ತಿಪಟೂರು Archives » ಸುವರ್ಣ ಪ್ರಗತಿ https://suvarnapragathi.in/archives/tag/ತಿಪಟೂರು ಕನ್ನಡ ದಿನ ಪತ್ರಿಕೆ Tue, 21 Mar 2023 03:55:54 +0000 en-US hourly 1 https://wordpress.org/?v=7.0 https://suvarnapragathi.in/wp-content/uploads/2021/08/cropped-suvarna-pragathi-logo-2-32x32.png ತಿಪಟೂರು Archives » ಸುವರ್ಣ ಪ್ರಗತಿ https://suvarnapragathi.in/archives/tag/ತಿಪಟೂರು 32 32 ಅಲ್ಪಸಂಖ್ಯಾತರು, ಯುವಕರು, ಹಾಗೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ : ಸಿಎಂ ಇಬ್ರಾಹಿಂ https://suvarnapragathi.in/archives/5979 Tue, 21 Mar 2023 03:55:54 +0000 https://suvarnapragathi.in/?p=5979 ತಿಪಟೂರು : ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಅಪ್ರಬುದ್ಧ ಸಾಮಾನ್ಯ ಜ್ಞಾನವಿಲ್ಲದ ಪಕ್ಷದ ಮುಖಂಡ ರಾಹುಲ್ ಗಾಂಧಿ ಕಾರಣ, ದೇಶವನ್ನು ಮುನ್ನಡೆಸಿದ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ನಾಡಿನ ಹಿರಿಯ ಮುತ್ಸದಿ ದೇವೇಗೌಡ ಪ್ರಪಂಚಕ್ಕೆ ರಾಷ್ಟ್ರ ಹಿರಿಮೆ ತೋರಿಸಿದ್ದರು, ಈಗಿನ ಪ್ರಧಾನಿ ನರೇಂದ್ರ ಮೋದಿಯನ್ನು ಇಂಗ್ಲೆಂಡ್ ನಂತಹ ರಾಷ್ಟ್ರ ಟೀಕಿಸುತ್ತಿರುವುದು ವಿಪರ್ಯಾಸ, ತಿಂಗಳಿಗೊಮ್ಮೆ ರಾಜ್ಯದಲ್ಲಿ ರೋಡ್ ಶೋ ನಡೆಸುವುದು ಹುದ್ದೆಗೆ ಅಪಮಾನ ಅಲ್ಪಸಂಖ್ಯಾತರು, ಯುವಕರು, ಹಾಗೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ ಎಂದು ಜಾತ್ಯತೀತ …

The post ಅಲ್ಪಸಂಖ್ಯಾತರು, ಯುವಕರು, ಹಾಗೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ : ಸಿಎಂ ಇಬ್ರಾಹಿಂ appeared first on ಸುವರ್ಣ ಪ್ರಗತಿ.

]]>
ತಿಪಟೂರು : ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಅಪ್ರಬುದ್ಧ ಸಾಮಾನ್ಯ ಜ್ಞಾನವಿಲ್ಲದ ಪಕ್ಷದ ಮುಖಂಡ ರಾಹುಲ್ ಗಾಂಧಿ ಕಾರಣ, ದೇಶವನ್ನು ಮುನ್ನಡೆಸಿದ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ನಾಡಿನ ಹಿರಿಯ ಮುತ್ಸದಿ ದೇವೇಗೌಡ ಪ್ರಪಂಚಕ್ಕೆ ರಾಷ್ಟ್ರ ಹಿರಿಮೆ ತೋರಿಸಿದ್ದರು, ಈಗಿನ ಪ್ರಧಾನಿ ನರೇಂದ್ರ ಮೋದಿಯನ್ನು ಇಂಗ್ಲೆಂಡ್ ನಂತಹ ರಾಷ್ಟ್ರ ಟೀಕಿಸುತ್ತಿರುವುದು ವಿಪರ್ಯಾಸ, ತಿಂಗಳಿಗೊಮ್ಮೆ ರಾಜ್ಯದಲ್ಲಿ ರೋಡ್ ಶೋ ನಡೆಸುವುದು ಹುದ್ದೆಗೆ ಅಪಮಾನ ಅಲ್ಪಸಂಖ್ಯಾತರು, ಯುವಕರು, ಹಾಗೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ನಗರದ ಗಾಂಧಿನಗರ ಸರ್ಕಲ್ ಬಳಿ ಅಲ್ಪಸಂಖ್ಯಾತ ಜಾಗೃತ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭ್ರಷ್ಟಾಚಾರದ ಪ್ರತಿರೂಪವೇ ಬಿಜೆಪಿಯಾಗಿದೆ ಬೆಂಗಳೂರಿನ ಕೋರ್ಟಿನಲ್ಲಿ ರೌಡಿಗಳಾದ ಕೊತ್ವಾಲ್ ರಾಮಚಂದ್ರ, ಕೋಳಿ ಫಯಾಜ್ ಹೆಸರು ಕೂಗುತ್ತಿಲ್ಲ ಬದಲಿಗೆ ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಹೆಸರು ಕೂಗುತ್ತಾರೆ, ನಮ್ಮ ಜಾತ್ಯಾತೀತ ಜನತಾದಳದ ಕಾರ್ಯಕರ್ತರ ಹೆಸರಿದ್ದರೆ ನಾನು ಕೂಡಲೇ ರಾಜೀನಾಮೆ ನೀಡುತ್ತೇನೆ, ತತ್ವ ಮತ್ತು ಸಿದ್ದಾಂತ ಸಾರುವ ಆರ್ ಎಸ್ ಎಸ್ ಏನು ಮಾಡುತ್ತಿದೆ 12 ಜನ ಎಂ ಎಲ್ ಎ ಗಳು ಮುಂಬೈನಲ್ಲಿ ಮಂಚ ಮುರಿದು ಬಂದಿದ್ದಾರೆ ಇವರೆಲ್ಲರ ಸೀಡಿಗಳಿವೆ ಇಂತಹ ಭ್ರಷ್ಟರನ್ನು ಆಯ್ಕೆ ಮಾಡಬೇಕೆ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಒಬ್ಬರಿಗೆ ಸಾಬ್ರು ಬೇಡ ಸಾಬ್ರ ವೋಟು ಬೇಡ, ಎಂದರೆ ಮತ್ತೊಬ್ಬರು ವೋಟಿಗಾಗಿ ಅಲ್ಪಸಂಖ್ಯಾತರನ್ನು ಉಪಯೋಗಿಸಿಕೊಂಡು ಅಧಿಕಾರ ಬಂದ ಮೇಲೆ ಕೈಬಿಟ್ಟರು
ಮಾನ್ ಕಿ ಬಾತ್ ಕಾರ್ಯಕ್ರಮ ಹುಡುಗ ಹುಡುಗಿಗೆ ಸಂಬಂಧಪಟ್ಟದ್ದು ಪ್ರಧಾನಿ ನಡೆಸಿಕೊಡುವುದು ಹಾಸ್ಯಸ್ಪದ ಎಂದು ನಗೆ ಚಟಾಕಿ ಆರಿಸಿದರು, ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ರೈತರ ಪ್ರಗತಿಗಾಗಿ 30% ಟ್ರಾಕ್ಟರ್ ಸಬ್ಸಿಡಿ ಘೋಷಿಸಿದ್ದರು, ಈ ನೆನಪಿಗಾಗಿ ಪಂಜಾಬಿನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ, ಕೊಬ್ಬರಿ ಇಷ್ಟೊಂದು ಕೆಳಮಟ್ಟಕ್ಕೆ ಹೋದಾಗ ಗೌಡರಿದ್ದರೆ 20ಸಾವಿರ ಬೆಳೆಯೊಂದಿಗೆ ಸರ್ಕಾರದಿಂದ ಕೊಂಡುಕೊಳ್ಳುತ್ತಿದ್ದರು, ಎಂದು ಹೇಳಿದರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ನಿಗಮ ಮಂಡಳಿಗಳಿಗೆ ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳುತ್ತೇವೆ ಇಲ್ಲಿ ಶಾಂತಕುಮಾರ್ ಗೆದ್ದರೆ ಇಬ್ರಾಹಿಂ ಗೆದ್ದಂತೆ, ಇಬ್ರಾಹಿಂ ಗೆದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ, ದಯವಿಟ್ಟು ಮತ ನೀಡಿ ಎಂದು ಮತ ಯಾಚಿಸಿದರು.
ಜಾತ್ಯತೀತ ಜನತಾದಳದ ಅಭ್ಯರ್ಥಿ ಶಾಂತಕುಮಾರ್ ಮಾತನಾಡಿ ತಿಪಟೂರಿನಲ್ಲಿ ಪಂಚರತ್ನ ರಥಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದ್ದು 20 ಪಾಯಿಂಟ್ ಗಳಲ್ಲಿ ಪ್ರತಿ ಪಾಯಿಂಟಿನಲ್ಲಿ 4ಸಾವಿರಕ್ಕೂ ಅಧಿಕ ಜನ ಸೇರಿದ್ದು ಗೆಲುವಿನ ಮುನ್ಸೂಚನೆಯಾಗಿದೆ, ರಾಜ್ಯದ ಜನರು ಮತ್ತು ಮಾಧ್ಯಮಗಳು25 ಸೀಟು ಬರುತ್ತವೆ ಎನ್ನುತ್ತಿದ್ದವರು ಈಗ 125 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರ ನಮ್ಮ ಪಕ್ಷದ ಪಾಲಾಗಲಿದೆ ಎನ್ನುತ್ತಿರುವುದು ಸಂತೋಷವಾಗಿದ್ದು, ತಿಪಟೂರು ನಗರಸಭೆಯಲ್ಲಿ ಇ ಖಾತೆ ಸಿಗದೇ ಮಧ್ಯಮ ವರ್ಗದ ಜನರು ವಾಸಿಸುವ ಗಾಂಧಿನಗರದಲ್ಲಿ ಕೊಂಡ ನಿವೇಶನ ವ್ಯವಹರಿಸಲಾಗದೆ ಮತ್ತು ವಸತಿ ನಿರ್ಮಿಸಲಾಗದೆ ಕಷ್ಟ ಪಡುತ್ತಿದ್ದಾರೆ ಇದ್ಯಾವುದೇ ಅರಿವು ಸಚಿವರಿಗೆ ಮುಟ್ಟುತ್ತಿಲ್ಲ ಕಳಪೆ ಯುಜಿಡಿ ಕಾಮಗಾರಿ ಸಾಮಾನ್ಯ ಮಳೆಗೆ ರಸ್ತೆ ತುಂಬೆಲ್ಲ ಹರಿಯುತ್ತಿದೆ. ನಗರಸಭೆಯವರು ಸಕಾಲಕ್ಕೆ ಸರಿಯಾಗಿ ಕಂದಾಯ ಪಾವತಿಸಿಕೊಳ್ಳುತ್ತಿದ್ದಾರೆ ಈ ವಿಚಾರವಾಗಿ ಸಾಕಷ್ಟು ಧರಣಿ ಮತ್ತು ಪ್ರತಿಭಟನೆ ಮಾಡಿದ್ದೇನೆ ಎಂದರು.
ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಮಾತನಾಡಿ ಅಲ್ಪಸಂಖ್ಯಾತರಿಗೆ ಇಜಾಬ್ ಮತ್ತು ಹಲಾಲ್ ತೊಂದರೆಯಾದಾಗ ಕಾಂಗ್ರೆಸ್ ಪಕ್ಷದವರು ಧ್ವನಿಯೆತ್ತಲಿಲ್ಲ ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಅಲ್ಪಸಂಖ್ಯಾತರ ಪರ ಮಾತನಾಡಿದರು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಆಂಜನಪ್ಪ, ಮಹಿಳಾ ಅಧ್ಯಕ್ಷೆ ತಾಹಿರಾಬೇಗಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ತಿಪಟೂರು ನಗರ ಅಧ್ಯಕ್ಷ ರಾಜು ಕಂಚಾಘಟ್ಟ, ಮಾಜಿ ನಗರಸಭಾ ಸದಸ್ಯ ರೇಖಾ ಅನುಪ್, ತಿಲಕ್ ಗೌಡ, ಹೇಮೇಶ್, ಧನಂಜಯ, ನಟರಾಜು, ಇನ್ನು ಮುಂತಾದವರಿದ್ದರು.

The post ಅಲ್ಪಸಂಖ್ಯಾತರು, ಯುವಕರು, ಹಾಗೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಾದಿದೆ : ಸಿಎಂ ಇಬ್ರಾಹಿಂ appeared first on ಸುವರ್ಣ ಪ್ರಗತಿ.

]]>
ರಾಜ್ಯದ ಅಭಿವೃದ್ದಿಗೆ ಬಿಜೆಪಿಯೇ ಏಕೈಕ ಮಾರ್ಗ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ https://suvarnapragathi.in/archives/5952 Sun, 19 Mar 2023 03:51:27 +0000 https://suvarnapragathi.in/?p=5952 ತಿಪಟೂರು : ಕಮಲದಿಂದ ಕಮಲವೇ ಅರಳುತ್ತದೆ, ಕಮಲ ಅರುಳುವುದು ಬಿಜೆಪಿಗೆ ಮಾತ್ರ ಅವಶ್ಯಕತೆಯಲ್ಲ ಇಡೀ ಕರ್ನಾಟಕ ಪುಣ್ಯ ಭೂಮಿಯ ಜನತೆಗೆ ಹಾಗೂ ಅಭಿವೃದ್ದಿಗೆ ಏಕೈಕ ಮಾರ್ಗವಾಗಿದೆ. ಕಾಂಗ್ರೆಸ್ ಪಕ್ಷ ಎಂದರೆ ವಂಶ ಪಾರಂಪರ್ಯದ ಪಕ್ಷವಾಗಿದ್ದು, ಮೊದಲು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಆಗಿದ್ದು ಬಿಜೆಪಿ ಎಂದರೆ ಕೇವಲ ಅಭಿವೃದ್ಧಿಯೇ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು. ನಗರದ ಬಂಡಿಹಳ್ಳಿ ಗೇಟ್‌ನಿಂದ ಸಿಂಗ್ರಿ ನಂಜಪ್ಪ ವೃತ್ತದವರಗೆ ಶನಿವಾರ ಬಿಜೆಪಿ ಜನ …

The post ರಾಜ್ಯದ ಅಭಿವೃದ್ದಿಗೆ ಬಿಜೆಪಿಯೇ ಏಕೈಕ ಮಾರ್ಗ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ appeared first on ಸುವರ್ಣ ಪ್ರಗತಿ.

]]>
ತಿಪಟೂರು : ಕಮಲದಿಂದ ಕಮಲವೇ ಅರಳುತ್ತದೆ, ಕಮಲ ಅರುಳುವುದು ಬಿಜೆಪಿಗೆ ಮಾತ್ರ ಅವಶ್ಯಕತೆಯಲ್ಲ ಇಡೀ ಕರ್ನಾಟಕ ಪುಣ್ಯ ಭೂಮಿಯ ಜನತೆಗೆ ಹಾಗೂ ಅಭಿವೃದ್ದಿಗೆ ಏಕೈಕ ಮಾರ್ಗವಾಗಿದೆ. ಕಾಂಗ್ರೆಸ್ ಪಕ್ಷ ಎಂದರೆ ವಂಶ ಪಾರಂಪರ್ಯದ ಪಕ್ಷವಾಗಿದ್ದು, ಮೊದಲು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೇ ಆಗಿದ್ದು ಬಿಜೆಪಿ ಎಂದರೆ ಕೇವಲ ಅಭಿವೃದ್ಧಿಯೇ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
ನಗರದ ಬಂಡಿಹಳ್ಳಿ ಗೇಟ್‌ನಿಂದ ಸಿಂಗ್ರಿ ನಂಜಪ್ಪ ವೃತ್ತದವರಗೆ ಶನಿವಾರ ಬಿಜೆಪಿ ಜನ ಸಂಕಲ್ಪ ರಥ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿಯ ರೋಡ್ ಶೋ ಇಂದು ಜನ ಸಭೆಯಾಗಿ ಪರಿವರ್ತನೆಯಾಗಿದೆ. ಪ್ರಧಾನ ಮಂತ್ರಿಯವರ ಗ್ರಾಮೀಣ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ 4 ಕೋಟಿ ಜನರು ಫಲಾನುಭವಿಗಳಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂ ನಂತೆ ದೇಶದ 11 ಕೋಟಿಗೂ ಹೆಚ್ಚು ರೈತರಿಗೆ ಹಾಗೂ ಕರ್ನಾಟಕದಲ್ಲಿ 57 ಲಕ್ಷ ರೈತರಿಗೆ ಯೋಜನೆಯೂ ಲಾಭಧಾಯಕವಾಗಿದೆ. ಪ್ರಧಾನ ಮಂತ್ರಿ ಸ್ವಸ್ತ ಭಾರತ್ ಅಭಿಯಾನದಲ್ಲಿ 12 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದು, ಮಹಿಳೆಯರು ಬಯಲು ಬಹಿರ್ದಸೆಯಿಂದ ಮುಕ್ತವಾಗಿ ಗೌರವಯುತ ಜೀವನ ಮಾಡುವಂತಾಗಿದೆ. ಕರ್ನಾಟಕದಲ್ಲಿ 27 ಲಕ್ಷ ಜನರು ಫಲಾನುಭವಿಗಳಾಗಿದ್ದಾರೆ. ಗ್ರಾಮೀಣ ಭಾಗದ ಬಡವರು, ನಿರ್ಗತಿಕರು, ದಲಿತರು, ಶೋಷಿತರು, ಆದಿವಾಸಿ ಜನರನ್ನು ಒಂದು ಗೂಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಕರ್ನಾಟಕದಲ್ಲಿ ಹೈವೆಗಳು, ಎಕ್ಸ್ಪ್ರೆಸ್ ವೇ, ಚತುಷ್ಪಥ ರಸ್ತೆ, ರೈಲ್ವೇ ಹಳಿಗಳು, ಗ್ರಾಮೀಣ ಭಾಗಕ್ಕೆ ಇಂಟರ್ ನೆಟ್ ತಲುಪಿದ್ದು ನರೇಂದ್ರ ಮೋದಿಯೂ ಸಾಮಾನ್ಯ ಜನರನ್ನು ಸದೃಢರನ್ನಾಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ 70 ವರ್ಷದ ಅವಧಿಯಲ್ಲಿ 79 ಏರ್ ಪೋರ್ಟ್ಗಳು ಮಾತ್ರ ಆಗಿದ್ದು, 9 ವರ್ಷದಲ್ಲಿ 74 ಏರ್ ಪೋರ್ಟ್ಗಳನ್ನು ನಿರ್ಮಾಣ ಮಾಡಿದ್ದು ಕರ್ನಾಟಕದಲ್ಲಿ 11 ಏರ್ ಪೋರ್ಟ್ಗಳು ನಿರ್ಮಾಣವಾಗುತ್ತಿವೆ.

ಕೆಲ ದಿನಗಳ ಹಿಂದೆ ಈಶಾನ್ಯ ಭಾರತದ ನಾಗಾಲ್ಯಾಂಡ್, ತ್ರಿಪುರ, ಮೇಘಾಲಯದಲ್ಲಿ ಮೂರು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಅಧಿಕಾರಕ್ಕೆ ಬಂದವು. ಕಾಂಗ್ರೆಸ್‌ಗೆ ಸಂಪೂರ್ಣ ನಿರ್ಣಾಮದ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಇಂಗ್ಲೆಂಡ್ ನಲ್ಲಿ ಭಾರತದ ಪ್ರಭಾಪ್ರಭುತ್ವಕ್ಕೆ ಅಪಾಯ ಇದೆ ಎನ್ನುತ್ತಾರೆ. ಚುನಾವಣೆ ಸೋತರೆ ಪ್ರಜಾಪ್ರಭುತ್ವ ಸರಿಯಿಲ್ಲ ಹಾಗೂ ಇವಿಎಂ ಸರಿಯಿಲ್ಲ ಎಂದು ದೂರುತ್ತಾರೆ. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಇಂಗ್ಲೆಂಡ್ ನಲ್ಲಿ ಅಮೇರಿಕಾ ಮತ್ತು ಯೋರೋಪ್ ರಾಷ್ಟçಗಳ ಸಹಾಯವನ್ನು ಕೇಳುತ್ತಿದ್ದಾರೆ. ಇಂತಹವರನ್ನು ರಾಜಕಾರಣದಲ್ಲಿ ಉಳಿಸಬೇಕಾ ? ಉತ್ತರ ನೀಡಬೇಕು ಅಲ್ಲವೇ ? ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಿ ಮನೆಯಲ್ಲಿ ಕೂರಿಸಿ ಇದೇ ಇವರಿಗೆ ನೀಡುವ ಸರಿಯಾದ ಉತ್ತರವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಅಧಿಕ ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ. ರಾಜ್ಯದಲ್ಲಿ ಕೆಲವರು ತಿರುಕನ ಕನಸು ಕಾಣುತ್ತಿದ್ದು ನಾವೇ ಮುಖ್ಯಮಂತ್ರಿ ಆಗಲಿದ್ದೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ಬಿಜೆಪಿ ರ್ಯಾಲಿಯಲ್ಲಿ ಸೇರುವ ಜನರನ್ನು ನೋಡಿ ಕಾಂಗ್ರೆಸ್ ಕಂಗಾಲಾಗಿದೆ. ತಿಪಟೂರಿನಲ್ಲಿ ನಾಗೇಶ್ ಜನಪ್ರಿಯತೆಗೆ ರ್ಯಾಲಿ ಸಾಕ್ಷಿಯಾಗಿದ್ದು ಬರುವ ಚುನಾವಣೆಯಲ್ಲಿ ನಾಗೇಶ್ ವಿರುದ್ಧ ಯಾರೂ ಸ್ಫರ್ಧೆ ಮಾಡಲು ಸಾಧ್ಯವಿಲ್ಲದಷ್ಟು ನಂಬಿಕೆ ತೋರಿಸಿದ್ದಾರೆ. ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಪ್ರಮುಖ ಕಾರಣವಾಗಿದೆ. ತುಮಕೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ರಾಜ್ಯದ ಅಧಿಕಾರ ಹಿಡಿಯಲು ತಾವುಗಳು ಕೊಡುಗೆ ನೀಡಬೇಕು. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರ ಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಪಿ.ಸಿ.ಮೋಹನ್, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್,ಮುಖಂಡರಾದ ಎಂ.ಬಿ.ನAದೀಶ್, ಸೊಗಡು ಶಿವಣ್ಣ, ಎಂ.ಡಿ.ಲಕ್ಷ್ಮೀನಾರಾಯಣ್, ಸಚ್ಚಿದಾನಂದ ಮೂರ್ತಿ ಇದ್ದರು.

The post ರಾಜ್ಯದ ಅಭಿವೃದ್ದಿಗೆ ಬಿಜೆಪಿಯೇ ಏಕೈಕ ಮಾರ್ಗ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ appeared first on ಸುವರ್ಣ ಪ್ರಗತಿ.

