koratagere Archives » ಸುವರ್ಣ ಪ್ರಗತಿ https://suvarnapragathi.in/archives/tag/koratagere ಕನ್ನಡ ದಿನ ಪತ್ರಿಕೆ Wed, 28 Dec 2022 01:55:26 +0000 en-US hourly 1 https://wordpress.org/?v=7.0 https://suvarnapragathi.in/wp-content/uploads/2021/08/cropped-suvarna-pragathi-logo-2-32x32.png koratagere Archives » ಸುವರ್ಣ ಪ್ರಗತಿ https://suvarnapragathi.in/archives/tag/koratagere 32 32 ಕೊರಟಗೆರೆ ಕ್ಷೇತ್ರದ ಜನತೆಯ ಆರೋಗ್ಯ ಸೇವೆಗೆ ಸದಾ ಬದ್ಧನಿದ್ದೇನೆ : ಡಾ.ಲಕ್ಷ್ಮೀಕಾಂತ್  https://suvarnapragathi.in/archives/5313 Wed, 28 Dec 2022 01:55:26 +0000 https://suvarnapragathi.in/?p=5313 ಕೊರಟಗೆರೆ : ರೈತ ದಿನಾಚರಣೆಯ ಅಂಗವಾಗಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ್ ತಾಲ್ಲೂಕಿನ ಕೋಳಾಲ ಹೋಬಳಿಯ ಗುಡಿಬೇವಿನಹಳ್ಳಿ ಗ್ರಾಮದಲ್ಲಿ ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಯಿತು. ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ ಮಾತನಾಡಿ, ರೈತರು ದೇವರ ಮತ್ತೊಂದು ಪ್ರತಿರೂಪವಾಗಿದ್ದು, ಆದ್ದರಿಂದ ರೈತ ದಿನಾಚರಣೆಯ ಅಂಗವಾಗಿ ಇಂದು ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ತಾಲ್ಲೂಕಿನ …

The post ಕೊರಟಗೆರೆ ಕ್ಷೇತ್ರದ ಜನತೆಯ ಆರೋಗ್ಯ ಸೇವೆಗೆ ಸದಾ ಬದ್ಧನಿದ್ದೇನೆ : ಡಾ.ಲಕ್ಷ್ಮೀಕಾಂತ್  appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ರೈತ ದಿನಾಚರಣೆಯ ಅಂಗವಾಗಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ್ ತಾಲ್ಲೂಕಿನ ಕೋಳಾಲ ಹೋಬಳಿಯ ಗುಡಿಬೇವಿನಹಳ್ಳಿ ಗ್ರಾಮದಲ್ಲಿ ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಯಿತು.
ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಡಾ.ಲಕ್ಷ್ಮೀಕಾಂತ ಮಾತನಾಡಿ, ರೈತರು ದೇವರ ಮತ್ತೊಂದು ಪ್ರತಿರೂಪವಾಗಿದ್ದು, ಆದ್ದರಿಂದ ರೈತ ದಿನಾಚರಣೆಯ ಅಂಗವಾಗಿ ಇಂದು ಸೂರ್ಯ ಆಸ್ಪತ್ರೆ ತುಮಕೂರು ಮತ್ತು ಜಿಲ್ಲಾ ಅಂಧತ್ವ ನಿವರಣಾ ಘಟಕ ಇವರ ಸಂಯುಕ್ತಶ್ರಾಯದಲ್ಲಿ ತಾಲ್ಲೂಕಿನ ಗುಡಿಬೇವಿನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ವಯೋವೃದ್ಧರ ಅನುಕೂಲಕ್ಕಾಗಿ ನೇತ್ರಾ ತಪಾಸಣಾ ಶಿಬಿರವನ್ನು ಏರ್ಪಡಿಸಿರುವುದು ಗ್ರಾಮದ ಜನರ ಅನುಕೂಲಕ್ಕೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಕೋವಿಡ್ ಮಹಾಮಾರಿಯ ಸೋಂಕು ಹೊರದೇಶಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದು ರಾಜ್ಯ ಸರಕಾರದ ಆದೇಶದಂತೆ ನಾಡಿನ ಜನತೆ ಮತ್ತು ನಮ್ಮ ಕೊರಟಗೆರೆ ಕ್ಷೇತ್ರದ ಜನರು 3ನೇ ಬೂಸ್ಟರ್ ಡೊಸ್ ಲಸಿಕೆ ಪಡೆಯದೆ ಇರುವವರು ಕೂಡಲೇ ಲಸಿಕೆ ಪಡೆದು ಸದಾ ಆರೋಗ್ಯವಂತರಾಗಿರಿ, ಕ್ಷೇತ್ರದ ಜನರ ಸೇವೆಗೆ ಸದಾ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈದ್ಯರು ತಪಾಸಣೆ ನಡೆಸಿದ ನಂತರ ಆಪರೇಷನ್ ಗೆ ಒಳಪಡುವಂತಹವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಪರೇಷನ್ ಮಾಡಿಸಿ ವಾಹನದ ವ್ಯವಸ್ಥೆಯೊಂದಿಗೆ ತಮ್ಮ ಗ್ರಾಮಕ್ಕೆ ವಾಪಸ್ಸು ಕರೆದುಕೊಂಡು ಬಂದು ಬಿಡುತ್ತೇವೆ, ವೈದ್ಯರ ಸಲಹೆಯ ಮೆರೆಗೆ ಕನ್ನಡಕದ ಅವಶ್ಯಕತೆ ಇರುವಂತಹ ವ್ಯಕ್ತಿಗಳ ಪಟ್ಟಿಮಾಡಿ ಅಂತಹವರಿಗೆ ಉಚಿತವಾಗಿ ವಿತರಿಸುತ್ತೇವೆ ಎಂದರು.
ಕ್ಷೇತ್ರದ ಜನರಿಗೆ ಕೋವಿಡ್ ಚಿಕಿತ್ಸೆ ಉಚಿತ :-
ನಮ್ಮ ಸೂರ್ಯ ಆಸ್ಪತ್ರೆ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸೆಂಟರ್ ಆಗಿತ್ತು, ಮೂರನೇ ಅಲೆಯಲ್ಲಿ ಕೊರಟಗೆರೆ ಕ್ಷೇತ್ರದ ಜನರಲ್ಲಿ ಏನಾದರೂ ಕೋವಿಡ್ ಸೋಂಕು ಕಂಡುಬಂದರೆ ಅಂತಹವರನ್ನು ತುಮಕೂರಿನ ಸೂರ್ಯ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಪಾಸಣಾ ಶಿಬಿರದಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡಾ. ಲಕ್ಷ್ಮೀಕಾಂತ್ ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಕೋಕಿಲ, ಡಾ.ಶಾಂಬವಿ, ಡಾ.ಜಯಮ್ಮ, ಮುಖಂಡರಾದ ಕರಿಬಸವಯ್ಯ, ತೇಜೆಶ್, ಬಾನುಪ್ರಕಾಶ್, ವಿರೇಶ್, ಅಪ್ಪಿವಿರೇಶ್, ಕೀರ್ತಿಕುಮಾರ್, ದಿನೇಶ್, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

The post ಕೊರಟಗೆರೆ ಕ್ಷೇತ್ರದ ಜನತೆಯ ಆರೋಗ್ಯ ಸೇವೆಗೆ ಸದಾ ಬದ್ಧನಿದ್ದೇನೆ : ಡಾ.ಲಕ್ಷ್ಮೀಕಾಂತ್  appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ ತಾಲೂಕು ಆಸ್ಪತ್ರೆಯ ಮೇಲ್ದರ್ಜೆಗೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ https://suvarnapragathi.in/archives/5269 Sat, 24 Dec 2022 14:46:30 +0000 https://suvarnapragathi.in/?p=5269 ತುಮಕೂರು: ಕೊರಟೆಗೆರೆ ತಾಲೂಕು ಆಸ್ಪತ್ರೆಯನ್ನು ೧೦೦ ಹಾಸಿಗೆಯ ಉನ್ನತ ಗುಣಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಜಿಲ್ಲೆಯ ಕೊರಟೆಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮದಲ್ಲಿ ರೂ ೨.೬೨ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ  ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವ್ಯೆದ್ಯಾಧಿಕಾರಿಗಳ ವಸತಿ ಗೃಹವನ್ನು  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕೊರಟಗೆರೆ ತಾಲೂಕಿನ  ೫೦ ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ೧೦೦ …

The post ಕೊರಟಗೆರೆ ತಾಲೂಕು ಆಸ್ಪತ್ರೆಯ ಮೇಲ್ದರ್ಜೆಗೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ appeared first on ಸುವರ್ಣ ಪ್ರಗತಿ.

]]>
ತುಮಕೂರು: ಕೊರಟೆಗೆರೆ ತಾಲೂಕು ಆಸ್ಪತ್ರೆಯನ್ನು ೧೦೦ ಹಾಸಿಗೆಯ ಉನ್ನತ ಗುಣಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಜಿಲ್ಲೆಯ ಕೊರಟೆಗೆರೆ ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮದಲ್ಲಿ ರೂ ೨.೬೨ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ  ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವ್ಯೆದ್ಯಾಧಿಕಾರಿಗಳ ವಸತಿ ಗೃಹವನ್ನು  ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೊರಟಗೆರೆ ತಾಲೂಕಿನ  ೫೦ ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ೧೦೦ ಹಾಸಿಗೆಯ ತಾಲೂಕು ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸಲಾಗುವುದು, ಕೋವಿಡ್-೧೯ರ  ಸಂದರ್ಭದಲ್ಲಿ ಮಂದಿರ, ಮಸೀದಿ, ಚರ್ಚುಗಳನ್ನು ಮುಚ್ಚಿದರು,  ಕೊನೆಗೆ ಕೆಲಸ ಮಾಡುವ ಕಚೇರಿಗಳು ಮತ್ತು ಮಕ್ಕಳು ಓದುವ ಶಾಲೆಗಳನ್ನೂ ಮುಚ್ಚಲಾಯಿತು,  ಆದರೆ ಆಸ್ಪತ್ರೆಗಳನ್ನು ಮಾತ್ರ ದಿನದ ೨೪ ಗಂಟೆಯೂ ತೆರೆಯಲಾಗಿತ್ತು ಎಂಬುದನ್ನು ಮರೆಯಬಾರದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ವ್ಯಾಪ್ತಿಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಲಾಗಿದೆ,  ಪ್ರಸ್ತುತ ವರ್ಷ ರಾಜ್ಯದಾದ್ಯಂತ ೧೦೦ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ಸಮುದಾಯ ಚಿಕಿತ್ಸಾ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ  ಪ್ರಾಶಸ್ತ್ಯದಲ್ಲಿ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದರು.
೨.೧೦ ಕೋಟಿ ವೆಚ್ಚದಲ್ಲಿ ಬುಕ್ಕಾಪಟ್ಟಣ ಗ್ರಾಮದ ನೂತನ : ನಂತರ ಸಚಿವರು ಕೊರಟೆಗೆರೆ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ರೂ ೨.೧೦ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ  ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಿ.ಹೆಚ್.ಸಿ.ಒ ಗೃಹವನ್ನು  ಲೋಕಾರ್ಪಣೆಗೊಳಿಸಿದರು.
  ೧೨.೪೦ ಕೋಟಿ ವೆಚ್ಚದಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರವಾಗಿ ಮೇಲ್ದರ್ಜೆಗೆ : ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು  ಸಚಿವರು ಶಂಕುಸ್ಥಾಪನೆ ನೆರವೇರಿಸಿದರು, ೨೦೨೩ರ ಜನವರಿ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ, ೧೨.೪೦ಕೋಟಿ ವೆಚ್ಚದಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗುವುದು, ಸಮುದಾಯ ಚಿಕಿತ್ಸಾ ಕೇಂದ್ರಗಳಲ್ಲಿ ೮ ಮಂದಿ ತಜ್ಞ ವೈದ್ಯರಿದ್ದು, ದಿನದ ೨೪ ಗಂಟೆಯೂ ಕಾರ್ಯನಿರ್ವಹಿಲಿರುವ ಕಾರಣ ಅನಾರೋಗ್ಯ ಪೀಡಿತರಿಗೆ ಇದು ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ೧೦ ನಮ್ಮ ಕ್ಲಿನಿಕ್ ಗಳನ್ನು ನೀಡಲಾಗಿದೆ: ರಾಜ್ಯದಲ್ಲಿ ಒಂದೇ ದಿನ ಏಕ ಕಾಲದಲ್ಲಿ ೧೧೪ ನಮ್ಮ ಕ್ಲಿನಿಕ್ ಗಳನ್ನು ಉದ್ಘಾಟಿಸುವ ಮೂಲಕ ಸರ್ಕಾರ ಇತಿಹಾಸ ಸೃಷ್ಟಿಸಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನಗರ ಹಾಗೂ ಪಟ್ಟಣ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ  ‘ನಮ್ಮ ಕ್ಲಿನಿಕ್’ಗಳನ್ನು ರಾಜ್ಯದಾದ್ಯಂತ ಆರಂಭಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆಗೆ ಕಾರಣವಾಗಿದ್ದಾರೆ
ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲಿ ೪೩೮ ‘ನಮ್ಮ ಕ್ಲಿನಿಕ್ ‘ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದೆ, ನಗರದ  ಜನಸಂಖ್ಯೆಗೆ ಅನುಗುಣವಾಗಿ  ಉತ್ತಮ ಸೇವೆ ನೀಡುವ ನಮ್ಮ ಕ್ಲಿನಿಕ್‌ಗಳ ಸ್ಥಾಪಿಸಲಾಗುತ್ತಿದ್ದು, ನಗರಗಳ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಅತಿ ದೊಡ್ಡ ಹೆಜ್ಜೆಯಾಗಿವೆ,  ಜನರು ನಿಯಮಿತವಾಗಿ ನಮ್ಮ ಕ್ಲಿನಿಕ್‌ಗೆ ಬೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯ ಸೇವೆ ಪಡೆಯಬೇಕು, ನಮ್ಮ ಸರ್ಕಾರ ಉಚಿತ ಔಷಧಗಳ ಹಾಗೂ ಪ್ರಯೋಗಾಲಯ ಸೇವೆ ನೀಡುವುದರೊಂದಿಗೆ ೆ ಹಾಗೂ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಸುಧಾರಣೆ ತರುತ್ತಿದೆ ಎಂದರು.
  ಗ್ರಾಮೀಣ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ : ರಾಜ್ಯದ್ಯಂತ ಗುಣಮಟ್ಟದ ಆಸ್ಪತ್ರೆಯನ್ನು ಗ್ರಾಮೀಣ ಭಾಗಕ್ಕೆ ನೀಡಿರುವುದು ಸಂತಸ ತಂದಿದೆ, ಸರ್ಕಾರವು ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಕೋವಿಡ್ ನಂತರ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಇದರಲ್ಲಿಯೇ ಆರೋಗ್ಯ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ೭ ಸಾವಿರ ಸಿಎಚ್‌ಒ ಗಳನ್ನು ಕಳೆದ ಒಂದು ವರ್ಷದಲ್ಲಿ ನೇಮಿಸಲಾಗಿದೆ. ಈ ಕೇಂದ್ರಗಳಲ್ಲಿ ಸುಮಾರು ೧೪ ಪರೀಕ್ಷೆಗಳಿಗೆ ಅವಕಾಶವಿದೆ, ಹಾಗೂ ೫೦ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಲಿದೆ ಎಂದು ಸಚಿವರು ವಿವರಿಸಿದರು.
ಕೋವಿಡ್ ನಿಯಮ ಪಾಲಿಸಲು ಕರೆ:   ರಾಜ್ಯದಲ್ಲಿ ೯೦೦ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದಿನದ ೨೪ ಗಂಟೆಯು ಕಾರ್ಯನಿರ್ವಹಿಸುತ್ತಿವೆ,  ಮತ್ತೆ ಕೋವಿಡ್ ಬರುವ ಆತಂಕ ಹೆಚ್ಚಾಗಿದೆ, ಚೀನಾ ದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ  ಬೂಸ್ಟರ್ ಡೋಸ್ ಪಡೆಯದವರು ಕೂಡಲೇ ಪಡೆಯಬೇಕು,  ಜನಸಂದಣಿ ಹೆಚ್ಚಾಗಿರುವ ಜಾಗದಲ್ಲಿ ಎಲ್ಲರೂ ತಪ್ಪದೆ ಮಾಸ್ಕ್ ಧರಿಸಬೇಕು ಎಂದು ಕರೆ ನೀಡಿದರು.
 ಸಾರ್ವಜನಿಕರು ಕನಿಷ್ಟ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ: ಅನಾರೋಗ್ಯ ಕಾಣಿಸಿದ ನಂತರ  ಆಸ್ಪತ್ರೆಗೆ ಬೇಟಿ ನೀಡಿದಾರಯಿತು ಎಂಬ ಮನಸ್ಥಿತಿ ತುಂಬಾ ಅಪಾಯಕಾರಿಯಾಗಿದ್ದು, ಗ್ರಾಮೀಣ ಜನರೂ ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸುವುದನ್ನು ರೂಡಿಸಿಕೊಳ್ಳಬೇಕು,  ೩೦ ವರ್ಷ ಮೇಲ್ಪಟ್ಟ ಎಲ್ಲರೂ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಆಗ್ಗಾಗ್ಗೆ ತಪಾಸಣೆಗೆ ಒಳಪಡಬೇಕು. ಇದರಿಂದ ಆರಂಭಿಕ ಹಂತದಲ್ಲಿಯೇ ಹಲವು ಕಾಯಿಲೆಗಳನ್ನು ಗುರ್ತಿಸಿ, ಚಿಕಿತ್ಸೆ ನೀಡುವುದರಿಂದ ಸಂಪೂರ್ಣ ಗುಣಮುಖವಾಗಲು ಸಹಕಾರಿಯಾಗಲಿದೆ ಎಂದರು.
ಡಾ. ಸುಧಾಕರ್ ಆರೋಗ್ಯ ಸಚಿವರಾಗಿ ಅತ್ಯುತ್ತಮ ಕಾರ್ಯನಿರ್ವಹಣೆ : ಪರಮೇಶ್ವರ್ ಮುಕ್ತಕಂಠದಿAದ ಶ್ಲಾಘನೆ
ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪರಮೇಶ್ವರ್,  ಸಚಿವ ಸುಧಾಕರ್ ಅವರ ಕಾರ್ಯವೈಖರಿಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು, ಸಚಿವ ಸುಧಾಕರ್ ಅವರ ಪ್ರಮಾಣೀಕ ಕರ್ತವ್ಯ ನಿರ್ವಹಣೆಯಿಂದಾಗಿ ಕೋವಿಡ್-೧೯ ಹಿಮ್ಮೆಟ್ಟಿಸಲು ಸಾಧ್ಯವಾಯಿತು,  ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಅವರು ಕೈಗೊಂಡ ಕ್ರಮಗಳಿಂದ ಇವತ್ತು ಅತ್ಯುತ್ತಮ ಮಟ್ಟದ ಸೌಲಭ್ಯಗಳು ಸಾರ್ವಜನಿಕರಿಗೆ ಸಿಗುತ್ತಿವೆ, ಈಗಲೂ ಮತ್ತೆ ಕೋವಿಡ್ ಹರಡುವ ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೂಚನೆ ನೀಡುತ್ತಿದ್ದಾರೆ. ಅದನ್ನು ಎಲ್ಕರೂ ಪಾಲಿಸಬೇಕು, ಪಕ್ಷಾತೀತವಾಗಿ ಅವರ ಕೆಲಸಕ್ಕೆ ಮೆಚ್ಚುಗೆ ಹೇಳಲೇಬೇಕಿದೆ ಎಂದರು.
ಜAಟಿ ವಿಭಾಗೀಯ ನಿರ್ದೇಶಕ ಮುರಳಿ ಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಂಜುನಾಥ್ ಡಿ.ಎನ್, ಜಿಲ್ಲಾ ಸರ್ಜನ್ ಡಾ.ವೀಣಾ,  ಆಸ್ಪತ್ರೆ ನಿರ್ಮಾಣಕ್ಕೆ ನಿವೇಶನ ದಾನ ಮಾಡಿದ ಸುಜಯ ಪಿ. ಮಂಜುನಾಥ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಕೇಶವ ರಾಜ್ ಜಿ. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ: ಸನತ್‌ಕುಮಾರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನದಾಸ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಖಾ ತಹಸಿಲ್ದಾರ್, ಮುಖಂಡರಾಧ ಅನಿಲ್ ಕುಮಾರ್, ರಾಮಯ್ಯ ಸೇರಿದಂತೆ ಇತರೆ ಜನಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

The post ಕೊರಟಗೆರೆ ತಾಲೂಕು ಆಸ್ಪತ್ರೆಯ ಮೇಲ್ದರ್ಜೆಗೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ ತಾಲ್ಲೂಕಿನ ಕುಗ್ರಾಮ ಕುಮಟೇನಹಳ್ಳಿಗೆ ಹಳ್ಳವೇ ರಸ್ತೆ.. ಸುಮಾರು 25 ಮನೆಗಳಿದ್ದು, 150 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಕ್ಕೆ ರಸ್ತೆಯೇ ಇಲ್ಲ… https://suvarnapragathi.in/archives/4489 Fri, 02 Sep 2022 02:35:52 +0000 https://suvarnapragathi.in/?p=4489 ಕೊರಟಗೆರೆ : ಕಂದಾಯ ಗ್ರಾಮದ ಕುಮಟೇನಹಳ್ಳಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು ಸರಿ ಸುಮಾರು 120ಕ್ಕೂ ಹೆಚ್ಚು ಮತದಾರರಿದ್ದಾರೆ. ಸದರಿ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದು ಇಲ್ಲದಂತೆ ಮಾಯವಾಗಿದೆ. ಸುಮಾರು ಏಳು ವರ್ಷಗಳಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಮುಖ್ಯವಾಗಿ ಸಂಪರ್ಕ ರಸ್ತೆ ಇಲ್ಲದೆ ಜನರು ಹಳ್ಳವನ್ನೇ ರಸ್ತೆಯನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬೆಂಡೋಣೆ ಗ್ರಾಮದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕುಮಟೇನಹಳ್ಳಿ ಗ್ರಾಮದ ಮುಗ್ಧ ಜನರು ಹೊರ ಪ್ರಪಂಚಕ್ಕೆ ಕಾಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಕಾಶೆ ರಸ್ತೆ …

The post ಕೊರಟಗೆರೆ ತಾಲ್ಲೂಕಿನ ಕುಗ್ರಾಮ ಕುಮಟೇನಹಳ್ಳಿಗೆ ಹಳ್ಳವೇ ರಸ್ತೆ.. ಸುಮಾರು 25 ಮನೆಗಳಿದ್ದು, 150 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಕ್ಕೆ ರಸ್ತೆಯೇ ಇಲ್ಲ… appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ಕಂದಾಯ ಗ್ರಾಮದ ಕುಮಟೇನಹಳ್ಳಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು ಸರಿ ಸುಮಾರು 120ಕ್ಕೂ ಹೆಚ್ಚು ಮತದಾರರಿದ್ದಾರೆ. ಸದರಿ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದು ಇಲ್ಲದಂತೆ ಮಾಯವಾಗಿದೆ. ಸುಮಾರು ಏಳು ವರ್ಷಗಳಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಮುಖ್ಯವಾಗಿ ಸಂಪರ್ಕ ರಸ್ತೆ ಇಲ್ಲದೆ ಜನರು ಹಳ್ಳವನ್ನೇ ರಸ್ತೆಯನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಬೆಂಡೋಣೆ ಗ್ರಾಮದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ
ಕುಮಟೇನಹಳ್ಳಿ ಗ್ರಾಮದ ಮುಗ್ಧ ಜನರು ಹೊರ ಪ್ರಪಂಚಕ್ಕೆ ಕಾಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಕಾಶೆ ರಸ್ತೆ ತೆರವು ಮಾಡಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲು ಸರಿ ಸುಮಾರು ಏಳು ವರ್ಷಗಳ ಹಿಂದಿನಿಂದಲೂ ಸತತವಾದ ಹೋರಾಟವನ್ನು ಈ ಊರಿನ ಗ್ರಾಮಸ್ಥರು ಮಾಡುತ್ತಿದ್ದಾರೆ ಆದರೆ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಗಾಢ ನಿದ್ರೆಯಲ್ಲಿ ಜಾರಿದ್ದಾರೆ.
ಶಾಲಾ ಮಕ್ಕಳು ಶಾಲೆಗೆ ಹೋಗಲು ಆಗದೆ ಮನೆಯಲ್ಲೇ ಉಳಿತಾ ಘಟನೆ ಸಹ ಬೆಳಕಿಗೆ ಬಂದಿದೆ. ವಯಸ್ಸಾದ ವೃದ್ಧರು ಅಗವಿಕಲರು ಪುಟ್ಟ ಮಕ್ಕಳು ತುರ್ತು ಆರೋಗ್ಯ ಸಮಸ್ಯೆ ಕಂಡು ಬಂದರೆ ಹರಿಯುವ ಹಳ್ಳದ ಮಧ್ಯೆಯೇ ಜೀವದ ಹಂಗನ್ನು ತೊರೆದು ಓಡಾಡುವ ಸ್ಥಿತಿ ಬೆಳಕಿಗೆ ಬಂದಿದೆ.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರಾದ ಡಾ ಜಿ ಪರಮೇಶ್ವರ್  ಈ ನಮ್ಮ ಗ್ರಾಮಕ್ಕೆ ಒಮ್ಮೆಯೂ ಸಹ ಭೇಟಿ ನೀಡಿಲ್ಲ ಚುನಾವಣೆ ಸಮಯದಲ್ಲಿ ಮಾತ್ರ ನಮ್ಮೂರಿಗೆ ಭೇಟಿ ನೀಡಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆಂದು ಆಶ್ವಾಸನೆಯನ್ನು ಮಾತ್ರ ನೀಡಿ ಹಿಂತಿರುಗಿದ ಶಾಸಕ ಇಲ್ಲಿಯವರೆಗೂ ಕೂಡ ನಮ್ಮ ಗ್ರಾಮಕ್ಕೆ ಬಂದಿರುವುದಿಲ್ಲ ನಮ್ಮ ಕಷ್ಟಗಳನ್ನು ಕೇಳಿಲ್ಲ ಇನ್ನಾದರೂ ಶಾಸಕರು ಎಚ್ಚೆತ್ತುಕೊಂಡು ನಮ್ಮ ಗ್ರಾಮಕ್ಕೆ ಖೂದ್ದು ಭೇಟಿ ನೀಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕಾಗಲಿ ಯಾವುದೇ ವ್ಯಕ್ತಿಯಾಗಲಿ ಮತವನ್ನು ನೀಡದೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂದು ಊರಿನ ಯುವಕ ಹನುಮಂತರಾಜು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಊರಿನಿಂದ ಒಂದುವರೆ ಕಿಲೋಮೀಟರ್ ದೂರವಿರುವ ಬೆಂಡೋಣೆ ಗ್ರಾಮಕ್ಕೆ ಹಳ್ಳದಲ್ಲಿಯೇ ನಡೆದುಕೊಂಡು ಸ್ನೇಹಿತರೊಂದಿಗೆ ಹೋಗುತ್ತೇವೆ.ನಮ್ಮ ಜೊತೆ ಚಿಕ್ಕ ಮಕ್ಕಳು ಶಾಲೆಗೆ ಬರುತ್ತಾರೆ ಈ ಹಳ್ಳದಲ್ಲಿಯೇ ನಾವು ದಿನನಿತ್ಯ ಶಾಲೆಗೆ ಹೋಗುತ್ತೇವೆ ಹೆಚ್ಚು ಮಳೆ ಬಂದರೆ ನೀರು ಜಾಸ್ತಿ ಹರಿಯುವುದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ ಆದ್ದರಿಂದ ಈ ಸಮಸ್ಯೆಯನ್ನು ಶಾಸಕರು ಮತ್ತು ಅಧಿಕಾರಿಗಳು ಬಗೆಹರಿಸಬೇಕೆಂದು ವಿದ್ಯಾರ್ಥಿನಿ ಮಾಲ ತಿಳಿಸಿದರು.
ನಮ್ಮ ಊರಿಗೆ ಪ್ರತ್ಯೇಕವಾದ ನಕಾಶೆ ರಸ್ತೆ ಇದೆ ಆದರೆ ಕೆಲವರು ರಸ್ತೆಯನ್ನು ಒತ್ತುವರಿ ಮಾಡಿರುತ್ತಾರೆ. ನಾವು ಸುಮಾರು ಏಳು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಹಾಗೂ ಶಾಸಕರ ಗಮನಕ್ಕೂ ಈ ವಿಚಾರವನ್ನು ತಂದಿರುತ್ತೇವೆ ಆದರೆ ಬಲಾಡ್ಯರು ರಸ್ತೆಯನ್ನು ಹೊತ್ತುವರಿ ಮಾಡಿದ್ದು ರಸ್ತೆಯನ್ನು ತೆರೆವು ಮಾಡಲು ಅಧಿಕಾರಿಗಳು ಮಾತ್ರ ಮುಂದೆ ಬರುತ್ತಿಲ್ಲ ಹೀಗಾಗಿ ನಾವು ಪ್ರತಿನಿತ್ಯ ಹರಿಯುವ ಹಳ್ಳದಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥೇ ಲಕ್ಷ್ಮಮ್ಮ ತಿಳಿಸಿದರು.
ಇನ್ನಾದರೂ ಸ್ಥಳೀಯ ಶಾಸಕರು ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿಗಳ ಅಧಿಕಾರಿಗಳು ಮತ್ತು ತಾಲ್ಲೂಕು ದಂಡಾಧಿಕಾರಿಗಳು ಎಚ್ಚೆತ್ತುಕೊಂಡು ಅಭಿವೃದ್ದಿ ಕಾರ್ಯ ಮಾಡಬೇಕಿದೆ.

 

 

 

The post ಕೊರಟಗೆರೆ ತಾಲ್ಲೂಕಿನ ಕುಗ್ರಾಮ ಕುಮಟೇನಹಳ್ಳಿಗೆ ಹಳ್ಳವೇ ರಸ್ತೆ.. ಸುಮಾರು 25 ಮನೆಗಳಿದ್ದು, 150 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಕ್ಕೆ ರಸ್ತೆಯೇ ಇಲ್ಲ… appeared first on ಸುವರ್ಣ ಪ್ರಗತಿ.

