ತಿಪಟೂರು : ಶಾಲಾ ಶಿಕ್ಷಣದಲ್ಲಿ ನೈತಿಕ ಶಿಕ್ಷಣ ಅಗತ್ಯತೆಗಿಂತಲೂ ರಾಜ್ಯದ ಪ್ರತಿಯೊಬ್ಬ ರಾಜಕಾರಣಿಗಳಿಗೂ ನೈತಿಕ ಶಿಕ್ಷಣದ ಅವಶ್ಯಕತೆ ಹೆಚ್ಚಾಗಿದೆ ಎಂದು ಚಿತ್ರದುರ್ಗದ ಸಿರಿಗೆರೆಯ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಿಪಟೂರು ನಗರದ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಇತ್ತೀಚಿಗೆ ವಾಕ್ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕಾಗಿ ಹಲವು ಸಭೆ, ಸಮಾರಂಭಗಳಲ್ಲಿ ರಾಜಕಾರಣಿಗಳು ಬಾಗಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದಾಗಿ ಅವರ ಘನತೆಯೂ ಕಡಿಮೆ ಆಗುತ್ತದೆ. ಶಾಲಾ ಶಿಕ್ಷಣದಲ್ಲಿ ನೈತಿಕತೆಯನ್ನು ತರಲು ಹೊರಟಿರುವ ರಾಜ್ಯಸರ್ಕಾರ ಮೊದಲಿಗೆ ರಾಜಕಾರಣಿಗಳಿಗೆ ನೈತಿಕ ಶಿಕ್ಷನದ ಪಾಠ ಮಾಡುವ ಅನಿವಾರ್ಯತೆ ಎದುರಾಗಿದೆ. ಆದರೆ ಸಿದ್ಧರಾಮೇಶ್ವರ ಜಯಂತಿಯಲ್ಲಿ ಪ್ರತಿಯೊಬ್ಬರೂ ಶರಣರ ಚಿಂತನೆಗಳ ಅನುಸಾರ ನಡೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಕೆರೆಗೋಡಿ ರಂಗಾಪುರ ಸುಕ್ಷೇತ್ರವು ಸಹಸ್ರಾರು ಮಂದಿ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ, ಶಿಕ್ಷಣ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ ಎಂದರು.
850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಶರಣರು ಸಮಾಜವನ್ನು ತಿದ್ದುವಂತಹ ಕಾರ್ಯವನ್ನು ಮಾಡಿದ್ದಾರೆ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮೇಶ್ವರರ ಪ್ರಮುಖರಾಗಿದ್ದು, ಸಿದ್ಧರಾಮರೂ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಟ್ಟಿಸಿ ನೀರಿನ ಮಹತ್ವವನ್ನು ಅರಿವು ಮಾಡಿದರು. ಕೆರೆಗೋಡಿ ರಂಗಾಪುರ ಸುಕ್ಷೇತ್ರವೂ ಸರ್ವ ಧರ್ಮಗಳ ಸಮನ್ವಯದ ತಾಣವಾಗಿದ್ದು, ಸ್ವಾಮೀಜಿಗಳ ಸೇವೆ ಅರ್ಥಪೂರ್ಣವಾಗಿದೆ ಎಂದರು.