]]>
ಬಡವರ ಋಣ ತೀರಿಸಲು ಜೆಡಿಎಸ್‌ಗೆ ಅಧಿಕಾರ ನೀಡಿ : ಹೆಚ್‌.ಡಿ.ಕುಮಾರಸ್ವಾಮಿ https://suvarnapragathi.in/archives/5687 Sat, 04 Feb 2023 01:41:48 +0000 https://suvarnapragathi.in/?p=5687 ತಿಪಟೂರು : ರಾಜ್ಯದಲ್ಲಿ ದೀನ ದಲಿತರ, ಹಿಂದುಳಿದ ವರ್ಗಗಳ, ಬಡವರ, ಮಹಿಳೆಯರ, ಅಮಾಯಕರ ಪ್ರಗತಿಯಾಗಲು ರಾಜ್ಯದಲ್ಲಿ ಜನಪರ ಸರ್ಕಾರ ರಚನೆ ಆಗಬೇಕಾದರೆ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ರಾಜ್ಯದ ಜನತೆ ನೀಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೆ.ಟಿ.ಶಾಂತಕುಮಾರ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ಎರಡು ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿಲ್ಲ ನಮ್ಮ ರಾಜ್ಯದಲ್ಲಿರುವ ಮಹಿಳೆಯರ, ಬಡವರ ಪರಿಸ್ಥಿಯ ಋಣ ತೀರಿಸಲು ಹಾಗೂ …

The post ಬಡವರ ಋಣ ತೀರಿಸಲು ಜೆಡಿಎಸ್‌ಗೆ ಅಧಿಕಾರ ನೀಡಿ : ಹೆಚ್‌.ಡಿ.ಕುಮಾರಸ್ವಾಮಿ appeared first on ಸುವರ್ಣ ಪ್ರಗತಿ.

]]>
ತಿಪಟೂರು : ರಾಜ್ಯದಲ್ಲಿ ದೀನ ದಲಿತರ, ಹಿಂದುಳಿದ ವರ್ಗಗಳ, ಬಡವರ, ಮಹಿಳೆಯರ, ಅಮಾಯಕರ ಪ್ರಗತಿಯಾಗಲು ರಾಜ್ಯದಲ್ಲಿ ಜನಪರ ಸರ್ಕಾರ ರಚನೆ ಆಗಬೇಕಾದರೆ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ರಾಜ್ಯದ ಜನತೆ ನೀಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೆ.ಟಿ.ಶಾಂತಕುಮಾರ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಎರಡು ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿಲ್ಲ ನಮ್ಮ ರಾಜ್ಯದಲ್ಲಿರುವ ಮಹಿಳೆಯರ, ಬಡವರ ಪರಿಸ್ಥಿಯ ಋಣ ತೀರಿಸಲು ಹಾಗೂ ಆರೋಗ್ಯದ ವಿಷಯದಲ್ಲಿ ದುಬಾರಿ ವೆಚ್ಚವನ್ನು ತಪ್ಪಿಸಬೇಕಾಗಿದೆ, ಅಧಿಕಾರದ ಸಂಧರ್ಭದಲ್ಲಿ 14 ತಿಂಗಳ ಸರ್ಕಾರದಲ್ಲಿ ಸಾಲಾಮನ್ನಾ, ಹೇಮಾವತಿ ನಾಲಾ ಸ್ವಚ್ಛತೆ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಲಾಗಿದೆ. ರಾಜ್ಯದ ಜನತೆ ಮನಸ್ಸು ಮಾಡಿ 123 ಸ್ಥಾನವನ್ನು ನೀಡಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಿದರೆ ಇರುವ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲ ಮಾಡುವ ಜೊತೆಗೆ 50 ಉಪ ನದಿಗಳ ನೀರನ್ನು ಜೋಡಿಸುವ ಯೋಜನೆಯ ಮೂಲಕ ರೈತರನ್ನು ಸದೃಢರನ್ನಾಗಿಸಿ ಮಾಸಿಕ 15 ಸಾವಿರ ಹಣ ಸಂದಾಯವಾಗುವಂತಹ ಯೋಜನೆ ಜಾರಿಗೆ ಎಂದು ತಿಳಿಸಿದರು.

ತಿಪಟೂರು ತಾಲ್ಲೂಕಿನಲ್ಲಿ ಹಿಂದಿನಿಂದಲೂ ಜೆಡಿಎಸ್ ಪಕ್ಷಕ್ಕೆ ಉತ್ತಮ ಕಾರ್ಯಕರ್ತರಿದ್ದು ಕಾರ್ಯನಿರ್ವಹಣೆ ಮಾಡುತ್ತಿದ್ದು 2008ರಿಂದ ಇತ್ತೀಚಿಗೆ ನಾಯಕರ ಹಾಗೂ ಕಾರ್ಯಕರ್ತರ ಬಿನ್ನಾಭಿಪ್ರಾಯದಿಂದ ಹಿನ್ನೆಡೆ ಸಾಧಿಸಿದ್ದೇವೆ. ಅದರೂ ಸಹ ವೀರಶೈವ ಸಮಾಜಕ್ಕೆ ಮನ್ನಣೆ ನೀಡಬೇಕಾಗಿದ್ದ ಪರಿಸ್ಥಿತಿಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಟಿಕೇಟ್ ನೀಡಿದ್ದು, ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರಿಗೆ ಹೆಚ್ಚಿನ ಮತ ನೀಡುವ ಮೂಲಕ ಋಣವನ್ನು ನೀಡಿದ್ದಾರೆ. ಪಕ್ಷವೂ ಸಂಕಷ್ಟದಲ್ಲಿ ಇರುವಾಗೆಲ್ಲಾ ತುಮಕೂರು ಜಿಲ್ಲೆಯೂ ಕೈಹಿಡಿದಿದ್ದನ್ನು ಮರೆಯಲು ಸಾಧ್ಯವಿಲ್ಲ. ಎಚ್.ಡಿ.ದೇವೇಗೌಡರು ನೀರಾವರಿ ವಿಚಾರದಲ್ಲಿ ತುಮಕೂರು ಜಿಲ್ಲೆಗೆ ನೀರನ್ನು ನೀಡಬಾರದು ಎಂದಿದ್ದಾರೆ ಎಂಬ ಅಪಪ್ರಚಾರ ನಡೆಯಿತು. 1966-67ರಲ್ಲಿ ಹೇಮಾವತಿ ಡ್ಯಾಂ ನಿರ್ಮಾಣ ಮಾಡಲು ಒತ್ತಡ ಹಾಕಿದ್ದೇ ದೇವೇಗೌಡರು. ನಂತರದ 14 ತಿಂಗಳ ಸರ್ಕಾರದಲ್ಲಿ ಸಾಲಾಮನ್ನಾ, ಹೇಮಾವತಿ ನಾಲಾ ಸ್ವಚ್ಛತೆ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಲಾಗಿದೆ. ರಾಜ್ಯದ ಜನತೆ ಮನಸ್ಸು ಮಾಡಿ 123 ಸ್ಥಾನವನ್ನು ನೀಡಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಿದರೆ ಇರುವ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲ ಮಾಡುವ ಜೊತೆಗೆ ರೈತರನ್ನು ಸದೃಢರನ್ನಾಗಿಸಿ ಮಾಸಿಕ 15 ಸಾವಿರ ಹಣ ಸಂದಾಯವಾಗುವಂತಹ ಯೋಜನೆ ಜಾರಿಗೆ ತರಲಾಗುವುದು ಎಂದರು.
ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ ರಾಜ್ಯದಲ್ಲಿ ಪಂಚರತ್ನ ಯಾತ್ರೆಯ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಏಕೈಕ ಪಕ್ಷ ಜೆಡಿಎಸ್ ಆಗಿದೆ. ಮುಂದಿನ 5 ವರ್ಷದಲ್ಲಿ ಜೆಡಿಎಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು ಜನರ ಕಷ್ಟಗಳು ದೂರವಾಗಲಿದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ ತಿಪಟೂರಿನಲ್ಲಿ ಹಿಂದೆ ಇದ್ದ ಶಾಸಕರು ಜನರಿಗೋಸ್ಕರ ಕೆಲಸ ಮಾಡುತ್ತಿದ್ದರು. ಆದರೆ ಶಿಕ್ಷಣ ಸಚಿವ ನಾಗೇಶ್ ರಾಜ್ಯದ ಪಠ್ಯಪುಸ್ತಕಗಳಲ್ಲಿ ಕುವೆಂಪು, ಬಸವಣ್ಣರಂತಹ ಚಿಂತಕರ, ಸಮಾನತೆ ಸಾರುವವರನ್ನು ತೆಗೆಯಲು ಪ್ರಯತ್ನಿಸಿದ್ದು ನಿಜಕ್ಕೂ ದುರಂತದ ಸಂಗತಿ. ಎರಡು ಪಕ್ಷಗಳಲ್ಲಿ ಬೇಲ್, ಜೈಲ್ ಶಾಸಕರು ಇದ್ದರೆ ನಮ್ಮ ಪಕ್ಷದಲ್ಲಿ ಸ್ವಚ್ಛತೆಯಿಂದರುವ ಶಾಸಕರು ಇದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಕೆ.ಟಿ.ಶಾಂತಕುಮಾರ್ ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಕುಣಿಗಲ್‌ನ ಮಾಜಿ ಶಾಸಕ ಡಿ.ನಾಗರಾಜಯ್ಯ, ಜೆಡಿಎಸ್ ಮುಖಂಡ ಬೋಜೇಗೌಡ, ಜಕ್ಕನಹಳ್ಳಿ ಲಿಂಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಸೂಗೂರು ಶಿವಸ್ವಾಮಿ, ಮಾಜಿ ನಗರಸಭಾ ಸದಸ್ಯೆ ರೇಖಾ ಅನುಪ್, ಮಾಜಿ ಜಿ.ಪಂ.ಸದಸ್ಯೆ ರಾಧಾ ನಾರಾಯಣಗೌಡ ಸೇರಿದಂತೆ ಹಲವರು ಇದ್ದರು.

The post ಬಡವರ ಋಣ ತೀರಿಸಲು ಜೆಡಿಎಸ್‌ಗೆ ಅಧಿಕಾರ ನೀಡಿ : ಹೆಚ್‌.ಡಿ.ಕುಮಾರಸ್ವಾಮಿ appeared first on ಸುವರ್ಣ ಪ್ರಗತಿ.

]]>
ರಾಜಕಾರಣಿಗಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ : ಬೃಹನ್ಮಠ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ https://suvarnapragathi.in/archives/5510 Sun, 15 Jan 2023 01:12:44 +0000 https://suvarnapragathi.in/?p=5510 ತಿಪಟೂರು : ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅಗತ್ಯತೆಗಿಂತಲೂ ರಾಜ್ಯದ ಪ್ರತಿಯೊಬ್ಬ ರಾಜಕಾರಣಿಗಳಿಗೂ ನೈತಿಕ ಶಿಕ್ಷಣದ ಅವಶ್ಯಕತೆ ಹೆಚ್ಚಾಗಿದೆ ಎಂದು ಚಿತ್ರದುರ್ಗದ ಸಿರಿಗೆರೆಯ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಿಪಟೂರು ನಗರದ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಇತ್ತೀಚಿಗೆ ವಾಕ್ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕಾಗಿ ಹಲವು ಸಭೆ, ಸಮಾರಂಭಗಳಲ್ಲಿ ರಾಜಕಾರಣಿಗಳು ಬಾಗಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದಾಗಿ ಅವರ ಘನತೆಯೂ …

The post ರಾಜಕಾರಣಿಗಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ : ಬೃಹನ್ಮಠ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ appeared first on ಸುವರ್ಣ ಪ್ರಗತಿ.

]]>
ತಿಪಟೂರು : ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅಗತ್ಯತೆಗಿಂತಲೂ ರಾಜ್ಯದ ಪ್ರತಿಯೊಬ್ಬ ರಾಜಕಾರಣಿಗಳಿಗೂ ನೈತಿಕ ಶಿಕ್ಷಣದ ಅವಶ್ಯಕತೆ ಹೆಚ್ಚಾಗಿದೆ ಎಂದು ಚಿತ್ರದುರ್ಗದ ಸಿರಿಗೆರೆಯ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಿಪಟೂರು ನಗರದ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಇತ್ತೀಚಿಗೆ ವಾಕ್ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕಾಗಿ ಹಲವು ಸಭೆ, ಸಮಾರಂಭಗಳಲ್ಲಿ ರಾಜಕಾರಣಿಗಳು ಬಾಗಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದಾಗಿ ಅವರ ಘನತೆಯೂ ಕಡಿಮೆ ಆಗುತ್ತದೆ. ಶಾಲಾ ಶಿಕ್ಷಣದಲ್ಲಿ ನೈತಿಕತೆಯನ್ನು ತರಲು ಹೊರಟಿರುವ ರಾಜ್ಯಸರ್ಕಾರ ಮೊದಲಿಗೆ ರಾಜಕಾರಣಿಗಳಿಗೆ ನೈತಿಕ ಶಿಕ್ಷನದ ಪಾಠ ಮಾಡುವ ಅನಿವಾರ್ಯತೆ ಎದುರಾಗಿದೆ. ಆದರೆ ಸಿದ್ಧರಾಮೇಶ್ವರ ಜಯಂತಿಯಲ್ಲಿ ಪ್ರತಿಯೊಬ್ಬರೂ ಶರಣರ ಚಿಂತನೆಗಳ ಅನುಸಾರ ನಡೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಕೆರೆಗೋಡಿ ರಂಗಾಪುರ ಸುಕ್ಷೇತ್ರವು ಸಹಸ್ರಾರು ಮಂದಿ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ, ಶಿಕ್ಷಣ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ ಎಂದರು.
850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಶರಣರು ಸಮಾಜವನ್ನು ತಿದ್ದುವಂತಹ ಕಾರ್ಯವನ್ನು ಮಾಡಿದ್ದಾರೆ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮೇಶ್ವರರ ಪ್ರಮುಖರಾಗಿದ್ದು, ಸಿದ್ಧರಾಮರೂ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಟ್ಟಿಸಿ ನೀರಿನ ಮಹತ್ವವನ್ನು ಅರಿವು ಮಾಡಿದರು. ಕೆರೆಗೋಡಿ ರಂಗಾಪುರ ಸುಕ್ಷೇತ್ರವೂ ಸರ್ವ ಧರ್ಮಗಳ ಸಮನ್ವಯದ ತಾಣವಾಗಿದ್ದು, ಸ್ವಾಮೀಜಿಗಳ ಸೇವೆ ಅರ್ಥಪೂರ್ಣವಾಗಿದೆ ಎಂದರು.
ಕೃಷಿ ಮತ್ತು ರೈತ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ 12ನೇ ಶತಮಾನದಲ್ಲಿ ಇದ್ದಂತಹ ಜಾತಿ ಪದ್ಧತಿಯನ್ನು ಹೋಗಲಾಡಿಸಲುವ ಸಲುವಾಗಿ ಶರಣರ ಚಿಂತನೆಗಳು, ವಚನಗಳನ್ನು ಅರ್ಥಪೂರ್ಣವಾಗಿವೆ. ಸಮಾಜದಕ್ಕೆ ಹೊಸ ವಿಚಾರಗಳನ್ನು ನೀಡುವ ಮೂಲಕ ಜಾತಿ ಪದ್ಧತಿಯಲ್ಲಿ ಇದ್ದ ಕಂದಾಚಾರವನ್ನು ತಡೆಗಟ್ಟಲು ಪ್ರಯತ್ನಿಸಿದ್ದರು. ಶಿಕ್ಷಣ ಪಡೆದ ನಂತರದ ದಿನಗಳಲ್ಲಿ ಪುನಃ ಜಾತಿ ವೈಶಮ್ಯ ರಾಜ್ಯದಲ್ಲಿ ತಲೆ ಎತ್ತಿರುವುದು ವಿಷಾದನಿಯ ಸಂಗತಿ. ಕಲ್ಪತರು ನಾಡು ಕೊಬ್ಬರಿಗೆ ಪ್ರಖ್ಯಾತಿ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಬೆಲೆಯಲ್ಲಿ ಇಳಿಕೆ ಕಂಡಿದೆ. ರಯತರು ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಮೌಲ್ಯವರ್ಧನೆ ಮಾಡುವ ಅಗತ್ಯವಿದೆ. ರಾಜ್ಯದ ಕೊಬ್ಬರಿಯನ್ನು ಅಂತರರಾಷ್ಟಿçÃಯ ಮಟ್ಟಕ್ಕೆ ರಫ್ತು ಮಾಡಲು ರೈತರು ಮುಂದಾಗಬೇಕಿದೆ. ದೇಶದಲ್ಲಿ ಆಹಾರದ ಸ್ವಾವಲಂಭಿಗಳಾಗಿ ಹೊರ ದೇಶಗಳಿಗೆ ಹೆಚ್ಚಿನ ಆಹಾರವನ್ನು ರಫ್ತು ಮಾಡುತ್ತಿದ್ದೇವೆ. ರೈತರ ಆದಾಯವನ್ನು ಹೆಚ್ಚಿಸಿ ಆರ್ಥಿಕ ಸದೃಢತೆ ಸಾಧಿಸುವಂತೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧರಾಮ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತ್ಯ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ರಾಜಶೇಖರಪ್ಪರಿಗೆ ನೀಡಿ ಗೌರವಿಸಲಾಯಿತು. ನೊಳಂಬವಾಣಿ ಸಂಚಿಕೆ, ಶ್ರೀ ಗುರುಸಿದ್ಧರಾಮ ಸ್ಮರಣ ಸಂಚಿಕೆ, ಕಾಯಕ ಯೋಗಿಗಳು ಸಂಚಿಕೆ, ಒಳನಾಡಿನ ಒಡನಾಟ
ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಜಯಂತಿ ಮಹೋತ್ಸವದಲ್ಲಿ ಬೆಳಿಗ್ಗೆ ಧ್ವಜಾರೋಹಣ ಮೂಲಕ ಪ್ರಾರಂಭವಾಗಿ, ನಗರದ ಕಲ್ಲೇಶ್ವರ ಸ್ವಾಮಿ ದೇವಲಯದ ಬಳಿಯಿಂದ 850 ಪೂರ್ಣ ಕುಂಭಗಳ ಸ್ವಾಗತದ ಮೂಲಕ, ಜಾನಪದ ನೃತ್ಯ ಕಲೆಗಳ ಪ್ರದರ್ಶನದೊಂದಿಗೆ ಗೋಡೆಕೆರೆಯ ಸಿದ್ಧರಾಮೇಶ್ವರರನ್ನು ವೇದಿಕೆ ಕರೆತರಲಾಯಿತು. ವೀರಗಾಸೆ ಕುಣಿತ, ಡೊಳ್ಳುಕುಣಿತ, ನಂದಿಧ್ವಜ, ಲಿಂಗದಬೀರರು, ಕೋಲಾಟ, ತೊಡಲು ಗೊಂಬೆಗಳು ಸೇರಿದಂತೆ ವಿಭಿನ್ನ ಬಗೆಯ ಜಾನಪದ ಕಲಾ ಪ್ರಕಾರಗಳ ಮೂಲಕ ವಿಜೃಂಭಣೆಯಿಂದ ಉತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾರ್ಜುದ ದೇಶೀಕೇಂದ್ರ ಸ್ವಾಮೀಜಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶೀಕೇAದ್ರ ಸ್ವಾಮೀಜಿ, ಸಚಿವ ಗೋವಿಂದ ಎಂ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್, ಸ್ವಾಗತ ಸಮಿತಿ ಅಧ್ಯಕ್ಷ ಮಧುಸೂಧನ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಶಾಸಕ ಮಸಾಲೆ ಜಯರಾಂ, ಮಾಜಿ ಶಾಸಕ ಕೆ.ಷಡಕ್ಷರಿ, ನಟ ಡಾಲಿ ಧನಂಜಯ, ನಟ ಮನುಬಸವರಾಜು, ಉದ್ಯಮಿ ಶಿವಪ್ರಸಾದ್, ಚಿದಾನಂದ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವರು ಇದ್ದರು.

ಜಯಂತಿ ಮಹೋತ್ಸವಕ್ಕೆ ಕಿಕ್ಕಿರಿದು ಬಂದ ಜನಸಾಗರ :
850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವಕ್ಕೆ ರಾಜ್ಯ ವಿವಿಧ ಜಿಲ್ಲೆಗಳ ಜನರು ಭಾಗವಹಿಸಿದ್ದು ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನವೇ ಹೆಚ್ಚಿನ ಸಮಕ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಬಂದಂತಹ ಜನರಿಗೆ ದಾಸೋಹದ ವ್ಯವಸ್ಥೆಯ ಜೊತೆಗೆ ತಂಗಲೂ ವ್ಯವಸ್ಥೆಯನ್ನು ಮಠದ ವತಿಯಿಂದ ಕಲ್ಪಿಸಲಾಗಿತ್ತು.

ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ :
ರಾಜ್ಯದ ವಿವಿದೆಡೆಗಳಿಂದ ರೈತರಿಗೆ ಅಗತ್ಯವಿರುವಂತಹ ಅನೇಕ ಕೃಷಿ ಯಂತ್ರೋಪಕರನಗಳು ಹಾಗೂ ಕೆಲ ಕೈಗಾರಿಕೆಗಳ ವಸ್ತುಗಳು ಪ್ರದರ್ಶನಗೊಂಡವು. ಅದರಲ್ಲಿ ರೈತರು ಬೆಳೆದ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆಗೆ ತಯಾರಿಸಿದ್ದು ಎಲ್ಲರ ಆಕರ್ಷಣೆಗೆ ಕಾರವಾಗಿತ್ತು. ವಸ್ತು ಪ್ರದರ್ಶನದಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯವನ್ನು ಒಕ್ಕಣೆ ಮಾಡಿ ಬೇರೆ ಮಾಡುವ ಕಣದ ಮಾದರಿ ನಿರ್ಮಾಣ ಮಾಡಲಾಗಿದ್ದು ಅದಕ್ಕೆ ಬಳಕೆ ಮಾಡುವ ಉಪಕರಣಗಳನ್ನು ಇಡಲಾಗಿತ್ತು. ರೈತರು ಉಳುಮೆ ಮಾಡಲು ಬಳಸುವ ಟ್ರೆöÊಲರ್, ಕಡಿಮೆ ಸೌದೆಯಲ್ಲಿ ಅಡುಗೆ ಮಾಡುವ ಒಲೆ, ಮಿನಿ ಸೋಲಾರ್ ಸೇರಿದಂತೆ ಪುಸ್ತಕ ಪ್ರಿಯರಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ಮಳಿಗೆಯೂ ಇದ್ದಿದ್ದು ವಿಶೇಷವಾಗಿತ್ತು.