]]>
ಮುಖ್ಯಮಂತ್ರಿ ಎಂದರೆ ನನ್ನ ವಿರುದ್ದ ಒಳ ಕೂಯಿಲು ಪ್ರಾರಂಭವಾಗುತ್ತದೆ : ಡಾ.ಜಿ.ಪರಮೇಶ್ವರ್ https://suvarnapragathi.in/archives/2830 Sun, 23 Jan 2022 01:47:00 +0000 https://suvarnapragathi.in/?p=2830 ಕೊರಟಗೆರೆ : ಕ್ಷೇತ್ರದ ಜನರು ಭಾವೋದ್ರೇಕವಾಗಿ ಮುಖ್ಯಮಂತ್ರಿಯಾಬೇಕು ಎಂದು ಭಾಷಣ ಮಾಡಬೇಡಿ ನೀವು ಇಲ್ಲಿ ಕೂಗಿದರೆ ನನ್ನ ವಿರುದ್ದ ಒಳ ಕೂಯಿಲು ಅಲ್ಲಿ ಶುರುವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು. ಅವರು ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ಸುಮಾರು 5 ಕೋಟಿ ರೂಗಳ ವೆಚ್ಚದ 17 ಕಾಮಗಾರಿಗಳನ್ನು ಶಂಕುಸ್ಥಾಪನೆ ಶನಿವಾರ ನೆರವೇರಿಸಿ ಮಾತನಾಡಿ ಕ್ಷೇತ್ರದ ಅಭಿವೃದಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ ಪ್ರತಿಯೋಬ್ಬ …

The post ಮುಖ್ಯಮಂತ್ರಿ ಎಂದರೆ ನನ್ನ ವಿರುದ್ದ ಒಳ ಕೂಯಿಲು ಪ್ರಾರಂಭವಾಗುತ್ತದೆ : ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ಕ್ಷೇತ್ರದ ಜನರು ಭಾವೋದ್ರೇಕವಾಗಿ ಮುಖ್ಯಮಂತ್ರಿಯಾಬೇಕು ಎಂದು ಭಾಷಣ ಮಾಡಬೇಡಿ ನೀವು ಇಲ್ಲಿ ಕೂಗಿದರೆ ನನ್ನ ವಿರುದ್ದ ಒಳ ಕೂಯಿಲು ಅಲ್ಲಿ ಶುರುವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ಅವರು ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ಸುಮಾರು 5 ಕೋಟಿ ರೂಗಳ ವೆಚ್ಚದ 17 ಕಾಮಗಾರಿಗಳನ್ನು ಶಂಕುಸ್ಥಾಪನೆ ಶನಿವಾರ ನೆರವೇರಿಸಿ ಮಾತನಾಡಿ ಕ್ಷೇತ್ರದ ಅಭಿವೃದಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ ಪ್ರತಿಯೋಬ್ಬ ಮತದಾರರ ಋಣ ತೀರುಸುವ ಕೆಲಸವನ್ನು ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತೇನೆ. ಸರ್ಕಾರದಿಂದ ಹಣ ತರುವುದು ಕಷ್ಟ ಇತರ ಕ್ಷೇತ್ರಗಳನ್ನು ಗಮನಿಸಿ ನಮ್ಮ ಕ್ಷೇತ್ರವನ್ನು ಗಮನಿಸಿ ಅಭಿವೃಧಿ ಆಗ ತಿಳಿಯುತ್ತದೆ ಎಂದರು. ಕ್ಷೇತ್ರ ಜನರು ನನ್ನ ಮೇಲೆ ವಿಶ್ವಾಸಕ್ಕೆ ಪ್ರೀತಿಗೆ ಅಭಿಮಾನಕ್ಕೆ ಮುಖ್ಯಮಂತ್ರಿಯಾಗಲಿ ಎಂದು ಕೂಗುತ್ತೀರ ಅದು ನಮ್ಮ ಕೈಯಲ್ಲಿ ಇಲ್ಲ ಪಕ್ಷದ ವರಿಷ್ಠರು ಶಾಸಕರು ಸೇರಿದಂತೆ ಹಲವು ಹಂತಗಳಲ್ಲಿ ನಡೆಯುವ ಕೆಲಸ ಆದರೆ ನೀವುಗಳು ನನ್ನನು ರಾಜ್ಯದ ಒಬ್ಬ ನಾಯಕ ಎಂದು ಗುರುತಿಸಿ ಮತ ಹಾಕಿ ಎಂದರು.
ರಾಜ್ಯದಲ್ಲಿ ಸಮಿಶ್ರ ಸರ್ಕಾರದಲ್ಲಿ ನೀಡಿದಂತಹ ಆಶ್ರಯ ಮನೆಗಳಿಗೆ ಸರ್ಕಾರ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿದೆ ಆದರೆ ಸರ್ಕಾರದಿಂದ ಯಾವುದೇ ಹೊಸ ಮನೆಯನ್ನು ಬಿಡುಗಡೆ ಮಾಡಿಲ್ಲ ನಾವುಗಳು ವಿದಾನ ಸಭೆಯಲ್ಲಿ ಒತ್ತಡ ಹಾಕಿದ ಮೇಲೆ ಸರ್ಕಾರವು ಪ್ರತೀ ಪಂಚಾಯ್ತಿಗೆ 40 ಮನೆಗಳನ್ನು ನೀಡಿದೆ, ಆದರೆ ವಿಶೇಷವಾಗಿ ವಸತಿ ಸಚಿವರಾದ ವಿ. ಸೋಮಣ್ಣನವರು ನನ್ನ ಮನವಿ ಮತ್ತು ವಿಶ್ವಾಸಕ್ಕೆ ಸ್ಪಂಧಿಸಿ ಕೊರಟಗೆರೆ ಕ್ಷೇತ್ರಕ್ಕೆ 3600 ಮನೆಗಳನ್ನು ವಿಶೇಷ ಆದ್ಯತೆಯ ಮೇಲೆ ಬಿಡುಗಡೆಗೊಳಿಸಿದ್ದಾರೆ ಈ ಹಿಂದೆಯೂ ನನಗೆ 8 ಸಾವಿರ ಮನೆಗಳನ್ನು ಮಂಜೂರು ವಸತಿ ಸಚಿವರಿಗೆ ಕ್ಷೇತ್ರದ ಜನರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಸರ್ಕಾರದಲ್ಲಿ ಭ್ರಷ್ಠಾಚಾರದ ಕೂಗು ಸಾಕಷ್ಟು ಕೇಳುತ್ತಿದೆ, ಸರ್ಕಾರದ ಕಾಮಗಾರಿ ಮತ್ತು ಕೆಲಸ ನಿರ್ವಹಿಸುವವರು, ಬಹಿರಂಗವಾಗಿಯೇ ಈ ಆರೋಪ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಯಾವುದೇ ಸರ್ಕಾರವಾಗಲಿ ಜನರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದ ಅವರು ಬರುವ ಆಯ ವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕ್ಷೇತ್ರದ ಎತ್ತಿನ ಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಗಳನ್ನು ಬಿಡುಗಡೆ ಮಾಡಲಿ ಇದರಿಂದ ಬಯಲು ಸೀಮೆಯ ಜನರಿಗೆ ನೀರಿನ ನೆರವಾಗುತ್ತದೆ ನನ್ನ ಕ್ಷೇತ್ರದಲ್ಲಿ 110 ಕೆರೆಗಳು ಈ ಯೋಜನೆಯಲ್ಲಿ ತುಂಬಲಿವೆ,ಅದೇ ರೀತಿಯಾಗಿ ತುಮಕೂರು-ರಾಯದುರ್ಗ-ಬಳ್ಳಾರಿ ರೈಲ್ವೇ ಮಾರ್ಗವು ಹಳ್ಳ ಹಿಡಿದಿದೆ, ಯಪಿಎ ಸರ್ಕಾರದಲ್ಲಿ ತಂದಂತಹ ಈ ಯೋಜನೆ ಅರ್ಧಕ್ಕೆ ನಿಂತಿರುವುದು ದುರದುಷ್ಠಕರ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಆದರೆ ಯೋಜನೆ ಮಾತ್ರ ಸಕಾರಗೊಂಡಿಲ್ಲ ನೆರೆಯ ಆಂದ್ರಪ್ರದೇಶದಲ್ಲಿ ಈ ಯೋಜನೆ ಅಂತಿಮ ಘಟ್ಟಕ್ಕೆ ಬಂದಿದೆ ಈ ಕೂಡಲೇ ರಾಜ್ಯದ ಮುಖ್ಯಂತ್ರಿಗಳು ಇದರ ಬಗ್ಗೆ ಒತ್ತು ನೀಡಿ ಹೆಚ್ಚಿನ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಜಾತ, ಸದಸ್ಯರಾದ ನಾಗರಾಜು, ಅಂಜನಪ್ಪ,
ಆನಂದ್,ರಾಜು ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್ ದಿನೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಅಶ್ವ
ಥ್ ನಾರಾಯಣ,ಮಾಜಿ ಅಧ್ಯಕ್ಷ ಗಂಗಾಧರಪ್ಪ, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಹನುಮಂತರಾಯಪ್ಪ, ನ್ಯಾತೇಗೌಡ, ನಂಜೀರ್, ಸುರೇ
ಶ್, ಸೇರಿದಂತೆ ಹಲವು ಸ್ಥಳೀಯ ಮುಖಂಡರುಗಳು ಹಾಜರಿದ್ದರು.

The post ಮುಖ್ಯಮಂತ್ರಿ ಎಂದರೆ ನನ್ನ ವಿರುದ್ದ ಒಳ ಕೂಯಿಲು ಪ್ರಾರಂಭವಾಗುತ್ತದೆ : ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಕಾಂಗ್ರೇಸ್ ಪಕ್ಷದಿಂದ ದೇಶ ಒಡೆಯುವ ಕೆಲಸ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ https://suvarnapragathi.in/archives/2336 Thu, 18 Nov 2021 04:12:07 +0000 https://suvarnapragathi.in/?p=2336 ಕೊರಟಗೆರೆ : ವಿಧಾನ ಪರಿಷತ್ ಹಾಗೂ ವಿಧಾನಸಭೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷದ ರಾಷ್ಟ್ರ -ರಾಜ್ಯ ನಾಯಕರು ಜಾತಿ ರಾಜಕಾರಣ ವೈಭವಿಕರಿಸಿ ಭಾರತ ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಕೊರಟಗೆರೆ ಪಟ್ಟಣದ ಹಿಂದುಸಾದರ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತನ ಮಗಳ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೇಸ್ ಪಕ್ಷದ ಜೊತೆಯಲ್ಲಿ ಜೆಡಿಎಸ್ ಪಕ್ಷ ಲೋಕಸಭೆ ಚುನಾವಣೆಗೆ ಮೈತ್ರಿಯಾಗಿ ಸ್ಪರ್ಧೆ …

