ತಿಪಟೂರು : ತಿಪಟೂರು ನಗರದಲ್ಲಿ 850ನೇ ಗುರುಸಿದ್ಧರಾಮೇಶ್ವರರ ರಾಜ್ಯಮಟ್ಟದ ಜಯಂತಿ ಮಹೋತ್ಸವವು ಜ.14,15ರಂದು ವಿಜೃಂಭಣೆಯಿಂದ ಜರುಗಲಿದೆ.
ಜಯಂತಿಯ ಪ್ರಯುಕ್ತ ಕಲ್ಲೇಶ್ವರಸ್ವಾಮಿ ದೇವಾಲಯದ 850 ಪೂರ್ಣ ಕುಂಬ ಕಳಸದೊಂದಿಗೆ, ಗೋಡೆಕೆರೆಯ ಸಿದ್ಧರಾಮೇಶ್ವರರ ಉತ್ಸವವು ನಂದಿ ಧ್ವಜ, ಕರಡೆವಾದ್ಯ, ನಗಾರಿ ವಾದ್ಯ, ವೈವಿಧ್ಯಮಯ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಸಾಗಲಿದೆ. ಬೆಳಿಗ್ಗೆ 7.30ಕ್ಕೆ ಪರಮಪೂಜ್ಯರುಗಳಿಂದ ಷಟ್ ಸ್ಥಲ ಹಾಗೂ ನಂದಿ ಧ್ವಜಾರೋಹಣ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರು 850ನೇ ಗುರುಸಿದ್ಧರಾಮೇಶ್ವರರ ರಾಜ್ಯಮಟ್ಟದ ಜಯಂತಿಯನ್ನು ಉದ್ಘಾಟಿಸಲಿದ್ದು ರಾಜ್ಯದ ವಿವಿಧ ಮಠಾಧೀಶರುಗಳು, ಸಚಿವರುಗಳು ಭಾಗವಹಿಸಲಿದ್ದಾರೆ.
ವಿಶೇಷವಾಗಿ 1.30ಕ್ಕೆ ಕೃಷಿಗೋಷ್ಠಿ ಏರ್ಪಡಿಸಿದ್ದು ರಾಜ್ಯದ ವಿವಿಗಳ ಕೃಷಿ ವಿಜ್ಞಾನಿಗಳು ಉಪನ್ಯಾಸವನ್ನು ನೀಡಲಿದ್ದಾರೆ. ಕೃಷಿ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಿದ್ಧರಾಮರ ಸಾಹಿತ್ಯ ಕುರಿತ ಗೋಷ್ಠಿ ಏರ್ಪಡಾಗಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು ವಿವಿಧ ಮಠಾಧೀಶರು, ಸಚಿವರು, ಶಾಸಕರುಗಳು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಸಮಾರಂಭ ಇರುತ್ತದೆ. ಸಂಜೆ 6.30 ಜಾನಪದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ವಚನ ಗಾಯನ, ಸುಗಮ ಸಂಗೀತ ಇರಲಿದೆ.
ಬಂದಂತಹ ಭಕ್ತಾಧಿಗಳಿಗೆ ಎರಡು ದಿನಗಳ ಕಾಲ ವಿಶೇಷ ಭೋಜನ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಜನರು ಬರುವುದರಿಂದ ಆರೋಗ್ಯ ಸೇವೆಗಾಗಿ ಎರಡು ಪ್ರತ್ಯೇಕವಾದ ಮಿನಿ ಆಸ್ಪತ್ರೆಗಳನ್ನು ತೆರೆಯಲಾಗಿದೆ. ತುರ್ತು ಸೇವೆಗಳಿಗೆ ಆಂಬುಲೆನ್ಸ ಸೌಲಭ್ಯ ಒದಗಿಸಲಾಗಿದೆ. ಕುಡಿಯುವ ಶುದ್ಧ ನೀರು ಹಾಗೂ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಜಯಂತಿಯ ಅಂಗವಾಗಿ ರೈತರಿಗೆ, ಇತರ ವರ್ಗದ ಜನರಿಗೆ ಅನುಕೂಲವಾಗುವಂತೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸುಮಾರು 260ಕ್ಕೂ ಹೆಚ್ಚು ಪ್ರದರ್ಶನ, ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ರಾಜ್ಯದ ವಿವಿರೀತಿಯ ತಂತ್ರಜ್ಞಾನಗಳ ಪ್ರದರ್ಶನ ಸೇರಿದಂತೆ ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಮೀಣ ಸೊಗಡಿನ ಧಾನ್ಯಗಳನ್ನು ಬೇರ್ಪಡಿಸುವ ಕಣ ಹಾಗೂ ರೋಣಗಲ್ಲುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಗೆ ಆಗಮಿಸುವ ಎಲ್ಲಾ ಭಕ್ತರಿಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್, ಫಲಾವ್, ಪುಳಿಯೋಗರೆ ಮಕ್ಕಳಿಗೆ ಕುಡಿಯುವ ಹಾಲಿನ ವ್ಯವಸ್ಥೆ, ಮದ್ಯಾಹ್ನದ ವ್ಯವಸ್ಥೆಗಾಗಿ ಕಾಯಿ ಹೋಳಿಗೆ, ಬೂಂದಿ, ಮೈಸೂರು ಪಾಕ್, ಪಾಯಸ, ಅನ್ನ ಸಾಂಬಾರು, ಪಲ್ಯ, ಕೋಸಂಬರಿ ಮಜ್ಜಿಗೆ, ಇತ್ಯಾದಿ.
ಆಕರ್ಷಣೆಯಾಗಿರುವ ಕೃಷಿ ವಸ್ತು ಪ್ರದರ್ಶನ