ಗುರುಸಿದ್ಧರಾಮೇಶ್ವರ ಮಹೋತ್ಸವ ಆಚರಣೆಗೆ ರಾಜ್ಯಸರ್ಕಾರದಿಂದ 25 ಲಕ್ಷ ಅನುದಾನ : ಸಚಿವ ಬಿ.ಸಿ.ನಾಗೇಶ್
ತಿಪಟೂರು : ರಾಜ್ಯಮಟ್ಟದ 850 ಗುರುಸಿದ್ದರಾಮೇಶ್ವರ ಮಹೋತ್ಸವಕ್ಕೆ ರಾಜ್ಯಸರ್ಕಾರದ ವತಿಯಿಂದ 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು ಅರ್ಥಪೂರ್ಣ ಜಯಂತಿಯನ್ನು ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಹೋತ್ಸವದ ಎರಡು ದಿನಗಳ ರಾಜ್ಯದ ರೈತಾಪಿ ವರ್ಗದವರಿಗೆ ಅನುಕೂಲವಾಗುವಂತಹ ರಾಜ್ಯಮಟ್ಟದ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದಕ್ಕೆ ರಾಜ್ಯಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರವನ್ನು ನೀಡಲಿದ್ದಾರೆ. ಈ ವಸ್ತು ಪ್ರದರ್ಶನದಲ್ಲಿ ರೈತರಿಗೆ ಉಪಯುಕ್ತವಾದ ಕೃಷಿ ಸಲಕರಣೆ ಮತ್ತು ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯದ ವಿವಿದೆಡೆಗಳಿಂದ ಲಕ್ಷಾಂತರ ಮಂದಿ ರೈತರು ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯಮಟ್ಟದ ಮಹೋತ್ಸವದ ಉದ್ಘಾಟನೆಗೆ ಹಿರಿಯ ಮುತ್ಸದಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದು, ವಿವಿಧ ಮಠಾಧೀಶರುಗಳು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭಾಗವಹಿಸಲಿದ್ದಾರೆ ಎಂದರು.
ಗುರುಸಿದ್ದರಾಮೇಶ್ವರ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಸ್.ಮಧುಸೂಧನ್ ಮಾತನಾಡಿ ಮಹೋತ್ಸವಕ್ಕೆ ಸುಮಾರು 2-3ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಊಟ-ವಸತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಆಯಾ ಸಮಿತಿಗಳ ಮೂಲಕ ಸಮರ್ಥವಾಗಿ ನಿರ್ವಹಿಸಲು ವ್ಯಸ್ಥೆ ಕಲ್ಪಿಸಲಾಗಿದೆ. ರಾಜ್ಯದ ಗಣ್ಯ ಮಹನಿಯರುಗಳು ಆಗಮಿಸುತ್ತಿರುವುದರಿಂದ ತಾಲ್ಲೂಕಿನ ಸಮಸ್ತ ಭಕ್ತಾಧಿಗಳ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಯ್ಯಪಾಳ್ಳಯ ಸೋಮಶೇಖರ್, ದಕ್ಷಿಣಮೂರ್ತಿ, ಕೆರೆಗೋಡಿ ದೇವರಾಜು, ಉಮೇಶ್, ಯತೀಶ್, ಉಮೇಶ್, ಪಾಟೀಲ್, ಉಪನ್ಯಾಸಕ ಕೆ.ಎನ್.ರೇಣುಕಯ್ಯ ಇದ್ದರು.