ಪಾವಗಡ Archives » ಸುವರ್ಣ ಪ್ರಗತಿ https://suvarnapragathi.in/archives/category/district/tumkur/pavagad ಕನ್ನಡ ದಿನ ಪತ್ರಿಕೆ Sat, 21 Mar 2026 04:37:53 +0000 en-US hourly 1 https://wordpress.org/?v=7.0 https://suvarnapragathi.in/wp-content/uploads/2021/08/cropped-suvarna-pragathi-logo-2-32x32.png ಪಾವಗಡ Archives » ಸುವರ್ಣ ಪ್ರಗತಿ https://suvarnapragathi.in/archives/category/district/tumkur/pavagad 32 32 ಪಾವಗಡ : ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಮಾಜ ಕಲ್ಯಾಣ ಅಧಿಕಾರಿ https://suvarnapragathi.in/archives/8126 Sat, 21 Mar 2026 04:34:25 +0000 https://suvarnapragathi.in/?p=8126 ಪಾವಗಡ : ಯುಗಾದಿ ಹಬ್ಬದ ಹೊರ್ಸದಡುಕಿನ ದಿನ ಶುಕ್ರವಾರ ಸಂಜೆ  ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ಪಟ್ಟಣದ ಆಪ್ ಬಂಡೆ ಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ. ಮೇಲಾಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣವೆಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ ವಿಡಿಯೋದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಕಿರುಕುಳ ಎಂದು ಉಲ್ಲೇಖಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳಿಸಿದ್ದಾರೆ   …

The post ಪಾವಗಡ : ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಮಾಜ ಕಲ್ಯಾಣ ಅಧಿಕಾರಿ appeared first on ಸುವರ್ಣ ಪ್ರಗತಿ.

]]>
ಪಾವಗಡ : ಯುಗಾದಿ ಹಬ್ಬದ ಹೊರ್ಸದಡುಕಿನ ದಿನ ಶುಕ್ರವಾರ ಸಂಜೆ  ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಅವರು ಪಟ್ಟಣದ ಆಪ್ ಬಂಡೆ ಯಲ್ಲಿರುವ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ.

ಮೇಲಾಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣವೆಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ

ವಿಡಿಯೋದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಕಿರುಕುಳ ಎಂದು ಉಲ್ಲೇಖಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳಿಸಿದ್ದಾರೆ

 

 

ಕಳೆದ 3 ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್  ಇವರ ಸೇವಾ ಅವಧಿ ಮುಂದಿನ ಒಂದು ವಾರದಲ್ಲಿ ಮುಕ್ತಾಯವಾಗುತ್ತಿತ್ತು.

ಇವರು ಮೂಲತಃ ಪಾವಗಡ ತಾಲ್ಲೂಕಿನ ಗುಂಡರ್ಲಾಹಳ್ಳಿ ಗ್ರಾಮದವರಾಗಿದ್ದರು

ಸಾವಿಗೂ ಮುನ್ನ ಮಲ್ಲಿಕಾರ್ಜುನ್ ಕೊನೆ ಮಾತು

ನಮ್ಮ ತಾಯಿ ಹೆಂಡತಿ ಮಕ್ಕಳು ನಮ್ಮ ಇಡೀ ಸಂಸಾರ ನನ್ನ ಚೆನ್ನಾಗಿ ನೋಡಿಕೊಂಡಿದೆ, ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ, ನಾನು ಅವರಿಗೆ ಇನ್ನು ಸಹಾಯ ಮಾಡಬೇಕಿತ್ತು ಆದ್ರೆ ಅದು ನನ್ನಿಂದ ಆಗಲಿಲ್ಲ

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿರುವೆನು, ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ,

ನಮ್ಮ ಕುಟುಂಬದವರು ಏನು ಸೇಡಿ ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ, ದೇವರೇ ಅವರಿಗೆ ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತಾನೆ ಎಂದು ವಿಡಿಯೋ ಮಾಡಿ ಹೇಳಿದ್ದಾರೆ.

ಮಲ್ಲಿಕಾರ್ಜುನ್ ಸಾವಿಗೆ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಪಾವಗಡ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

The post ಪಾವಗಡ : ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಮಾಜ ಕಲ್ಯಾಣ ಅಧಿಕಾರಿ appeared first on ಸುವರ್ಣ ಪ್ರಗತಿ.

]]>
ಸರ್ಕಾರಿ ಪಾಠಶಾಲೆ ವಿದ್ಯಾರ್ಥಿಗಳಿಗೆ ಗಂಗನೇನಿ ದೇವರಾಜ್ ರವರಿಂದ ಕ್ರೀಡಾ ಸಾಮಗ್ರಿಗಳ ವಿತರಣೆ https://suvarnapragathi.in/archives/8064 Sun, 17 Aug 2025 06:42:15 +0000 https://suvarnapragathi.in/?p=8064 ಪಾವಗಡ :15 79ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶನೇಶ್ವರ ದೇವಸ್ಥಾನ ಹಿಂಭಾಗವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶಾಂತಿ ಮೆಡಿಕಲ್ಸ್ ಮಾಲೀಕರಾದಂತಹ ಗಂಗಿನೇನಿ ದೇವರಾಜ್ ರವರು ಎಲ್ಲಾ ಕ್ರೀಡೆ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಿದರು ಸ್ವತಂತ್ರ ದಿನಾಚರಣೆಯ ಧ್ವಜಾರೋಹಣ ಮಾಡಿ ಮಾಡಿ ಮಾತನಾಡಿದ ಅವರು ನಮ್ಮ ಮಾವನರಾದಂತಹ ಡಾಕ್ಟರ್ ಪಿ. ನಾರಾಯಣಪ್ಪ ರವರ ಆಶೀರ್ವಾದದೊಂದಿಗೆ ಈ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಅಭ್ಯಾಸ ಮಾಡಿ ತಾಲೂಕು ಮತ್ತು ಜಿಲ್ಲಾಮಟ್ಟಗಳಲ್ಲಿ …

The post ಸರ್ಕಾರಿ ಪಾಠಶಾಲೆ ವಿದ್ಯಾರ್ಥಿಗಳಿಗೆ ಗಂಗನೇನಿ ದೇವರಾಜ್ ರವರಿಂದ ಕ್ರೀಡಾ ಸಾಮಗ್ರಿಗಳ ವಿತರಣೆ appeared first on ಸುವರ್ಣ ಪ್ರಗತಿ.

]]>
ಪಾವಗಡ :15 79ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶನೇಶ್ವರ ದೇವಸ್ಥಾನ ಹಿಂಭಾಗವಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಶಾಂತಿ ಮೆಡಿಕಲ್ಸ್ ಮಾಲೀಕರಾದಂತಹ ಗಂಗಿನೇನಿ ದೇವರಾಜ್ ರವರು ಎಲ್ಲಾ ಕ್ರೀಡೆ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಿದರು ಸ್ವತಂತ್ರ ದಿನಾಚರಣೆಯ ಧ್ವಜಾರೋಹಣ ಮಾಡಿ ಮಾಡಿ ಮಾತನಾಡಿದ ಅವರು ನಮ್ಮ ಮಾವನರಾದಂತಹ ಡಾಕ್ಟರ್ ಪಿ. ನಾರಾಯಣಪ್ಪ ರವರ ಆಶೀರ್ವಾದದೊಂದಿಗೆ ಈ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಅಭ್ಯಾಸ ಮಾಡಿ ತಾಲೂಕು ಮತ್ತು ಜಿಲ್ಲಾಮಟ್ಟಗಳಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಶಾಲೆಗೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೊರ್ ನ ವ್ಯವಸ್ಥಾಪಕರಾದಂತಹ ಕುಮಾರ್ ನಾಯಕ್ ರವರು ಈ ಶಾಲೆಗೆ ಪ್ರಿಂಟರ್ ಅನ್ನು ಕೊಡುಗೆ ನೀಡಿ ಮಾತನಾಡಿದ ಅವರು ನಾನು ಪಾವಗಡ ತಾಲೂಕಿನಲ್ಲಿ ಕೆಲಸ ಮಾಡುವವರೆಗೂ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಮಾರುತೀಶ್ ರವರು ಮಾತನಾಡಿ ಹಿಂದಿನ ವರ್ಷ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಗಾಯತ್ರಿ ಭಾಯಿ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸ್ಕೂಲ್ ಬ್ಯಾಗ್ ನೋಟ್ ಬುಕ್ ಗಳನ್ನು ವಿತರಣೆ ಮಾಡಿದ್ದರು ಹಾಗೂ ಭೂನ್ಸ್ ಆಸ್ಪತ್ರೆಯ ಪ್ರಖ್ಯಾತ ವೈದ್ಯರಾದಂತಹ ಶ್ರೀಮತಿ ಬದ್ರು ಜಮಾ‌ ಖಾನಂ ರವರು ಡಿಜಿಟಲ್ ಸ್ಮಾಟ್೯ ಬೋಡ್೯ ಕೊಡುಗೆಯಾಗಿ ಕೊಟ್ಟಿರುತ್ತಾರೆ.
ಇವರೆಲ್ಲರಿಗೂ ನಮ್ಮ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ ಸನ್ಮಾನ ಮಾಡಿ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯಾದ ಆದಿ ಲಕ್ಷ್ಮಮ್ಮ ಹಾಗೂ ಶಾಲಾ ಸಿಬ್ಬಂದಿಯವರು ಹಾಜರಿದ್ದರು.

The post ಸರ್ಕಾರಿ ಪಾಠಶಾಲೆ ವಿದ್ಯಾರ್ಥಿಗಳಿಗೆ ಗಂಗನೇನಿ ದೇವರಾಜ್ ರವರಿಂದ ಕ್ರೀಡಾ ಸಾಮಗ್ರಿಗಳ ವಿತರಣೆ appeared first on ಸುವರ್ಣ ಪ್ರಗತಿ.

]]>
ಶನಿಮಹಾದೇವರ ಭಕ್ತಿರಿಗೆ ವೈದ್ಯ ಡಾ.ಎಂ.ಹೆಚ್ ನಾರಾಯಣಪ್ಪರವರಿಂದ ಅನ್ನದಾಸೋಹ https://suvarnapragathi.in/archives/8057 Sun, 10 Aug 2025 07:12:28 +0000 https://suvarnapragathi.in/?p=8057   ಪಾವಗಡ : ಪಾವಗಡ ಪಟ್ಟಣದ ಪುರಸಭೆಯ ಪಕ್ಕದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಕ್ಲಬ್ ನೇತೃತ್ವದಲ್ಲಿ ಪಾವಗಡ ಪಟ್ಟಣದ ಶ್ರೀ ಹರ್ಷ ನರ್ಸಿಂಗ್ ಹೊಂ ಖ್ಯಾತ ವೈದ್ಯರಾದ ಡಾಕ್ಟರ್ ಎಂ ಹೆಚ್ ನಾರಾಯಣಪ್ಪ ರವರ ಸಹಕಾರದೊಂದಿಗೆ ಕ್ಲಬ್ ನ ಆವರಣದಲ್ಲಿ ಶ್ರಾವಣ ಮೂರನೇ ಶನಿವಾರ ಶನಿಮಹಾತ್ಮ ದೇವಸ್ಥಾನಕ್ಕೆ ಬಂದಿರುವ ಭಕ್ತರಿಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಈ ಅನ್ನದಾಸೋಹದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಪಿ ಎಚ್ ರಾಜೇಶ್, ಕ್ಲಬ್ ನ ಸದಸ್ಯರಾದ …

The post ಶನಿಮಹಾದೇವರ ಭಕ್ತಿರಿಗೆ ವೈದ್ಯ ಡಾ.ಎಂ.ಹೆಚ್ ನಾರಾಯಣಪ್ಪರವರಿಂದ ಅನ್ನದಾಸೋಹ appeared first on ಸುವರ್ಣ ಪ್ರಗತಿ.

]]>
 

ಪಾವಗಡ : ಪಾವಗಡ ಪಟ್ಟಣದ ಪುರಸಭೆಯ ಪಕ್ಕದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಕ್ಲಬ್ ನೇತೃತ್ವದಲ್ಲಿ ಪಾವಗಡ ಪಟ್ಟಣದ ಶ್ರೀ ಹರ್ಷ ನರ್ಸಿಂಗ್ ಹೊಂ ಖ್ಯಾತ ವೈದ್ಯರಾದ ಡಾಕ್ಟರ್ ಎಂ ಹೆಚ್ ನಾರಾಯಣಪ್ಪ ರವರ ಸಹಕಾರದೊಂದಿಗೆ ಕ್ಲಬ್ ನ ಆವರಣದಲ್ಲಿ ಶ್ರಾವಣ ಮೂರನೇ ಶನಿವಾರ ಶನಿಮಹಾತ್ಮ ದೇವಸ್ಥಾನಕ್ಕೆ ಬಂದಿರುವ ಭಕ್ತರಿಗೆ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಈ ಅನ್ನದಾಸೋಹದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಪಿ ಎಚ್ ರಾಜೇಶ್, ಕ್ಲಬ್ ನ ಸದಸ್ಯರಾದ
ನಾಗರಾಜ್ ನಾಯಕ, ಕಾವಲಗೆರೆ ನರಸಿಂಹಮೂರ್ತಿ, ನಂಜುಂಡಸ್ವಾಮಿ,ಶ್ಯಾಮಣ್ಣ, ಬ್ಯಾಂಕ್ ನಾರಾಯಣಪ್ಪ, ಸಿ ಕೆ ಪುರ ವೆಂಕಟೇಶ್ ಇನ್ನು ಮುಂತಾದವರು ಪಾಲ್ಗೊಂಡಿದ್ದರು.

The post ಶನಿಮಹಾದೇವರ ಭಕ್ತಿರಿಗೆ ವೈದ್ಯ ಡಾ.ಎಂ.ಹೆಚ್ ನಾರಾಯಣಪ್ಪರವರಿಂದ ಅನ್ನದಾಸೋಹ appeared first on ಸುವರ್ಣ ಪ್ರಗತಿ.

]]>
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಮುಖಂಡರಿಂದ ಪೂರ್ವಭಾವಿ ಸಭೆ https://suvarnapragathi.in/archives/8052 Sun, 10 Aug 2025 06:04:33 +0000 https://suvarnapragathi.in/?p=8052 ಪಾವಗಡ :  ಈ ತಿಂಗಳ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ ತಾಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವರ್ಗದಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಸೀಲ್ದಾರ್ ಡಿ. ಎನ್. ವರದರಾಜ ರವರು ಈ ತಿಂಗಳು 16 ರಂದು ಶನಿವಾರ ಶ್ರೀ ಕೃಷ್ಣಾಷ್ಟಮಿಯನ್ನು ಸರ್ಕಾರ ನಿಯಮದಂತೆ ತಾಲೂಕ್ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದು ಪಾವಗಡ ತಾಲ್ಲೂಕಿನ ಎಲ್ಲ ಯಾದವ ಮುಖಂಡರು ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಪಾವಗಡ ತಾಲ್ಲೂಕಿನ ಯಾದವ ಸಂಘದ …

The post ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಮುಖಂಡರಿಂದ ಪೂರ್ವಭಾವಿ ಸಭೆ appeared first on ಸುವರ್ಣ ಪ್ರಗತಿ.

]]>
ಪಾವಗಡ :  ಈ ತಿಂಗಳ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ ತಾಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವರ್ಗದಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಸೀಲ್ದಾರ್ ಡಿ. ಎನ್. ವರದರಾಜ ರವರು ಈ ತಿಂಗಳು 16 ರಂದು ಶನಿವಾರ ಶ್ರೀ ಕೃಷ್ಣಾಷ್ಟಮಿಯನ್ನು ಸರ್ಕಾರ ನಿಯಮದಂತೆ ತಾಲೂಕ್ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದು ಪಾವಗಡ ತಾಲ್ಲೂಕಿನ ಎಲ್ಲ ಯಾದವ ಮುಖಂಡರು ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಪಾವಗಡ ತಾಲ್ಲೂಕಿನ ಯಾದವ ಸಂಘದ ಅಧ್ಯಕ್ಷರಾದ ನರಸಿಂಹಪ್ಪ ಮಾತನಾಡಿ 16 ಶನಿವಾರದಂದು ಸರ್ಕಾರದ ನಿಯಮದಂತೆ ತಹಸಿಲ್ದಾರ್ ಕಚೇರಿಯಲ್ಲಿ ಆಚರಣೆ ಮಾಡಿ ಮತ್ತೆ 18 ರಂದು ಸೋಮವಾರ ರೊಪ್ಪ ಮತ್ತು ಪಾವಗಡ ಟೌನ್ ಎಲ್ಲಾ ಯಾದವ ಸಾಮಾಜಿಕ ವರ್ಗದವರು ಸೇರಿ ಆರತಿಗಳೊಂದಿಗೆ ಗುರುಭವನದಿಂದ ವೇಣುಗೋಪಾಲ್ ಸ್ವಾಮಿ ದೇವಸ್ಥಾನದವರೆಗೆ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ತೆರಳಿ ವೇಣುಗೋಪಾಲ ಸ್ವಾಮಿಗೆ ಆರತಿಗಳನ್ನು ಬೆಳಗಿ ಪೂಜೆಯನ್ನು ಮುಗಿಸಿಕೊಂಡು ಪ್ರಸಾದವನ್ನು ಸೇವಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಾದವ ಮುಖಂಡರಾದ ಮೈಲಾರ ರೆಡ್ಡಿ. ಬಲರಾಮ್ ರೆಡ್ಡಿ, ಬಾಲಕೃಷ್ಣ ರೈತ ಸಂಘದ ಪೂಜಾರಪ್ಪ, ಹನುಮಂತರೆಡ್ಡಿ, ಶಿವಕುಮಾರ್, ಶ್ರೀಧರ್, ಅನಿಲ್ ಈರಣ್ಣ, ಡಾಬಾ ಹರೀಶ, ಪಾಂಡು, ಗೋಪಾಲ್ ಇನ್ನ ಮುಂತಾದ ಯಾದವ ಮುಖಂಡರು ಹಾಜರಿದ್ದರು

The post ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಮುಖಂಡರಿಂದ ಪೂರ್ವಭಾವಿ ಸಭೆ appeared first on ಸುವರ್ಣ ಪ್ರಗತಿ.

