ಅತ್ಯಾದುನಿಕ ಮೇಘಾ ಡೇರಿ ಸ್ಥಾಪನೆಯತ್ತ ತುಮುಲ್ ದಾಪುಗಾಲು : ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ
ಹೈನುಗಾರರ ಹಿತ ಕಾಯಲು ತುಮುಲ್ ಬದ್ದ

ತುರುವೇಕೆರೆ : ಮೇಘಾ ಡೇರಿ ಸ್ಥಾಪಿಸುವ ನಿಟ್ಟಿನಲ್ಲಿ ದಾಪುಗಾಲಿರಿಸಿರುವ ತುಮುಲ್ ಈಗಾಗಲೇ ಸಿವಿಲ್ ಕಾಮಗಾರಿಗಳಿಗೆ ಚಾಲನೆಗೊಳಿಸಿ ಅಭಿವೃದ್ದಿಯತ್ತ ದಾಪುಗಾಲಿರಿಸಿದೆ ಎಂದು ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.
ಪಟ್ಟಣದಲ್ಲಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ತುಮುಲ್ ರೈತ ಕಲ್ಯಾಣ ಟ್ರಸ್ಟ್ ಹಾಗು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ, ಸಿದ್ದಗಂಗಾ ಆಸ್ಪತ್ರೆ, ನಾರಾಯಣ ಹೃದಯಾಲಯ, ದಂತ ವೈದ್ಯಕೀಯ ಆಸ್ಪತ್ರೆ ಸೇರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತ ದಾನ ಶಿಬಿರವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ತುಮುಲ್ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ತುಮುಲ್ ಹಾಲು ಮಾರಾಟ ಮಾಡಲಾಗುತ್ತಿದೆ. ಹೈನುಗಾರರಿಗೆ ಸ್ಪರ್ಧಾತ್ಮಕ ದರ ನೀಡುವಲ್ಲಿ ತುಮುಲ್ ರಾಜ್ಯದಲ್ಲಿ ಎರಡನೇಯ ಸ್ಥಾನದಲ್ಲಿದೆ. ರೈತ ಕಲ್ಯಾಣ ಟ್ರಸ್ಟ್ ಸ್ಥಾಪಿಸುವ ಮೂಲಕ ತುಮುಲ್ ಹೈನುಗಾರರಿಗೆ ಪೂರಕ ಯೋಜನೆಗಳನ್ನು ಅನುಷ್ಟಾನಗೊಳಿಸಿದೆಎಂದರು.
ಶಾಸಕ ಮಸಾಲಜಯರಾಮ್ ಮಾತನಾಡಿ ನನ್ನ ರಾಜಕೀಯ ಜೀವನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷನಾಗುವ ಮೂಲಕ ಆರಂಭವಾಯಿತು. ಗ್ರಾಮೀಣ ಜನತೆಯ ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆ ಸಹಕಾರಿಯಾಗಿದೆ. ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮತ್ತು ತಂಡ ಹೈನುಗಾರರ ಹಾಗೂ ರಾಸುಗಳ ಹಿತ ಕಾಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗ್ರಾಮೀಣ ಪ್ರದೇಶದ ರೈತಾಫಿಗಳು ಬದುಕಿನ ಒತ್ತಡದ ನಡುವೆ ತಮ್ಮ ಆರೋಗ್ಯ ರಕ್ಷಣೆಯನ್ನು ಮರೆತಿದ್ದಾರೆ. ಹೈನುಗಾರರ ಆರೋಗ್ಯ ಪರ ಕಾಳಜಿಯಿಂದ ತುಮುಲ್ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾದರಿಯಾದುದು, ಹೈನುಗಾರರಿಗಾಗಿ ತುಮುಲ್ ಮತ್ತಷ್ಟು ರೈತ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವಂತಾಗಲಿ ಎಂದು ಆಶಿಸಿದರು.
ಮಾಜಿ ಎಂ.ಎಲ್.ಸಿ. ಬೆಮೆಲ್ ಕಾಂತರಾಜ್ ಮಾತನಾಡಿ ತುಮುಲ್ ಆಯೋಜಿಸಿರುವ ಆರೋಗ್ಯ ತಪಾಸಣಾ ಕಾರ್ಯಕ್ರಮ ರೈತರ ಆರೋಗ್ಯ ಕಾಪಾಡಲು ಸಹಕಾರಿಯಾದುದು, ಸಿ.ವಿ. ಮಹಾಲಿಂಗಯ್ಯ ತುಮುಲ್ ಅಧ್ಯಕ್ಷರಾಗಿ ತಮ್ಮ ತಂಡದೊಂದಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಯಶಸ್ವಿ ಅಧ್ಯಕ್ಷರಾಗಿ 4 ವರ್ಷ ಪೋರೈಸಿರುವ ಸಿ.ವಿ, ಮಹಾಲಿಂಗಯ್ಯನವರು ನಿರ್ದೇಶಕರೆಲ್ಲರ ಸಹಕಾರಿದಂದ 5 ವರ್ಷ ಪೋರೈಸಲಿ ಎಂದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕೆರೆಗೋಡಿ ಮಠದ ಗುರುಪರದೇಶಿಕೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಎಂ.ಡಿ. ಲಕ್ಷಿö್ಮನಾರಾಯಣ, ಎಸ್.ರುದ್ರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ.ತುಮುಲ್ ನಿರ್ದೇಶಕರಾದ ಹಳೇಮನೆ ಶಿವನಂಜಪ್ಪ, ಎಸ್.ಆರ್.ಗೌಡ, ಎಂ.ಕೆ.ಪ್ರಕಾಶ್, ಡಿ.ಕೃಷ್ಣಕುಮಾರ್, ಚನ್ನಮಲ್ಲಪ್ಪ, ಎಸ್.ವಿಜಯಕುಮಾರ್, ವ್ಯವಸ್ಥಾಪಕ ನಿರ್ದೇಶಕ ಡಾ. ಡಿ.ಪಿ.ಸುರೇಶ್, ವಿಸûರಣಾದಿಕಾರಿಗಳು ಮತ್ತು ಕೆ.ಎಂ.ಎಫ್. ಹಾಗೂ ಆಸ್ಪತ್ರೆಯ ತಜ್ಞ ವೈದ್ಯಾದಿಕಾರಿಗಳು, ಆಡಳಿತಾಧಿಕಾರಿಗಳು ಇದ್ದರು.