ಕುಣಿಗಲ್ : ಪಟ್ಟಣದ ಸಬ್ ರಿಜಿಸ್ಟರ್ ಕಚೇರಿಯಲ್ಲಿ 75ನೇ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಸಬ್ ರಿಜಿಸ್ಟರ್ ಇದ್ದರೂ ಕಚೇರಿಗೆ ಸಂಬಂಧಪಡ ದೇ ಇರುವವರು ಅವೈಜ್ಞಾನಿಕವಾಗಿ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಕೆ ಆರ್ ಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್.ನಾಗರಾಜು ಆರೋಪಿಸಿದ್ದಾರೆ.
ಈ ಸಂಬಂಧ ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕುಣಿಗಲ್ ಸಬ್ ರಿಜಿಸ್ಟರ್ ಕಚೇರಿಗೆ ಸಂಬಂಧ ಪಡೆದೆ ಇದ್ದವರು ರಾಷ್ಟ್ರಧ್ವಜವನ್ನು ಹಾರಿಸಿರುವ ಘಟನೆ ನಡೆದಿದೆ ಈ ವಿಚಾರ ತಾಲೂಕ ಆಡಳಿತ ತಲೆತಗ್ಗಿಸುವ ರೀತಿ ಆಗಿದೆ ಎಂದ ಅವರು ಸದಾಕಾಲ ದಳ್ಳಾಳಿಗಳಿಂದಲೇ ತುಂಬಿ ತುಳುಕುವ ಸಬ್ ರಿಜಿಸ್ಟರ್ ಕಚೇರಿಗಳು ಇಂತಹ ಒಂದು ಸುಸಂದರ್ಭದಲ್ಲೂ ಸಹ ಮಧ್ಯವರ್ತಿಗಳನ್ನು ದೂರ ಇಟ್ಟು ವರ್ಷಕ್ಕೆ ಒಂದು ಬಾರಿ ಬರುವ ಗಣರಾಜ್ಯೋತ್ಸವ ಆಚರಣೆಯನ್ನು ಮಾಡಲು ಆಗದ ಇಂತಹ ಅವಿವೇಕಿ ಹಾಗು ಅಸಮರ್ಥ ಅಧಿಕಾರಿಯನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರದ ನಿಯಮಾನುಸಾರ ಪ್ರತಿ ಸರ್ಕಾರಿ ಕಚೇರಿಗಳ ಮೇಲೆ ಗಣರಾಜ್ಯೋತ್ಸವ ದಿನದೊಂದು ರಾಷ್ಟ್ರಧ್ವಜವನ್ನು ಹಾರಿಸುವುದು ಅಧಿಕಾರಿಗಳ ಕರ್ತವ್ಯ. ರಾಷ್ಟ್ರಧ್ವಜವನ್ನು ಹಾರಿಸುವ ಮೊದಲು ನಿಯಮಾನುಸಾರ ರಾಷ್ಟ್ರಧ್ವಜವನ್ನು ಮಡಿಕೆ ಮಾಡಿ ಕೆಳಭಾಗಕ್ಕೆ ಬೀಳದ ರೀತಿಯಲ್ಲಿ ದಾರದಿಂದ ಭದ್ರಪಡಿಸಿ ಕಂಬದ ಮೇಲೆ ಏರಿಸಿದ ನಂತರ ಒಮ್ಮೆ ಎಲ್ಲಾ ಸರಿಯಾಗಿ ಇದೆಯೋ ಇಲ್ಲವೋ ಎಂಬುದನ್ನು ಸಂಬಂಧಪಟ್ಟ ಅಧಿಕಾರಿ ಪರಿಶೀಲಿಸಿದ ನಂತರ ಕಚೇರಿಯ ಮುಖ್ಯಸ್ಥರು ಹಗ್ಗವನ್ನು ಎಳೆಯುವ ಮೂಲಕ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡುವುದು ನಿಯಮ. ಆದರೆ ಕುಣಿಗಲ್ ಸಬ್ ರಿಜಿಸ್ಟರ್ ಕಚೇರಿ ಮೇಲ್ಬಾಗದಲ್ಲಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಚೇರಿಯ ಮಹಿಳಾ ಸಬ್ ರಿಜಿಸ್ಟರ್ ಬೇಕಾಬಿಟ್ಟಿ ಮನಸ್ಸು ಇಚ್ಛೆ ರಾಷ್ಟ್ರಧ್ವಜವನ್ನು ಕಚೇರಿಗೆ ಸಂಬಂಧಪಡದ ವ್ಯಕ್ತಿಯಿಂದ ರಾಷ್ಟ್ರಧ್ವಜವನ್ನು ಕೆಳಭಾಗದಿಂದ ದಾರಕ್ಕೆ ತೂರಿಸಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗೆ ರಾಷ್ಟ್ರಧ್ವಜ ಹಾರಿಸುವ ವಿಧಾನ ಗೊತ್ತಿಲ್ಲದಿದ್ದರೆ ಗೊತ್ತಿರುವವರನ್ನು ಕರೆಸಿ ನಿಯಮಾನುಸಾರ ರಾಷ್ಟ್ರಧ್ವಜವನ್ನು ಹಾರಿಸಬಹುದಿತ್ತು? ಆದರೆ ಇದು ರಾಷ್ಟ್ರಧ್ವಜದ ಮೇಲೆ ಸಬ್ ರಿಜಿಸ್ಟರ್ ತೋರಿಸುವ ನಿರ್ಲಕ್ಷ ಎಂದು ಎದ್ದು ಕಾಣುತ್ತಿದೆ. ತಕ್ಷಣವೇ ಈ ಬೇಜವಾಬ್ದಾರಿ ನಿರ್ಲಕ್ಷ ಸಬ್ ರಿಜಿಸ್ಟರ್ ಅವರನ್ನು ಸೇವೆಯಿಂದ ಅಮಾನತು ಪಡಿಸಬೇಕೆಂದು ಕೆ ಆರ್ ಎಸ್ ಪಕ್ಷದ ಅಧ್ಯಕ್ಷ ನಾಗರಾಜು ಮತ್ತು ಪದಾಧಿಕಾರಿಗಳು ಸಾರ್ವಜನಿಕರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈಗಾಗಲೇ ಕುಣಿಗಲ್ ಸಬ್ ರಿಜಿಸ್ಟರ್ ಕಚೇರಿಯ ಮೇಲ್ಭಾಗದಲ್ಲಿ ಯಾವ ರೀತಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂಬ ವಿಡಿಯೋ ಕ್ಲಿಪಿಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.