ವಕೀಲರ ರಕ್ಷಣಾ-2022 ಕಾಯಿದೆ ಜಾರಿಗೆ ತರಲು ಕೊರಟಗೆರೆ ವಕೀಲರ ಸಂಘ ಸರ್ಕಾರಕ್ಕೆ ಮನವಿ

ಕೊರಟಗೆರೆ : ವಕೀಲರ ಮೇಲೆ ದೌರ್ಜನ್ಯ ನೆಡೆಯುತ್ತಿದ್ದು, ಅದಕ್ಕಾಗಿ ಮುಂಬರುವ ಬೆಳಗಾವಿ ಚಳಿಗಾಲದ ಅಧೀವೇಶದಲ್ಲಿ ವಕೀಲರ ರಕ್ಷಣಾ-2022 ಕಾಯಿದೆಯನ್ನ ಜಾರಿಗೆತರುವಂತೆ ಕೊರಟಗೆರೆ ವಕೀಲರ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೊರಟಗೆರೆ ಪಟ್ಟಣದ ಸಿವಿಲ್ ನ್ಯಾಯಾಲಯದ ಕಚೇರಿಯಿಂದ ಮುಖ್ಯರಸ್ತೆಯ ಮೂಲಕ ಕಾಲ್ನಡಿಕೆಯಲ್ಲಿ ಕಂದಾಯ ಇಲಾಖೆಯ ಕಚೇರಿಗೆ ವಕೀಲರ ಸಂಘದ ಪದಾಧಿಕಾರಿಗಳು ಆಗಮಿಸಿ ತಹಶೀಲ್ದಾರ್ ಮೂಲಕ ಘನ ರಾಜ್ಯ ಸರಕಾರಕ್ಕೆ ವಕೀಲರ ರಕ್ಷಣಾ-2022 ಕಾಯಿದೆಯನ್ನ ಜಾರಿ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಕೊರಟಗೆರೆ ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ ವಕೀಲರ ಮೇಲೆ ನೌಕರರು, ಪ್ರಭಾವಿ ವ್ಯಕ್ತಿಗಳಿಂದ, ವಿವಿಧ ವರ್ಗದ ಜನರಿಂದ ದೌರ್ಜನ್ಯ, ಹಲ್ಲೆಗಳು, ಅವಮಾನೀಯ ಕೃತ್ಯಗಳನ್ನ ನಡೆಸುತ್ತಿದ್ದು, ಈ ಕೃತ್ಯವನ್ನ ಖಂಡಿಸಿ ಅನೇಕ ಬಾರಿ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ವಕೀಲರ ರಕ್ಷಣಾ ಕಾಯಿದೆಯನ್ನ ಜಾರಿಗೆತರಬೇಕು ಎಂದು ಒತ್ತಾಯ ಮಾಡಿದರು.
ಹಿರಿಯ ವಕೀಲರಾದ ಟಿ.ಕೃಷ್ಣಮೂರ್ತಿ ಮಾತನಾಡಿ ಕರ್ನಾಟಕದ ವಕೀಲರು ಸಂರಕ್ಷಣಾ ಕಾಯಿದೆಯನ್ನ ಜಾರಿಗೆ ತರಲು ಅನೇಕ ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ, ಪಕ್ಕದ ಆಂಧ್ರ ಪ್ರದೇಶ, ಕೇರಳ, ತೆಮಿಳುನಾಡು ರಾಜ್ಯಗಳಲ್ಲಿ ಈ ಕಾಯಿದೆಯನ್ನ ಅಲ್ಲಿನ ಸರ್ಕಾರ ಜಾರಿಗೆ ತರಲಾಗಿದೆ. ನಮ್ಮ ರಾಜ್ಯ ಸರ್ಕಾರ ನಮ್ಗೆ ಕೊಟ್ಟಂತ ಆಶ್ವಾಸನೆ ಈಡೇರಿಸದೆ ವಕೀಲರ ಕುಟುಂಬದವರಿಗೆ ಅನ್ಯಾಯವಾಗುತ್ತಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧೀವೇಶದಲ್ಲಿ ವಕೀಲರ ರಕ್ಷಣಾ-2022 ಕಾಯಿದೆಯನ್ನ ಜಾರಿಗೆ ತಂದು ಕಾನೂನು ರೂಪದಲ್ಲಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದಂತ್ಯ ವಕೀಲರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಏಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಜಂಟಿ ಕಾರ್ಯದರ್ಶಿ ಹುಸೇನ್ ಪಾಷ, ಖಜಾಂಚಿ ಲಕ್ಷಿö್ಮÃಸಂತೋಷ್, ಮಾಜಿ ಅಧ್ಯಕ್ಷ ದೇವರಾಜು, ವಕೀಲರಾದ ಜಿ.ಎಂ.ಕೃಷ್ಣಮೂರ್ತಿ, ಕೆ.ಸಿ. ನಾಗರಾಜು, ಪುಟ್ಟರಾಜು, ಶಿವರಾಮಯ್ಯ, ಸಂಜೀವರಾಜು, ಎ.ಎಂ.ಕೃಷ್ಣಮೂರ್ತಿ, ತಿಮ್ಮರಾಜು, ಮಧುಸೂಧನ್, ಸಂತೋಷ್, ನರಸಿಂಹರಾಜು, ಕೃಷ್ಣಪ್ಪ, ನಾಗೇಂದ್ರಪ್ಪ, ಮಂಜುನಾಥ್, ರವಿ, ವೃಷೇಬೇಂದ್ರಸ್ವಾಮಿ, ರಾಮಚಂದ್ರಯ್ಯ, ಅನೀಲ್‌ಕುಮಾರ್, ಅನಂತರಾಜು, ಕೋಮಲ್ ಗಿರೀಶ್, ಕೆಂಪರಾಜಮ್ಮ, ಬೃಂದಾ, ಶಿಲ್ಪ, ಸುನೀಲ್, ತಿಮ್ಮರಾಜು, ಶಿವರಾಜು ಸೇರಿದಂತೆ ಇತರರು ಇದ್ದರು.