ಮಧುಗಿರಿ
ಈಜಲು ಹೋಗಿದ್ದ ಇಬ್ಬರು ಬಾಲಕಿಯರು ನೀರು ಪಾಲು
ಮಧುಗಿರಿ : ಜೀವನದಿ ಜಯಮಂಗಲಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕಿಯರು ನೀರು ಪಾಲಾಗಿರುವ ಘಟನೆ ಇಂದು ನಡೆದಿದೆ.
ತಾಲ್ಲೂಕಿನ ವೀರಾಪುರದ ಗ್ರಾಮದ ಬಳಿ ಹರಿಯುವ ಜಯಮಂಗಲಿ ನದಿಗೆ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು.
ಚೆಕ್ ಡ್ಯಾಂನಲ್ಲಿದ್ದ ನೀರಿನಲ್ಲಿ ಈಜಲು ಹೋಗಿದ್ದ ಐವರು ಬಾಲಕರಲ್ಲಿ ಮೂವರನ್ನು ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ರಕ್ಷಿಸಿದ್ದಾರೆ.
ಆದರೆ ಉಳಿದ ಇಬ್ಬರು ಈಜು ಬಾರದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರನ್ನು 8 ವರ್ಷದ ಪ್ರಿಯಾಂಕಾ, 9 ವರ್ಷದ ಬಿಂದು ಎಂದು ಗುರುತಿಸಿದ್ದು ಇಬ್ಬರೂ ಸಹೋದರಿಯರಾಗಿದ್ದಾರೆ.
ಇವರು ಕೆಂಪಾಪುರ ಗ್ರಾಮದ ಬಾಬು ಹಾಗೂ ಲಕ್ಷ್ಮೀನಾರಾಯಣ್ ಅವರ ಮಕ್ಕಳಾಗಿದ್ದು ,ಇಂದು ಮಧ್ಯಾಹ್ನ 3ಗಂಟೆಗೆ ಘಟನೆ ನಡೆದಿದೆ.
ಕೊಡಗೇನಹಳ್ಳಿ ಪೊಲೀಸ್ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.