಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕೈಹಿಡಿದು ಮೇಲೆತ್ತಿ ರಾಜ್ಯದ ಮುಖ್ಯಮಂತ್ರಿ ಮಾಡಿದರೆ ಇಂತಹ ಘಟನೆಗಳಿಗೆ ಬ್ರೇಕ್ ಹಾಕಬಹುದು ಮತ್ತು ರಾಜ್ಯವು ಕೂಡ ಪ್ರಗತಿಪಥದತ್ತ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ರಾಜ್ಯದ ಜನರು ತೀಕ್ಷಣವಾಗಿ ಯೋಚಿಸಬೇಕು ಎಂದ ಅವರು ರಾಷ್ಟ್ರದ ಹಲವಾರು ರಾಜ್ಯಗಳಲ್ಲಿ ರಾಜ್ಯಭಾರ ಮಾಡುತ್ತಿರುವ ಕೆಲವು ಪ್ರಾದೇಶಿಕ ಪಕ್ಷಗಳು ಅವರವರ ಸ್ಥಳೀಯ ಭಾಷೆಗಳಿಗೆ ಮಾತ್ರ ಮಾನ್ಯತೆ ಕೊಡುತ್ತಿರುವುದನ್ನು ನಾವುಗಳು ನೋಡಿ ಅರಿತುಕೊಳ್ಳಬೇಕು ಎಂದು ಕನ್ನಡಿಗರನ್ನು ಎಚ್ಚರಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರುಗಳಾದ ತರೀಕೆರೆ ಗ್ರಾಂಪಂ ಸದಸ್ಯ ಪ್ರಕಾಶ್ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಪ್ಪ ಸಂತೆ ಮಾವತ್ತೂರು ಗ್ರಾಪಂ ಅಧ್ಯಕ್ಷ ಮಂಜುನಾಥ್ ಯಡಿಯೂರ್ ಗ್ರಾಂಪಂ ಸದಸ್ಯ ದೀಪು ಪ್ರೆಸ್ ರಂಗಸ್ವಾಮಿ ಕಾಡುಗೊಲ್ಲರ ಮುಖಂಡ ಜಿ ಕೆ ನಾಗಣ್ಣ ಚೊಟ್ಟನಹಳ್ಳಿ ಕಿಟ್ಟಿ ಒಳಗೊಂಡಂತೆ ಹಲವಾರು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

The post ಕುಣಿಗಲ್ : ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ಖಂಡನೆ appeared first on ಸುವರ್ಣ ಪ್ರಗತಿ.

]]>
ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ : ಡಾ.ಪಾಪಣ್ಣ https://suvarnapragathi.in/archives/1542 Tue, 14 Sep 2021 05:23:53 +0000 https://suvarnapragathi.in/?p=1542 ಕುಣಿಗಲ್ : ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಶೀಘ್ರವಾಗಿ ನೂತನ ಕಾಡುಗೊಲ್ಲರ ನಿಗಮಕ್ಕೆ ಅಧ್ಯಕ್ಷರ ನೇಮಕ ವಾಗಬೇಕು ಎಂದು ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಹಾಗೂ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ, ಪಾಪಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.                                                    …

The post ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ : ಡಾ.ಪಾಪಣ್ಣ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಶೀಘ್ರವಾಗಿ
ನೂತನ ಕಾಡುಗೊಲ್ಲರ ನಿಗಮಕ್ಕೆ ಅಧ್ಯಕ್ಷರ ನೇಮಕ ವಾಗಬೇಕು ಎಂದು ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಹಾಗೂ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ, ಪಾಪಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.                                                                                                                                                              ತಾಲ್ಲೂಕಿನ ಯಡಿಯೂರು ಹೋಬಳಿ ಆಲಪ್ಪನಗುಡ್ಡೆಯ ಹಾಲಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ  ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾಡುಗೊಲ್ಲರ ಚಿಂತನ ಮಂಥನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಜನಾಂಗ ಹಲವಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿ ಸಾಮಾಜಿಕವಾಗಿ,ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ,ಧಾರ್ಮಿಕವಾಗಿ, ತುಂಬಾ ಅನ್ಯಾಯವಾಗಿದೆ ಇವುಗಳನ್ನು ನಾವು ಸರಿಪಡಿಸಿಕೊಳ್ಳಬೇಕು ಎಂದರೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಹೋಬಳಿ ಮಟ್ಟದ ಕಾಡುಗೊಲ್ಲ ಮುಖಂಡರುಗಳು ಒಗ್ಗಟ್ಟಾಗಿ ಪಕ್ಷಾತೀತವಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದರೆ ಫಲ ಲಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ ಈಗಾಗಲೇ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಅವರಿಗೆ ಕಾಡುಗೊಲ್ಲ ಜನಾಂಗವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದೇವೆ ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಅವರು ಜನಾಂಗದ ಮುಖಂಡರು ಯಾವುದೇ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದರೂ ಪರವಾಗಿಲ್ಲ ಆದರೆ ಜನಾಂಗದ ಸಮಸ್ಯೆಗಳು ಬಂದಾಗ ಅವುಗಳನ್ನು ಬದಿಗೊತ್ತಿ ಪ್ರಾಮಾಣಿಕವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು. ಚಿಂತನ ಮಂಥನ ಸಭೆಯಲ್ಲಿ ಜಾತಿ ಪ್ರಮಾಣ ಪತ್ರ, ವಿದ್ಯಾರ್ಥಿಗಳ ಆದಾಯ ಮಿತಿ,ಕಾಡುಗೊಲ್ಲ ನಿಗಮಕ್ಕೆ ಅಧ್ಯಕ್ಷರ ನೇಮಕ ಒಳಗೊಂಡಂತೆ ಹಲವಾರು ಜ್ವಲಂತ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಜನಾಂಗಕ್ಕೆ ಆಗಿರುವ ಲೋಪದೋಷಗಳನ್ನು ಗಂಭೀರವಾಗಿ ಚರ್ಚಿಸಲು ಮತ್ತೊಮ್ಮೆ ಸೆಪ್ಟೆಂಬರ್ 26ರಂದು ಸಭೆ ಆಯೋಜನೆ ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಬದಲ್ಲಿ ರಾಜ್ಯದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ಹಟ್ಟಿಲಕ್ಕಮ್ಮ ದೇವಾಲಯದ ಪ್ರಧಾನ  ಅರ್ಚಕ ಹಾಗೂ ಜನಾಂಗದ ಮುಖಂಡ ಗೋಪಾಲಯ್ಯ, ಹರೀಶ್, ರಾಜಪ್ಪ, ಹಾರೋಗೆರೆ ಮಹೇಶ್, ಡಾಕ್ಟರ್ ದೊಡ್ಡನಂಜಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕೃಷ್ಣಪ್ಪ, ಗೊಲ್ಲರಹಟ್ಟಿ ರಾಜಣ್ಣ, ಹಿಂದುಳಿದ ರ‍್ಗದ ಆಯೋಗದ ಮಾಜಿ ಸದಸ್ಯ ಪ್ರೊಫೆಸರ್ ಗುರುಲಿಂಗಯ್ಯ ಸಮುದಾಯದ ಜಿಲ್ಲಾಧ್ಯಕ್ಷ ಶಿವಯಾದವ್, ಸಮುದಾಯದ ಮುಖಂಡರುಗಳಾದ ಮಾಜಿ ಜಿಪಂ ಸದಸ್ಯ ಉಗ್ರಯ್ಯ ಮತ್ತು ಎ ಇ ಈ ಷಣ್ಮುಖಪ್ಪ ರಾಜಪ್ಪ ಮೀನಾಕ್ಷಿ ಶಿಕ್ಷಕ ಉಮೇಶ್, ಆರ್ ಪ್ರಕಾಶ್, ರಾಜೇಶ್, ಜಯಣ್ಣ, ಶಿವರಾಜು,ಒಳಗೊಂಡಂತೆ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

