ತುಮಕೂರು
ಒನಕೆ ಓಬವ್ವನ ಹೆಸರಲ್ಲಿ ವಸತಿ ಶಾಲೆ ಪ್ರಾರಂಭ ಮಾಡಲು ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಪಿ.ಚಂದ್ರಪ್ಪ ಆಗ್ರಹ
ನಾಳೆ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವ
ತುಮಕೂರು : ಚಿತ್ರದುರ್ಗದಲ್ಲಿ ನಾಳೆ ರಾಜ್ಯ ಮಟ್ಟದ ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವವನ್ನು ಸರಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ. ಓಬವ್ವನ ಸಮಯ ಪ್ರಜ್ಞೆ ರಾಜ ನಿಷ್ಠೆ, ಧೈರ್ಯ, ಸಾಹಸದಿಂದ ಯಾವುದೇ ಶಸ್ತ್ರಾಸ್ತ್ರ ತರಬೇತಿ ಇಲ್ಲದೆ ಏಕಾಂಗಿಯಾಗಿ ಮನೆಯಲ್ಲಿ ಬಳಸುವ ಒನಕೆಯಿಂದ ಹೈದರಾಲಿಯ ಶತ್ರುಗಳನ್ನು ಸದೆ ಬಡಿದು, ಮದಕರಿನಾಯಕರ ಕೋಟೆ ರಕ್ಷಿಸಿದ ದಿಟ್ಟ ಛಲವಿರುವ ಛಲವಾದಿ ವೀರ ಮಹಿಳೆ ಒನಕೆ ಓಬವ್ವ ಎಂದು ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ ತಿಳಿಸಿದ್ದಾರೆ.
ಹೆಣ್ಣು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇವರ ಸ್ಮರಣಾರ್ಥವಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ಮಾದರಿಯಂತೆ ವೀರ ವನಿತೆ ಒನಕೆ ಓವಬ್ಬ ಹೆಣ್ಣು ಮಕ್ಕಳ ವಸತಿ ಶಾಲೆಯನ್ನು ಪ್ರಾರಂಬಿಸಲು ಮುಂಬರುವ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ, ಚಿತ್ರದುರ್ಗ, ಹಾವೇರಿ ಮತ್ತು ತುಮಕೂರು ಜಿಲ್ಲೆಗೆ ವಸತಿ ಶಾಲೆ ಮಂಜೂರು ಮಾಡಲು ಹಾಗೂ ಓಬವ್ವನ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ದಲಿತ ಛಲವಾದಿ ಮಹಾಸಭಾದ ಅಧ್ಯಕ್ಷರಾದ ಡಾ.ಪಿ.ಚಂದ್ರಪ್ಪ ಹಾಗೂ ಸಂಘದ ಗೌ.ಅ. ನಂಜಯ್ಯ,ಕಾರ್ಯದರ್ಶಿ ರಾಜಯ್ಯ,ಖಜಾಂಚಿ ಸಿದ್ದನಂಜಯ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೇಶಕರಾದ ಆನಂದಮೂರ್ತಿ, ನಂಜುಂಡಯ್ಯ, ಹನುಮಂತರಾಯ, ಲಕ್ಷ್ಮೀನರಸಿಂಹಯ್ಯ, ಪುಟ್ಟಬೋರಯ್ಯ, ದೊಡ್ಡಸಿದ್ದಯ್ಯ, ಮಂಜುಳಾ,ಸದಸ್ಯರಾದ ಎಸ್. ರಾಜಣ್ಣ , ಶ್ರೀನಿವಾಸ್ ಇವರುಗಳು ಆಗ್ರಹಿಸಿದ್ದಾರೆ.