ರಾಜ್ಯ
ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ : ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲನೆ
- ಹನೂರು : ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಸೋಮವಾರ ಮತದಾರರ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು.ಹನೂರು ತಾಲೂಕಿನ ಶಾಗ್ಯ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೂಡಿ ಭೇಟಿ ನೀಡಿದ ಜಿಲ್ಲಾಧಿಕಾರಿ ಡಿಎಸ್.ರಮೇಶ್ ಅವರು ಬಸ್ ನಿಲ್ಧಾಣ ಸೇರಿದಂತೆ ಮಠದ ಬೀದಿ ಹಾಗೂ ವಿವಿಧ ಬಡಾವಣೆಗಳ ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಮಾಹಿತಿ ಪಡೆದರು. ಅಲ್ಲದೆ ಗ್ರಾಮದಲ್ಲಿ ಮೃತಪಟ್ಟಿರುವವರ ಹೆಸರು ಹೇಳಿ ಇವರು ಮೃತಹೊಂದಿದ್ದಾರೆಯೇ? ಅಥವಾ ಬದುಕಿದ್ದಾರಯೇ, ಒಂದು ವೇಳೆ ಮತದಾರರು ಇದ್ದರು ಸಹ ಕೈಬಿಟ್ಟುಹೋಗಿದ್ದೇಯೇ ಎಂದು ಪ್ರಶ್ನಿಸಿ ಮತದಾರರಿಂದ ಖಚಿತ ಮಾಹಿತಿಯನ್ನು ಪಡೆದುಕೊಂಡು ದೃಢಪಡಿಸಿಕೊಂಡರು ಹನೂರು ಪಟ್ಟಣದಿಂದ ಶಾಗ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ. ಕೆಲವು ಬಡಾವಣೆಗಳಿಗೆ ಚರಂಡಿ ಅಗತ್ಯವಾಗಿದೆ ಗ್ರಾಮಗಳ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಅಲ್ಲದೆ ಸಕಾಲದಲ್ಲಿ ಜನರ ಸಮಸ್ಯೆ ಬಗರಹರಿಸುವಂತೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಮೌಖಿಕವಾಗಿ ಮನವಿ ಮಾಡಿದರು.ಮಳೆಹನಿಯನ್ನು ಲೆಕ್ಕಿಸದ ಡಿಸಿ ರಮೇಶ್ ಅವರು ಬಂಡಳ್ಳಿ, ಮಣಗಳ್ಳಿ, ನಾಗನತ್ತ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲನೆ ನಡೆಸಿದರು.ಕೊಳ್ಳೇಗಾಲ ಉಪವಿಭಾಧಿಕಾರಿ ಗೀತಾಹುಡೇದಾ, ಹನೂರು ತಹಸೀಲ್ಧಾರ್ ಆನಂದಯ್ಯ, ಪಿಡಿಒ ರಾಮು, ರಾಜಸ್ವನಿರೀಕ್ಷ ಮಹದೇವಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಕುಮಾರ್, ಶಿಕ್ಷಕ ಪುಟ್ಟಸ್ವಾಮಿ, ಬಿಎಲ್‌ಒ ಹಾಗೂ ಮತ್ತಿತರರು ಇದ್ದರು
ವರದಿ: ಚೇತನ್ ಕುಮಾರ್ ಎಲ್