]]>
ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ : ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯ https://suvarnapragathi.in/archives/7938 Sat, 01 Feb 2025 05:02:31 +0000 https://suvarnapragathi.in/?p=7938 ಪಾವಗಡ: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 407 ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ 9 ಗಂಟೆಯಲ್ಲಿ ಪಾವಗಡ ತಾಲೂಕಿನ ಬುಗುಡೂರು ಗ್ರಾಮದ ತಿರುವಿನ ಬಳಿ ನಡೆದಿದೆ. ಈ ಅಪಘಾತದಲ್ಲಿ ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ವಿವರ: ಬಿ.ಹೊಸಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯದ ಪುರುಷರು ಹಾಗೂ ಮಹಿಳಾ ಕಾರ್ಮಿಕರು …

The post ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ : ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯ appeared first on ಸುವರ್ಣ ಪ್ರಗತಿ.

]]>
ಪಾವಗಡ: ತುಮಕೂರು ಜಿಲ್ಲೆಯ ಪಾವಗಡದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 407 ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ 9 ಗಂಟೆಯಲ್ಲಿ ಪಾವಗಡ ತಾಲೂಕಿನ ಬುಗುಡೂರು ಗ್ರಾಮದ ತಿರುವಿನ ಬಳಿ ನಡೆದಿದೆ.

ಈ ಅಪಘಾತದಲ್ಲಿ ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ವಿವರ:
ಬಿ.ಹೊಸಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯದ ಪುರುಷರು ಹಾಗೂ ಮಹಿಳಾ ಕಾರ್ಮಿಕರು ತಿರುಮಣಿ ಭಾಗದಲ್ಲಿ ಶುಕ್ರವಾರ ಸೆಂಟ್ರಿಂಗ್ ಕೆಲಸಕ್ಕೆ ತೆರಳಿ, ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳಿ ಬರುವ ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳ ಸ್ಥಿತಿ:
ಅಪಘಾತದಲ್ಲಿ 55 ವರ್ಷದ ತಿಪ್ಪ ನಾಯಕ್ ಅವರ ಒಂದು ಕೈ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಕ್ಷಮ್ಮ, ಅರುಣಾ, ಕಾವೇರಿ, ಶಾಂತಮ್ಮ, ಶಾಂತಾಬಾಯಿ, ಪ್ರಕಾಶ್, ದೇವಿ ಬಾಯಿ, ಸಕ್ಕಬಾಯಿ ಸೇರಿದಂತೆ ಹಲವರ ತಲೆ, ಸೊಂಟ ಹಾಗೂ ಇತರ ಅಂಗಾಂಗಗಳಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳಿಗೆ ಪಾವಗಡ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎ.ಎಸ್.ಎಲ್. ಬಾಬು, ಡಾ. ರಾಜೇಶ್, ಡಾ. ಆಶಿಕ್ ಗೌಡ, ಕಲ್ಲೇಶ್ ಮತ್ತು ಅವರ ತಂಡ ತಕ್ಷಣವೇ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದರು. ಈ ಘಟನೆಯ ಬಗ್ಗೆ ಮಾಹಿತಿ ತಿಳಿದು, ಪಾವಗಡ ವೃತ್ತ ನಿರೀಕ್ಷಕ ಸುರೇಶ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಘಟನೆ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

The post ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ : ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯ appeared first on ಸುವರ್ಣ ಪ್ರಗತಿ.

]]>
ಮಧ್ಯಾಹ್ನದ ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು https://suvarnapragathi.in/archives/7826 Fri, 29 Nov 2024 17:06:56 +0000 https://suvarnapragathi.in/?p=7826 ಪಾವಗಡ : ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿನ ಪ್ರಾಥಮಿಕ ಪಾಠಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಮೂರು ನಾಲ್ಕು ಮಕ್ಕಳಿಗೆ ವಾಂತಿ ಮಾಡಿಕೊಂಡಿದ್ದು ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಮತ್ತು ಗ್ರಾಮಸ್ಥರು ಕೂಡಲೇ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ 46 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದ ತಹಶೀಲ್ದಾರ್ ವರದರಾಜು, ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಶಿಕ್ಷಣಾಧಿಕಾರಿಗಳಾದ ಇಂದ್ರಾಣಮ್ಮ,ಅಕ್ಷರ ದಾಸೋಹ ನಿರ್ದೇಶಕ ಶಂಕರಪ್ಪ ಮತ್ತು ಬಿ.ಆರ್. ಸಿ ಗಳು ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ …

The post ಮಧ್ಯಾಹ್ನದ ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು appeared first on ಸುವರ್ಣ ಪ್ರಗತಿ.