The post ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ : ಡಾ.ಪಾಪಣ್ಣ appeared first on ಸುವರ್ಣ ಪ್ರಗತಿ.

]]>
ಪಶು ವೈದ್ಯರ ನಿರ್ಲಕ್ಷ್ಯ,ಕಾಲುಬಾಯಿ ರೋಗಕ್ಕೆ ಹಸು ಕರುಗಳ ಸಾವು : ಆರೋಪ https://suvarnapragathi.in/archives/1533 Tue, 14 Sep 2021 04:49:49 +0000 https://suvarnapragathi.in/?p=1533 ಕುಣಿಗಲ್ : ಹಸು ಕರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಸುಮಾರು ಐದಾರು ಹಸುಗಳು ಸಾವನ್ನಪ್ಪಿವೆ ಈ ಸಂಬಂಧ ವೈದ್ಯರನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ .                                                   ತಾಲೂಕಿನ ಹುಲಿಯೂರುದರ‍್ಗ ಹೋಬಳಿ ನಿಡಸಾಲೆ ಗ್ರಾಮದಲ್ಲಿ ರೈತರ ಜೀವನಾಡಿಯಾದ ಹಾಲು ನೀಡುವ …

The post ಪಶು ವೈದ್ಯರ ನಿರ್ಲಕ್ಷ್ಯ,ಕಾಲುಬಾಯಿ ರೋಗಕ್ಕೆ ಹಸು ಕರುಗಳ ಸಾವು : ಆರೋಪ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ಹಸು ಕರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಸುಮಾರು ಐದಾರು ಹಸುಗಳು ಸಾವನ್ನಪ್ಪಿವೆ ಈ ಸಂಬಂಧ ವೈದ್ಯರನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ .                                                   ತಾಲೂಕಿನ ಹುಲಿಯೂರುದರ‍್ಗ ಹೋಬಳಿ ನಿಡಸಾಲೆ ಗ್ರಾಮದಲ್ಲಿ ರೈತರ ಜೀವನಾಡಿಯಾದ ಹಾಲು ನೀಡುವ ಹಸು ಕರುಗಳಿಗೆ ಕಾಲುಬಾಯಿ ರೋಗ ಹೆಚ್ಚಾಗಿ ಸುಮಾರು ಐದಾರು ರೈತರ ಹಸುಗಳು ಸಾವನ್ನಪ್ಪಿವೆ ಇದರಿಂದ ರೈತರು ಕಂಗಾಲಾಗಿದ್ದಾರೆ.ಈ ಸಂಬಂಧ ನಿಡಸಾಲೆ ಪಶು ವೈದ್ಯರನ್ನು ವಿಚಾರಣೆ ಮಾಡಿದರೆ ಸಿಬ್ಬಂದಿ ಕೊರತೆ ಇದೆ ವ್ಯಾಕ್ಸಿನೇಷನ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಕೈಚೆಲ್ಲುತ್ತಾರೆ ಇದೇ ರೀತಿ ಇವರ ರ‍್ತನೆ ಮುಂದುವರೆದರೆ ಅಕ್ಕಪಕ್ಕದ ಗ್ರಾಮಗಳ ಹಸು ಕರುಗಳಿಗೆ ಕಾಲುಬಾಯಿ ರೋಗ ಹರಡಿ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಆದ್ದರಿಂದ ಪಶು ಇಲಾಖೆಯ ತಾಲ್ಲೂಕ್ ಸಹಾಯಕ ನರ‍್ದೇಶಕರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಹಸು ಕರುಗಳಿಗೆ ವ್ಯಾಕ್ಸಿನೇಷನ್ ಮಾಡಬೇಕೆಂದು ಸರ‍್ವಜನಿಕರು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಕಚೇರಿಯ ಮುಂಭಾಗ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

The post ಪಶು ವೈದ್ಯರ ನಿರ್ಲಕ್ಷ್ಯ,ಕಾಲುಬಾಯಿ ರೋಗಕ್ಕೆ ಹಸು ಕರುಗಳ ಸಾವು : ಆರೋಪ appeared first on ಸುವರ್ಣ ಪ್ರಗತಿ.

]]>
ಸವಲತ್ತುಗಳ ಮಂಜೂರಾತಿ ಆದೇಶ ಪತ್ರ ವಿತರಿಸಿದ ನ್ಯಾ.ಅನಿತಾ https://suvarnapragathi.in/archives/1480 Fri, 10 Sep 2021 03:22:07 +0000 https://suvarnapragathi.in/?p=1480 ಕುಣಿಗಲ್ : ತಾಲೂಕಿನ ನ್ಯಾಯಾಲಯದ ಪ್ರಧಾನ ಸಿವಿಲ್ ಗೌರವಾನ್ವಿತ ನ್ಯಾಯಾಧೀಶರಾದ ಅನಿತಾ ರವರು ಕಾರ್ಮಿಕ ಇಲಾಖೆಯಿಂದ ನೀಡುವ ಸರ್ಕಾರಿ ಸೌವಲತ್ತುಗಳ ಮಂಜೂರಾತಿ ಆದೇಶ ಪತ್ರಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ಕರ‍್ಮಿಕ ಇಲಾಖೆ ಕಾರ್ಮಿಕ ಅದಾಲತ್ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅದಾಲತನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಎಳೆ ಎಳೆಯಾಗಿ ಹೇಳಿದ ಅವರು ಕಾರ್ಮಿಕರು …

The post ಸವಲತ್ತುಗಳ ಮಂಜೂರಾತಿ ಆದೇಶ ಪತ್ರ ವಿತರಿಸಿದ ನ್ಯಾ.ಅನಿತಾ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ತಾಲೂಕಿನ ನ್ಯಾಯಾಲಯದ ಪ್ರಧಾನ ಸಿವಿಲ್ ಗೌರವಾನ್ವಿತ ನ್ಯಾಯಾಧೀಶರಾದ ಅನಿತಾ ರವರು ಕಾರ್ಮಿಕ ಇಲಾಖೆಯಿಂದ ನೀಡುವ ಸರ್ಕಾರಿ ಸೌವಲತ್ತುಗಳ ಮಂಜೂರಾತಿ ಆದೇಶ ಪತ್ರಗಳನ್ನು
ವಿವಿಧ ಫಲಾನುಭವಿಗಳಿಗೆ ವಿತರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ಕರ‍್ಮಿಕ ಇಲಾಖೆ ಕಾರ್ಮಿಕ ಅದಾಲತ್ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅದಾಲತನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಎಳೆ ಎಳೆಯಾಗಿ ಹೇಳಿದ ಅವರು ಕಾರ್ಮಿಕರು ಸರ್ಕಾರ ನೀಡುವ ಹಲವಾರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು.

ಈ ಸಂದರ್ಬದಲ್ಲಿ ತಾಲೂಕು ಕಾರ್ಮಿಕ ನಿರೀಕ್ಷಕ ಪುಟ್ಟರಾಜು ಸರ್ಕಾರಿ ಸಹಾಯಕ ಅಭಿಯೋಜಕರಾದ ಕಲ್ಪನಾ, ಕೆ ಜಿ ಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಹುಚ್ಚೇಗೌಡ ಕಂಪ್ಯೂಟರ್ ಆಪರೇಟರ್ ವಿಜಯ ಒಳಗೊಂಡಂತೆ ಮತ್ತಿತರರು ಉಪಸ್ಥಿತರಿದ್ದರು.

The post ಸವಲತ್ತುಗಳ ಮಂಜೂರಾತಿ ಆದೇಶ ಪತ್ರ ವಿತರಿಸಿದ ನ್ಯಾ.ಅನಿತಾ appeared first on ಸುವರ್ಣ ಪ್ರಗತಿ.

]]>
ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಗೆ ಒತ್ತಾಯ : ಆನಂದ್‌ ಪಟೇಲ್ https://suvarnapragathi.in/archives/1374 Tue, 07 Sep 2021 12:45:42 +0000 https://suvarnapragathi.in/?p=1374 ಕುಣಿಗಲ್ : ಸರ್ಕಾರ ನಿಗದಿ ಮಾಡಿದ್ದ  3.5 ಟಿ.ಎಂ.ಸಿ. ನೀರನ್ನು ಹೇಮಾವತಿ ನಾಲಾ ಸಂಪರ್ಕವಿರುವ ತಾಲ್ಲೂಕಿನ ಎಲ್ಲ  ಕೆರೆ ಕಟ್ಟೆಗಳಿಗೆ  ಹರಿಸಬೇಕು, ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡಬೇಕೆಂದು ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ   ಪ್ರತಿಭಟನೆಯಲ್ಲಿ ಮಾತನಾಡಿದ ದಿವಂಗತ ಮಾಜಿ ಮಂತ್ರಿ ವೈ.ಕೆ.ರಾಮಯ್ಯ ನವರು ಮಾರ್ಕೋನಹಳ್ಳಿ ಡ್ಯಾಂನಿಂದ ಮಂಗಳಾ ಡ್ಯಾಂ ಗೆ ಲಿಂಕ್‍ಕೆನಾಲ್ ಮಾಡಲು …

