ಹುಲ್ಲೇಕೆರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಎಸ್.ಎಂ.ಶಶಿಧರ್ ಆಯ್ಕೆ
ತುರುವೇಕೆರೆ : ತಾಲೂಕಿನ ಹುಲ್ಲೇಕೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಸ್.ಎಂ. ಶಶಿಧರ್ ಅವಿರೋಧವಾಗಿ ಆಯ್ಕೆಯಾದರು.
ಹುಲ್ಲೇಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಶಿವಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. 16 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಎಸ್.ಎಂ.ಶಶಿಧರ್ ಹೊರೆತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಲಿಲ್ಲ. ಅಂತಿಮವಾಗಿ ಕಣದಲ್ಲಿ ಏಕೈಕರಾಗಿ ಉಳಿದ ಎಸ್.ಎಂ. ಶಶಿಧರ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಶಶಿಧರ್ ಮಾತನಾಡಿ ಅವಿರೋಧವಾಗಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಹ ಸದ್ಯರುಗಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತತೇನೆ. ಗ್ರಾ.ಪಂ. ವ್ಯಾಫ್ತಿಯ ಎಲ್ಲ ಗ್ರಾಮಗಳ ಸ್ವಚ್ಚತೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡುತ್ತೆನೆ.
ನೂತನ ಅಧ್ಯಕ್ಷರನ್ನು ಉಪಾದ್ಯಕ್ಷರಾದ ಅನಸೂಯ, ಸದಸ್ಯರಾದ ಕಿರಣ್, ರಾಜಶೇಖರಯ್ಯ, ಗಂಗಾಧರಸ್ವಾಮಿ, ರಾಜೇಶ್ವರಿ,ಶಂಕರಣ್ಣ,ಶಿವಣ್ಣ, ಸರಳಾರಾಜಶೇಖರ್, ಮುಖಂಡರಾದ ರಕ್ಷಿತ್,ಸಿದ್ದರಾಮಯ್ಯ,ಬಸವೇಶ್, ದುರ್ಗೇಶ, ಗೌರೀಶ್, ನಿಜಗುಣ, ರಮೇಶ್ ಎಸ್.ಎಂ., ಪಿ.ಡಿ.ಓ. ಶಿವರಾಜ್ ಮತ್ತಿತರರು ಅಭಿನಂದಿಸಿ ಶುಭಕೋರಿದರು.