ತಿಪಟೂರಿನ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.
ಜಯಂತಿ ಮಹೋತ್ಸವದಲ್ಲಿ ಬೆಳಿಗ್ಗೆ ಧ್ವಜಾರೋಹಣ ಮೂಲಕ ಪ್ರಾರಂಭವಾಗಿ ಪೂರ್ಣ ಕುಂಭ ಸ್ವಾಗತದ ಮೂಲಕ, ಜಾನಪದ ನೃತ್ಯ ಕಲೆಗಳ ಪ್ರದರ್ಶನದೊಂದಿಗೆ ಗೋಡೆಕೆರೆಯ ಸಿದ್ಧರಾಮೇಶ್ವರರನ್ನು ವೇದಿಕೆ ಕರೆತರಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿ ಸಾಮಾಜಿಕ ಕ್ರಾಂತಿ, ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಸಂಚಾರ ಮಾಡುವ ಮೂಲಕ ಪಸರಿಸುತ್ತಾ ಸಮಾಜದ ಉದ್ಧಾರಕ್ಕಾಗಿ ಕ್ರಾಂತಿ ಮಾಡಿದವರು ಶರಣರಾಗಿದ್ದಾರೆ. ಪ್ರತಿಯೊಬ್ಬ ಶರಣ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಚಿತ್ರದುರ್ಗದ ಸಿರಿಗೆರೆಯ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ರಾಜ್ಯದಲ್ಲಿ ಕೈಗಾರಿಕರಣದ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಭೂಮಿಯಯನ್ನು ಖಾಯಂ ಆಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ರೈತರು ಆತಂತ್ರರಾಗುತ್ತಾರೆ. ರಾಜ್ಯಸರ್ಕಾರ ಕೂಡಲೇ ಇದನ್ನು ನಿಲ್ಲಿಸಿ ರೈತರ ಜಮೀನನ್ನು ಖಾಯಂ ಸ್ವಾಧೀನಪಡಿಸಿಕೊಳ್ಳದೇ ರೈತರ ಜಮೀನನನು ಪಡೆದರೂ ರೈತರ ಹೆಸರಿನಲ್ಲಿ ಭೂಮಿ ಇರುವಂತೆ ಗೊತ್ತುವಳಿ ವಿಧೇಯಕ ಮಂಡಿಸಬೇಕು. ಪ್ರತಿ ತಿಂಗಳು ಜಮೀನಿನಲ್ಲಿ ಬೆಳೆಯುವ ಬೆಳೆಯ ಆಧಾರದಲ್ಲಿ ವಂತಿಕೆಯನ್ನು ನೀಡುವ ಕಾರ್ಯವಾಗಬೇಕಿದೆ. ವಿದೇಶಗಳಲ್ಲಿ ಈಗಾಗಲೇ ಈ ರೀತಿಯಲ್ಲಿ ಭೂಮಿಯ ಬಳಕೆ ಪ್ರಾರಂಭವಾಗಿದೆ ಎಂದರು.
ಜಯAತಿಯ ಅಂಗವಾಗಿ ರಾಜ್ಯಮಟ್ಟದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ವಿಭಿನ್ನ ಬಗೆಯ ತಂತ್ರಜ್ಞಾನಗಳ ಪರಿಚಯ, ಪ್ರದರ್ಶನ, ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ವಿವಿಧ ಪ್ರಕಾಶನದ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧರಾಮ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತ್ಯ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ರಾಜಶೇಖರಪ್ಪರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾರ್ಜುದ ದೇಶೀಕೇಂದ್ರ ಸ್ವಾಮೀಜಿ, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ, ಸಚಿವ ಗೋವಿಂದ ಎಂ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರುಗಳು ಭಾಗವಹಿಸಿದ್ದರು.

The post ರಾಜಕಾರಣಿಗಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ : ಬೃಹನ್ಮಠ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ appeared first on ಸುವರ್ಣ ಪ್ರಗತಿ.

]]>
ಇಂದಿನ 850ನೇ ಗುರುಸಿದ್ದರಾಮೇಶ್ವರ ಸುವರ್ಣ ಮಹೋತ್ಸವ ಜಯಂತಿಗೆ ಸಕಲ ಸಿದ್ಧತೆ https://suvarnapragathi.in/archives/5497 Sat, 14 Jan 2023 02:58:29 +0000 https://suvarnapragathi.in/?p=5497 ತಿಪಟೂರು : ತಿಪಟೂರು ನಗರದಲ್ಲಿ 850ನೇ ಗುರುಸಿದ್ಧರಾಮೇಶ್ವರರ ರಾಜ್ಯಮಟ್ಟದ ಜಯಂತಿ ಮಹೋತ್ಸವವು ಜ.14,15ರಂದು ವಿಜೃಂಭಣೆಯಿಂದ ಜರುಗಲಿದೆ. ಜಯಂತಿಯ ಪ್ರಯುಕ್ತ ಕಲ್ಲೇಶ್ವರಸ್ವಾಮಿ ದೇವಾಲಯದ 850 ಪೂರ್ಣ ಕುಂಬ ಕಳಸದೊಂದಿಗೆ, ಗೋಡೆಕೆರೆಯ ಸಿದ್ಧರಾಮೇಶ್ವರರ ಉತ್ಸವವು ನಂದಿ ಧ್ವಜ, ಕರಡೆವಾದ್ಯ, ನಗಾರಿ ವಾದ್ಯ, ವೈವಿಧ್ಯಮಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಸಾಗಲಿದೆ. ಬೆಳಿಗ್ಗೆ 7.30ಕ್ಕೆ ಪರಮಪೂಜ್ಯರುಗಳಿಂದ ಷಟ್ ಸ್ಥಲ ಹಾಗೂ ನಂದಿ ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದಾರೆ. …

The post ಇಂದಿನ 850ನೇ ಗುರುಸಿದ್ದರಾಮೇಶ್ವರ ಸುವರ್ಣ ಮಹೋತ್ಸವ ಜಯಂತಿಗೆ ಸಕಲ ಸಿದ್ಧತೆ appeared first on ಸುವರ್ಣ ಪ್ರಗತಿ.

]]>
ತಿಪಟೂರು : ತಿಪಟೂರು ನಗರದಲ್ಲಿ 850ನೇ ಗುರುಸಿದ್ಧರಾಮೇಶ್ವರರ ರಾಜ್ಯಮಟ್ಟದ ಜಯಂತಿ ಮಹೋತ್ಸವವು ಜ.14,15ರಂದು ವಿಜೃಂಭಣೆಯಿಂದ ಜರುಗಲಿದೆ.
ಜಯಂತಿಯ ಪ್ರಯುಕ್ತ ಕಲ್ಲೇಶ್ವರಸ್ವಾಮಿ ದೇವಾಲಯದ 850 ಪೂರ್ಣ ಕುಂಬ ಕಳಸದೊಂದಿಗೆ, ಗೋಡೆಕೆರೆಯ ಸಿದ್ಧರಾಮೇಶ್ವರರ ಉತ್ಸವವು ನಂದಿ ಧ್ವಜ, ಕರಡೆವಾದ್ಯ, ನಗಾರಿ ವಾದ್ಯ, ವೈವಿಧ್ಯಮಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಸಾಗಲಿದೆ. ಬೆಳಿಗ್ಗೆ 7.30ಕ್ಕೆ ಪರಮಪೂಜ್ಯರುಗಳಿಂದ ಷಟ್ ಸ್ಥಲ ಹಾಗೂ ನಂದಿ ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರು 850ನೇ ಗುರುಸಿದ್ಧರಾಮೇಶ್ವರರ ರಾಜ್ಯಮಟ್ಟದ ಜಯಂತಿಯನ್ನು ಉದ್ಘಾಟಿಸಲಿದ್ದು ರಾಜ್ಯದ ವಿವಿಧ ಮಠಾಧೀಶರುಗಳು, ಸಚಿವರುಗಳು ಭಾಗವಹಿಸಲಿದ್ದಾರೆ.
ವಿಶೇಷವಾಗಿ 1.30ಕ್ಕೆ ಕೃಷಿಗೋಷ್ಠಿ ಏರ್ಪಡಿಸಿದ್ದು ರಾಜ್ಯದ ವಿವಿಗಳ ಕೃಷಿ ವಿಜ್ಞಾನಿಗಳು ಉಪನ್ಯಾಸವನ್ನು ನೀಡಲಿದ್ದಾರೆ. ಕೃಷಿ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಿದ್ಧರಾಮರ ಸಾಹಿತ್ಯ ಕುರಿತ ಗೋಷ್ಠಿ ಏರ್ಪಡಾಗಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು ವಿವಿಧ ಮಠಾಧೀಶರು, ಸಚಿವರು, ಶಾಸಕರುಗಳು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಸಮಾರಂಭ ಇರುತ್ತದೆ. ಸಂಜೆ 6.30 ಜಾನಪದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಚನ ಗಾಯನ, ಸುಗಮ ಸಂಗೀತ ಇರಲಿದೆ.
ಬಂದಂತಹ ಭಕ್ತಾಧಿಗಳಿಗೆ ಎರಡು ದಿನಗಳ ಕಾಲ ವಿಶೇಷ ಭೋಜನ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಜನರು ಬರುವುದರಿಂದ ಆರೋಗ್ಯ ಸೇವೆಗಾಗಿ ಎರಡು ಪ್ರತ್ಯೇಕವಾದ ಮಿನಿ ಆಸ್ಪತ್ರೆಗಳನ್ನು ತೆರೆಯಲಾಗಿದೆ. ತುರ್ತು ಸೇವೆಗಳಿಗೆ ಆಂಬುಲೆನ್ಸ ಸೌಲಭ್ಯ ಒದಗಿಸಲಾಗಿದೆ. ಕುಡಿಯುವ ಶುದ್ಧ ನೀರು ಹಾಗೂ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಜಯಂತಿಯ ಅಂಗವಾಗಿ ರೈತರಿಗೆ, ಇತರ ವರ್ಗದ ಜನರಿಗೆ ಅನುಕೂಲವಾಗುವಂತೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸುಮಾರು 260ಕ್ಕೂ ಹೆಚ್ಚು ಪ್ರದರ್ಶನ, ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ರಾಜ್ಯದ ವಿವಿರೀತಿಯ ತಂತ್ರಜ್ಞಾನಗಳ ಪ್ರದರ್ಶನ ಸೇರಿದಂತೆ ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಮೀಣ ಸೊಗಡಿನ ಧಾನ್ಯಗಳನ್ನು ಬೇರ್ಪಡಿಸುವ ಕಣ ಹಾಗೂ ರೋಣಗಲ್ಲುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಗೆ ಆಗಮಿಸುವ ಎಲ್ಲಾ ಭಕ್ತರಿಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್, ಫಲಾವ್, ಪುಳಿಯೋಗರೆ ಮಕ್ಕಳಿಗೆ ಕುಡಿಯುವ ಹಾಲಿನ ವ್ಯವಸ್ಥೆ, ಮದ್ಯಾಹ್ನದ ವ್ಯವಸ್ಥೆಗಾಗಿ ಕಾಯಿ ಹೋಳಿಗೆ, ಬೂಂದಿ, ಮೈಸೂರು ಪಾಕ್, ಪಾಯಸ, ಅನ್ನ ಸಾಂಬಾರು, ಪಲ್ಯ, ಕೋಸಂಬರಿ ಮಜ್ಜಿಗೆ, ಇತ್ಯಾದಿ.
ಆಕರ್ಷಣೆಯಾಗಿರುವ ಕೃಷಿ ವಸ್ತು ಪ್ರದರ್ಶನ

The post ಇಂದಿನ 850ನೇ ಗುರುಸಿದ್ದರಾಮೇಶ್ವರ ಸುವರ್ಣ ಮಹೋತ್ಸವ ಜಯಂತಿಗೆ ಸಕಲ ಸಿದ್ಧತೆ appeared first on ಸುವರ್ಣ ಪ್ರಗತಿ.

]]>
ಗುರುಸಿದ್ಧರಾಮೇಶ್ವರ ಮಹೋತ್ಸವ ಆಚರಣೆಗೆ ರಾಜ್ಯಸರ್ಕಾರದಿಂದ 25 ಲಕ್ಷ ಅನುದಾನ : ಸಚಿವ ಬಿ.ಸಿ.ನಾಗೇಶ್ https://suvarnapragathi.in/archives/5421 Wed, 04 Jan 2023 03:21:13 +0000 https://suvarnapragathi.in/?p=5421 ತಿಪಟೂರು : ರಾಜ್ಯಮಟ್ಟದ 850 ಗುರುಸಿದ್ದರಾಮೇಶ್ವರ ಮಹೋತ್ಸವಕ್ಕೆ ರಾಜ್ಯಸರ್ಕಾರದ ವತಿಯಿಂದ 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು ಅರ್ಥಪೂರ್ಣ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಹೋತ್ಸವದ ಎರಡು ದಿನಗಳ ರಾಜ್ಯದ ರೈತಾಪಿ ವರ್ಗದವರಿಗೆ ಅನುಕೂಲವಾಗುವಂತಹ ರಾಜ್ಯಮಟ್ಟದ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದಕ್ಕೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರವನ್ನು ನೀಡಲಿದ್ದಾರೆ. ಈ …

The post ಗುರುಸಿದ್ಧರಾಮೇಶ್ವರ ಮಹೋತ್ಸವ ಆಚರಣೆಗೆ ರಾಜ್ಯಸರ್ಕಾರದಿಂದ 25 ಲಕ್ಷ ಅನುದಾನ : ಸಚಿವ ಬಿ.ಸಿ.ನಾಗೇಶ್ appeared first on ಸುವರ್ಣ ಪ್ರಗತಿ.

]]>
ತಿಪಟೂರು : ರಾಜ್ಯಮಟ್ಟದ 850 ಗುರುಸಿದ್ದರಾಮೇಶ್ವರ ಮಹೋತ್ಸವಕ್ಕೆ ರಾಜ್ಯಸರ್ಕಾರದ ವತಿಯಿಂದ 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು ಅರ್ಥಪೂರ್ಣ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಹೋತ್ಸವದ ಎರಡು ದಿನಗಳ ರಾಜ್ಯದ ರೈತಾಪಿ ವರ್ಗದವರಿಗೆ ಅನುಕೂಲವಾಗುವಂತಹ ರಾಜ್ಯಮಟ್ಟದ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದಕ್ಕೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರವನ್ನು ನೀಡಲಿದ್ದಾರೆ. ಈ ವಸ್ತು ಪ್ರದರ್ಶನದಲ್ಲಿ ರೈತರಿಗೆ ಉಪಯುಕ್ತವಾದ ಕೃಷಿ ಸಲಕರಣೆ ಮತ್ತು ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದ ವಿವಿದೆಡೆಗಳಿಂದ ಲಕ್ಷಾಂತರ ಮಂದಿ ರೈತರು ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯಮಟ್ಟದ ಮಹೋತ್ಸವದ ಉದ್ಘಾಟನೆಗೆ ಹಿರಿಯ ಮುತ್ಸದಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದು, ವಿವಿಧ ಮಠಾಧೀಶರುಗಳು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭಾಗವಹಿಸಲಿದ್ದಾರೆ ಎಂದರು.

ಗುರುಸಿದ್ದರಾಮೇಶ್ವರ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್.ಮಧುಸೂಧನ್ ಮಾತನಾಡಿ ಮಹೋತ್ಸವಕ್ಕೆ ಸುಮಾರು 2-3ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಊಟ-ವಸತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಆಯಾ ಸಮಿತಿಗಳ ಮೂಲಕ ಸಮರ್ಥವಾಗಿ ನಿರ್ವಹಿಸಲು ವ್ಯಸ್ಥೆ ಕಲ್ಪಿಸಲಾಗಿದೆ. ರಾಜ್ಯದ ಗಣ್ಯ ಮಹನಿಯರುಗಳು ಆಗಮಿಸುತ್ತಿರುವುದರಿಂದ ತಾಲ್ಲೂಕಿನ ಸಮಸ್ತ ಭಕ್ತಾಧಿಗಳ ಸಹಕಾರ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ದೊಡ್ಡಯ್ಯಪಾಳ್ಳಯ ಸೋಮಶೇಖರ್, ದಕ್ಷಿಣಮೂರ್ತಿ, ಕೆರೆಗೋಡಿ ದೇವರಾಜು, ಉಮೇಶ್, ಯತೀಶ್, ಉಮೇಶ್, ಪಾಟೀಲ್, ಉಪನ್ಯಾಸಕ ಕೆ.ಎನ್.ರೇಣುಕಯ್ಯ ಇದ್ದರು.

The post ಗುರುಸಿದ್ಧರಾಮೇಶ್ವರ ಮಹೋತ್ಸವ ಆಚರಣೆಗೆ ರಾಜ್ಯಸರ್ಕಾರದಿಂದ 25 ಲಕ್ಷ ಅನುದಾನ : ಸಚಿವ ಬಿ.ಸಿ.ನಾಗೇಶ್ appeared first on ಸುವರ್ಣ ಪ್ರಗತಿ.

]]>