The post ಕಾಂಗ್ರೇಸ್ ಪಕ್ಷದಿಂದ ದೇಶ ಒಡೆಯುವ ಕೆಲಸ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ವಿಧಾನ ಪರಿಷತ್ ಹಾಗೂ ವಿಧಾನಸಭೆ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷದ ರಾಷ್ಟ್ರ -ರಾಜ್ಯ ನಾಯಕರು ಜಾತಿ ರಾಜಕಾರಣ ವೈಭವಿಕರಿಸಿ ಭಾರತ ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಕೊರಟಗೆರೆ ಪಟ್ಟಣದ ಹಿಂದುಸಾದರ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತನ ಮಗಳ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೇಸ್ ಪಕ್ಷದ ಜೊತೆಯಲ್ಲಿ ಜೆಡಿಎಸ್ ಪಕ್ಷ ಲೋಕಸಭೆ ಚುನಾವಣೆಗೆ ಮೈತ್ರಿಯಾಗಿ ಸ್ಪರ್ಧೆ ಮಾಡಿದ್ದು ಮುಗಿದ ಅಧ್ಯಾಯ. ಕಾಂಗ್ರೇಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ನಾನು ಸರಕಾರ ರಚನೆ ಮಾಡಿದ್ದೇ ಜೆಡಿಎಸ್ ಪಕ್ಷದ ಸಂಘಟನೆಗೆ ಸಮಸ್ಯೆಯಾಗಿದೆ. ಜೆಡಿಎಸ್ ಪಕ್ಷದ ಅಂತರಿಕ ಸಭೆಯಲ್ಲಿ ಸರಿಪಡಿಸಿಕೊಳ್ಳಲು ಈಗಾಗಲೇ ತಿರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಬೀಟ್ ಕಾಯಿನ್ ಈಗ ಪ್ರಾರಂಭವಾಗಿಲ್ಲ 2016ರಿಂದಲೇ ಇದು ಆರಂಭವಾಗಿದೆ. ಕಾಂಗ್ರೇಸ್ ಸರಕಾರ ಇದ್ದಾಗಲೇ ಶ್ರೀಕಿ ಇರೋದು ತಿಳಿದಿದೆ. ಅಂದಿನ ಸರಕಾರ ಮಾಹಿತಿ ತೆಗೆದುಕೊಂಡು ಕ್ರಮ ವಹಿಸಿದ್ದರೇ ಇಂದು ಇಂತಹ ಪರಿಸ್ಥಿತಿ ಉದ್ಭವ ಆಗುತ್ತೀರಲಿಲ್ಲ. ಬೀಟ್ ಕಾಯಿನ್ ವಿಚಾರದಲ್ಲಿ ಕಾನೂನು ಹೋರಾಟ ಮಾಡಿದರೇ ಉಪಯೋಗ ಆಗೋಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರು ಮತ್ತು ದಲಿತರು ಒಂದಾಗಬೇಕು ಎಂದು ಕಾಂಗ್ರೇಸ್ ನಾಯಕರು ಜಾತಿಯ ಹೆಸರಿನಲ್ಲಿ ಸಭೆ ಮಾಡಿದ್ದಾರೆ. ಸಭೆಯ ಕೊನೆಯಲ್ಲಿ ಜೈಹಿಂದ್ ಅಂತಾ ಘೋಷಣೆ ಕೂಗಿದ್ದಾರೆ. ನಾವು ಪಕ್ಷದ ಸಭೆಯಲ್ಲಿ ಜೈಹಿಂದ್ ಅಂತಾ ಕೂಗುತ್ತೇವೆ. ಅದನ್ನು ಕಾಂಗ್ರೇಸ್ ನಾಯಕರು ಅಹಿಂದ್ ಅಂತಾ ಹೇಳಲು ಹೊರಟಿದ್ದಾರೆ. ದೇಶ ಒಡೆಯುವ ಕೆಲಸವನ್ನು ಕಾಂಗ್ರೇಸ್ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ತುಮಕೂರು ಜಿಲ್ಲೆಯ ವಿಧಾನ ಪರಿಷತ್ ಅಭ್ಯರ್ಥಿಯನ್ನು ನಾಡಿದ್ದು ಪ್ರಕಟ ಮಾಡ್ತೀವಿ. ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಅನೀಲ್ ರಾಜಿನಾಮೆಗೂ ಪಕ್ಷದ ಅಭ್ಯರ್ಥಿಗೆ ಸಂಬಂಧವೇನು. ಸ್ಥಳೀಯ ನಾಯಕರ ಅಂತಿಮ ತಿರ್ಮಾನದ ಬಳಿಕ ಅಭ್ಯರ್ಥಿ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊರಟಗೆರೆ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಗೌರವಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಲಕ್ಷ್ಮೀಶ್, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಪ್ರೇಮಾ, ಗ್ರಾಪಂ ಅಧ್ಯಕ್ಷ ರಮೇಶ್, ಮಾವತ್ತೂರು ಮಂಜುನಾಥ, ಪಪಂ ಅಧ್ಯಕ್ಷ ಮಂಜುಳ ಸತ್ಯನಾರಾಯಣ್, ಉಪಾದ್ಯಕ್ಷ ಭಾರತಿಸಿದ್ದಮಲ್ಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್, ಸದಸ್ಯರಾದ, ಲಕ್ಷ್ಮೀನಾರಾಯಣ್, ಪುಟ್ಟನರಸಪ್ಪ, ರಮೇಶ್, ಕಲೀಂವುಲ್ಲಾ ಸೇರಿದಂತೆ ಇತರರು ಇದ್ದರು.

The post ಕಾಂಗ್ರೇಸ್ ಪಕ್ಷದಿಂದ ದೇಶ ಒಡೆಯುವ ಕೆಲಸ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ appeared first on ಸುವರ್ಣ ಪ್ರಗತಿ.

]]>
ಗ್ರೀಷ್ಮಾ ನಾಯಕ್‌ಗೆ ಅಭಿನಂದನೆ : ವೈದ್ಯಕೀಯ ಸೀಟು ಭರವಸೆ ನೀಡಿದ ಡಾ.ಜಿ.ಪರಮೇಶ್ವರ್ https://suvarnapragathi.in/archives/2109 Wed, 13 Oct 2021 03:04:39 +0000 https://suvarnapragathi.in/?p=2109 ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ರವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿದ ಎನ್.ಗ್ರೀಷ್ಮಾ ನಾಯಕ್ ವಿದ್ಯಾರ್ಥಿನಿಗೆ ಸಿದ್ದಾರ್ಥ ಸಂಸ್ಥೆಯಿಂದ ಉಚಿತ ವೈದ್ಯಕೀಯ ಸೀಟಿನ ಭರವಸೆ ಮತ್ತು 50 ಸಾವಿರ ನಗದು ನೀಡಿ ಅಭಿನಂದಿಸಿ ಗೌರವಿಸಿದರು. ಕೆಲವು ತಿಂಗಳ ಹಿಂದೆ ಕರೋನಾ ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗದೆ ಇದುದರಿಂದ ಮಾಹಿತಿ ಕೊರತೆ ಉಂಟಾಗಿ ಪಟ್ಟಣದ ಹನುಮಂತಪುರದ ವಾಸಿ ಬಿ.ಆರ್.ನರಸಿಂಹಮೂರ್ತಿ,ಪದ್ಮಾವತಿ ದಂಪತಿ ಮಗಳು ವಿದ್ಯಾರ್ಥಿನಿ ಗ್ರೀಷ್ಮಾಗೆ 2021 ರ ಜುಲೈ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು …

The post ಗ್ರೀಷ್ಮಾ ನಾಯಕ್‌ಗೆ ಅಭಿನಂದನೆ : ವೈದ್ಯಕೀಯ ಸೀಟು ಭರವಸೆ ನೀಡಿದ ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ರವರು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿದ ಎನ್.ಗ್ರೀಷ್ಮಾ ನಾಯಕ್ ವಿದ್ಯಾರ್ಥಿನಿಗೆ ಸಿದ್ದಾರ್ಥ ಸಂಸ್ಥೆಯಿಂದ ಉಚಿತ ವೈದ್ಯಕೀಯ ಸೀಟಿನ ಭರವಸೆ ಮತ್ತು 50 ಸಾವಿರ ನಗದು ನೀಡಿ ಅಭಿನಂದಿಸಿ ಗೌರವಿಸಿದರು.
ಕೆಲವು ತಿಂಗಳ ಹಿಂದೆ ಕರೋನಾ ಹಿನ್ನಲೆಯಲ್ಲಿ ಶಾಲೆಗಳು ಪ್ರಾರಂಭವಾಗದೆ ಇದುದರಿಂದ ಮಾಹಿತಿ ಕೊರತೆ ಉಂಟಾಗಿ ಪಟ್ಟಣದ ಹನುಮಂತಪುರದ ವಾಸಿ ಬಿ.ಆರ್.ನರಸಿಂಹಮೂರ್ತಿ,ಪದ್ಮಾವತಿ ದಂಪತಿ ಮಗಳು ವಿದ್ಯಾರ್ಥಿನಿ ಗ್ರೀಷ್ಮಾಗೆ 2021 ರ ಜುಲೈ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಪ್ರವೇಶಪತ್ರ ಸಿಗದೆ ಇದ್ದಕಾರಣ ಗ್ರೀಷ್ಮಾ ಮನನೋಂದ್ದಿದಳು.ವಿಷಯ ತಿಳಿದ ತಕ್ಷಣ ಶಾಸಕ ಡಾ.ಜಿ.ಪರಮೇಶ್ವರ ಅಂದು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಆಕೆಗೆ ಆತ್ಮಸೈರ್ಯ ತುಂಬಿ ಪೋಷಕರಿಗೆ ಪರೀಕ್ಷೆ ಬರೆಯುಸುವ ಭರವಸೆ ನೀಡಿದ್ದರು,ಸ್ಥಳದಲ್ಲಿಯೇ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್‌ಕುಮಾರ್ ರವರಿಗೆ ದೂರವಾಣಿ ಮೂಲಕ ಕೆರೆಮಾಡಿ ಅವರಿಂದ ಪರೀಕ್ಷೆ ಬರೆಸುವ ಭರವಸೆ ಪಡೆದು ತಾಲೂಕು ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೋಳ್ಳುವಂತೆ ಆದೇಶಿಸಿದ್ದರು. ಈ ಬಗ್ಗೆ ತೊಂದರೆಯಾದಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದರು.
ಗ್ರೀಷ್ಮಾನಾಯಕ್ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದರಿಂದ ಶಾಸಕ ಡಾ.ಜಿ.ಪರಮೇಶ್ವರ ಅವರ ಮನೆಗೆ ಬೇಟಿ ನೀಡಿ ಅಭಿನಂದಿಸಿ ಮಾತನಾಡಿ ನನ್ನ ಕ್ಷೇತ್ರದ ವಿದ್ಯಾರ್ಥಿನಿ ರಾಜ್ಯಕ್ಕೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿರುವುದು ಸಂತಸ ತಂದಿದೆ,ಎಲ್ಲಾ ಅಡೆತಡೆಗಳನ್ನು ನೋವುಗಳ ನ್ನು ನೋವುಗಳನ್ನು ಮೀರಿ ಗ್ರೀಷ್ಮಾ ಸಾಧನೆ ಮಾಡಿದ್ದು,ಅವರ ತಂದೆತಾಯಿರವರ ಪ್ರೋತ್ಸಾಹ ಮತ್ತು ಜವಾಬ್ದಾರಿಯನ್ನು ಮೆಚ್ಚಲೇಬೇಕು ಎಂದರು.ವಿದ್ಯಾರ್ಥಿನಿಯು ವೈದ್ಯಳಾಗುವ ಮುಂದಿನ ಗುರಿಹೊಂದಿರುವದ ನ್ನು ತಿಳಿದು ಪಿಯುಸಿ ಮುಗಿದ ಮೇಲೆ ಸಿದ್ದಾರ್ಥಸಂಸ್ಥೆಯಿಂದ ಆಕೆಗೆ ಉಚಿತವಾಗಿ ವೈದ್ಯಕೀಯ ಸೀಟನ್ನು ನೀಡಲಾಗುವುದು,ಪ್ರಸ್ತುತ ಆಕೆಯ ಸಾಧನೆಗೆ ಉತ್ತೇಜನ ನೀಡಲು 50ಸಾವಿರ ನಗದು ಪ್ರೋತ್ಸಾಹವನ್ನು ನೀಡಲಾಗಿದೆ.ಈ ಹಣ ಆಕೆಯ ಶ್ರಮಕ್ಕೆ ಎಂದಲ್ಲಾ ವಿದ್ಯಾರ್ಥಿನಿಯ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿ ಎನ್ನುವ ಸದುದ್ದೇಶವಾಗಿದೆ, ಕೊರಟಗೆರೆ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಸದಾ ಸಿದ್ದವಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುದಾಕರ್,ಕೆಪಿಸಿಸಿ ಮಾದ್ಯಮ ವಕ್ತಾರ ಮುರುಳಿಧರ ಹಾಲಪ್ಪ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ,ಯುವಅದ್ಯಕ್ಷ ವಿನಯ್‌ಕುಮಾರ್, ಪ,ಪಂ ಸದಸ್ಯರಾದ ನಾಗರಾಜು,ನಂದೀಶ್,ಮಾಜಿಉಪಾದ್ಯಕ್ಷ ಕೆ.ವಿ.ಮಂಜುನಾಥ,ಮುಖಂಡರುಗಳಾದ ಹುಲಿಕುಂಟೆಪ್ರಸಾದ್, ಎಮ್‌ಎನ್‌ಜೆ ಮಂಜುನಾಥ್,ಮಹೇಶ್,ಕೆಎಲ್‌ಎಂ ಮಂಜುನಾಥ್,ಅರವಿಂದ್,ಕಿರಣ್,ಮಂಜುನಾಥ್,ಸೇರಿದಂತೆ ಇತರರು ಹಾಜರಿದ್ದರು.

The post ಗ್ರೀಷ್ಮಾ ನಾಯಕ್‌ಗೆ ಅಭಿನಂದನೆ : ವೈದ್ಯಕೀಯ ಸೀಟು ಭರವಸೆ ನೀಡಿದ ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ : ಡಾ.ಜಿ ಪರಮೇಶ್ವರ್ https://suvarnapragathi.in/archives/1906 Thu, 30 Sep 2021 03:46:49 +0000 https://suvarnapragathi.in/?p=1906 ಕೊರಟಗೆರೆ : ರೈತರ ಬೆನ್ನೆಲುಬಾಗಿ  ಇರುವ ಹೈನುಗಾರಿಕೆಯನ್ನು   ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು .ಪಟ್ಟಣದ ಹೊರವಲಯದಲ್ಲಿರುವ  ಸುವರ್ಣಮುಖಿ  ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತುಮಕೂರು ಸಹಕಾರಿ ಹಾಲು ಒಕ್ಕೂಟದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಪ್ರತಿಯೊಂದು ಗ್ರಾಮ ಮತ್ತು ಕುಟುಂಬಗಳು ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದು ಇದಕ್ಕೆ ಪೂರಕವಾಗಿ  ಹಾಲು ಒಕ್ಕೂಟವು    ಹಲವು ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು .ಹಾಲು …

The post ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ : ಡಾ.ಜಿ ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ರೈತರ ಬೆನ್ನೆಲುಬಾಗಿ  ಇರುವ ಹೈನುಗಾರಿಕೆಯನ್ನು   ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು .ಪಟ್ಟಣದ ಹೊರವಲಯದಲ್ಲಿರುವ  ಸುವರ್ಣಮುಖಿ  ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತುಮಕೂರು ಸಹಕಾರಿ ಹಾಲು ಒಕ್ಕೂಟದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಪ್ರತಿಯೊಂದು ಗ್ರಾಮ ಮತ್ತು ಕುಟುಂಬಗಳು ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದು ಇದಕ್ಕೆ ಪೂರಕವಾಗಿ  ಹಾಲು ಒಕ್ಕೂಟವು    ಹಲವು ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು .ಹಾಲು ಒಕ್ಕೂಟ ತಾಲೂಕು ನಿರ್ದೇಶಕ ಗುಂಡಿನಪಾಳ್ಯ ಈಶ್ವರಯ್ಯ ಮಾತನಾಡಿ ಒಟ್ಟು ತಾಲೂಕಿನಲ್ಲಿ 53 ಲಕ್ಷ ರೂಪಾಯಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಪರಿಹಾರದ ಚೆಕ್ ನೀಡುತ್ತಿದ್ದು .ಇದರಲ್ಲಿ 31 ಲಕ್ಷ ರೂಪಾಯಿ ರಾಸು ವಿಮೆಯ ಚೆಕ್. 8 ಜನ ಹಾಲು ಉತ್ಪಾದಕರು ಕರೋನದಿಂದ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ತಲಾ 1 ಲಕ್ಷ ರೂ . ಸಾಮಾನ್ಯ ಸಹಜ ಸಾವಿನಿಂದ ಮೃತಪಟ್ಟ 10 ಹಾಲು ಉತ್ಪಾದಕರ ಕುಟುಂಬಕ್ಕೆ ತಲಾ 50 ಸಾವಿರ ಪಾಯಿ ಚೆಕ್ ನೀಡಲಾಗಿದೆ ಎಂದು ವಿವರಿಸಿದರು. ಇನ್ನೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವುದು ನನ್ನ  ಧ್ಯೇಯವಾಗಿದ್ದು       ಕೋಳಾಲ ಹೋಬಳಿಯ ಒಡೇರಹಳ್ಳಿಯಲ್ಲಿ ಕಟ್ಟಡ  ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿ ನೀಡುತ್ತಿರುವುದಾಗಿ ಹೇಳಿದರು . ಈ ಸಂದರ್ಭದಲ್ಲಿ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ , ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿಧರ್ ಹಾಲಪ್ಪ ,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಪ್ಪ, ಮುಖಂಡರಾದ ಎಲ್. ರಾಜಣ್ಣ ,ಚಿಕ್ಕರಂಗಯ್ಯ, ಪಟ್ಟಣ ಪಂಚಾಯತಿ ಸದಸ್ಯರಾದ ಎ.ಡಿ ಬಲ ರಾಮಯ್ಯ ,ರಾಮಚಂದ್ರಪ್ಪ, ಇತರರು ಹಾಜರಿದ್ದರು.

The post ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ : ಡಾ.ಜಿ ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಮೋಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಕೊರಟಗೆರೆ ರಾಜ್ಯದಲ್ಲಿಯೇ ಪ್ರಥಮ : ಡಾ.ಜಿ.ಪರಮೇಶ್ವರ್ https://suvarnapragathi.in/archives/1833 Wed, 29 Sep 2021 03:50:47 +0000 https://suvarnapragathi.in/?p=1833 ಕೊರಟಗೆರೆ : ತಾಲೂಕಿನಲ್ಲಿ ಸುಮಾರು 10 ವರ್ಷಗಳಿಂದ ನೆನೆಗುದಿಯಲ್ಲಿದ್ದ ಮೊಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ಒಂದೇ ದಿನದಲ್ಲಿ ಕಂದಾಯ ಮತ್ತು ಭೂಮಾಪನಾ ಇಲಾಖೆ ಇತ್ಯರ್ಥ ಗೊಳಿಸುವ ಕಾರ್ಯದಲ್ಲಿ ಕೊರಟಗೆರೆ ತಾಲೂಕು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು. ಅವರು ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿ ರಾಜ್ಯ ಕಂದಾಯ ಇಲಾಖೆ ಮೋಜಿಣಿ ತಂತ್ರಾಂಷದ ಬಾಕಿ ಅರ್ಜಿಗಳನ್ನು ಕೋಡಲೆ ವಿಲೆವಾರಿ ಮಾಡುವಂತೆ ಅದೇಶಿಸಿದೆ, ತುಮಕೂರು ಜಿಲ್ಲಾಧಿಕಾರಿಗಳ ಸೂಚನೆ ಯಂತೆ, ಭೂ ದಾಖಲೆಗಳ …

The post ಮೋಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಕೊರಟಗೆರೆ ರಾಜ್ಯದಲ್ಲಿಯೇ ಪ್ರಥಮ : ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ತಾಲೂಕಿನಲ್ಲಿ ಸುಮಾರು 10 ವರ್ಷಗಳಿಂದ ನೆನೆಗುದಿಯಲ್ಲಿದ್ದ ಮೊಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ಒಂದೇ ದಿನದಲ್ಲಿ ಕಂದಾಯ ಮತ್ತು ಭೂಮಾಪನಾ ಇಲಾಖೆ ಇತ್ಯರ್ಥ ಗೊಳಿಸುವ ಕಾರ್ಯದಲ್ಲಿ ಕೊರಟಗೆರೆ ತಾಲೂಕು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿ ರಾಜ್ಯ ಕಂದಾಯ ಇಲಾಖೆ ಮೋಜಿಣಿ ತಂತ್ರಾಂಷದ ಬಾಕಿ ಅರ್ಜಿಗಳನ್ನು ಕೋಡಲೆ ವಿಲೆವಾರಿ ಮಾಡುವಂತೆ ಅದೇಶಿಸಿದೆ, ತುಮಕೂರು ಜಿಲ್ಲಾಧಿಕಾರಿಗಳ ಸೂಚನೆ ಯಂತೆ, ಭೂ ದಾಖಲೆಗಳ ಉಪನಿರ್ದೇಶಕರ ಮತ್ತು ಮಧುಗಿರಿ ಉಪವಿಭಾಗಾಧಿಕರಿಗಳ ನಿರ್ದೇಶನದಂತೆ ಕೊರಟಗೆರೆ ತಾಲೂಕನ್ನು ಈ ಕಾರ್ಯದಲ್ಲಿ ಪ್ರಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಯಾಗಿ ಆಯ್ಕೆ ಮಾಡಿಕೊಂಡು ಸುಮಾರು 10 ವರ್ಷಗಳಿಂದ 11ಇ ನಕ್ಷೆಗಾಗಿ ಅರ್ಜಿ ಸಲ್ಲಸಿ ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ತಹಶೀಲ್ದಾರ್ ನಾಹೀದಾ ಜಮ್ ಜಮ್ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಮತ್ತು ಭೂಮಾಪನ ಸಹಾಯಕ ನಿರ್ದೇಶಕ ನಂಜಯ್ಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ 340 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ, ಇದರಲ್ಲಿ ಅ ಮತ್ತು ಬ ಕರಾಬು ತಿದ್ದುಪಡಿ, ದಾನ, ತತ್ಕಾಲ್ ಪೊಡಿ, ವಿಭಾಗ ಮತ್ತು ಕ್ರಯದ ಅರ್ಜಿಗಳಿದ್ದು ಹಲವು ವರ್ಷಗಳಿಂದ ಇದಕ್ಕಾಗಿ ಇಲಾಖೆಗೆ ಅಲೆದಾಡುತ್ತಿದ್ದ ಅರ್ಜಿದಾರರಿಗೆ ನೆಮ್ಮದಿ ಸಿಕ್ಕಾಂತ್ತಾಗಿದೆ, ಈ ಕಾರ್ಯವು ತ್ವರಿತ ಇತ್ಯರ್ಥದಲ್ಲಿ ರಾಜ್ಯಕ್ಕೆ ಕೊರಟಗೆರೆ ತಾಲೂಕು ಮಾದರಿಯಾಗಿದೆ, ಇಂತಹ ಅನೇಕ ರೈತರ ಪಹಣಿ ತಿದ್ದುಪಡಿ ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಕಂದಾಯ ಮತ್ತು ಭೂಮಾಪನ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ ತೊಡಕುಗಳನ್ನು ಇತ್ಯರ್ಥಗಳಿಸುವಂತೆ ಸೂಚಿಸಲಾಗಿದೆ, ಉಳಿದ ಇತ್ಯರ್ಥಗೊಳಿಸ ಬೇಕಾದ ಅರ್ಜಿಗಳಾದ ಕಾಲಂ ನಂಬರ್ 3 ಮತ್ತು 9 ಪ್ರಕರಣಗಳು ಮತ್ತು ಹಿಸ್ಸಾ ತಿದ್ದುಪಡಿ ಪ್ರಕರಣಗಳ ತಾಂತ್ರಿಕದೊಷಗಳನ್ನು ಸರಿ ಪಡಸಿ ಅವುಗಳನ್ನು ಸಹ ಇತ್ಯರ್ಥಗೊಳಿಸಿ ಈ ಯೋಜನೆಯ ಕಾರ್ಯವನ್ನು ಸಂಪೂರ್ಣಗೊಳಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಮೋಜಿನಿ ತಂತ್ರಾಂಶವಲ್ಲದೆ ತಾಲೂಕಿನಲ್ಲಿ ಅರ್ಜಿ ಸಲ್ಲಿಸದ ರೈತರ ಪಹಣಿ ತಿದ್ದಪಡಿ ಪ್ರಕರಣಗಳು ಸಾಕಷ್ಟಿದ್ದು ಇಲಾಖೆಗಳಿಗೆ ಸುತ್ತಲಾರದೆ ರೈತರು ತಿದ್ದುಪಡಿಗೆ ಅರ್ಜಿ ಹಾಕದೆ ಸುಮ್ಮನಿದ್ದಾರೆ, ಈ ತಿದ್ದುಪಡಿ ಪ್ರಕರಣಗಳು ಕಂದಾಯ ಮತ್ತು ಭೂಮಾಪನಾ ಇಲಾಖೆಗೆ ಜಂಟಿಯಾಗಿ ಸಂಬಂದಿಸಿದ್ದು ಇಲಾಖಾ ದಾಖಲಾತಿ ಮತ್ತು ಕಡತಗಳ ತಾಂತ್ರಿಕತೆ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಎರಡು ಇಲಾಖೆಗಳು ಜಂಟಿಯಾಗಿ ಈ ತಿದ್ದುಪಡಿ ಪ್ರಕರಣಗಳನ್ನು ಗ್ರಾಮವಾರು ವಿಂಗಡಿಸಿ ಸಂಪೂರ್ಣ ಪಹಣಿ ಇಂಡಿಕರಣ ಮಾಡಿದಲ್ಲಿ ರೈತರ ಬಹಳಷ್ಟು ಸಮಸ್ಯೆಗಳಿಗೆ ಸ್ಪಂದಿಸಿದಂತ್ತಾಗುತ್ತದೆ, ಈ ಸಂಬಂಧ ರಾಜ್ಯ ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳಿಗೆ ನಿರ್ದೇಶಕ ನೀಡಬೇಕು ಎಂದರು. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಬಾಕಿ ಇರುವ ಬಗರ್ ಹುಕುಂ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು, ಅರ್ಹತೆ, ಮಾನದಂಡ, ಇಲಾಖಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಮತ್ತು ಭೂಮಿ ಇಲ್ಲದ ರೈತನಿಗೆ ಭೂಮಿ ದೊರೆಯುವಂತೆ ಮಾಡಲಾಗುದರೊಂದಿಗೆ ನಿಯಮ ಮೀರಿ ಮಂಜೂರು ಮಾಡುವ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದರು. ಪ್ರತಿಕಾ ಗೊಷ್ಠಿಯಲ್ಲಿ ತಾಹಶೀಲ್ದಾರ್ ನಾಹೀದಾ ಜಮ್ ಜಮ್ ಉಪಸ್ಥಿತರಿದ್ದರು.

The post ಮೋಜಿನಿ ತಂತ್ರಾಂಷದ ಪಹಣಿ ತಿದ್ದುಪಡಿ ಕೊರಟಗೆರೆ ರಾಜ್ಯದಲ್ಲಿಯೇ ಪ್ರಥಮ : ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಭೇಟಿ https://suvarnapragathi.in/archives/1774 Sat, 25 Sep 2021 04:03:44 +0000 https://suvarnapragathi.in/?p=1774 ಕೊರಟಗೆರೆ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇನ್ಫೋಸಿಸ್ ಪ್ರತಿಷ್ಠಾಪನ ಅಧ್ಯಕ್ಷರಾದ ಸುಧಾಮೂರ್ತಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆ 7.30 ದೇವಸ್ಥಾನಕ್ಕೆ ಆಗಮಿಸಿದ ಸುಧಾಮೂರ್ತಿ ರವರಿಗೆ ಟ್ರಸ್ಟ್ ನವರು ಕುಂಭ ಮೇಳದ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಂಡು, ತಂದಂತಹ ಪೂಜಾ ಸಾಮಗ್ರಿ ಗಳಿಂದ ಶ್ರೀ ಮಾತೆಗೆ ಸಿಂಗರಿಸಿ ವಿಶೇಷ ಪೂಜೆ ಜರುಗಿಸಿದರು.ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದಲೂ ಧಾರ್ಮಿಕ ಕ್ಷೇತ್ರಗಳು ಕಳೆಗುಂದುತ್ತಿದ್ದು, ಜನರ ಆರೋಗ್ಯ ದೃಷ್ಟಿಯಿಂದ ಕೋವಿಡ್ ನಿಯಮಾವಳಿಗಳನ್ನು ಜನರು …

The post ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಭೇಟಿ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇನ್ಫೋಸಿಸ್ ಪ್ರತಿಷ್ಠಾಪನ ಅಧ್ಯಕ್ಷರಾದ ಸುಧಾಮೂರ್ತಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮುಂಜಾನೆ 7.30 ದೇವಸ್ಥಾನಕ್ಕೆ ಆಗಮಿಸಿದ ಸುಧಾಮೂರ್ತಿ ರವರಿಗೆ ಟ್ರಸ್ಟ್ ನವರು ಕುಂಭ ಮೇಳದ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಂಡು, ತಂದಂತಹ ಪೂಜಾ ಸಾಮಗ್ರಿ ಗಳಿಂದ ಶ್ರೀ ಮಾತೆಗೆ ಸಿಂಗರಿಸಿ ವಿಶೇಷ ಪೂಜೆ ಜರುಗಿಸಿದರು.ಕೋವಿಡ್ ನಿಂದ ಕಳೆದ ಎರಡು ವರ್ಷಗಳಿಂದಲೂ ಧಾರ್ಮಿಕ ಕ್ಷೇತ್ರಗಳು ಕಳೆಗುಂದುತ್ತಿದ್ದು, ಜನರ ಆರೋಗ್ಯ ದೃಷ್ಟಿಯಿಂದ ಕೋವಿಡ್ ನಿಯಮಾವಳಿಗಳನ್ನು ಜನರು ಪಾಲಿಸಬೇಕು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರ ಪಾತ್ರವೂ ಬಹು ಮುಖ್ಯವಾಗಿರುತ್ತದೆ, ಮಾನವನ ಜಂಜಾಟದ ಜೀವನದಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಧಾರ್ಮಿಕ ಚಟುವಟಿಕೆಗಳಿಂದ ಮಾತ್ರ ನೆಮ್ಮದಿ ಹೊಂದಲು ಸಾಧ್ಯ ಎಂದರಲ್ಲದೆ ಈ ಹಿಂದಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಗತವೈಭವವನ್ನು ಮರುಕಳಿಸುವಂತಹ ಕೆಲಸ ಈ ಟ್ರಸ್ಟ್ ನಿಂದ ಆಗಲಿ ಎಂದು ನೂತನ ಟ್ರಸ್ಟ್ ಗೆ ಶುಭ ಹಾರೈಸಿದರು.

ಲಕ್ಷ್ಮಿ ಕ್ಷೇತ್ರದಲ್ಲಿ ಶಾರದೆಗೆ ಹೆಚ್ಚು ಒತ್ತು ಕೊಡಿ
ಸುಧಾಮೂರ್ತಿಯವರು ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾರ್ಯಾಲಯಕ್ಕೆ ಭೇಟಿ ನೀಡಿ ಟ್ರಸ್ಟ್ ನ ಪದಾಧಿಕಾರಿಗಳಿಗೆ ಶಿಕ್ಷಣಕ್ಕೆ ಒತ್ತು ಕೊಡಿ ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯ ಲಕ್ಷ್ಮಿ ಕ್ಷೇತ್ರದಲ್ಲಿ ಶಾರದೆಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಮೂಲಕ ಸಮಾಜ ಸುಧಾರಣೆ ಮಾಡಿ ಎಂದು ಕಿವಿಮಾತು ಹೇಳಿದರು.
ನೂತನ ಭೋಜನಾಲಯ ವೀಕ್ಷಿಸಿದ ಸುಧಾ ಮೂರ್ತಿ : ಇನ್ಫೋಸಿಸ್ ಪ್ರತಿಷ್ಠಾಪನ ಅಧ್ಯಕ್ಷರಾದ ಸುಧಾಮೂರ್ತಿಯವರು ಟ್ರಸ್ಟ್ ನ ಅಧ್ಯಕ್ಷರು ಸೇರಿದಂತೆ ಧರ್ಮದರ್ಶಿಗಳೊಂದಿಗೆ ನೂತನ ದಾಸೋಹವನ್ನು ವೀಕ್ಷಿಸಿ, ಧರ್ಮಸ್ಥಳದ ಮಾದರಿಯಲ್ಲಿ ದಾಸೋಹ ಕಟ್ಟಡ ನಿರ್ಮಿಸಿರುವುದು ಬಹಳ ಸೊಗಸಾಗಿದೆ, ವ್ಯವಸ್ಥಿತವಾಗಿದೆ ಕಾರ್ಯನಿರ್ವಹಿಸಿ ಎಂದರು,

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ವಾಸುದೇವ್ ಕಾರ್ಯದರ್ಶಿ ನರಸಯ್ಯ ಖಜಾಂಚಿ ಮಂಜುನಾಥ್ ಪ್ರಧಾನ ಅರ್ಚಕರಾದ ಪ್ರಸನ್ನಕುಮಾರ್ ಧರ್ಮದರ್ಶಿಗಳಾದ ಲಕ್ಷ್ಮಿಕಾಂತ್ ,ನಟರಾಜ್, ಶ್ರೀ ಪ್ರಸಾದ್ ,ರವಿರಾಜ್ ಅರಸ್ ,ಮುರಳಿ ಕೃಷ್ಣ, ಓಂಕಾರೇಶ್ವ ,ಜಗದೀಶ್, ರಾಮಲಿಂಗಯ್ಯ, ನರಸರಾಜು ,ಲಕ್ಷ್ಮೀನರಸಯ್ಯ ,ನಾಗರಾಜು ,ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ , ಮಾಜಿ ಕಾರ್ಯನಿರ್ವಹಣಾಧಿಕಾರಿ ಡಿ ಎನ್ ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.

