ಕೊಬ್ಬರಿ ನೆಪೆಡ್ ತೆರೆಯದಿದ್ದರೆ ಹೆದ್ದಾರಿ ರಸ್ತೆ ಬಂದ್ : ಲೋಕೇಶ್ವರ್
ತಿಪಟೂರು : ಕೇಂದ್ರ ಸರ್ಕಾರ ನೆಫೆಡ್ ಕೇಂದ್ರ ತೆರೆಯಲು ಬೆಂಬಲ ಬೆಲೆ ಸೂಚಿಸಿ ಮೂರು ಹರಾಜು ಕಳೆದರೂ ನೆಫೆಡ್ ಕೇಂದ್ರ ತೆರೆದಿಲ್ಲ ಈ ವಿಚಾರವಾಗಿ ಇದೇ 25ನೇ ಬುಧವಾರದಂದು ಕೆ.ಬಿ. ಕ್ರಾಸ್ ಬಳಿ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಯಲಿದೆ ಎಂದು ತಿಪಟೂರು ಹೋರಾಟಗಾರ ಸಮಿತಿ ಅಧ್ಯಕ್ಷ ಲೋಕೇಶ್ವರ್ ತಿಳಿಸಿದರು
ನಗರದ ಕಲ್ಪತರು ಗ್ರಾಂಡ್ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ, ಉದ್ದೇಶಿಸಿ ಮಾತನಾಡಿ ಸ್ಥಳೀಯ ಶಾಸಕರು ನೆಫೆಡ್ ಕೇಂದ್ರ ತೆರೆಯುತ್ತೇವೆ ಎಂದು ಹೇಳುತ್ತಿದ್ದಾರೆ, ತಿಪಟೂರಿನ ಕೊಬ್ಬರಿ ಮಾರುಕಟ್ಟೆ ದಲ್ಲಾಳಿಗಳ ಹಿಡಿತದಲ್ಲಿದ್ದು ರವಾನಿದಾರರು ತೀರ್ಮಾನಿಸಿದಂತೆ ವಹಿವಾಟು ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೊಬ್ಬರಿಗೆ ವಿಶೇಷ ಬೇಡಿಕೆ ಮತ್ತು ಬೆಲೆಯಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಿದರು ಸಹ ರಾಜ್ಯ ಸರ್ಕಾರದ 3ಸಾವಿರ ಬೆಂಬಲ ಬೆಲೆಯೊಂದಿಗೆ ನೆಫೆಡ್ ಕೇಂದ್ರ ತೆರೆಯಬೇಕು ಜಿಲ್ಲೆಯ ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹಾಗೂ ತಿಪಟೂರಿನ ರೈತರೊಂದಿಗೆ ಕೆ.ಬಿ. ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ 206 ಮತ್ತು 74 ಹೆದ್ದಾರಿಗಳನ್ನು ಎರಡು ದಿನಗಳ ಕಾಲ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.