
ಕುಣಿಗಲ್ : ರಾಷ್ಟ್ರದ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳು ಹಿಂದಿ ಭಾಷೆಗೆ ಗುಲಾಮರಾಗಿ ಹಿಂದಿಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೊರೆ ಹಾಕುತ್ತಿರುವುದು ಖಂಡನೀಯ ಎಂದು ತಾಲ್ಲೂಕ್ ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ ಎನ್ ಜಗದೀಶ್ ಕಟುವಾಗಿ ಟೀಕಿಸಿದರು. ಪಟ್ಟಣದ ಹುಚ್ಚಮಾಸ್ತಿಗೌಡ ರ‍್ಕಲ್ ನಿಂದಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ್ ಅವರ ನೇತೃತ್ವದಲ್ಲಿ ಕರ‍್ಯರ‍್ತರು ಹಿಂದಿ ದಿವಸ್ ಆಚರಣೆ ಸಂಬಂಧ ಪ್ರತಿರೋಧ ವ್ಯಕ್ತಪಡಿಸಿ ತಾಲ್ಲೂಕು ಕಚೇರಿವರೆಗೂ ರಸ್ತೆಯುದ್ದಕ್ಕೂ ರ‍್ಯಾಲಿ ನಡೆಸಿ ಕೇಂದ್ರ ರ‍್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗುತ್ತ ತಾಲ್ಲೂಕು ಕಚೇರಿ ಮುಂಭಾಗ ಜಮಾವಣೆಗೊಂಡು ಪ್ರತಿಭಟಿಸಿ ಮಾತನಾಡಿದ ಅಧ್ಯಕ್ಷರು ರಾಜ್ಯದಲ್ಲಿ ಕನ್ನಡಕ್ಕೆ ಸಾವಿರಾರು ರ‍್ಷಗಳ ಇತಿಹಾಸವಿದೆ ಇದು ಗೊತ್ತಿದ್ದರೂ ಕೇಂದ್ರದ ಬಿಜೆಪಿ ರ‍್ಕಾರ ಕನ್ನಡಿಗರ ಮೇಲೆ ಹಿಂದಿಯನ್ನು ಬಲವಂತವಾಗಿ ಏರುತ್ತಿರುವುದನ್ನು ಜೆಡಿಎಸ್ ಪಕ್ಷ ಕಟುವಾಗಿ ಟೀಕಿಸುತ್ತದೆ ಎಂದ ಅವರು ಕೇಂದ್ರದ ಬಿಜೆಪಿ ರ‍್ಕಾರಕ್ಕೆ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ ರಾಜ್ಯದಲ್ಲಿ ಹಿಂದೀ ದಿವಸ ಆಚರಣೆ ಮಾಡುವುದನ್ನು ನಾವು ಕನ್ನಡಿಗರಾಗಿ ಕಟುವಾಗಿ ಟೀಕಿಸುತ್ತೇವೆ ಆದರೆ ಹಿಂದಿ ಭಾಷೆ ಮಾತನಾಡಲು ನಮ್ಮ ವಿರೋಧವಿಲ್ಲ ಆದರೆ ಅದನ್ನೇ ರಾಜ್ಯದಲ್ಲಿ ಹಿಂದೀ ದಿವಸ ಆಚರಣೆ ಮಾಡುತ್ತಾರೆ ಎಂದರೆ ಇದು ಕನ್ನಡಿಗರಿಗೆ ಮಾಡಿದ ಅಪಮಾನ ಇದೆಲ್ಲ ಗೊತ್ತಿರುವ ರಾಷ್ಟ್ರದ 2 ರಾಷ್ಟ್ರೀಯ ಪಕ್ಷಗಳು ಇದಕ್ಕೆ ಉತ್ತೇಜನ ನೀಡುತ್ತವೆ ಎಂದರೆ ಎರಡೂ ಪಕ್ಷಗಳಿಗೂ ನಾಚಿಕೆಯಾಗಬೇಕು ಇದಕ್ಕೆ ಮುಂದಿನ ದಿನಗಳಲ್ಲಿ ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆ ಎಂದರು.ಆದ್ದರಿಂದ ರಾಜ್ಯದ ಕನ್ನಡಿಗರು ಈಗಲಾದರೂ ಎಚ್ಚೆತ್ತುಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಹೆಚ್ಚು ಮನ್ನಣೆ ನೀಡಿ ರಾಜ್ಯದಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕೈಹಿಡಿದು ಮೇಲೆತ್ತಿ ರಾಜ್ಯದ ಮುಖ್ಯಮಂತ್ರಿ ಮಾಡಿದರೆ ಇಂತಹ ಘಟನೆಗಳಿಗೆ ಬ್ರೇಕ್ ಹಾಕಬಹುದು ಮತ್ತು ರಾಜ್ಯವು ಕೂಡ ಪ್ರಗತಿಪಥದತ್ತ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ರಾಜ್ಯದ ಜನರು ತೀಕ್ಷಣವಾಗಿ ಯೋಚಿಸಬೇಕು ಎಂದ ಅವರು ರಾಷ್ಟ್ರದ ಹಲವಾರು ರಾಜ್ಯಗಳಲ್ಲಿ ರಾಜ್ಯಭಾರ ಮಾಡುತ್ತಿರುವ ಕೆಲವು ಪ್ರಾದೇಶಿಕ ಪಕ್ಷಗಳು ಅವರವರ ಸ್ಥಳೀಯ ಭಾಷೆಗಳಿಗೆ ಮಾತ್ರ ಮಾನ್ಯತೆ ಕೊಡುತ್ತಿರುವುದನ್ನು ನಾವುಗಳು ನೋಡಿ ಅರಿತುಕೊಳ್ಳಬೇಕು ಎಂದು ಕನ್ನಡಿಗರನ್ನು ಎಚ್ಚರಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರುಗಳಾದ ತರೀಕೆರೆ ಗ್ರಾಂಪಂ ಸದಸ್ಯ ಪ್ರಕಾಶ್ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಪ್ಪ ಸಂತೆ ಮಾವತ್ತೂರು ಗ್ರಾಪಂ ಅಧ್ಯಕ್ಷ ಮಂಜುನಾಥ್ ಯಡಿಯೂರ್ ಗ್ರಾಂಪಂ ಸದಸ್ಯ ದೀಪು ಪ್ರೆಸ್ ರಂಗಸ್ವಾಮಿ ಕಾಡುಗೊಲ್ಲರ ಮುಖಂಡ ಜಿ ಕೆ ನಾಗಣ್ಣ ಚೊಟ್ಟನಹಳ್ಳಿ ಕಿಟ್ಟಿ ಒಳಗೊಂಡಂತೆ ಹಲವಾರು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.