The post ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಭೇಟಿ appeared first on ಸುವರ್ಣ ಪ್ರಗತಿ.

]]>
ದಲಿತರಿಗೆ ಕುರಂಕೋಟೆ ಪಿಡಿಒ ಕಿರುಕುಳ: ಗ್ರಾಮಸ್ಥರ ಪ್ರತಿಭಟನೆ https://suvarnapragathi.in/archives/1719 Thu, 23 Sep 2021 03:26:43 +0000 https://suvarnapragathi.in/?p=1719 ಕೊರಟಗೆರೆ: ಗ್ರಾಮ ಪಂಚಾಯಿತಿ ಅಭಿವೃಧಿ ಅಧಿಕಾರಿ ನಾಗರಾಜು ದಲಿತರಿಗೆ ತಾರತಮ್ಯ ಮಾಡಿ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಪಂಚಾಯಿತಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಕುರಂಕೋಟೆ ಗ್ರಾಮಪಂಚಾಯತಿಯಲ್ಲಿ ನಡೆದಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿವಯ್ಯ ಮಾತನಾಡಿ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜು ದಾಸಲಕುಂಟೆ ಗ್ರಾಮದ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಸಂಬಂಧ ಇಬ್ಬರು ಸವರ್ಣೀಯರಿಗೆ …

The post ದಲಿತರಿಗೆ ಕುರಂಕೋಟೆ ಪಿಡಿಒ ಕಿರುಕುಳ: ಗ್ರಾಮಸ್ಥರ ಪ್ರತಿಭಟನೆ appeared first on ಸುವರ್ಣ ಪ್ರಗತಿ.

]]>
ಕೊರಟಗೆರೆ: ಗ್ರಾಮ ಪಂಚಾಯಿತಿ ಅಭಿವೃಧಿ ಅಧಿಕಾರಿ
ನಾಗರಾಜು ದಲಿತರಿಗೆ ತಾರತಮ್ಯ ಮಾಡಿ ಕಿರುಕುಳ
ನೀಡುತ್ತಿರುವುದನ್ನು ಖಂಡಿಸಿ ಪಂಚಾಯಿತಿ ಮುಂಭಾಗ
ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ
ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ
ಕುರಂಕೋಟೆ ಗ್ರಾಮಪಂಚಾಯತಿಯಲ್ಲಿ ನಡೆದಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ
ದೊಡ್ಡೇರಿ ಕಣಿವಯ್ಯ ಮಾತನಾಡಿ ತಾಲೂಕಿನ
ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ
ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜು ದಾಸಲಕುಂಟೆ
ಗ್ರಾಮದ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ
ಸಂಬಂಧ ಇಬ್ಬರು ಸವರ್ಣೀಯರಿಗೆ ಎನ್.ಓ.ಸಿ
ನೀಡಿ ಇಬ್ಬರು ದಲಿತರಿಗೆ ವರ್ಷಗಳಿಂದ ಎನ್‌ಓಸಿ
ನೀಡದೇ ಅಲೆದಾಡಿಸಿ ತಾರತಮ್ಯ ವೆಸಗಿದ್ದಾರೆ.
ಗ್ರಾಮ ಪಂಚಾಯ್ತಿಯ ಶೇ25%ಅನುದಾನವನ್ನು
ವರ್ಷದಿಂದ ಉಪಯೋಗಿಸದೆ ದಲಿತರಿಗೆ ಅನ್ಯಾಯ
ಮಾಡಿದ್ದಾರೆ. ದಾಸಾಲುಕುಂಟೆಯ ಎಂಟು ಅಂಗಡಿಗಳ
ಪೈಕಿ ಮೇಲ್ವರ್ಗದ ಇಬ್ಬರಿಗೆ ಎನ್.ಓ.ಸಿ.ನೀಡಿ ದಲಿತ
ಹೆಣ್ಣುಮಕ್ಕಳಾದ ನಳಿನಾಕ್ಷಿ ಮತ್ತು ಮಂಗಳಮ್ಮ
ರವರು ಅದೇ ರೀತಿ ಪಕ್ಕದಲ್ಲಿರುವ ನಮ್ಮ ಅಂಗಡಿಗೂ
ಎನ್.ಓ.ಸಿ. ನೀಡಿ ಎಂದು ಅರ್ಜಿ ನೀಡಿದರೆ ಅವರನ್ನು
ತಿಂಗಳುಗಟ್ಟಲೆ ಅಲೆಸಿದ್ದಾರೆ. ಪಿ.ಡಿ.ಓ.ರವರಿಗೆ
ದಲಿತ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಜೀವನ
ನಿರ್ವಹಿಸುವುದು ಸಹಿಸುವುದು ಕಷ್ಟವಾಗಿದೆ. ಅದೇ
ರೀತಿಯಾಗಿ ಸರ್ಕಾರ ನೀಡುವ ಶೇ.25 ರ ದಲಿತರ
ಅಭಿವೃದ್ಧಿ ಕೆಲಸಗಳ ಹಣವನ್ನೂ ಸಹ ವರ್ಷಗಟ್ಟಲೆ
ಇಟ್ಟುಕೊಂಡಿರುವುದು ಈತನ ಕರ್ತವ್ಯ ಲೋಪ
ಕಂಡುಬರುತ್ತಿದ್ದು ಕೂಡಲೇ ಇವರನ್ನು ಅಮಾನತ್ತು
ಮಾಡುವಂತೆ ಒತ್ತಾಯಿಸಿ ಇನ್ನು 20 ದಿನಗಳಲ್ಲಿ
ದಲಿತರಿಗೆ ಎನ್.ಓ.ಸಿ. ನೀಡದಿದ್ದರೆ ಗ್ರಾ.ಪಂ. ಮುಂದೆ
ದರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಸಮಿತಿಯ ತಾಲ್ಲೂಕು ಸಂಚಾಲಕ ನರಸಿಂಹಮೂರ್ತಿ
ಮಾತನಾಡಿ ಕುರಂಕೋಟೆ ಗ್ರಾ.ಪಂ. ಪಿ.ಡಿ.ಓ.ನಾಗರಾಜು
ಉದ್ದೇಶಪೂರ್ವಕವಾಗಿಯೇ ದಲಿತರನ್ನು ಕೀಳರಿಮೆಯ
ಭಾವನೆಯಿಂದ ತಾರತಮ್ಯ ಮಾಡಿದ್ದಾರೆ. ಗ್ರಾಮ
ಪಂಚಾಯ್ತಿಯ 14 & 15ನೇ ಹಣಕಾಸಿನ
ಯೋಜನೆಯಲ್ಲೂ ಸಹ ದಲಿತರಿಗೆ ಅನ್ಯಾಯ
ಮಾಡಿದ್ದಾರೆ ಎಂದು ದಲಿತರು ಆರೋಪಿಸಿದ್ದು
ಈಸ್ವತ್ತಿಗಾಗಿ ಹಣ ಪೀಡಿಸುತ್ತಿದ್ದು ಸರ್ಕಾರ
ನೀಡುತ್ತಿರುವ ದಲಿತ ಆಶ್ರಯ ಯೋಜನೆ ಮನೆಗಳ
ನಿರ್ಮಾಣದ ಹಂತದಲ್ಲಿ ಜಿ.ಪಿ.ಎಸ್. ಮಾಡಿಸುವುದಾಗಿ
ಸಾವಿರಾರು ಹಣವನ್ನು ದಲಿತರಿಂದ ವಸೂಲಿ
ಮಾಡುತ್ತಾರೆ. ಪಿ.ಡಿ.ಓ ಬಗ್ಗೆ ಗ್ರಾಮ ಪಂಚಾಯ್ತಿ ಮತ್ತು
ಗ್ರಾಮಸ್ಥರು ಹಲವು ಬಾರಿ ದೂರುಗಳನ್ನು ಅಧಿಕಾರಿ
ವರ್ಗಕ್ಕೆ ತಂದರೂ ಇವರ ಮೇಲೆ ಯಾವುದೇ
ಕ್ರಮ ಕೈಗೊಂಡಿಲ್ಲ. ಪ್ರಸ್ತುತ ಎನ್.ಓ.ಸಿ. ವಿಚಾರದಲ್ಲಿ
ದಲಿತರಿಗೆ ತಾರತಮ್ಯ ಮಾಡಿದ್ದಾರೆ. ಕೂಡಲೇ
ಇವರನ್ನು ಅಮಾನತ್ತುಗೊಳಿಸಬೇಕು ಇಲ್ಲವೇ ಇತರ
ಕಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ
ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಮನವಿಯನ್ನು
ಪಡೆದು ತನಿಖೆಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ
ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಗ್ರಾಪಂ ಸದಸ್ಯ ಸಿದ್ದಪ್ಪ,
ಮುಖಂಡರಾದ ದಾಸಾಲುಕುಂಟೆ ನಟರಾಜು,
ರಮೇಶ್, ದೇವೀರಪ್ಪ, ರಂಗನಾಥ್, ಸೇರಿದಂತೆ
ಹಲವರು ಭಾಗವಹಿಸಿದ್ದರು.

The post ದಲಿತರಿಗೆ ಕುರಂಕೋಟೆ ಪಿಡಿಒ ಕಿರುಕುಳ: ಗ್ರಾಮಸ್ಥರ ಪ್ರತಿಭಟನೆ appeared first on ಸುವರ್ಣ ಪ್ರಗತಿ.

]]>