The post ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಗೆ ಒತ್ತಾಯ : ಆನಂದ್‌ ಪಟೇಲ್ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ಸರ್ಕಾರ ನಿಗದಿ ಮಾಡಿದ್ದ  3.5 ಟಿ.ಎಂ.ಸಿ. ನೀರನ್ನು ಹೇಮಾವತಿ ನಾಲಾ ಸಂಪರ್ಕವಿರುವ ತಾಲ್ಲೂಕಿನ ಎಲ್ಲ  ಕೆರೆ ಕಟ್ಟೆಗಳಿಗೆ  ಹರಿಸಬೇಕು, ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡಬೇಕೆಂದು ರಾಜ್ಯ ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ   ಪ್ರತಿಭಟನೆಯಲ್ಲಿ ಮಾತನಾಡಿದ ದಿವಂಗತ ಮಾಜಿ ಮಂತ್ರಿ ವೈ.ಕೆ.ರಾಮಯ್ಯ ನವರು ಮಾರ್ಕೋನಹಳ್ಳಿ ಡ್ಯಾಂನಿಂದ ಮಂಗಳಾ ಡ್ಯಾಂ ಗೆ ಲಿಂಕ್‍ಕೆನಾಲ್ ಮಾಡಲು ಅಂದಿನ ಸರ್ಕಾರದಲ್ಲಿ  ಅಂದಾಜು ಪಟ್ಟಿಗೆ ಅನುಮೋದನೆ ಪಡೆದಿದ್ದರು. ಶಾಸಕರಾಗಿದ್ದ ರಾಮಸ್ವಾಮಿ ಗೌಡ, ನಾಗರಾಜಯ್ಯ ನವರು  ಲಿಂಕ್‍ಕೆನಾಲ್‍ಗೆ ಒತ್ತಡ ಹಾಕಿದ್ದರು. ಆದರೆ ಈಗಿನ ಶಾಸಕರ ಹಿಂಬಾಲಕರು ಅಂದಾಜು ಪಟ್ಟಿ ನಾವೇ ಮಾಡಿಸಿದ್ದು ಎಂದು ಸುಳ್ಳು ಹೇಳುತ್ತಾ  ವಾಟ್ಸ್‍ಆಪ್ ಮತ್ತು ಫೇಸ್‍ಬುಕ್‍ಗಳಲ್ಲಿ  ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ. ಅವರ ಸಂಬಂಧಿ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಹಣ ಬಿಡುಗಡೆ ಮಾಡಿಸದೆ ಕಾಲಾಹರಣ ಮಾಡಿ, ಸರ್ಕಾರದಿಂದ  ಬಂದ ಹಣವನ್ನೆಲ್ಲಾ ರಸ್ತೆಗೆ ಹಾಕಿಕೊಂಡು ನೀರಾವರಿ ಯೋಜನೆಯನ್ನು ಹಾಳು ಮಾಡಿದ್ದಾರೆ, ಸರ್ಕಾರ ಕೂಡಲೇ ಲಿಂಕ್‍ಕೆನಾಲ್‍ಗೆ ಹಣ ಬಿಡುಗಡೆ ಮಾಡಬೇಕು ಎಂದರು.
ತಾಲ್ಲೂಕಿನ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ 19 ಸೋಸೈಟಿಗಳು ಇದ್ದು ಗೊಬ್ಬರದ ಅಭಾವ ಸೃಷ್ಠಿಸಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯ ಅವರ v ಕುಮ್ಮಕ್ಕಿನಿಂದ ಖಾಸಗಿ ಅಂಗಡಿಗಳ ಮೂಲಕ ದುಪ್ಪಟ್ಟು ಹಣಕ್ಕೆ ಗೊಬ್ಬರ ಮಾರಾಟ ಮಾಡಿಸುತ್ತಿದ್ದಾರೆ ಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ, ಇದಕ್ಕೆ ಕೃಷಿ ಇಲಾಖಾ ಅಧಿಕಾರಿಗಳೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಪಿ ಹೊನ್ನಮಾಚನಹಳ್ಳಿ ಸ.ನಂ. 82 ರಲಿ ಶಾಸಕ ಡಾ|| ರಂಗನಾಥ್ ರವರ ಹೆಸರಿನಲ್ಲಿ ಕ್ರಷರ್ ನಡೆಯುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗತ್ತಿದೆ ಕೂಡಲೇ ಜಿಲ್ಲಾಡಳಿತ ಕಾನೂನು ಕ್ರಮ  ಕೈಗೊಳ್ಳಬೇಕು, ತಾಲ್ಲೂಕಿನಲ್ಲಿ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನುಗಳಿಗೆ ಇಲಾಖಾ ಅಧಿಕಾರಿಗಳು ಒಕ್ಕಲೆಬ್ಬಿಸಲು ಕಿರುಕುಳ ನೀಡುತ್ತಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿ ರೈತರಿಗೆ ತೊಂದರೆ ಕೊಡುವುದನ್ನ ನಿಲ್ಲಿಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಅನಿಲ್‍ಕುಮಾರ್ ಮಾತನಾಡಿ ಮಂಗಳ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ನೀರಿಲ್ಲದಿದ್ದರೆ ಜಲಾಶಯಕ್ಕೆ ಅಪಾಯವೆಂದು ಗೊತ್ತಿದ್ದರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ  ವರ್ಷ ವರ್ಷ ಡ್ಯಾಮ್ ನಿರ್ವಹಣೆಗೆಂದು ಬರುವ ಹಣ ಏನಾಗುತ್ತದೆಯೋ ಗೊತ್ತಿಲ್ಲ ಗೇಟ್ ಗಳಿಗೆ ಮತ್ತು ಕೆಲವು ಯಂತ್ರೋಪಕರಣಗಳಿಗೆ  ಬಣ್ಣ ಬಳಿಯದೆ ಹಾಳಾಗುತ್ತಿವೆ ಜಲಾಶಯ ನಶಿಸಿ ಹೋಗುವ ಮುನ್ನ  ಮಾರ್ಕೋನಹಳ್ಳಿ ಡ್ಯಾಂನಿಂದ  ಲಿಂಕ್‍ಕೆನಾಲ್‍ಗೆ ಚಾಲನೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮಹಬಲೇಶ್ವರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ವೆಂಕಟೇಶ್, ಲಕ್ಷ್ಮಣ್, ಲಿಂಗರಾಜು, ಒಳಗೊಂಡಂತೆ ನೂರಾರು ರೈತರು ಭಾಗವಹಿಸಿದ್ದರು.
Attachments area

The post ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಗೆ ಒತ್ತಾಯ : ಆನಂದ್‌ ಪಟೇಲ್ appeared first on ಸುವರ್ಣ ಪ್ರಗತಿ.

