ಕುಣಿಗಲ್ : ಕಾರು ಅಪಘಾತವಾಗಿ ಒಬ್ಬ ಮೃತಪಟ್ಟು ಮೂವರಿಗೆ ಗಾಯವಾಗಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜ್ಯ ಹೆದ್ದಾರಿ 33 ರಾಜೇಂದ್ರಪುರ ಗೇಟ್ ಸಮೀಪ ಬುಧವಾರ ಮಧ್ಯಾಹ್ನ ಅಪಘಾತ ನಡೆದಿದ್ದು ಅಪಘಾತದಲ್ಲಿ ಕಾರಿನಲ್ಲಿದ್ದ ಮಂಡ್ಯ ಟೌನ್ ಚಾಮುಂಡೇಶ್ವರಿ ನಗರದ 28 ವರ್ಷದ ಆಕರ್ಷ್ ( ಇಂಜಿನಿಯರ್) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈತ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ
ಶಶಾಂಕ್ ಕೆ ಗೌಡ ( 28) ಜ್ಞಾನೇಶ್ವರಿ( 24) ಶಶಾಂಕ್ ಜಿ ಕೆ (28) ಇವರಿಗೆ ಕೈ ಕಾಲುಗಳಿಗೆ ಗಂಭೀರ ಗಾಯವಾಗಿ ಇವರಿಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬಿ ಜಿ ಎಸ್ ಆಸ್ಪತ್ರೆಗೆ ಕೊಂಡಯಲಾಗಿದೆ ಇವರೆಲ್ಲರೂ ತುಮಕೂರಿನಲ್ಲಿ ತನ್ನ ಸ್ನೇಹಿತನ ಮದುವೆ ಮುಗಿಸಿಕೊಂಡು ವಾಪಸ್ ಮಂಡ್ಯಕ್ಕೆ ಹೋಗವ ಸಂದರ್ಭದಲ್ಲಿ ಕಾರಿನ ಮುಂಭಾಗದ ಟೈರು ಸಿಡಿದು ಅಪಘಾತವಾಗಿ ಪರ್ಟಿಯಾಗಿದೆ ಶಶಾಂಕ್ ಎಂಬುವರು ಕಾರನು ಚಲಾಯಿಸುತ್ತಿದ್ದರು ಇವರ ಅಜಾಗರುಕತೆ ಚಾಲನೆಯಿಂದ ಕಾರು ಮೊದಲಿಗೆ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಗದ್ದೆಗೆ ಉರುಳಿ ಅಪಘಾತ ನಡೆದಿದೆ.
ಈ ಸಂಬಂಧ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
ವರದಿ: ರೇಣುಕಾ ಪ್ರಸಾದ್