ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 2,19,836 ಮತದಾರರಿದ್ದಾರೆ : ತಹಶೀಲ್ದಾರ್ ಮಮತ
ಮಿನಿ ವಿಧಾನಸೌಧದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ
ಶಿರಾ : ಶಿರಾ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ, ಮತದಾರರ ವಿವರಗಳನ್ನು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಪ್ರಚುರಪಡಿಸಲಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,19,836 ಮತದಾರರಿದ್ದಾರೆ. ಪುರುಷ ಮತದಾರರು 111189, ಮಹಿಳೆ ಮತದಾರರು 108637, ಇತರೆ 10 ಹಾಗೂ ಸೇವಾ ಮತದಾರರು ಒಟ್ಟು 45 ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿದ್ದಾರೆ ಎಂದು ತಹಶೀಲ್ದಾರ್ ಮಮತ ತಿಳಿಸಿದ್ದಾರೆ.
ನಗರದ ಮಿನಿ ವಿಧಾನಸೌಧದಲ್ಲಿ ಶಿರಾ ಕ್ಷೇತ್ರದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ 136-ಶಿರಾ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ವಿವರ ಪ್ರಚುರಪಡಿಸಿದರು. 2022 ನವೆಂಬರ್ 9ರ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 214577 ಮತದಾರರಿದ್ದು, ಪುರುಷರು 108917, ಮಹಿಳೆಯರು 105652, ಇತರೆ 8 ಮತದಾರರಿದ್ದರು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪರಿಷ್ಕರಣೆಯ ನಂತರ ಹೊಸದಾಗಿ ಒಟ್ಟು 5259 ಮತದಾರರು ಅಂತಿಮ ಮತದಾರರ ಪಟ್ಟಿಗೆ ನೋಂದಣಿಯಾಗಿರುತ್ತಾರೆ. ಸದರಿ ಮತದಾರರ ಪಟ್ಟಿಯಲ್ಲಿ 3814 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 2023ರ ಜನವರಿ 5ರಂದು ಪ್ರಚುರಪಡಿಸಲಾದ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇರುವ ಬಗ್ಗೆ ಸಂಬಂಧಪಟ್ಟ ಮತಗಟ್ಟೆ ಹಂತದ ಅಧಿಕಾರಿಗಳ ಹತ್ತಿರ ಅಥವಾ ಆನ್‌ಲೈನ್ Voter Helpline Appನ ಮೂಲಕ ಹಾಗೂ ceo.karnataka ವೆಬ್‌ಸೈಟ್ ಮುಖಾಂತರ ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.