ಕೊರಟಗೆರೆ
ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ : ಡಾ.ಜಿ ಪರಮೇಶ್ವರ್
ಕೊರಟಗೆರೆ : ರೈತರ ಬೆನ್ನೆಲುಬಾಗಿ ಇರುವ ಹೈನುಗಾರಿಕೆಯನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು .ಪಟ್ಟಣದ ಹೊರವಲಯದಲ್ಲಿರುವ ಸುವರ್ಣಮುಖಿ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತುಮಕೂರು ಸಹಕಾರಿ ಹಾಲು ಒಕ್ಕೂಟದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಗ್ರಾಮ ಮತ್ತು ಕುಟುಂಬಗಳು ಹೈನುಗಾರಿಕೆಯಿಂದ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದು ಇದಕ್ಕೆ ಪೂರಕವಾಗಿ ಹಾಲು ಒಕ್ಕೂಟವು ಹಲವು ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದರು .ಹಾಲು ಒಕ್ಕೂಟ ತಾಲೂಕು ನಿರ್ದೇಶಕ ಗುಂಡಿನಪಾಳ್ಯ ಈಶ್ವರಯ್ಯ ಮಾತನಾಡಿ ಒಟ್ಟು ತಾಲೂಕಿನಲ್ಲಿ 53 ಲಕ್ಷ ರೂಪಾಯಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಪರಿಹಾರದ ಚೆಕ್ ನೀಡುತ್ತಿದ್ದು .ಇದರಲ್ಲಿ 31 ಲಕ್ಷ ರೂಪಾಯಿ ರಾಸು ವಿಮೆಯ ಚೆಕ್. 8 ಜನ ಹಾಲು ಉತ್ಪಾದಕರು ಕರೋನದಿಂದ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ತಲಾ 1 ಲಕ್ಷ ರೂ . ಸಾಮಾನ್ಯ ಸಹಜ ಸಾವಿನಿಂದ ಮೃತಪಟ್ಟ 10 ಹಾಲು ಉತ್ಪಾದಕರ ಕುಟುಂಬಕ್ಕೆ ತಲಾ 50 ಸಾವಿರ ಪಾಯಿ ಚೆಕ್ ನೀಡಲಾಗಿದೆ ಎಂದು ವಿವರಿಸಿದರು. ಇನ್ನೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವುದು ನನ್ನ ಧ್ಯೇಯವಾಗಿದ್ದು ಕೋಳಾಲ ಹೋಬಳಿಯ ಒಡೇರಹಳ್ಳಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿ ನೀಡುತ್ತಿರುವುದಾಗಿ ಹೇಳಿದರು . ಈ ಸಂದರ್ಭದಲ್ಲಿ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೆಂಕಟಾಚಲಯ್ಯ , ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿಧರ್ ಹಾಲಪ್ಪ ,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಪ್ಪ, ಮುಖಂಡರಾದ ಎಲ್. ರಾಜಣ್ಣ ,ಚಿಕ್ಕರಂಗಯ್ಯ, ಪಟ್ಟಣ ಪಂಚಾಯತಿ ಸದಸ್ಯರಾದ ಎ.ಡಿ ಬಲ ರಾಮಯ್ಯ ,ರಾಮಚಂದ್ರಪ್ಪ, ಇತರರು ಹಾಜರಿದ್ದರು.