ತಿಪಟೂರು : ಅಧಿಕಾರಿಗಳು ಚುನಾವಣಾ ಸಮಯವಾಗಿರುವುದರಿಂದ ನಾಗರಿಕರಿಗೆ ಅನಗತ್ಯವಾಗಿ ದಿನ ಮತ್ತು ಸಮಯ ವಿಳಂಬ ಮಾಡಬಾರದು ಸಮಸ್ಯೆಗೆ ಸ್ವೀಕೃತಿ ಪ್ರತಿ ನೀಡಬೇಕು ಗಾಜಿನ ಮನೆಯಲ್ಲಿ ಕುಳಿತಿದ್ದೇವೆ ಎಂಬುದನ್ನು ಅರಿತು ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ತಿಪಟೂರು ತಾಲ್ಲೂಕಿನಾದ್ಯಂತ ನಮ್ಮ ಕಚೇರಿಗೆ ಅಧಿಕ ದೂರಿನ ಅರ್ಜಿಗಳು ಬಂದಿವೆ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಲೋಕಾಯುಕ್ತ ಅಧೀಕ್ಷಕರಾದ ವಾಲಿಪಾಷ ಎಚ್ಚರಿಕೆ ನೀಡಿದರು.
ತಿಪಟೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿ ನೂರಾರು ಕಿ. ಮೀ. ದೂರದಿಂದ ಸಾರ್ವಜನಿಕರ ಸಮಸ್ಯೆ ಆಲಿಸಲು ಆಗಮಿಸಿದರೆ ಬರಿ ನಾಲ್ಕು ದೂರುಗಳು ಬಂದಿವೆ ನಮ್ಮ ಕಚೇರಿಗೆ ತಿಂಗಳಿಗೆ ನೂರಾರು ದೂರುಗಳು ಬರುತ್ತವೆ ಇಲ್ಲಿ ಯಾಕೆ ಬಂದಿಲ್ಲ ಮಾಹಿತಿ ಮತ್ತು ಪ್ರಚಾರದ ಕೊರತೆ ಕಾಣುತ್ತಿದೆ ಎಂದರು ಈ ಸಮಯದಲ್ಲಿ ನಗರಸಭೆ ಇ- ಖಾತ ವಿಚಾರ ವಿಚಾರಿಸಿದಾಗ ಪೌರಾಯುಕ್ತ ಉಮಾ ಕಾಂತ್ ವಿವರಣೆ ನೀಡಿ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡ ಲೇಔಟ್‌ಗಳ ನಿವೇಶನಗಳಿಗೆ ಖಾತೆ ಮಾಡಿಕೊಡುತ್ತಿದ್ದೇವೆ. ಆದೇಶ ಲೋಕಾಯುಕ್ತರದ್ದೇ ಆಗಿದೆ ಎಂದರು ನಗರದಾದ್ಯಂತ 6 ಸಾರ್ವಜನಿಕ ಶೌಚಾಲಯಗಳಿದ್ದು ನಿರ್ವಹಣೆಗೆ ಟೆಂಡರ್ ಕರೆಯುತ್ತಿದ್ದೇವೆ ಯಾರೂ ಬರುತ್ತಿಲ್ಲ ಎಂದಾಗ ಲೋಕಾಯುಕ್ತರು ಟೆಂಡರ್ ಗೆ ಯಾರೂ ಬರೆದಿದ್ದಾಗ ನಿಮ್ಮ ಸಿಬ್ಬಂದಿಯೇ ಸ್ವಚ್ಛಗೊಳಿಸಬೇಕಾಗುತ್ತದೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಎಚ್ಚರಿಸಿದರು, ಪೌರಾಯುಕ್ತರು ನಗರಸಭೆಯ ಅಧೀನದ 72 ಮಳಿಗೆಗಳ ಬಾಡಿಗೆ ವಸೂಲಿಯಿಂದ ನಗರ ಸಭೆಗೆ ಆದಾಯ ಬರುತ್ತಿದೆ ಎಂದರು
ಪಶು ಇಲಾಖೆ ಮುಖ್ಯ ವೈದ್ಯಾಧಿಕಾರಿ ನಂದೀಶ್ ಮಾತನಾಡಿ ತಾಲ್ಲೂಕಿನಾದ್ಯಂತ 60ಸಾವಿರಕ್ಕೂ ಅಧಿಕ ಜಾನುವಾರುಗಳಿದ್ದು 58 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಿದ್ದೇವೆ ತಾಲೂಕಿನಲ್ಲಿ ಎರಡು ಗೋಶಾಲೆಗಳಿದ್ದು ಪ್ರತಿ ಗೋವುಗಳಿಗೆ ದಿನಕ್ಕೆ ನಿರ್ವಹಣೆ ರೂಪದಲ್ಲಿ 17 ರೂಪಾಯಿ ಸಹಾಯಧನ ವಿತರಿಸುತಿದ್ದೇವೆ ಎಂದು ಮಾಹಿತಿ ನೀಡಿದರು
ತಾಲ್ಲೂಕು ಸರ್ವೆ ಅಧಿಕಾರಿ ತೋಂಟರಾಧ್ಯ ಮಾತನಾಡಿ ಇಲಾಖೆಯಲ್ಲಿ 21 ಸರ್ವೇ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ರೈತರಿಗೆ ಅನ್‌ಲೈನ್ ಮುಖಾಂತರ ವಿವರ ನೀಡುತ್ತೇವೆ ಎಂದಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಮಲಿಂಗರೆಡ್ಡಿ ಅನ್‌ಲೈನ್‌ಗೆ ನೀವು ಭರ್ತಿ ಮಾಡಿದರೆ ಅಪ್ಲೋಡ್ ಆಗಿ ಮಾಹಿತಿ ರವಾನೆ ಆಗುತ್ತದೆ ಎಲ್ಲಾ ತಪ್ಪುಗಳನ್ನು ಅನ್‌ಲೈನ್ ಮೇಲೆ ಹಾಕಬಾರದು ಸರಿಯಾದ ಮಾಹಿತಿ ರೈತರಿಗೆ ಇನ್ನೂ ಸಿಗುತ್ತಿಲ್ಲ ಬಹಳಷ್ಟು ದೂರಿನ ಅರ್ಜಿಗಳು ನಿಮ್ಮ ಇಲಾಖೆಯಲ್ಲಿದೆ ಸರಿಪಡಿಸಿಕೊಳ್ಳಿ ಎಂದು ಎಚ್ಚರಿಸಿದರು
ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ 41 ಸಾವಿರ ಸಸಿಗಳನ್ನು ವಿತರಣೆ ಮಾಡಿದ್ದು ಅರಣ್ಯಪಾಲಕರು ಕಾಡಿನ ವೀಕ್ಷಣೆ ಮಾಡಿ ಸಂರಕ್ಷಣೆಗೆ ಆದ್ಯತೆ ನೀಡಿದ್ದಾರೆ. ಕಾಡಿನ ಸಂಪತ್ತಾದ ಎರಡು ತಲೆ ಹಾವುವನ್ನು ಹಿಡಿದ ಅಪರಾಧಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ತಿಳಿಸಿದರು
ಸಾರ್ವಜನಿಕ ಆಸ್ಪತ್ರೆ ಮಾಹಿತಿ ನೀಡಿದ ಟಿಹೆಚ್‌ಒ ರವಿಕುಮಾರ್ ಆಕ್ಸಿಜನ್ ಕೊರತೆ ಇಲ್ಲ ಹಾಗೂ ಬೆಡ್ ನಿರ್ವಹಣೆ ರೋಗಿಗಳಿಗೆ ಪ್ರತಿದಿನ ಮೂರು ಸಮಯದಲ್ಲಿ ಊಟ ತಿಂಡಿ ನೀಡಲಾಗುತ್ತದೆ ಎಂದು ತಿಳಿಸಿದರು 108 ಸಮಸ್ಯೆ ಬಗ್ಗೆ ವಿಚಾರಿಸಿದಾಗ ನಮ್ಮ ಹಿಡಿತದಲ್ಲಿ ವಾಹನಗಳು ಬರುವುದಿಲ್ಲ ಜಿಲ್ಲೆಯ ಅಧಿಕಾರಿಗಳ ನಿರ್ವಹಣೆಯಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ ನಮಗೆ ಈ ವಿಚಾರವಾಗಿ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದರು.
ನಗರಸಭೆಯ ಕಸದ ವಾಹನ ಚಾಲಕರುಗಳು ಮತ್ತು ನೌಕರರು ನಾವು ವಾಸಿಸುವ ನೆಹರು ನಗರದಲ್ಲಿ ಹಿಂದುಳಿದ ಕೂಲಿ ಕಾರ್ಮಿಕರೇ ಹೆಚ್ಚು ವಾಸಿಸುತ್ತಿದ್ದು ಆಡುವಾಗಲೇ ಅಕ್ರಮ ಮಧ್ಯ ಮನೆಗಳಲ್ಲಿ ಮಾರಾಟ ಮಾಡುತ್ತಾರೆ ಸಂಬAಧಪಟ್ಟ ಇಲಾಖೆಗೆ ಮಾಹಿತಿ ನೀಡಿದರು ಕಣ್ಮುಚ್ಚಿ ಕುಳಿತಿದ್ದಾರೆ ನಮ್ಮ ಮಕ್ಕಳು ನಮಗೆ ದೂರು ಹೇಳುತ್ತವೆ ನಾವು ಏನು ಮಾಡಬೇಕು ಎಂದು ದೂರು ನೀಡಿದರು. ಲೋಕಾಯುಕ್ತರು ಸ್ಥಳಕ್ಕೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಕರೆಸಿ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದರು.
ಕುಂದು ಕೊರತೆ ಸಭೆಯಲ್ಲಿ ತಾಲ್ಲೂಕು ದಂಡಾಧಿಕಾರಿ ಪವನ್ ಕುಮಾರ್, ಹಾಗೂ ಇಲಾಖೆ ಅಧಿಕಾರಿಗಳು ಇದ್ದರು ಕೆಲ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು.