
ಕುಣಿಗಲ್: ಪಟ್ಟಣದ ದೊಡ್ಡ ಕೆರೆ ಹಿಂಭಾಗ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ದ್ವಿಚಕ್ರವಾಹನದಲ್ಲಿ ಸಿದ್ದಗಂಗಯ್ಯ ಮತ್ತು ಅವರ ಮಗ ರಾಕೇಶ ಮತ್ತು ಅವರ ಪತ್ನಿ ಬರುವ ಸಂಧರ್ಭದಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ.
ವಾಹನ ಚಲಾವಣೆ ಮಾಡುತ್ತಿದ್ದ ಸಿದ್ದಗಂಗಯ್ಯ 55 ಸ್ಥಳದಲ್ಲೇ ಮೃತಪಟ್ಟರೆ ಈತನ ಪತ್ನಿ ಹಾಗೂ ಮಗ ರಾಕೇಶನಿಗೆ (20 )ಸಣ್ಣಪುಟ್ಟ ಗಾಯಗಳಾಗಿವೆ ಮೃತ ವ್ಯಕ್ತಿ ಸಿದ್ದಗಂಗಯ್ಯ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಕೊತ್ತಗೆರೆ ಹೋಬಳಿ ಈರ ಮೇಸ್ತ್ರಿಪಾಳ್ಯ ಗ್ರಾಮದವರಾಗಿದ್ದಾರೆ.ಜಿಲ್ಲೆಯ ಇತಿಹಾಸದಲ್ಲಿ ಮೃತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದಗಂಗಯ್ಯ ನವರ ಮನೆಗೆ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ, ವಿದ್ಯಾಕುಮಾರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಶವ ಸಂಸ್ಕಾರಕ್ಕೆಂದು ಇಲಾಖೆಯಿಂದ ಹದಿನೈದು ಸಾವಿರ ರೂಗಳನ್ನು ನೀಡಿ ಮೃತ ವ್ಯಕ್ತಿಗೆ ಸರ್ಕಾರದಿಂದ ಬರಬೇಕಾದ ಎಲ್ಲಾ ಸವಲತ್ತುಗಳು ಪ್ರಾಮಾಣಿಕವಾಗಿ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದ ಸಂಧರ್ಭ ದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಧರ್ಭದಲ್ಲಿ ಕುಣಿಗಲ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ಹಾಗೂ ತಾಲ್ಲೂಕಿನ ಹಲವಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತಿತರರು ಜೊತೆಯಲ್ಲಿದ್ದರು.