]]>
ಗ್ಯಾಸ್, ಪೆಟ್ರೋಲ್, ಡೀಸಲ್ ದರ ಏರಿಕೆ : ಕಾಂಗ್ರೆಸ್ ಕಟು ಟೀಕೆ https://suvarnapragathi.in/archives/1314 Sat, 04 Sep 2021 08:47:47 +0000 https://suvarnapragathi.in/?p=1314 ಕುಣಿಗಲ್ : ಅಡಿಗೆ ಅನಿಲ, ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಸಾಮಾನ್ಯರನ್ನು ಜೀವಂತ ಸಮಾಧಿ ಮಾಡಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಪುರಸಭಾ ಸದಸ್ಯ ಶಂಕರ್ ಕಟುವಾಗಿ ಟೀಕಿಸಿದ್ದಾರೆ. ಶುಕ್ರವಾರ ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಆಡಳಿತದಿಂದ ದೀನ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಹಾಗೂ ಎಲ್ಲಾ ಬಡ ವರ್ಗದ ಹಾಗೂ ಮಧ್ಯಮ ವರ್ಗದ …

The post ಗ್ಯಾಸ್, ಪೆಟ್ರೋಲ್, ಡೀಸಲ್ ದರ ಏರಿಕೆ : ಕಾಂಗ್ರೆಸ್ ಕಟು ಟೀಕೆ appeared first on ಸುವರ್ಣ ಪ್ರಗತಿ.

]]>
ಕುಣಿಗಲ್ : ಅಡಿಗೆ ಅನಿಲ, ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಸಾಮಾನ್ಯರನ್ನು ಜೀವಂತ ಸಮಾಧಿ ಮಾಡಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಪುರಸಭಾ ಸದಸ್ಯ ಶಂಕರ್ ಕಟುವಾಗಿ ಟೀಕಿಸಿದ್ದಾರೆ.
ಶುಕ್ರವಾರ ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಆಡಳಿತದಿಂದ ದೀನ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಹಾಗೂ ಎಲ್ಲಾ ಬಡ ವರ್ಗದ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, 60 ವರ್ಷದ ಕಾಂಗ್ರೆಸ್ ಆಡಳಿತ ಏನೇನು ಮಾಡಿಲ್ಲ ನಮಗೆ 60 ತಿಂಗಳು ಅಧಿಕಾರ ಕೊಡಿ ದೇಶವನ್ನು ಅಭಿವೃದ್ದಿ ಪಥದತ್ತಾ ಕೊಂಡ್ಯೋದು ಪೆಟ್ರೋಲ್ ಲೀಟರ್‌ಗೆ 50, ಡೀಸಲ್ ಲೀಟರ್‌ಗೆ 40 ರೂ, ಅಡಿಗೆ ಅನಿಲ ಸಿಲಿಂಡರ್ 320 ರೂಗಳಿಗೆ ಜನರಿಗೆ ಕೊಡುತ್ತೇವೆ ಹಾಗೂ ಅಗತ್ಯ ವಸ್ತುಗಳು ಅಗ್ಗದ ದರದಲ್ಲಿ ಕೈಗೆ ಸಿಗುವಂತ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಜನರಿಗೆ ಮಂಕುಬೂದಿ ಎರಚಿ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದರು ಜನರಿಗೆ ನೀಡಿದ ಭರವಸೆಗಳನ್ನು ಇಡೇರಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ, ಬದಲಿಗೆ ಒಂದಕ್ಕೆ ಎರಡು ಪಟ್ಟು ಅಡಿಗೆ ಅನಿಲ, ಪೆಟ್ರೋಲ್, ಡೀಸಲ್ ಸೇರಿದಂತೆ ಅಗತ್ಯ ವಸ್ತುಗಳು ಗಗನಕ್ಕೆ ಮುಟ್ಟಿವೆ ಎಂದು ಸರ್ಕಾರದ ವಿರುದ್ದ ಹರಿದ್ದಾಯಿದರು,
2014 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ, ಬ್ಯಾರೇಲ್ 105 ಡಾಲರ್ ಇದ್ದಾಗ, ಅಂಧಿನ ಯುಪಿಎ ಸರ್ಕಾರದ ಪ್ರಧಾನ ಮಂತ್ರಿ ಡಾ.ಮನಮೋಹನ್‌ಸಿಂಗ್ ಅವರು ಗ್ಯಾಸ್ 410, ಪೆಟ್ರೋಲ್ ಲೀಟರ್‌ಗೆ 71 ರೂ, ಡೀಸಲ್ ಲೀಟರ್‌ಗೆ 57 ರೂಗೆ ಕೊಡುತ್ತಿದ್ದರು, ಅಲ್ಲದೆ ಅಡಿಗೆ ಅನಿಲಕ್ಕೆ ಸಹಾಯಧನ ನೀಡುತ್ತಿದ್ದರು ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ 71 ಡಾಲರ್ ಇದ್ದರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿ ಮೇಲೆ ಜನರ ಮೇಲೆ ದುಪ್ಪಟ ತೆರಿಗೆಗಳನ್ನು ಹಾಕಿ 14.2 ಕೆ.ಜಿಯ ಅಡಿಗೆ ಅನಿಲ 885, ಪೆಟ್ರೋಲ್ ಲೀಟರ್‌ಗೆ 105 ರೂ, ಡೀಸಲ್ ಲೀಟರ್‌ಗೆ 89 ರೂ ಹಾಕಿ ಜನ ಸಾಮಾನ್ಯರನ್ನು ಜೀವಂತ ಸಮಾಧಿ ಮಾಡಲು ಹೊರಟಿವೆ ಎಂದು ಆರೋಪಿಸಿದರು, ಮೋದಿ ಅವರ ಅಚ್ಚೇದಿನ್ ಇದೇನಾ ಎಂದು ಪ್ರಶ್ನಿಸಿದ ಶಂಕರ್ ದವಸ ಧಾನ್ಯ, ಅಡಿಗೆ ಎಣ್ಣೆ ಸೇರಿದಂತೆ ದಿನ ಬಳಕೆ ವಸ್ತುಗಳು ದಿನದಿಂದ ದರಗಳು ಹೆಚ್ಚುತ್ತಲ್ಲೇ ಇವೆ ಇದಕ್ಕೆ ಕಡಿವಾಣ ಹಾಕುವಲ್ಲಿ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಕೂಡಲೇ ಬೆಲೆ ಏರಿಯನ್ನು ನಿಯಂತ್ರಿಸಿ, ಜನ ಸಾಮಾನ್ಯರಿಗೆ ಕೈಗೆಟುಕುವಂತ ದರಗಳನ್ನು ನಿಗಧಿ ಪಡಿಸಿ ನಾಗರೀಕರ ಸಮಸ್ಯೆಗೆ ಸರ್ಕಾರಗಳು ಸ್ಪಂಧಿಸಬೇಕು ಇಲ್ಲವಾದಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

 

The post ಗ್ಯಾಸ್, ಪೆಟ್ರೋಲ್, ಡೀಸಲ್ ದರ ಏರಿಕೆ : ಕಾಂಗ್ರೆಸ್ ಕಟು ಟೀಕೆ appeared first on ಸುವರ್ಣ ಪ್ರಗತಿ.

]]>
ಸೆ.13ರಂದು ಬೃಹತ್ ಪ್ರತಿಭಟನೆ: ಆನಂದ್ ಪಟೇಲ್ https://suvarnapragathi.in/archives/1233 Thu, 26 Aug 2021 15:28:30 +0000 https://suvarnapragathi.in/?p=1233 ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಶಿಂಷಾ ನದಿ ಸೇರುವ ಮೂಲಕ ನೀರು ಪೋಲಾಗುತ್ತಿದೆ. ಮಂಗಳ ಜಲಾಶಯ ತುಂಬಿಸಲು ಸಾದ್ಯವಾಗುತ್ತಿಲ್ಲ ಕೂಡಲೇ ಸರ್ಕಾರ ಮಾರ್ಕೋನಹಳ್ಳಿ ಡ್ಯಾಂ ನಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡುವುದರ ಜೊತೆಗೆ ಮಂಗಳಾ ಜಲಾಶಯ ತುಂಬಿಸಿ ರೈತರು ಬೆಳೆಬೆಳೆಯಲು ಅವಕಾಶ ಕಲ್ಪಿಸಬೇಕು ಇಲ್ಲದಿದ್ದರೆ ಸೆ.13 ರಂದು ಯಡಿಯೂರು ಹೇಮಾವತಿ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ತಾಲ್ಲೂಕಿನ …

The post ಸೆ.13ರಂದು ಬೃಹತ್ ಪ್ರತಿಭಟನೆ: ಆನಂದ್ ಪಟೇಲ್ appeared first on ಸುವರ್ಣ ಪ್ರಗತಿ.

]]>
ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಶಿಂಷಾ ನದಿ ಸೇರುವ ಮೂಲಕ ನೀರು ಪೋಲಾಗುತ್ತಿದೆ. ಮಂಗಳ ಜಲಾಶಯ ತುಂಬಿಸಲು ಸಾದ್ಯವಾಗುತ್ತಿಲ್ಲ ಕೂಡಲೇ ಸರ್ಕಾರ ಮಾರ್ಕೋನಹಳ್ಳಿ ಡ್ಯಾಂ ನಿಂದ ಮಂಗಳ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡುವುದರ ಜೊತೆಗೆ ಮಂಗಳಾ ಜಲಾಶಯ ತುಂಬಿಸಿ ರೈತರು ಬೆಳೆಬೆಳೆಯಲು ಅವಕಾಶ ಕಲ್ಪಿಸಬೇಕು ಇಲ್ಲದಿದ್ದರೆ ಸೆ.13 ರಂದು ಯಡಿಯೂರು ಹೇಮಾವತಿ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಅಮೃತೂರು ಹೋಬಳಿ ಮಂಗಳಾ ಜಲಾಶಯದ ಹತ್ತಿರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪತ್ರಿಕಾ ಗೋಷ್ಠಿ ಧೀಮಂತ ರಾಜಕಾರಣಿ ವೈ.ಕೆ. ರಾಮಯ್ಯ ನವರು ಶಾಸಕರಾಗಿದ್ದಾಗಲೇ ಮಾರ್ಕೋನಹಳ್ಳಿಯಿಂದ ಮಂಗಳ ಜಲಾಶಯಕ್ಕೆ ನೀರು ಹರಿಸುವ ಯೋಜನೆ ರೂಪಿಸಿದ್ದರು, ಅಂದು ಜಲಾಶಯದಿಂದ ನೀರು ವ್ಯರ್ಥವಾಗಿ ಹೊರ ಹೋಗುತ್ತಿರುವ ಬಗ್ಗೆ ಸಮೀಕ್ಷೆ ನಡೆಸಿದಾಗ ಮಾರ್ಕೋನಹಳ್ಳಿ ಜಲಾಶಯ ತುಂಬಿ ಹನ್ನೊಂದುವರೆ ಟಿ.ಎಂ.ಸಿ ನೀರು ಪೋಲಾಗುತ್ತಿರುವುದು ಗಮನಕ್ಕೆ ಬಂದಾಗ ಮಂಗಳಾ ಜಲಾಶಯದ ಸಾಮಥ್ರ‍್ಯ ಒಂದುವರೆ ಟಿ.ಎಂ.ಸಿ. ಇರುವುದರಿಂದ ಮಂಗಳಾ ಡ್ಯಾಂಗೆ ನೀರು ಹರಿಸುವುದರಿಂದ ಯಾರಿಗೂ ಸಮಸ್ಯೆ ಇಲ್ಲಾ, ನೀರು ಪೋಲಾಗುವ ಬದಲು ಮಂಗಳ ಡ್ಯಾಂ ಸೇರಿದರೆ ರೈತರಿಗೆ ಉಪಯೋವಾಗಲಿದೆ ಎಂದು ಅಂದೇ ವೈ.ಕೆ.ಆರ್ ಕನಸು ಕಂಡಿದ್ದರು.
ನAತರದ ದಿನಗಳಲ್ಲಿ ರಾಜ್ಯ ರೈತ ಸಂಘ ಈ ಯೋಜನೆಯನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಲೇ ಬಂದಿದೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಈ ಯೋಜನೆ ಕೈಗೆತ್ತಿಕೊಳ್ಳಿ ಎಂದ ಅವರು ಶಾಸಕ ಡಾ|| ರಂಗನಾಥ್‍ಗೆ ಮಾರ್ಕೋನಹಳ್ಳಿ, ಮಂಗಳಾ ಮತ್ತು ದೊಡ್ಡಕೆರೆ ಅಚ್ಚುಕಟ್ಟುದಾರರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲಾ, ಕಾಳಜಿ ಇದ್ದಿದ್ದರೆ ನೀರಾವರಿ ಇಲಾಖೆಯ ಸುಮಾರು 40 ಕೋಟಿ ಅನುದಾನವನ್ನ ಜಿ.ಪಂ., ಪಿಡಬ್ಲ್ಯುಡಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡುತ್ತಿರಲಿಲ್ಲ, ಗುತ್ತಿಗೆದಾರರ ಜೇಬು ಭರ್ತಿ ಮಾಡುವ ಉದ್ದೇಶದಿಂದ ಈರೀತಿ ಮಾಡಿದ್ದಾರೆ, ಅದೇ ಹಣವನ್ನ ಲಿಂಕ್‌ಕೆನಾಲ್‌ಗೆ ಬಳಸಿಕೊಳ್ಳಬಹುದಿತ್ತು ಬರೀ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಹೆಚ್ಚು ದಿನ ಇದುಉಳಿಯುವುದಿಲ್ಲ ಮುಂದಿನ ದಿನಗಳಲ್ಲಿ ಮತದಾರರು ದಿಟ್ಟ ಉತ್ತರ ನೀಡುತ್ತಾರೆ ಕಾದು ನೋಡಲಿ.
ನಾಗಮಂಗಲತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವುದನ್ನ ತಡೆಯುತ್ತಿದ್ದೇನೆ ಎಂಬ ನಾಟಕವಾಡಿ ಅದ್ಯಾವ ಮುಖ ಇಟ್ಟುಕೊಂಡು ನಾಗಮಂಗಲ ತಾಲ್ಲೂಕಿನಲ್ಲಿ ನಡೆಯುವ ಕಾಮಗಾರಿಗೆ ಗುದ್ದಲಿ ಪೂಜೆಗೆ ಹೋಗಿದ್ದರೋ ಅವರೇ ಉತ್ತರಿಸಬೇಕು, ಸೀಫೇಜ್ ನೀರನ್ನ ಡ್ಯಾಂಗೆ ಅಲರ್ಟ್ ಮಾಡಿಸಲು ಇವರ್ಯಾರು ಕುಡಿಯುವ ನೀರಿಗೆ ರಿಜರ್ವ್ ಮಾಡಿಸಿ ತಾಲ್ಲೂಕಿನ ದೊಡ್ಡಕೆರೆಯ ಅಚ್ಚುಕಟ್ಟುದಾರರಿಗೆ ನಾಮ ಹಾಕಿದಂತೆ ,ಮಾರ್ಕೋನಹಳ್ಳಿ ರೈತರಿಗೂ ನಾಮಹಾಕಲು ಹೊರಟಿದ್ದಾರೆ, ಇದರಿಂದ ಎರಡು ತಾಲ್ಲೂಕಿನ ರೈತರಿಗೆ ಅನ್ಯಾಯವಾಗುತ್ತದೆ ಯಾವ ಶಕ್ತಿ ಶಾಸಕರನ್ನ ಹಿಡಿದಿಟ್ಟುಕೊಂಡಿದೆಯೋ ತಿಳಿದಿಲ್ಲಾ ಇಷ್ಟೆಲ್ಲಾ ರೈತರಿಗೆ ಅನ್ಯಾಯವಾದರೂ ಶಾಸಕರು ಮಾತ್ರ ಬಾಯಿ ಮುಚ್ಚಿಕೊಂಡಿದ್ದಾರೆ ಎಂದರು.
ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ ಮಾರ್ಕೋನಹಳ್ಳಿ ನೀರು ಶಿಂಷಾ ನದಿ ಪಾಲಾಗುವುದು ಬೇಡ ಮಂಗಳ ಡ್ಯಾಂ ಸೇರಿದರೆ 19 ಹಳ್ಳಿಗಳ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ, ನಾಗಮಂಗಲ ತಾಲ್ಲೂಕಿಗೆ ಕುಡಿಯುವ ನೀರು ಬೇಕಾದರೆ ಎನ್.ಬಿ.ಸಿ. ಎಸ್.ಬಿ.ಸಿ ನಾಲೆಗಳಿವೆ ಸೂಳೆಕೆರೆ, ದಾಸನಕೆರೆಗಳಿವೆ ಅಲ್ಲಿಂದ ನೀರು ತೆಗೆದುಕೊಂಡು ಹೋಗಬಹುದು ಮಾರ್ಕೋನಹಳ್ಳಿ ಅಚ್ಚುಕಟ್ಟುದಾರರಿಗೆ ಅನ್ಯಾಯ ಮಾಡಿ ನಾಗಮಂಗಲಕ್ಕೆ ನೀರು ಕೊಡುವ ಉದ್ದೇಶವೇನು, ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಆಧುನಿಕ ಭಗೀರಥ ಎಂದು ಕರೆಸಿಕೊಳ್ಳುವ ಶಾಸಕರು ಎಲ್ಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