ಕೃಷಿ ಮತ್ತು ರೈತ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ 12ನೇ ಶತಮಾನದಲ್ಲಿ ಇದ್ದಂತಹ ಜಾತಿ ಪದ್ಧತಿಯನ್ನು ಹೋಗಲಾಡಿಸಲುವ ಸಲುವಾಗಿ ಶರಣರ ಚಿಂತನೆಗಳು, ವಚನಗಳನ್ನು ಅರ್ಥಪೂರ್ಣವಾಗಿವೆ. ಸಮಾಜದಕ್ಕೆ ಹೊಸ ವಿಚಾರಗಳನ್ನು ನೀಡುವ ಮೂಲಕ ಜಾತಿ ಪದ್ಧತಿಯಲ್ಲಿ ಇದ್ದ ಕಂದಾಚಾರವನ್ನು ತಡೆಗಟ್ಟಲು ಪ್ರಯತ್ನಿಸಿದ್ದರು. ಶಿಕ್ಷಣ ಪಡೆದ ನಂತರದ ದಿನಗಳಲ್ಲಿ ಪುನಃ ಜಾತಿ ವೈಶಮ್ಯ ರಾಜ್ಯದಲ್ಲಿ ತಲೆ ಎತ್ತಿರುವುದು ವಿಷಾದನಿಯ ಸಂಗತಿ. ಕಲ್ಪತರು ನಾಡು ಕೊಬ್ಬರಿಗೆ ಪ್ರಖ್ಯಾತಿ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಬೆಲೆಯಲ್ಲಿ ಇಳಿಕೆ ಕಂಡಿದೆ. ರಯತರು ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಮೌಲ್ಯವರ್ಧನೆ ಮಾಡುವ ಅಗತ್ಯವಿದೆ. ರಾಜ್ಯದ ಕೊಬ್ಬರಿಯನ್ನು ಅಂತರರಾಷ್ಟಿçÃಯ ಮಟ್ಟಕ್ಕೆ ರಫ್ತು ಮಾಡಲು ರೈತರು ಮುಂದಾಗಬೇಕಿದೆ. ದೇಶದಲ್ಲಿ ಆಹಾರದ ಸ್ವಾವಲಂಭಿಗಳಾಗಿ ಹೊರ ದೇಶಗಳಿಗೆ ಹೆಚ್ಚಿನ ಆಹಾರವನ್ನು ರಫ್ತು ಮಾಡುತ್ತಿದ್ದೇವೆ. ರೈತರ ಆದಾಯವನ್ನು ಹೆಚ್ಚಿಸಿ ಆರ್ಥಿಕ ಸದೃಢತೆ ಸಾಧಿಸುವಂತೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧರಾಮ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತ್ಯ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ರಾಜಶೇಖರಪ್ಪರಿಗೆ ನೀಡಿ ಗೌರವಿಸಲಾಯಿತು. ನೊಳಂಬವಾಣಿ ಸಂಚಿಕೆ, ಶ್ರೀ ಗುರುಸಿದ್ಧರಾಮ ಸ್ಮರಣ ಸಂಚಿಕೆ, ಕಾಯಕ ಯೋಗಿಗಳು ಸಂಚಿಕೆ, ಒಳನಾಡಿನ ಒಡನಾಟ
ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಜಯಂತಿ ಮಹೋತ್ಸವದಲ್ಲಿ ಬೆಳಿಗ್ಗೆ ಧ್ವಜಾರೋಹಣ ಮೂಲಕ ಪ್ರಾರಂಭವಾಗಿ, ನಗರದ ಕಲ್ಲೇಶ್ವರ ಸ್ವಾಮಿ ದೇವಲಯದ ಬಳಿಯಿಂದ 850 ಪೂರ್ಣ ಕುಂಭಗಳ ಸ್ವಾಗತದ ಮೂಲಕ, ಜಾನಪದ ನೃತ್ಯ ಕಲೆಗಳ ಪ್ರದರ್ಶನದೊಂದಿಗೆ ಗೋಡೆಕೆರೆಯ ಸಿದ್ಧರಾಮೇಶ್ವರರನ್ನು ವೇದಿಕೆ ಕರೆತರಲಾಯಿತು. ವೀರಗಾಸೆ ಕುಣಿತ, ಡೊಳ್ಳುಕುಣಿತ, ನಂದಿಧ್ವಜ, ಲಿಂಗದಬೀರರು, ಕೋಲಾಟ, ತೊಡಲು ಗೊಂಬೆಗಳು ಸೇರಿದಂತೆ ವಿಭಿನ್ನ ಬಗೆಯ ಜಾನಪದ ಕಲಾ ಪ್ರಕಾರಗಳ ಮೂಲಕ ವಿಜೃಂಭಣೆಯಿಂದ ಉತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾರ್ಜುದ ದೇಶೀಕೇಂದ್ರ ಸ್ವಾಮೀಜಿ, ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶೀಕೇAದ್ರ ಸ್ವಾಮೀಜಿ, ಸಚಿವ ಗೋವಿಂದ ಎಂ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್, ಸ್ವಾಗತ ಸಮಿತಿ ಅಧ್ಯಕ್ಷ ಮಧುಸೂಧನ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಶಾಸಕ ಮಸಾಲೆ ಜಯರಾಂ, ಮಾಜಿ ಶಾಸಕ ಕೆ.ಷಡಕ್ಷರಿ, ನಟ ಡಾಲಿ ಧನಂಜಯ, ನಟ ಮನುಬಸವರಾಜು, ಉದ್ಯಮಿ ಶಿವಪ್ರಸಾದ್, ಚಿದಾನಂದ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವರು ಇದ್ದರು.
ಜಯಂತಿ ಮಹೋತ್ಸವಕ್ಕೆ ಕಿಕ್ಕಿರಿದು ಬಂದ ಜನಸಾಗರ :
850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವಕ್ಕೆ ರಾಜ್ಯ ವಿವಿಧ ಜಿಲ್ಲೆಗಳ ಜನರು ಭಾಗವಹಿಸಿದ್ದು ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನವೇ ಹೆಚ್ಚಿನ ಸಮಕ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಬಂದಂತಹ ಜನರಿಗೆ ದಾಸೋಹದ ವ್ಯವಸ್ಥೆಯ ಜೊತೆಗೆ ತಂಗಲೂ ವ್ಯವಸ್ಥೆಯನ್ನು ಮಠದ ವತಿಯಿಂದ ಕಲ್ಪಿಸಲಾಗಿತ್ತು.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ :
ರಾಜ್ಯದ ವಿವಿದೆಡೆಗಳಿಂದ ರೈತರಿಗೆ ಅಗತ್ಯವಿರುವಂತಹ ಅನೇಕ ಕೃಷಿ ಯಂತ್ರೋಪಕರನಗಳು ಹಾಗೂ ಕೆಲ ಕೈಗಾರಿಕೆಗಳ ವಸ್ತುಗಳು ಪ್ರದರ್ಶನಗೊಂಡವು. ಅದರಲ್ಲಿ ರೈತರು ಬೆಳೆದ ಬೆಳೆಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆಗೆ ತಯಾರಿಸಿದ್ದು ಎಲ್ಲರ ಆಕರ್ಷಣೆಗೆ ಕಾರವಾಗಿತ್ತು. ವಸ್ತು ಪ್ರದರ್ಶನದಲ್ಲಿ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯವನ್ನು ಒಕ್ಕಣೆ ಮಾಡಿ ಬೇರೆ ಮಾಡುವ ಕಣದ ಮಾದರಿ ನಿರ್ಮಾಣ ಮಾಡಲಾಗಿದ್ದು ಅದಕ್ಕೆ ಬಳಕೆ ಮಾಡುವ ಉಪಕರಣಗಳನ್ನು ಇಡಲಾಗಿತ್ತು. ರೈತರು ಉಳುಮೆ ಮಾಡಲು ಬಳಸುವ ಟ್ರೆöÊಲರ್, ಕಡಿಮೆ ಸೌದೆಯಲ್ಲಿ ಅಡುಗೆ ಮಾಡುವ ಒಲೆ, ಮಿನಿ ಸೋಲಾರ್ ಸೇರಿದಂತೆ ಪುಸ್ತಕ ಪ್ರಿಯರಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ಮಳಿಗೆಯೂ ಇದ್ದಿದ್ದು ವಿಶೇಷವಾಗಿತ್ತು.
ತಿಪಟೂರಿನ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ 850ನೇ ಗುರು ಸಿದ್ಧರಾಮೇಶ್ವರ ಸುವರ್ಣ ಜಯಂತಿ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.
ಜಯಂತಿ ಮಹೋತ್ಸವದಲ್ಲಿ ಬೆಳಿಗ್ಗೆ ಧ್ವಜಾರೋಹಣ ಮೂಲಕ ಪ್ರಾರಂಭವಾಗಿ ಪೂರ್ಣ ಕುಂಭ ಸ್ವಾಗತದ ಮೂಲಕ, ಜಾನಪದ ನೃತ್ಯ ಕಲೆಗಳ ಪ್ರದರ್ಶನದೊಂದಿಗೆ ಗೋಡೆಕೆರೆಯ ಸಿದ್ಧರಾಮೇಶ್ವರರನ್ನು ವೇದಿಕೆ ಕರೆತರಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಿ ಸಾಮಾಜಿಕ ಕ್ರಾಂತಿ, ವಚನ ಕ್ರಾಂತಿಯನ್ನು ನಾಡಿನೆಲ್ಲೆಡೆ ಸಂಚಾರ ಮಾಡುವ ಮೂಲಕ ಪಸರಿಸುತ್ತಾ ಸಮಾಜದ ಉದ್ಧಾರಕ್ಕಾಗಿ ಕ್ರಾಂತಿ ಮಾಡಿದವರು ಶರಣರಾಗಿದ್ದಾರೆ. ಪ್ರತಿಯೊಬ್ಬ ಶರಣ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಚಿತ್ರದುರ್ಗದ ಸಿರಿಗೆರೆಯ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ರಾಜ್ಯದಲ್ಲಿ ಕೈಗಾರಿಕರಣದ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಭೂಮಿಯಯನ್ನು ಖಾಯಂ ಆಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ರೈತರು ಆತಂತ್ರರಾಗುತ್ತಾರೆ. ರಾಜ್ಯಸರ್ಕಾರ ಕೂಡಲೇ ಇದನ್ನು ನಿಲ್ಲಿಸಿ ರೈತರ ಜಮೀನನ್ನು ಖಾಯಂ ಸ್ವಾಧೀನಪಡಿಸಿಕೊಳ್ಳದೇ ರೈತರ ಜಮೀನನನು ಪಡೆದರೂ ರೈತರ ಹೆಸರಿನಲ್ಲಿ ಭೂಮಿ ಇರುವಂತೆ ಗೊತ್ತುವಳಿ ವಿಧೇಯಕ ಮಂಡಿಸಬೇಕು. ಪ್ರತಿ ತಿಂಗಳು ಜಮೀನಿನಲ್ಲಿ ಬೆಳೆಯುವ ಬೆಳೆಯ ಆಧಾರದಲ್ಲಿ ವಂತಿಕೆಯನ್ನು ನೀಡುವ ಕಾರ್ಯವಾಗಬೇಕಿದೆ. ವಿದೇಶಗಳಲ್ಲಿ ಈಗಾಗಲೇ ಈ ರೀತಿಯಲ್ಲಿ ಭೂಮಿಯ ಬಳಕೆ ಪ್ರಾರಂಭವಾಗಿದೆ ಎಂದರು.
ಜಯAತಿಯ ಅಂಗವಾಗಿ ರಾಜ್ಯಮಟ್ಟದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ವಿಭಿನ್ನ ಬಗೆಯ ತಂತ್ರಜ್ಞಾನಗಳ ಪರಿಚಯ, ಪ್ರದರ್ಶನ, ಮಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ವಿವಿಧ ಪ್ರಕಾಶನದ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ಧರಾಮ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತ್ಯ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಬಿ.ರಾಜಶೇಖರಪ್ಪರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾರ್ಜುದ ದೇಶೀಕೇಂದ್ರ ಸ್ವಾಮೀಜಿ, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ, ಸಚಿವ ಗೋವಿಂದ ಎಂ ಕಾರಜೋಳ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನೊಳಂಬ ಲಿಂಗಾಯಿತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್ ಸೇರಿದಂತೆ ವಿವಿಧ ಮಠಾಧೀಶರುಗಳು ಭಾಗವಹಿಸಿದ್ದರು.