ಕುಣಿಗಲ್ಕ್ರೈಂ ನ್ಯೂಸ್ಜಿಲ್ಲೆತುಮಕೂರು

ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ : ಇಬ್ಬರು ಯುವಕರ ಸಾವು

ಕುಣಿಗಲ್ :ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಯುವಕರಿಬ್ಬರು ಮೃತಪಟ್ಟಿರುವÉ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಮಾದಪ್ಪನಹಳ್ಳಿ ಗೇಟ್ ಸಮೀಪ ಈ ಅಪಘಾತ ನಡೆದಿದ್ದು.

ಅಪಘಾತದಲ್ಲಿ ಅಮೃತೂರು ಹೋಬಳಿಯ ಬೆನವಾರ ಗ್ರಾಮದ ಅಜಯ್(,21) ಶ್ರೇಯಸ್ (24) ಇಬ್ಬರು ಮೃತಪಟ್ಟಿರುವ ದುರ್ದೈವಿ ಯುವಕರಾಗಿದ್ದಾರೆ ಈ ಇಬ್ಬರು ಯುವಕರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ ಈ ಇಬ್ಬರು ಯುವಕರು ದೀಪಾವಳಿ ಹಬ್ಬ ಆಚರಿಸಲೆಂದು ಗ್ರಾಮಕ್ಕೆ ಬಂದು ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ತೆರಳುತ್ತಿರುವ ವೇಳೆ ಕ್ಯಾಂಟರ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ. ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವರದಿಗಾರರು : ರೇಣುಕಾ ಪ್ರಸಾದ್ ಬಿಎನ್

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker