ಸಂವಿಧಾನದ ಮೂಲಕ ಅಸಂಖ್ಯಾತರಿಗೆ ಅಂಬೇಡ್ಕರ್ ಬೆಳಕು ನೀಡಿದ್ದಾರೆ : ಡಾ.ಯೇಸುದಾಸ್ ಮೋಹನ್ ದಾಸ್
ತುಮಕೂರು : ಅವಮಾನವಾದಗ ಸ್ವಾಭಿಮಾನ, ಹಸಿವಾದಾಗ ಅನ್ನ ನೆನಪಿಗೆ ಬರುವಂತೆ ಸಂವಿಧಾನದ ಮೂಲಕ ಅಸಂಖ್ಯಾತರಿಗೆ ಅಂಬೇಡ್ಕರ್ ಬೆಳಕು ತೋರಿದ್ದಾರೆ ಎಂದು ಡಾ.ಯೇಸುದಾಸ್ ಮೋಹನ್ ದಾಸ್ ಅಭಿಪ್ರಾಯಪಟ್ಟರು.
ನಗರದ ಎಸ್ಸಿಎಸ್ಟಿ ನೌಕರರ ಸಮಿತಿಯಿಂದ ನಡೆದ ಕಚೇರಿಯಲ್ಲಿ ನಡೆದ 66ನೇ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಅವಮಾನ, ಹಸಿವಿನಲ್ಲಿ ಸಂವಿಧಾನ ರಚಿಸಿ, ಎಲ್ಲರಿಗೂ ಸಮಾನತೆಯನ್ನು ಕಟ್ಟಿಕೊಟ್ಟ ಅಂಬೇಡ್ಕರ್ ಆಶಯಗಳನ್ನು ಹಂತ ಹಂತವಾಗಿ ನುಂಗಿ ಹಾಕಲಾಗುತ್ತಿದೆ ಎಂದು ಹೇಳಿದರು.
ಈ ಕಾಲಘಟ್ಟದಲ್ಲಿ ನಡೆಯುತ್ತಿರುವ ಆಡಳಿತ ಮತ್ತು ನ್ಯಾಯಕ್ಕೆ ಮಿಲ್ಕಿಸ್ ಭಾನು, ತೀಸ್ತಾಲಾಡ್ ಪ್ರಕರಣಗಳು ಉದಾಹರಣೆಯಾಗಿವೆ, ಕೊಲೆಗಡುಕರು ಇಂದು ಹೊರಗೆ ಓಡಾಡುತ್ತಿದ್ದಾರೆ, ಸನ್ನಡತೆ ಆಧಾರದ ಮೇಲೆ ಹೊರಗೆ ಬಂದು ಸನ್ಮಾನ ಸ್ವೀಕರಿಸುತ್ತಿದ್ದಾರೆ ಎಂದರೆ ನಮ್ಮ ನ್ಯಾಯಾಂಗ ಎಲ್ಲಿಗೆ ತಲುಪಿಸುತ್ತಿದೆ ಎಂದು ಅವಲೋಕಿಸಬೇಕಿದೆ ಎಂದರು.
ಮಿಲ್ಕಿಸ್ ಭಾನು ಪ್ರಕರಣದಲ್ಲಿ ನಾವೆಲ್ಲರೂ ತಣ್ಣಗೆ ಇದ್ದೇವೆ, ಲಿಂಗ, ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ವ್ಯವಸ್ಥಿತವಾಗಿ ವಿಂಗಡಿಸಲಾಗಿದೆ, ಪ್ರತಿರೋಧ ತೋರಬೇಕಾದ ಮುಸ್ಲಿಂರು ಸುಮ್ಮನಿದ್ದಾರೆ, ದಲಿತ- ಮುಸ್ಲಿಂರನ್ನು ಬೇಕಾದಷ್ಟು ಕಾರಣಗಳಿಗೆ ವಿಂಗಡಿಸಲಾಗಿದೆ ಎಂದರು.
96 ವರ್ಷದ ಜನಪರ ಜೀವ ವರವರರಾವ್ ಗೆ ಇನ್ನು ಜಾಮೀನು ಸಿಕ್ಕಿಲ್ಲ ಆದರೆ ಮುಸ್ಲಿಂರ ತಲೆ ಕಡೆಯುವುದಾಗಿ ಹೇಳಿದವರಿಗೆ ಜಾಮೀನು ದೊರೆಯುತ್ತಿದೆ, ಧರ್ಮ, ಸಂಸ್ಕöÈತಿ ಆಧಾರಲ್ಲಿ ಜನರನ್ನು ಅಂಧಕಾರಕ್ಕೆ ತಳ್ಳಲಾಗುತ್ತಿದೆ, ಪ್ರಧಾನಿ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಎನ್ನುವಂತಹ ಕರಾಳ ಸ್ಥಿತಿಯಲ್ಲಿದ್ದೇವೆ ಎಂದರು.
ಹಿಂದುಳಿದವರನ್ನೇ ಮುಂದಿಟ್ಟು ದೇಶದಲ್ಲಿ ಮತ್ತೆ ಮನುಸ್ಮöÈತಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲಾಗುತ್ತಿದೆ, ಶೇ. 100ರಷ್ಟು ಮೀಸಲಾತಿಯನ್ನು ಪರಿಶಿಷ್ಟರಿಗೆ ಕೊಟ್ಟರು ಉದ್ಯೋಗ ಸಿಗುತ್ತಿಲ್ಲ, ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಇದ್ದರೆ, ಶೇ. 100 ಮೀಸಲಾತಿ ಪಡೆದು ಉಪಯೋಗವೇನು ಎಂದು ಪ್ರಶ್ನಿಸಿದರು.
ದಲಿತ, ಹಿಂದುಳಿದ ಸಮುದಾಯಗಳು ಸಂವಿಧಾನವನ್ನು ಧರ್ಮಗ್ರಂಥವನ್ನಾಗಿಸಿಕೊಳ್ಳಬೇಕು, ಸಂವಿಧಾನದಿಂದಲೇ ನಾವು ಉಳಿದುಕೊಂಡಿದ್ದೇವೆ ಎಂಬ ಅರಿವು ಮೂಡದ ಹೊರತು, ಸಂವಿಧಾನವನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸರ್ಕಾರಿ ಸೌಲಭ್ಯಗಳ ಬಗ್ಗೆ ಗೊತ್ತೇ ಇಲ್ಲದ ಜನರ ನಡುವೆ ಸಂವಿಧಾನ ಬದಲಾದರೂ ಗೊತ್ತಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಎಸ್ಸಿಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ ಅಂಬೇಡ್ಕರ್ ವಿಚಾರಧಾರೆಗಳನ್ನು ಮತ್ತಷ್ಟು ತಳಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಜಾಗೃತಿ ಮೂಡಿಸಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು.
ದಲಿತ ಸಮುದಾಯಗಳ ಮುಂದೆ ಸಾಕಷ್ಟು ಸವಾಲುಗಳು ಇವೆ, ಅಂಬೇಡ್ಕರ್ ಹೇಳಿದ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸಜ್ಜಾಗಬೇಕಿದೆ, ವರ್ಷಗಳು ಬದಲಾಗಿರಬಹುದು ಆದರೆ ನಾವಿನ್ನೂ ಅಂಬೇಡ್ಕರ್ ಅನುಭವಿಸಿದ ಅಸ್ಪ್ರಶ್ಯತೆಯ ಕಾಲಘಟ್ಟದಲ್ಲಿಯೇ ಇದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಎಡಿಎ ನಾಗರಾಜು, ಜಿ.ಪಂ ಅಕೌಂಟ್ ಆಫೀಸರ್ ನರಸಿಂಹಮೂರ್ತಿ, ಗೋಪಿ, ಶಿವರಾಂ, ರಾಘವೇಂದ್ರ, ಗಂಗಾಧರ್, ಕೆ.ಸಿ.ರಾಜಣ್ಣ, ಹನುಮಂತರಾಯಪ್ಪ, ಹನುಮಂತರಾಜು, ತಿಪ್ಪೇಸ್ವಾಮಿ, ರಮಾದೇವಿ,ರವಿ, ನರಸಿಂಹರಾಜು, ಸೇರಿದಂತೆ ಇತರರಿದ್ದರು.