ಸದಾಶಿವ ಆಯೋಗ ವರದಿ ಜಾರಿ ವಿರುದ್ಧ ಜ.10 ರಂದು ಬೃಹತ್ ಪ್ರತಿಭಟನೆ
ತುಮಕೂರು : ನ್ಯಾಯಮೂರ್ತಿ ಸದಾಶಿವ ಅವರು ರಚಿಸಿರುವ ಆಯೋಗವು ಅವೈಜ್ಞಾನಿಕವಾಗಿದ್ದು ಈ ವರದಿಯ ವಿರುದ್ಧ ಬೆಂಗಳೂರಿನಲ್ಲಿ ಜನವರಿ 10 ರಂದು ರಾಜ್ಯದ ಎಲ್ಲಾ ಕೊರಮ ಕೊರಚ ಭೋವಿ ಲಂಬಾಣಿ ಸಮುದಾಯದವರಿಂದ ಸದಾಶಿವ ಆಯೋಗ ವರದಿ ಜಾರಿಗೆ ವಿರುದ್ಧವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೊಲಂಬೋ ಸಮುದಾಯದ ಮುಖಂಡರುಗಳು ತುಮಕೂರಿನಲ್ಲಿ ತಿಳಿಸಿದರು.
ನಗರದ ಗಾರ್ಡನ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ವಿರುದ್ಧವಾಗಿ ಪೂರ್ವಭಾವಿ ಸಭೆ ನಡೆಸಿ ಅಭಿಪ್ರಾಯಗಳನ್ನು ಚರ್ಚಿಸಿ ಪ್ರತಿಭಟನೆಗೆ ತಯಾರಿ ನಡೆಸಿದರು.
ಬಂಜಾರ ಸಮುದಾಯದ ರಾಜ್ಯದ್ಯಕ್ಷ ತಿಪ್ಪಸ್ವಾಮಿ ನಾಯಕ್ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸಮುದಾಯದ ಮುಖಂಡ ಉಮೇಶ ಅವರುಗಳು ಮಾತನಾಡಿ ನ್ಯಾಯಮೂರ್ತಿ ಸದಾಶಿವ ಅವರು ರಚಿಸಿರುವ ಆಯೋಗವು ಅವೈಜ್ಞಾನಿಕವಾಗಿದ್ದು ಬಿಜೆಪಿ ಸರ್ಕಾರ ಇದನ್ನ ಜಾರಿ ಮಾಡಲು ಉನ್ನಾರ ನಡೆಸುತ್ತಿದ್ದು ಹಿನ್ನೆಲೆಯಲ್ಲಿ ನಾವು ಇದನ್ನ ಜಾರಿಗೊಳಿಸಲು ಬಿಡುವುದಿಲ್ಲ ವೆಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅಖಿಲ ಭಾರತ ಬಂಜಾರ ಸೇವಾ ಸಮಾಜದ ಅಧ್ಯಕ್ಷ ಧೇನಾ ನಾಯಕ್ ಪ್ರತಿಕ್ರಿಯಿಸಿ ಮಾತನಾಡಿ ಬಿಜೆಪಿ ಸರ್ಕಾರ ಬಲವಂತವಾಗಿ ಸದಾಶಿವ ಆಯೋಗವನ್ನು ಜಾರಿ ಮಾಡಲು ಹೊರಟರೆ ಕೇಂದ್ರ ಸರ್ಕಾರಕ್ಕೆ ನಮ್ಮ ಸಮುದಾಯದ ಬಂಧುಗಳು ರಕ್ತದಲ್ಲಿ ಪತ್ರ ಬರೆದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಲಾಗುವುದು. ಕೊರಮ ಕೊರಚ ಲಂಬಾಣಿ ಬೋವಿ ಸಮುದಾಯದ ಮುಖಂಡರು ಜನವರಿ 10ರಂದು ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪ್ರತಿ ಜಿಲ್ಲೆಯಿಂದಲೂ ಸಹಸ್ರಾರು ಜನರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸದಾಶಿವ ಆಯೋಗ ವರದಿಯು ಅವೈಜ್ಞಾನಿಕವಾಗಿದ್ದು ಹಾಗೂ ಹಾಸ್ಯಸ್ಪದವಾಗಿದ್ದು ಈ ಪ್ರತಿಭಟನೆಯ ನೇತೃತ್ವವನ್ನು ಇಮ್ಮಡಿ ಪುಲಕೇಶಿ ಸ್ವಾಮೀಜಿ, ಸಂತ ಸೇವಾಲಾಲ್ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಆಯೋಗ ವರದಿ ಜಾರಿ ಮಾಡಲು ನಾವು ಬಿಡುವುದಿಲ್ಲ ಇಲ್ಲವಾದಲ್ಲಿ ಒಂದು ವೇಳೆ ವರದಿ ಜಾರಿಯಾದರೆ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ವರದಿಯನ್ನು ಜಾರಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಬಂಜಾರ ಸಮುದಾಯದ ಮುಖಂಡ ವಾಸುದೇವ್, ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಕೋರಮ ಸಮುದಾಯದ ಮುಖಂಡ ಲೋಕೇಶ್ ಸ್ವಾಮಿ, ದಿನಾ ನಾಯ್ಕ್, ಜೀರಾ ನಾಯಕ್, ಜರ ನಾಯಕ್ ಸೇರಿದಂತೆ ಕೊರಮ ಕೊರಚ ಭೋವಿ ಲಂಬಾಣಿ ಸಮುದಾಯದ ಜಿಲ್ಲಾ ತಾಲೂಕು ಮಟ್ಟದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.