ವಕೀಲ ಕುಲದೀಪ್ ಶಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ವಕೀಲರ ಪ್ರತಿಭಟನೆ
ಕೊರಟಗೆರೆ : ಮಂಗಳೂರಿನ ಯುವ ವಕೀಲ ಕುಲದೀಪ್ ಶಟ್ಟಿ ಅವರ ಮೇಲೆ ಪೊಲೀಸರ ದೌರ್ಜನ್ಯವನ್ನ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ತಿಳಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಲಯಾದ ಅವರಣದ ಮುಂಬಾಗದಲ್ಲಿ ವಕೀಲರ ಸಂಘದ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿ ಡಿ.3 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಯುವ ವಕೀಲ ಕುಲದೀಪ್ ಶಟ್ಟಿ ಅವರ ಮೇಲೆ ಅಮಾನುಷವಾಗಿ ವರ್ತನೆ ಮಾಡಿ, ವಕೀಲರ ವೃತ್ತಿ ಭಾದವರಿಗೆ ಅವಮಾನ ಮಾಡಿದ್ದಾರೆ. ಅವರ ತಾಯಿ ಕಾಡಿಬೇಡಿ ಕೈಮುಗಿದುಕೊಂಡರೂ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ವಕೀಲ ಎಂದರೂ ಸಹ ನೀನು ನ್ಯಾಯಲಯದಲ್ಲಿ ವಾದ ಮಾಡು ಎಂದು ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಈ ಕೂಡಲೆ ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಹಿರಿಯ ವಕೀಲ ಟಿ.ಕೃಷ್ಣಮೂರ್ತಿ ಮಾತನಾಡಿ ಮಂಗಳೂರಿನಲ್ಲಿ ಯುವ ವಕೀಲ ಕುಲದೀಪ್ ಶಟ್ಟಿ ಅವರನ್ನ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಏಕಾಏಕಿ ಅವರ ಮನೆಗೆ ನುಗ್ಗಿ ವಕೀಲ ಅಂತ ನೋಡದೆ ಅವರನ್ನ ಅರೆಬೆತ್ತಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರನ್ನ ಪ್ರಾಣಿಗಳಂತೆ ವರ್ತಿಸಿದ್ದಾರೆ. ಸುಪ್ರಿಂಕೋರ್ಟ್ ಆದೇಶದಂತೆ ಒಬ್ಬ ವಕೀಲರನ್ನ ಬಂಧಿಸಬೇಕೆಂದರೆ ಸಂಬಂಧಪಟ್ಟ ನ್ಯಾಯದೀಶರ ಮೂಲಕ ಅವರನ್ನ ಬಂಧಿಸಬೇಕು. ಇದನ್ನ ಯಾವುದನ್ನು ಮಾಡದೇ ನಮ್ಮ ವೃತ್ತಿಗೆ ಅವಮಾನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಕೀಲರನ್ನ ಬಹಳ ಕೆಟ್ಟ ರೀತಿಯಲ್ಲಿ ನೋಡುತ್ತಿದ್ದು. ಈ ಕೂಡಲೆ ಸರ್ಕಾರ ಪೊಲೀಸರಿಗೆ ಸಾರ್ವಜನಿಕರ ಹಾಗೂ ವಕೀಲರ ಹತ್ತಿರ ಯಾವ ರೀತಿ ನೆಡೆದುಕೊಳ್ಳಬೇಕು ಎಂದು ತರಬೇತಿ ನೀಡಿ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಜಂಟಿ ಕಾರ್ಯದರ್ಶಿ ಹುಸೇನ್ ಪಾಷ, ಖಜಾಂಚಿ ಲಕ್ಷ್ಮೀ ಸಂತೋಷ್, ಮಾಜಿ ಅಧ್ಯಕ್ಷ ದೇವರಾಜು, ವಕೀಲರಾದ ಜಿ.ಎಂ.ಕೃಷ್ಣಮೂರ್ತಿ, ಕೆ.ಸಿ. ನಾಗರಾಜು, ಪುಟ್ಟರಾಜು, ಶಿವರಾಮಯ್ಯ, ಸಂಜೀವರಾಜು, ಎ.ಎಂ.ಕೃಷ್ಣಮೂರ್ತಿ, ತಿಮ್ಮರಾಜು, ಮಧುಸೂಧನ್, ಸಂತೋಷ್, ನರಸಿಂಹರಾಜು, ಕೃಷ್ಣಪ್ಪ, ಮಂಜುನಾಥ್, ವೃಷೇಬೇಂದ್ರಸ್ವಾಮಿ, ರಾಮಚಂದ್ರಯ್ಯ, ಅನೀಲ್‌ಕುಮಾರ್, ಅನಂತರಾಜು, ಕೋಮಲ್ ಗಿರೀಶ್, ಕೆಂಪರಾಜಮ್ಮ, ಬೃಂದಾ, ಅರುಂಧತಿ, ಶಿಲ್ಪ, ಸುನೀಲ್, ತಿಮ್ಮರಾಜು, ಶಿವರಾಜು ಸೇರಿದಂತೆ ಇತರರು ಇದ್ದರು.