The post ಸೆ.13ರಂದು ಬೃಹತ್ ಪ್ರತಿಭಟನೆ: ಆನಂದ್ ಪಟೇಲ್ appeared first on ಸುವರ್ಣ ಪ್ರಗತಿ.

]]>
ದ್ವಿಚಕ್ರ ವಾಹನ ಅಪಘಾತ ಸ್ಥಳದಲ್ಲೇ ಸವಾರ ಸಾವು https://suvarnapragathi.in/archives/1215 Thu, 26 Aug 2021 09:06:52 +0000 https://suvarnapragathi.in/?p=1215 ಕುಣಿಗಲ್: ಪಟ್ಟಣದ ದೊಡ್ಡ ಕೆರೆ ಹಿಂಭಾಗ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ದ್ವಿಚಕ್ರವಾಹನದಲ್ಲಿ ಸಿದ್ದಗಂಗಯ್ಯ ಮತ್ತು ಅವರ ಮಗ ರಾಕೇಶ ಮತ್ತು ಅವರ ಪತ್ನಿ ಬರುವ ಸಂಧರ್ಭದಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ವಾಹನ ಚಲಾವಣೆ ಮಾಡುತ್ತಿದ್ದ ಸಿದ್ದಗಂಗಯ್ಯ 55 ಸ್ಥಳದಲ್ಲೇ ಮೃತಪಟ್ಟರೆ ಈತನ ಪತ್ನಿ ಹಾಗೂ ಮಗ ರಾಕೇಶನಿಗೆ (20 )ಸಣ್ಣಪುಟ್ಟ ಗಾಯಗಳಾಗಿವೆ ಮೃತ ವ್ಯಕ್ತಿ ಸಿದ್ದಗಂಗಯ್ಯ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಕೊತ್ತಗೆರೆ ಹೋಬಳಿ ಈರ ಮೇಸ್ತ್ರಿಪಾಳ್ಯ …

The post ದ್ವಿಚಕ್ರ ವಾಹನ ಅಪಘಾತ ಸ್ಥಳದಲ್ಲೇ ಸವಾರ ಸಾವು appeared first on ಸುವರ್ಣ ಪ್ರಗತಿ.

]]>
ಕುಣಿಗಲ್: ಪಟ್ಟಣದ ದೊಡ್ಡ ಕೆರೆ ಹಿಂಭಾಗ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ದ್ವಿಚಕ್ರವಾಹನದಲ್ಲಿ ಸಿದ್ದಗಂಗಯ್ಯ ಮತ್ತು ಅವರ ಮಗ ರಾಕೇಶ ಮತ್ತು ಅವರ ಪತ್ನಿ ಬರುವ ಸಂಧರ್ಭದಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ.

ವಾಹನ ಚಲಾವಣೆ ಮಾಡುತ್ತಿದ್ದ ಸಿದ್ದಗಂಗಯ್ಯ 55 ಸ್ಥಳದಲ್ಲೇ ಮೃತಪಟ್ಟರೆ ಈತನ ಪತ್ನಿ ಹಾಗೂ ಮಗ ರಾಕೇಶನಿಗೆ (20 )ಸಣ್ಣಪುಟ್ಟ ಗಾಯಗಳಾಗಿವೆ ಮೃತ ವ್ಯಕ್ತಿ ಸಿದ್ದಗಂಗಯ್ಯ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಕೊತ್ತಗೆರೆ ಹೋಬಳಿ ಈರ ಮೇಸ್ತ್ರಿಪಾಳ್ಯ ಗ್ರಾಮದವರಾಗಿದ್ದಾರೆ.ಜಿಲ್ಲೆಯ ಇತಿಹಾಸದಲ್ಲಿ ಮೃತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದಗಂಗಯ್ಯ ನವರ ಮನೆಗೆ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ, ವಿದ್ಯಾಕುಮಾರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಶವ ಸಂಸ್ಕಾರಕ್ಕೆಂದು ಇಲಾಖೆಯಿಂದ ಹದಿನೈದು ಸಾವಿರ ರೂಗಳನ್ನು ನೀಡಿ ಮೃತ ವ್ಯಕ್ತಿಗೆ ಸರ್ಕಾರದಿಂದ ಬರಬೇಕಾದ ಎಲ್ಲಾ ಸವಲತ್ತುಗಳು ಪ್ರಾಮಾಣಿಕವಾಗಿ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದ ಸಂಧರ್ಭ ದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಧರ್ಭದಲ್ಲಿ  ಕುಣಿಗಲ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಹಾಗೂ ತಾಲ್ಲೂಕಿನ ಹಲವಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತಿತರರು ಜೊತೆಯಲ್ಲಿದ್ದರು.

The post ದ್ವಿಚಕ್ರ ವಾಹನ ಅಪಘಾತ ಸ್ಥಳದಲ್ಲೇ ಸವಾರ ಸಾವು appeared first on ಸುವರ್ಣ ಪ್ರಗತಿ.

]]>