
ಕುಣಿಗಲ್ : ಅಡಿಗೆ ಅನಿಲ, ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಸಾಮಾನ್ಯರನ್ನು ಜೀವಂತ ಸಮಾಧಿ ಮಾಡಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಪುರಸಭಾ ಸದಸ್ಯ ಶಂಕರ್ ಕಟುವಾಗಿ ಟೀಕಿಸಿದ್ದಾರೆ.
ಶುಕ್ರವಾರ ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಆಡಳಿತದಿಂದ ದೀನ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಹಾಗೂ ಎಲ್ಲಾ ಬಡ ವರ್ಗದ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, 60 ವರ್ಷದ ಕಾಂಗ್ರೆಸ್ ಆಡಳಿತ ಏನೇನು ಮಾಡಿಲ್ಲ ನಮಗೆ 60 ತಿಂಗಳು ಅಧಿಕಾರ ಕೊಡಿ ದೇಶವನ್ನು ಅಭಿವೃದ್ದಿ ಪಥದತ್ತಾ ಕೊಂಡ್ಯೋದು ಪೆಟ್ರೋಲ್ ಲೀಟರ್‌ಗೆ 50, ಡೀಸಲ್ ಲೀಟರ್‌ಗೆ 40 ರೂ, ಅಡಿಗೆ ಅನಿಲ ಸಿಲಿಂಡರ್ 320 ರೂಗಳಿಗೆ ಜನರಿಗೆ ಕೊಡುತ್ತೇವೆ ಹಾಗೂ ಅಗತ್ಯ ವಸ್ತುಗಳು ಅಗ್ಗದ ದರದಲ್ಲಿ ಕೈಗೆ ಸಿಗುವಂತ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದು ಜನರಿಗೆ ಮಂಕುಬೂದಿ ಎರಚಿ ಟೋಪಿ ಹಾಕಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದರು ಜನರಿಗೆ ನೀಡಿದ ಭರವಸೆಗಳನ್ನು ಇಡೇರಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ, ಬದಲಿಗೆ ಒಂದಕ್ಕೆ ಎರಡು ಪಟ್ಟು ಅಡಿಗೆ ಅನಿಲ, ಪೆಟ್ರೋಲ್, ಡೀಸಲ್ ಸೇರಿದಂತೆ ಅಗತ್ಯ ವಸ್ತುಗಳು ಗಗನಕ್ಕೆ ಮುಟ್ಟಿವೆ ಎಂದು ಸರ್ಕಾರದ ವಿರುದ್ದ ಹರಿದ್ದಾಯಿದರು,
2014 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ, ಬ್ಯಾರೇಲ್ 105 ಡಾಲರ್ ಇದ್ದಾಗ, ಅಂಧಿನ ಯುಪಿಎ ಸರ್ಕಾರದ ಪ್ರಧಾನ ಮಂತ್ರಿ ಡಾ.ಮನಮೋಹನ್‌ಸಿಂಗ್ ಅವರು ಗ್ಯಾಸ್ 410, ಪೆಟ್ರೋಲ್ ಲೀಟರ್‌ಗೆ 71 ರೂ, ಡೀಸಲ್ ಲೀಟರ್‌ಗೆ 57 ರೂಗೆ ಕೊಡುತ್ತಿದ್ದರು, ಅಲ್ಲದೆ ಅಡಿಗೆ ಅನಿಲಕ್ಕೆ ಸಹಾಯಧನ ನೀಡುತ್ತಿದ್ದರು ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ 71 ಡಾಲರ್ ಇದ್ದರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿ ಮೇಲೆ ಜನರ ಮೇಲೆ ದುಪ್ಪಟ ತೆರಿಗೆಗಳನ್ನು ಹಾಕಿ 14.2 ಕೆ.ಜಿಯ ಅಡಿಗೆ ಅನಿಲ 885, ಪೆಟ್ರೋಲ್ ಲೀಟರ್‌ಗೆ 105 ರೂ, ಡೀಸಲ್ ಲೀಟರ್‌ಗೆ 89 ರೂ ಹಾಕಿ ಜನ ಸಾಮಾನ್ಯರನ್ನು ಜೀವಂತ ಸಮಾಧಿ ಮಾಡಲು ಹೊರಟಿವೆ ಎಂದು ಆರೋಪಿಸಿದರು, ಮೋದಿ ಅವರ ಅಚ್ಚೇದಿನ್ ಇದೇನಾ ಎಂದು ಪ್ರಶ್ನಿಸಿದ ಶಂಕರ್ ದವಸ ಧಾನ್ಯ, ಅಡಿಗೆ ಎಣ್ಣೆ ಸೇರಿದಂತೆ ದಿನ ಬಳಕೆ ವಸ್ತುಗಳು ದಿನದಿಂದ ದರಗಳು ಹೆಚ್ಚುತ್ತಲ್ಲೇ ಇವೆ ಇದಕ್ಕೆ ಕಡಿವಾಣ ಹಾಕುವಲ್ಲಿ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಕೂಡಲೇ ಬೆಲೆ ಏರಿಯನ್ನು ನಿಯಂತ್ರಿಸಿ, ಜನ ಸಾಮಾನ್ಯರಿಗೆ ಕೈಗೆಟುಕುವಂತ ದರಗಳನ್ನು ನಿಗಧಿ ಪಡಿಸಿ ನಾಗರೀಕರ ಸಮಸ್ಯೆಗೆ ಸರ್ಕಾರಗಳು ಸ್ಪಂಧಿಸಬೇಕು ಇಲ್ಲವಾದಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.