ತುಮಕೂರು:ಇತ್ತೀಚಿನ ಚುನಾವಣಾ ಆಯೋಗದ ಆಯುಕ್ತರ ನಡುವಿನ ಹೇಳಿಕೆಗಳು ದೇಶದಾದ್ಯಂತ ಎಸ್.ಐ.ಆರ್. ಕುರಿತು ಜನರಿಗೆ ಇದ್ದ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿವೆ.ಎಸ್.ಐ.ಆರ್. ರದ್ದು ಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಪಡೆದು ಅವರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ದೇಶದಲ್ಲಿ ಓಟ್ ಚೋರಿ ನಡೆಯುತ್ತಿದ್ದೆ ಎಂದು 2024ರ ಲೋಕಸಭಾ ಚುನಾವಣೆಯ ವೇಳೆಯೇ ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರು ದಾಖಲೆ ಸಮೇತ ಜನರ ಮುಂದಿಟ್ಟಿದ್ದರು.ಅಲ್ಲದೆ ಎಸ್.ಐ.ಆರ್ ನಿಂದ ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಅವರ ಅನುಮಾನಗಳು ಇಂದು ನಿಜವಾಗಿವೆ. ಬಾಲ್ಕಿ, ಬಬಲೇಶ್ವರ,ಬೆಳಗಾಂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು, ಆ ಪಕ್ಷದ ಬಿಎಲ್‌ಎ-02 ಗಳು ನಿಯಮ ಮೀರಿ ಸಾವಿರಾರು ಫಾರಂ ನಂ 07 ಸಲ್ಲಿಸುವ ಮೂಲಕ ಬಡವರ ಸಂವಿಧಾನಾತ್ಮಕ ಹಕ್ಕಿಗೆ ದಕ್ಕೆ ತಂದಿದ್ದಾರೆ. ಹಾಗಾಗಿ ಇದರ ವಿರುದ್ದ ಸಮಗ್ರ ತನಿಖೆ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.
ಇಡೀ ದೇಶದಲ್ಲಿ 13 ಕೋಟಿಗೂ ಹೆಚ್ಚು ಜನರನ್ನು ಎಸ್.ಐ.ಆರ್. ಮೂಲಕ ಮತದಾನದ ಹಕ್ಕಿನಿಂದ ವಂಚಿಸಲಾಗಿದೆ. ಈಗಾಗಲೇ ಟ್ಯುಬ್ರುನಲ್ ಮುಂದೆ ಲಕ್ಷಾಂತರ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ತಮ್ಮ ಹುಟ್ಟಿನ ಬಗ್ಗೆ ದಾಖಲೆಯೇ ಇಲ್ಲದ ವಯೋವೃದ್ದರನ್ನು ಆಧಾರ್ ಬದಲು ಬರ್ತ್ ಸರ್ಟಿಪಿಕೇಟ್ ತರುವಂತೆ, ಇಲ್ಲವೇ ಶಿಕ್ಷಣದ ದಾಖಲೆ ತರುವಂತೆ ಸೂಚಿಸುವ ಮೂಲಕ ಅವರನ್ನು ಗೊಂದಲಕ್ಕೆ ತಳ್ಳುವ ಕೆಲಸವನ್ನು ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಮಾಡಲಾಗುತ್ತಿದೆ. ಬಡವರು ಮತ್ತು ಶ್ರೀಮಂತರ ನಡುವೆ ನೊಟೀಷ್ ವಿಚಾರಣೆಯಲ್ಲಿಯೂ ಸಾಕಷ್ಟು ವೆತ್ಯಾಸ ಮಾಡಲಾಗಿದೆ. ಹಾಗಾಗಿ ಕೇಂದ್ರ ಸರಕಾರ ಕೂಡಲೇ ರಾಜ್ಯದಲ್ಲಿ ಎಸ್.ಐ.ಆರ್.ಪ್ರಕ್ರಿಯೆಯನ್ನು ರದ್ದು ಮಾಡಬೇಕು. ಹಾಗೆಯೇ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಪಡೆದು, ಅವರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಡಾ.ರಫೀಕ್ ಅಹಮದ್ ಒತ್ತಾಯಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *