ತುಮಕೂರು ಗ್ರಾಮಾಂತರರಾಜಕೀಯರಾಜ್ಯ

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಭರವಸೆ ಈಡೇರಿಕೆ : 50 ಸಾವಿರ ಮತಗಳ ಅಂತರದಿಂದ ಗೌರಿಶಂಕರ್ ಗೆಲುವು : ಹೆಚ್.ಡಿ.ಕುಮಾರಸ್ವಾಮಿ

ಪಂಚರತ್ನ ಯಾತ್ರೆ ಹೆಬ್ಬೂರಿನಲ್ಲಿ ಕುಮಾರಣ್ಣನಿಗೆ ಅದ್ಧೂರಿ ಸ್ವಾಗತ

ತುಮಕೂರು : ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದ್ದು,ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಪ್ರಾರಂಭಗೊಂಡ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ,ರಾಜ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ಜೆಡಿಎಸ್ ಈ ಯಾತ್ರೆಯನ್ನು ಆರಂಭಿಲಾಗಿದೆ ಎಂದರು.
ನಮ್ಮ ರಾಜ್ಯದಲ್ಲಿ ಶೇ.57ರಷ್ಟು ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗಿಲ್ಲವೆಂದು ಕೇಂದ್ರ ಸರಕಾರದ ವರದಿ ಹೇಳಿದೆ. ಸರಕಾರಿ ಶಾಲೆಗಳಲ್ಲಿ ಇಂತಹ ಪರಿಸ್ಥಿತಿಯಲ್ಲಿ ಎಂತಹ ಶಿಕ್ಷಣ ದೊರೆಯುತ್ತಿದೆ ಎನ್ನುವುದನ್ನು ಜನರು ಅರಿಯಬೇಕಿದೆ, 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಒಂದೇ ವರ್ಷದಲ್ಲಿ 170 ಕಾಲೇಜು ಪ್ರಾರಂಭಿಸಿದ್ದೆ,1400 ಪ್ರೌಢಶಾಲೆ, 400 ಜೂನಿಯರ್ ಕಾಲೇಜು ತೆರೆದಿದ್ದೆ.ಒಂದು ಕಾಲೇಜಿಗೆ ತಲಾ 2 ಕೋಟಿ ಅನುದಾನ ಕೊಟ್ಟಿದ್ದೆ.ಆನಂತರದಲ್ಲಿ ಬಂದ ಸರಕಾರಗಳು ಅದನ್ನು ಮುಂದುವರೆಸದೆ ನಮ್ಮ ಯುವಜನತೆಗೆ ಗುಣಮಟ್ಟದ ಶಿಕ್ಷಣ ದೊರೆಯದಂತೆ ಮಾಡಿವೆ ಎಂದರು.

ಸರಕಾರಿ ಶಾಲೆಗಳನ್ನು ಬ್ರೀಷರ ಕಾಲದಿಂದ ಕಟ್ಟಿದ್ದಾರೆ. ಶಾಲೆಗಳ ಛಾವಣಿ, ಸೋರುತ್ತಿವೆ,. ಶೌಚಾಲಯ, ಶಿಕ್ಷಕರ ಕೊರತೆ. ಇದೆ. ಮಕ್ಕಳ ಶಿಕ್ಷಣವನ್ನು ಒಳ್ಳೆ ಶಿಕ್ಷಣ ಪಡೆಯಲು ಖಾಸಗೀ ಶಾಲೆಗಳಿಗೆ ಸೇರಿಸುತ್ತಿದ್ದಾರೆ.ಸಾಲ ಮಾಡುತ್ತಿದ್ದಾರೆ. ಉತ್ತಮ ಆರೋಗ್ಯ ಸೇವೆ ಪಡೆಯಲು ಹಣ ಖರ್ಚು ಮಾಡಬೇಕಾದ ಸ್ಥಿತಿ ಇದೆ ರಾಜ್ಯದ ಜನಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪಂಚರತ್ನ ಯೋಜನೆಯನ್ನು ರೂಪಿಸಲಾಗಿದೆ.ಮಾ.20ರವರೆಗೆ ಉತ್ತರ ಕರ್ನಾಟಕದ ವರೆಗೆ ಪ್ರವಾಸ ಮಾಡಲಿದ್ದೇನೆ.ಯಾವುದೇ ಕಾರಣಕ್ಕೂ ಜೆಡಿಎಸ್,ಕಾಂಗ್ರೆಸ್-ಬಿಜೆಪಿ ಜೊತೆ ಸೇರಿ ಸರಕಾರವನ್ನು ರಚಿಸುವುದಿಲ್ಲ, 2023ರಲ್ಲಿ ಜನರ ಆರ್ಶೀವಾದದಿಂದ ಜನತಾ ಸರಕಾರವನ್ನು ರಚನೆ ಮಾಡುವ ಮೂಲಕ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ನೀಡಿರುವ ಭರವಸೆಯನ್ನು ಈಡೇರಿಸುತ್ತೇನೆ ಎಂದು ಹೇಳಿದರು.
ಪ್ರತಿಭೆ ಇದ್ದರೂ ಗ್ರಾಮೀಣ ಮಕ್ಕಳಿಗೆ ಉದ್ಯೋಗ ದೊರಕುತ್ತಿಲ್ಲ, ನಾಡಿನ ಬಡ, ಗ್ರಾಮೀಣ ವಿದ್ಯಾರ್ಥಿಗಳ ಶೇಯೋಭಿವೃದ್ಧಿಗೆ ಪಂಚರತ್ನ ಯೋಜನೆ ಜಾರಿಗೆ, ಯಾದಗಿರಿಯಿಂದ ಚಾಮರಾಜನಗರದವರೆಗೆ ಜನರು ಕಷ್ಟಹೇಳುತ್ತಾರೆ, ಬೇರೆ ಮುಖ್ಯಮಂತ್ರಿಗಳ ಬಳಿಗೆ ಹೋಗುವುದಿಲ್ಲ, ಅವರ್ಯಾರು ಸೇರಿಸುವುದಿಲ್ಲ ಜನರ ಕಷ್ಟಗಳನ್ನು ಅರಿತು ಜನರ ಬಳಿಗೆ ಬಂದಿದ್ದೇನೆ ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು.

ಗೌರಿಶಂಕರ್ 50 ಸಾವಿರ ಮತಗಳ ಅಂತರದಿಂದ ಗೆಲುವು
ಗ್ರಾಮಾಂತರ ಶಾಸಕ ಗೌರಿಶಂಕರ್,ನಿಮ್ಮ ಮನೆಯ ಹುಡುಗ,ನನ್ನ ತಮ್ಮ,ಅವರ ತಂದೆಯ ಕಾಲದಿಂದಲೂ ನಮ್ಮ ಕುಟುಂಬದೊಂದಿಗೆ ಬೆಳೆದಿರುವ ಹೃದಯವಂತ,ಬಡ ಕುಟುಂಬಗಳ ಬಗ್ಗೆ ಕಾಳಜಿ ಇರುವ ಗೌರಿಶಂಕರ್ ಕೋವಿಡ್ ಸಂಕಷ್ಟದಲ್ಲಿ ಒಂದೂವರೆ ಲಕ್ಷ ಕುಟುಂಬಗಳಿಗೆ ಕೋಟ್ಯಂತರ ರೂ ಖರ್ಚು ಮಾಡಿ ನೆರವು ನೀಡಿದ್ದಾರೆ, ಇಂತಹ ಹೃದಯವಂತನನ್ನು 50 ಸಾವಿರ ಮತಗಳ ಅಂತರದಿಂದ ಮತ್ತೆ ಆಯ್ಕೆ ಮಾಡಬೇಕು ಎಂದು ಗ್ರಾಮಾಂತರ ಮತದಾರರಲ್ಲಿ ವಿನಂತಿಸಿಕೊಂಡರು.
ಯಾತ್ರೆಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್,ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಪಾಲಿಕೆ ಸದಸ್ಯರಾದ ಹೆಚ್.ಡಿ.ಕೆ.ಮಂಜುನಾಥ್,ಧರಣೇಂದ್ರಕುಮಾರ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker