87 ಮಂದಿಗೆ ಬಗರ್ ಹುಕುಂ ಸಾಗುವಳಿ ಪತ್ರ ವಿತರಣೆ : ಶಾಸಕ ಎಂ.ವಿ.ವೀರಭದ್ರಯ್ಯ
![](https://suvarnapragathi.in/wp-content/uploads/2023/01/09-Madhugiri-02-780x323.jpeg)
ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 87 ಮಂದಿಗೆ 200 ಎಕರೆ ಜಮೀನಿನ. ಬಗರ್ ಹುಕುಂ ಸಾಗುವಳಿ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಎಂವಿ ವೀರಭದ್ರಯ್ಯ ತಿಳಿಸಿದ್ದಾರೆ
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಸಾಗುವಳಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ರೈತರಿಗೆ ಭದ್ರತೆ ಒದಗಿಸಬೇಕಾಗಿದೆ ಜಮೀನು ಭದ್ರತೆಯನ್ನು ತಂದುಕೊಡುತ್ತದೆ ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಬಗರ್ ಹುಕ್ಕುಂ ಪತ್ರಗಳನ್ನು ವಿತರಿಸಲಾಗಿದೆ ಬಗರ್ ಹುಕ್ಕುಂ ಕಮಿಟಿ ರಚನೆಯಲ್ಲಿ. ಭಾಜಪ ಸರ್ಕಾರ ವಿಳಂಬ ಮಾಡಿ ನಂತರ ಅಸಹಕಾರ ಭಾವನೆಯಿಂದ ಕಮಿಟಿ ರಚಿಸಿದ್ದು ಮುಂದಿನ ದಿನಗಳಲ್ಲಿ ನೂರಕ್ಕೂ ಹೆಚ್ಚು ರೈತರಿಗೆ ಸಾಗುವಳಿ ಪತ್ರ ವಿತರಿಸಲಾಗುತ್ತದೆ ಮಧುಗಿರಿ ಉಪವಿಭಾಗ ಹಳೆಯ ಉಪವಿಭಾಗವಾಗಿದ್ದು ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ ಇದೇ ಅಲ್ಲದೆ ವಿಭಾಗದ ನಾಲ್ಕು ತಾಲೂಕುಗಳು ಬರಗಾಲ ಪೀಡಿತ ಮತ್ತು ಹಿಂದುಳಿದ ತಾಲೂಕುಗಳಾಗಿದ್ದು ಈ ತಾಲೂಕುಗಳ ಅಭಿವೃದ್ಧಿಗಾಗಿ ಜಿಲ್ಲಾ ಕೇಂದ್ರವಾಗುವುದು ಅವಶ್ಯಕತೆ ಇದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಜಿಲ್ಲಾ ಕೇಂದ್ರ ಮಾಡುವುದು ಶತಸಿದ್ಧ ಎಂದರು
ಈ ಸಂಧರ್ಬದಲ್ಲಿ ಪುರಸಭಾ ಸದಸ್ಯರುಗಳಾದ ಎಂ.ಆರ್.ಜಗನ್ನಾಥ್ ,ಎಂಎಲ್ ಗಂಗರಾಜು, ನಾರಾಯಣ್, ತಹಶಿಲ್ದಾರ್ ಸುರೇಶ ಆಚಾರ್ .ಮುಖಂಡರುಗಳಾದ ತುಂಗೋಟಿ ರಾಮಣ್ಣ ,ಪುರಸಭಾ ಅಧ್ಯಕ್ಷ ತಿಮ್ಮರಾಜು, ನಿಶ್ಚಿತ್ ಗೌಡ .ಗುಟ್ಟೆ ರವಿ. ವೆಂಕಟಪುರ ಗೋವಿಂದರಾಜು. ಮತ್ತಿತರರು ಹಾಜರಿದ್ದರು.