]]>
ಪಾವಗಡ : ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿನ ಪ್ರಾಥಮಿಕ ಪಾಠಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ನಂತರ ಚಿಕ್ಕಿ ಮೊಟ್ಟೆಯನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಮೂರು ನಾಲ್ಕು ಮಕ್ಕಳಿಗೆ ವಾಂತಿ ಮಾಡಿಕೊಂಡಿದ್ದು ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕರು ಮತ್ತು ಗ್ರಾಮಸ್ಥರು ಕೂಡಲೇ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ 46 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ವಿಷಯ ತಿಳಿದ ತಹಶೀಲ್ದಾರ್ ವರದರಾಜು, ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್, ಶಿಕ್ಷಣಾಧಿಕಾರಿಗಳಾದ ಇಂದ್ರಾಣಮ್ಮ,ಅಕ್ಷರ ದಾಸೋಹ ನಿರ್ದೇಶಕ ಶಂಕರಪ್ಪ ಮತ್ತು ಬಿ.ಆರ್. ಸಿ ಗಳು ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ವೈದ್ಯರರಿಂದ ಮಾಹಿತಿ ಪಡೆದರು.ಮಕ್ಕಳು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ, ಊಟ ಸೇವಿಸಿದ ನಂತರ ಕೆಲ ಮಕ್ಕಳು ವಾಂತಿ ಮಾಡಿಕೊಂಡಿದ್ದು ಅದನ್ನು ಕಂಡು ಉಳಿದ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ ಎಲ್ಲಾ ಮಕ್ಕಳನ್ನು ವೈದ್ಯರು ಪರೀಕ್ಷಿಸಿದ್ದಾರೆ, ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಆರೋಗ್ಯ ವೈದ್ಯಾಧಿಕಾರಿಗಳಾದ ಬಾಬು ರವರು ಮಾತನಾಡಿ ಕೋಣನಕುರಿಕೆ ಶಿಕ್ಷಕಿ ಲೋಕಮ್ಮ ಕರೆ ಮಾಡಿ ನಮ್ಮ ಶಾಲೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆಂದು ಅವರನ್ನು ಕರೆ ತರುತ್ತಿದ್ದೇವೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಎಂದು ತಿಳಿಸಿದ ಕೂಡಲೇ ಎಚ್ಚೆತ್ತುಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೆವು. ಇಬ್ಬರು ಮಕ್ಕಳಿಗೆ ಮಾತ್ರ ವಾಂತಿ ಆಗಿದೆ ಬೇರೆ ಎಲ್ಲ ಮಕ್ಕಳು ಚೆನ್ನಾಗಿದ್ದಾರೆ ಮುಂಜಾಗ್ರತೆಯಾಗಿ ಚಿಕಿತ್ಸೆ ನೀಡಲಾಗಿದೆ, ಯಾವುದೇ ತೊಂದರೆ ಇರುವುದಿಲ್ಲ ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

The post ಮಧ್ಯಾಹ್ನದ ಬಿಸಿಯೂಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು appeared first on ಸುವರ್ಣ ಪ್ರಗತಿ.

]]>
ನಾಗಲಮಡಿಕೆಯ ಮೇವಿನ ಬ್ಯಾಂಕ್‌ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ https://suvarnapragathi.in/archives/7408 Mon, 29 Apr 2024 12:39:47 +0000 https://suvarnapragathi.in/?p=7408 ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಹ್ಮಣೇಶ್ವರ ದೇಗುಲದ ಬಳಿಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪಶುಪಾಲನಾ ಇಲಾಖೆ ನೇತೃತ್ವದಲ್ಲಿ ತೆರೆಯಲಾಗಿರುವ ಮೇವಿನ ಬ್ಯಾಂಕ್ ಗೆ ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇವು ಖರೀದಿಗೆ ಆಗಮಿಸಿದ್ದ ರೈತರೊಂದಿಗೆ ಮಾತನಾಡಿದ ಅವರು ಮೇವು ವಿತರಣಾ ಸ್ಥಳದಲ್ಲಿ ಕುಡಿಯುವ ನೀರು, ಅಗ್ನಿ ಶಾಮಕ ದಳ ಸಿಬ್ಬಂದಿ ನೇಮೇಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ ಯಂತೆ …

The post ನಾಗಲಮಡಿಕೆಯ ಮೇವಿನ ಬ್ಯಾಂಕ್‌ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ appeared first on ಸುವರ್ಣ ಪ್ರಗತಿ.

]]>
ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಹ್ಮಣೇಶ್ವರ ದೇಗುಲದ ಬಳಿಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪಶುಪಾಲನಾ ಇಲಾಖೆ ನೇತೃತ್ವದಲ್ಲಿ ತೆರೆಯಲಾಗಿರುವ ಮೇವಿನ ಬ್ಯಾಂಕ್ ಗೆ ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇವು ಖರೀದಿಗೆ ಆಗಮಿಸಿದ್ದ ರೈತರೊಂದಿಗೆ ಮಾತನಾಡಿದ ಅವರು ಮೇವು ವಿತರಣಾ ಸ್ಥಳದಲ್ಲಿ ಕುಡಿಯುವ ನೀರು, ಅಗ್ನಿ ಶಾಮಕ ದಳ ಸಿಬ್ಬಂದಿ ನೇಮೇಕ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ ಯಂತೆ ವಾರಕ್ಕೆ 42 ಕೆಜಿ ಮೇವು ವಿತರಿಸಲಾಗುತ್ತಿದ್ದು, ಒಂದು ಕೆ.ಜಿ. ಮೇವಿಗೆ ₹2 ನಿಗದಿಪಡಿಸಲಾಗಿದೆ ಎಂದರು.
ಇದೇ ಸಂದರ್ಭ ಮೇವು ಖರೀದಿಸಿ ಹೊರಟಿದ್ದ ತಿಮ್ಮಪುರದ ಉಮ ಎಂಬ ಮಹಿಳೆಯನ್ನೂ ಮಾತನಾಡಿಸಿ ಮೇವು ಬ್ಯಾಂಕ್ ತೆರೆದಿರುವುದರಿಂದ ಆಗಿರುವ ಅನುಕೂಲದ ಬಗ್ಗೆ ಅಭಿಪ್ರಾಯ ಪಡೆದುಕೊಂಡರು.

 

ಇದಕ್ಕೂ ಮುನ್ನ ಮಿಡಗೇಶಿಯಲ್ಲಿ ತೆರೆಯಲಾಗಿರುವ ಮೇವು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತದ ನಂತರ ಪಾವಗಡ ಪಟ್ಟಣದ ಅಗಸರ ಕುಂಟೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾವಗಡ ಪಟ್ಟಣದ ಹೊರವಲಯದಲ್ಲಿನ ತುಂಗಭದ್ರಾ ನೀರು ಸಂಗ್ರಹಣಾಗಾರವನ್ನು ಪರಿಶೀಲಿಸಿ ಪೈಪ್ ಲೈನ್ ಅಳವಾಡಿಕೆಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಉಪ ವಿಭಾಗಾಧಿಕಾರಿ ಗೊಟುರು ಶಿವಪ್ಪ , ತಹಶೀಲ್ದಾರ್ ಸಂತೋಷ್ ಕುಮಾರ್, ಪಾವಗಡ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

The post ನಾಗಲಮಡಿಕೆಯ ಮೇವಿನ ಬ್ಯಾಂಕ್‌ಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ appeared first on ಸುವರ್ಣ ಪ್ರಗತಿ.

]]>
ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯ : ಶಾಸಕ ವೆಂಕಟೇಶ್ https://suvarnapragathi.in/archives/6977 Tue, 17 Oct 2023 01:06:23 +0000 https://suvarnapragathi.in/?p=6977 ಪಾವಗಡ : ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸುವುದು ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮತ್ತು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು …

The post ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯ : ಶಾಸಕ ವೆಂಕಟೇಶ್ appeared first on ಸುವರ್ಣ ಪ್ರಗತಿ.

]]>
ಪಾವಗಡ : ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸುವುದು ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮತ್ತು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದೆ, ತಾಯಂದಿರು ಮಕ್ಕಳ ಆರೈಕೆ ಮತ್ತು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು, ಪೌಷ್ಠಿಕ ಹಾಲು ಮತ್ತು ಹಾಲಿನ ಪದಾರ್ಥಗಳ ಉತ್ಪಾದನೆಯಲ್ಲಿ ರಾಜ್ಯದಲ್ಲಿ ಪ್ರಖ್ಯಾತಿ ಪಡೆದಿರುವ ಕೆ.ಎಂ.ಎಪ್ ಸಂಸ್ಥೆ ಸಹಕಾರದೊಂದಿಗೆ ಸರ್ಕಾರ ಸಿಡಿಪಿಒ ಇಲಾಖೆ ಮೂಲಕ ಮೂರು ಸಾವಿರ ವೆಚ್ಚದ ಪೌಷ್ಠಿಕಾಂಶದ ಕಿಟ್ ಉಚಿತವಾಗಿ ವಿತರಿಸುತ್ತಿದೆ. ತಾಲೂಕಿನಲ್ಲಿರುವ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.
ಸಮಾಜದಲ್ಲಿ ಆರೋಗ್ಯ ಮತ್ತು ಪೌಷ್ಠಿಕತೆ ಕಾಪಾಡುವ ಮೂಲಕ ಅಂಗನವಾಡಿ ಸಿಬ್ಬಂದಿ ಸ್ವಾಸ್ತö್ಯ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದೊಂದಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಕಾರ ಪಡೆದು ಪೋಷಣ್ ಮಾಸಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೌಷ್ಠಿಕ ಆಹಾರ ಸೇವನೆ, ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ವಿ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಾರಾಯಣ, ಎಸಿಡಿಪಿಒ ರಖೀಬ್‌ಉಲ್ಲಾ ಫಲಾನುಭವಿಗಳಿಗೆ ಪೌಷ್ಠಿಕಾಂಶ ಭರಿತ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಒ ನಾರಾಯಣ, ಎಸಿಡಿಪಿಒ ರಖೀಬ್ ಉಲ್ಲಾ, ಪುರಸಭೆ ಸದಸ್ಯರಾದ ಸುದೇಶ್ ಬಾಬು, ರಾಜೇಶ್, ರವಿ, ವೇಲುರಾಜು, ಆರೋಗ್ಯ ಇಲಾಖೆಯ ಸುರೇಶ್ ಹಾಗೂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅದ್ಯಕ್ಷೆ ಸುಶೀಲಮ್ಮ, ಇಲಾಖೆಯ ಮೇಲ್ವಿಚಾರಕಿಯರಾದ ಮಮತ, ಭಾಗ್ಯಲಕ್ಷ್ಮೀ, ಸುಧಾ, ವಿಜಯಲಕ್ಷ್ಮೀ, ಜಯಲಕ್ಷ್ಮೀ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

The post ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಂಗನವಾಡಿ ಸಿಬ್ಬಂದಿ ಕಾರ್ಯ ಶ್ಲಾಘನೀಯ : ಶಾಸಕ ವೆಂಕಟೇಶ್ appeared first on ಸುವರ್ಣ ಪ್ರಗತಿ.

]]>
ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ https://suvarnapragathi.in/archives/6878 Sat, 09 Sep 2023 16:07:44 +0000 https://suvarnapragathi.in/?p=6878 ಪಾವಗಡ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನಪರ ಅಭಿವೃದ್ದಿ ಕೆಲಸಗಳು ಆಗಿವೆ, ಸೋಲಾರ್ ನಿರ್ಮಾಣದಿಂದ ಪಾವಗಡ ತಾಲೂಕು ಇಡೀ ವಿಶ್ವಕ್ಕೆ ಪರಿಚಯವಾಗಿ ಅಭಿವೃದ್ದಿ ಆಗುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೆಶ್ವರ್ ಪ್ರಶಂಶೆ ವ್ಯಕ್ತಪಡಿಸಿದರು. ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಗಲಮಡಿಕೆ, ತಿರುಮಣಿ ಮತ್ತು ವಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ 147 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜನಸಾಮಾನ್ಯರ ಅಭಿವೃದ್ದಿ ಸಹಿಸದ ಬಿಜೆಪಿಗರು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ …

The post ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಪಾವಗಡ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನಪರ ಅಭಿವೃದ್ದಿ ಕೆಲಸಗಳು ಆಗಿವೆ, ಸೋಲಾರ್ ನಿರ್ಮಾಣದಿಂದ ಪಾವಗಡ ತಾಲೂಕು ಇಡೀ ವಿಶ್ವಕ್ಕೆ ಪರಿಚಯವಾಗಿ ಅಭಿವೃದ್ದಿ ಆಗುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೆಶ್ವರ್ ಪ್ರಶಂಶೆ ವ್ಯಕ್ತಪಡಿಸಿದರು.
ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಗಲಮಡಿಕೆ, ತಿರುಮಣಿ ಮತ್ತು ವಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ 147 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜನಸಾಮಾನ್ಯರ ಅಭಿವೃದ್ದಿ ಸಹಿಸದ ಬಿಜೆಪಿಗರು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಟೀಕೆ ಮಾಡುತ್ತಿದ್ದರು, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನೂರು ದಿನಗಳಾಗಿವೆ ಅಷ್ಟರಲ್ಲೇ ತಾಲ್ಲೂಕಿನಲ್ಲಿ 147 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಉದ್ಘಾಟಿಸುತ್ತಿರುವುದನ್ನು ಜನತೆ ತಿಳಿಯ ಬೇಕು, ರಾಜ್ಯದ 135 ಕ್ಷೇತ್ರದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಬಿಜೆಪಿಗರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಆಡಳಿತ ಪ್ರಾರಂಬಿಸಿದ್ದೇವೆ ಎಂದರು.
ಸುಮಾರು 6.5ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 58.43 ಕೋಟಿ ವೆಚ್ಚದ ಎನ್‌ಆರ್‌ಇಜಿ ಕಾಮಗಾರಿಗಳು, 4.86ಕೋಟಿ ವೆಚ್ಚದ ಪ್ರಧಾನ ಮಂತ್ರ ಆವಾಜ್ ಯೋಜನೆ, 19.36 ಕೋಟಿ ವೆಚ್ಚದ ಜೆಜೆಎಂ ಯೋಜನೆ, 6 ಕೋಟಿ ವೆಚ್ಚದಲ್ಲಿ 2 ಪೋಲಿಸ್ ಠಾಣೆ ನಿರ್ಮಾಣ, ಸೋಲಾರ್ ಸಿಎಸ್‌ಆರ್ ನಿಧಿಯಿಂದ 45 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಸಂಪೂರ್ಣ ಬದ್ದ ಎಂಬ ಭರವಸೆ ನೀಡಿದರು.

 

 

ಮಾಜಿ ಶಾಸಕ ವೆಂಕಟರಮಣಪ್ಪ ಅವರ ಕನಸಿನ ಕೂಸಾದ ಭದ್ರಾಮೇಲ್ದಂಡೆ ಯೋಜನೆ ಮತ್ತು ರೈಲ್ವೇ ಯೋಜನೆಗಳು ಪ್ರಗತಿಯಲ್ಲಿದ್ದು ಶಿಘ್ರದಲ್ಲೇ ಜನರ ಉಪಯೋಗಕ್ಕೆ ಬರಲಿವೆ ಎಂದರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ಎತ್ತಿನಹೊಳೆ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಹಣ ನೀಡದ ಕಾರಣ ಇಂದು ಯೋಜನೆಗಳ ಮೊತ್ತ 28 ಸಾವಿರ ಕೋಟಿ ಹೆಚ್ಚಾಗಿ ಎಂದರು.
ತಾಲೂಕಿಗೆ ರಿಂಗ್ ರೊಡ್, ವಸತಿ ಶಾಲೆಗಳು, ಎರಡು ಸಾವಿರ ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನಿಡಿದರು.

 

ಶಾಸಕ ವೆಂಕಟೇಶ್ ಮಾತನಾಡಿ ಪಾವಗಡಕ್ಕೆ ಅವಶ್ಯಕವಾದ ರಸ್ತೆ, ರಿಂಗ್ ರೋಡ್, ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ, ಕೊಳಗೇರಿ ನಿವಾಸಿಗಳಿಗೆ ಮನೆ ಮತ್ತು ನಿವೇಶನಗಳನ್ನು ನೀಡಲು ಸಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ, ಭದ್ರಾ ಮೇಲ್ದಂಡೆ ಯೋಜನೆ ನೀರು ಶೀರ್ಘವಾಗಿ ತಾಲೂಕಿಕೆ ಬರಲಿದೆ ಎಂದರು.
ಮಾಜಿ ಶಾಸಕ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಶ್ರೀನಿವಾಸ್, ಎಸ್‌ಪಿ ಕೆ.ವಿ.ಅಶೋಕ್, ಸೋಲಾರ್ ಸಿಇಒ ಅಮರನಾಥ್, ತಹಶೀಲ್ದಾರ್ ವರದರಾಜು, ಕಾಂಗ್ರೆಸ್ ಜಿಲ್ಲಾದ್ಯಕ್ಷ ಚಂದ್ರಶೇಖರಗೌಡ, ವಕ್ತಾರ ನಿಖಿತ್ ರಾಜ್ ಮೌರ್ಯ, ಮುಖಂಡರಾದ ರಾಜೇಶ್, ರವಿ, ಬತ್ತಿನೇನಿ ನಾನಿ, ಚನ್ನಕೇಶವ, ಮಾನಂ ವೆಂಕಟಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಖಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

The post ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ https://suvarnapragathi.in/archives/6868 Sat, 09 Sep 2023 15:53:40 +0000 https://suvarnapragathi.in/?p=6868 ಪಾವಗಡ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನಪರ ಅಭಿವೃದ್ದಿ ಕೆಲಸಗಳು ಆಗಿವೆ, ಸೋಲಾರ್ ನಿರ್ಮಾಣದಿಂದ ಪಾವಗಡ ತಾಲೂಕು ಇಡೀ ವಿಶ್ವಕ್ಕೆ ಪರಿಚಯವಾಗಿ ಅಭಿವೃದ್ದಿ ಆಗುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೆಶ್ವರ್ ಪ್ರಶಂಶೆ ವ್ಯಕ್ತಪಡಿಸಿದರು. ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಗಲಮಡಿಕೆ, ತಿರುಮಣಿ ಮತ್ತು ವಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ 147 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜನಸಾಮಾನ್ಯರ ಅಭಿವೃದ್ದಿ ಸಹಿಸದ ಬಿಜೆಪಿಗರು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ …

The post ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>
ಪಾವಗಡ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾತ್ರ ಜನಪರ ಅಭಿವೃದ್ದಿ ಕೆಲಸಗಳು ಆಗಿವೆ, ಸೋಲಾರ್ ನಿರ್ಮಾಣದಿಂದ ಪಾವಗಡ ತಾಲೂಕು ಇಡೀ ವಿಶ್ವಕ್ಕೆ ಪರಿಚಯವಾಗಿ ಅಭಿವೃದ್ದಿ ಆಗುತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೆಶ್ವರ್ ಪ್ರಶಂಶೆ ವ್ಯಕ್ತಪಡಿಸಿದರು.
ಪಾವಗಡ ಪಟ್ಟಣ ಹಾಗೂ ತಾಲೂಕಿನ ನಾಗಲಮಡಿಕೆ, ತಿರುಮಣಿ ಮತ್ತು ವಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ 147 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜನಸಾಮಾನ್ಯರ ಅಭಿವೃದ್ದಿ ಸಹಿಸದ ಬಿಜೆಪಿಗರು ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಟೀಕೆ ಮಾಡುತ್ತಿದ್ದರು, ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನೂರು ದಿನಗಳಾಗಿವೆ ಅಷ್ಟರಲ್ಲೇ ತಾಲ್ಲೂಕಿನಲ್ಲಿ 147 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಉದ್ಘಾಟಿಸುತ್ತಿರುವುದನ್ನು ಜನತೆ ತಿಳಿಯ ಬೇಕು, ರಾಜ್ಯದ 135 ಕ್ಷೇತ್ರದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಬಿಜೆಪಿಗರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಜನಪರ ಆಡಳಿತ ಪ್ರಾರಂಬಿಸಿದ್ದೇವೆ ಎಂದರು.
ಸುಮಾರು 6.5ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 58.43 ಕೋಟಿ ವೆಚ್ಚದ ಎನ್‌ಆರ್‌ಇಜಿ ಕಾಮಗಾರಿಗಳು, 4.86ಕೋಟಿ ವೆಚ್ಚದ ಪ್ರಧಾನ ಮಂತ್ರ ಆವಾಜ್ ಯೋಜನೆ, 19.36 ಕೋಟಿ ವೆಚ್ಚದ ಜೆಜೆಎಂ ಯೋಜನೆ, 6 ಕೋಟಿ ವೆಚ್ಚದಲ್ಲಿ 2 ಪೋಲಿಸ್ ಠಾಣೆ ನಿರ್ಮಾಣ, ಸೋಲಾರ್ ಸಿಎಸ್‌ಆರ್ ನಿಧಿಯಿಂದ 45 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಸರ್ಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಸಂಪೂರ್ಣ ಬದ್ದ ಎಂಬ ಭರವಸೆ ನೀಡಿದರು.

ಮಾಜಿ ಶಾಸಕ ವೆಂಕಟರಮಣಪ್ಪ ಅವರ ಕನಸಿನ ಕೂಸಾದ ಭದ್ರಾಮೇಲ್ದಂಡೆ ಯೋಜನೆ ಮತ್ತು ರೈಲ್ವೇ ಯೋಜನೆಗಳು ಪ್ರಗತಿಯಲ್ಲಿದ್ದು ಶಿಘ್ರದಲ್ಲೇ ಜನರ ಉಪಯೋಗಕ್ಕೆ ಬರಲಿವೆ ಎಂದರು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ಎತ್ತಿನಹೊಳೆ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಹಣ ನೀಡದ ಕಾರಣ ಇಂದು ಯೋಜನೆಗಳ ಮೊತ್ತ 28 ಸಾವಿರ ಕೋಟಿ ಹೆಚ್ಚಾಗಿ ಎಂದರು.
ತಾಲೂಕಿಗೆ ರಿಂಗ್ ರೊಡ್, ವಸತಿ ಶಾಲೆಗಳು, ಎರಡು ಸಾವಿರ ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನಿಡಿದರು.
ಶಾಸಕ ವೆಂಕಟೇಶ್ ಮಾತನಾಡಿ ಪಾವಗಡಕ್ಕೆ ಅವಶ್ಯಕವಾದ ರಸ್ತೆ, ರಿಂಗ್ ರೋಡ್, ಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ, ಕೊಳಗೇರಿ ನಿವಾಸಿಗಳಿಗೆ ಮನೆ ಮತ್ತು ನಿವೇಶನಗಳನ್ನು ನೀಡಲು ಸಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ, ಭದ್ರಾ ಮೇಲ್ದಂಡೆ ಯೋಜನೆ ನೀರು ಶೀರ್ಘವಾಗಿ ತಾಲೂಕಿಕೆ ಬರಲಿದೆ ಎಂದರು.
ಮಾಜಿ ಶಾಸಕ ವೆಂಕಟರಮಣಪ್ಪ, ಜಿಲ್ಲಾಧಿಕಾರಿ ಶ್ರೀನಿವಾಸ್, ಎಸ್‌ಪಿ ಕೆ.ವಿ.ಅಶೋಕ್, ಸೋಲಾರ್ ಸಿಇಒ ಅಮರನಾಥ್, ತಹಶೀಲ್ದಾರ್ ವರದರಾಜು, ಕಾಂಗ್ರೆಸ್ ಜಿಲ್ಲಾದ್ಯಕ್ಷ ಚಂದ್ರಶೇಖರಗೌಡ, ವಕ್ತಾರ ನಿಖಿತ್ ರಾಜ್ ಮೌರ್ಯ, ಮುಖಂಡರಾದ ರಾಜೇಶ್, ರವಿ, ಬತ್ತಿನೇನಿ ನಾನಿ, ಚನ್ನಕೇಶವ, ಮಾನಂ ವೆಂಕಟಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಖಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

The post ಕಾಂಗ್ರೆಸ್ ಪಕ್ಷದಿಂದ ಜನಪರ ಅಭಿವೃದ್ದಿ ಕಾರ್ಯಗಳಾಗಿವೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ appeared first on ಸುವರ್ಣ ಪ್ರಗತಿ.

]]>