ಜಿಲ್ಲೆತುಮಕೂರುರಾಜ್ಯ

ವೀರ ವನಿತೆ ಒನಕೆ ಓಬವ್ವರಂತೆ ಮಹಿಳೆಯರು ಸಮಯ ಪ್ರಜ್ಞೆ,ಧೈರ್ಯ ಹಾಗೂ ಶೌರ್ಯವನ್ನು ಮೈಗೂಡಿಸಿಕೊಳ್ಳಿ : ಶಾಸಕ ಜಿ.ಬಿ.ಜೋತಿಗಣೇಶ್

ತುಮಕೂರು : ವೀರ ವನಿತೆ ಒನಕೆ ಓಬವ್ವರಂತೆ ಮಹಿಳೆಯರು ಸಮಯ ಪ್ರಜ್ಞೆ,ಧೈರ್ಯ, ಶೌರ್ಯವನ್ನು ಮೈಗೂಡಿಸಿ ಕೊಂಡರೆ,ಓರ್ವ ಮಹಿಳೆ ಮಧ್ಯರಾತ್ರಿಯಲ್ಲಿ ಸುರಕ್ಷಿತವಾಗಿ ಓಡಾಡಿದರೆ ಅದೇ ನಿಜವಾದ ಸ್ವಾತಂತ್ರ ಎಂಬ ಗಾಂಧೀಜಿಯ ಕನಸನ್ನು ನನಸು ಮಾಡಬಹುದಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮಹಿಳೆ ರಾಜಕೀಯ, ಸಾಮಾಜಿಕ,ಶೈಕ್ಷಣಿಕ, ಅರ್ಥಿಕ ಹೀಗೆ ಯಾವುದೇ ರಂಗದಲ್ಲಿಯೂ ಮುಂದೆ ಬರಬೇಕೆಂದರೂ ಆಕೆ ಸಮಯ ಪ್ರಜ್ಞೆ ಮತ್ತು ಸ್ಥೈರ್ಯವನ್ನು ಮೈಗೂಡಿಸಿಕೊಳ್ಳಲೇಬೇಕು ಎಂದರು.
ಸರಕಾರ 2021ರಲ್ಲಿಯೇ ಹೈದರಾಲಿ ಸೈನ್ಯದಿಂದ ಚಿತ್ರದುರ್ಗದ ಕೊಟೆಯನ್ನು ರಕ್ಷಿಸಿ ಒನಕೆ ಓಬವ್ವನ ಹುಟ್ಟು ಹಬ್ಬವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಮಂಜೂರಾತಿ ನೀಡಿದ್ದರೂ, ಕೋವಿಡ್‌ನಿಂದಾಗಿ ಕಳೆದ ವರ್ಷ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕನಕದಾಸ ಜಯಂತಿ ಮತ್ತು ಒನಕೆ ಓಬವ್ವ ಜಯಂತಿ ಎರಡು ಒಟ್ಟಿಗೆ ಬಂದ ಪರಿಣಾಮ ಸರಕಾರಿ ಕಾರ್ಯಕ್ರಮ ನವೆಂಬರ್ 11 ರಂದೆ ನಡೆದಿತ್ತು. ಆದರೆ ಛಲವಾದಿ ಸಮುದಾಯಗಳು ಸಂಘಟನೆಯ ಜೊತೆಗೆ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಉದ್ದೇಶದಿಂದ ಇಂದು ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತೋಷದ ವಿಚಾರ. ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಜೊತೆಗೆ,ಕುರುಕ್ಷೇತ್ರ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.ಕುರುಕ್ಷೇತ್ರ ನಾಟ್ಕದ ಬದಲು ಒನಕೆ ಓಬವ್ವ ಚರಿತ್ರೆಯನ್ನೇ ನಾಟಕವಾಗಿ ಪ್ರದರ್ಶಿಸಿದ್ದರೆ,ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣ ವಾಗುತಿತ್ತು ಎಂಬ ಆಶಯ ವ್ಯಕ್ತಪಡಿಸಿದರು.

ಹಿರಿಯ ಹರಿಕಥಾ ವಿದ್ವಾನ ಡಾ.ಲಕ್ಷ್ಮಣದಾಸ್ ಮಾತನಾಡಿ,ಚಿತ್ರದುರ್ಗದ ಕೋಟೆ ಕಾವಲಿಗೆ ಇದ್ದ ಮುದ್ದಹನುಮಪ್ಪ ಅವರ ಪತ್ನಿ ಓಬವ್ವ ಸಮಯ ಪ್ರಜ್ಞೆಯ ಫಲವಾಗಿ ಹೈದರಾಲಿಯ ಸೈನಿಕರು ಕೋಟೆಯನ್ನು ನುಸುಳಿದಾಗ, ಕೈಗೆ ಸಿಕ್ಕ ಒನಕೆ ಹಿಡಿದು ಶತೃ ಸೈನಿಕರ ರುಂಡ ಚಂಡಾಡಿದ್ದರಿಂದ ಒನಕೆ ಓಬವ್ವ ಆಗಿ ಇತಿಹಾಸದಲ್ಲಿ ಪರಿಚಿತಳಾಗಿದ್ದಾಳೆ. ಆಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.ಕುರುಕ್ಷೇತ್ರ ನಾಟಕಕ್ಕೂ ಓಬವ್ವನಿಗೂ ಇತಿಹಾಸದ ಸಂಬಂಧವಿದೆ ಪಾಂಡವರು ಕೌರವರನ್ನ ಸದೆಬಡಿದಂತೆ ಓಬವ್ವ ಹೈದರಾಲಿ ಸೈನ್ಯವನ್ನು ಹತಗೈದಿದ್ದಾಳೆ ಎಂದರು.

ಇತಿಹಾಸ ಪ್ರಾದ್ಯಾಪಕಿ ಡಾ.ಕಾವಲಮ್ಮ ಮಾತನಾಡಿ,ಛಲವಾದಿಗಳಿಗೆ ವೃತ್ತಿ ಎಂಬುದಿಲ್ಲ.ಅವರು ಸಾಂಸ್ಕೃತಿಕ ವಲಯದ ಪ್ರತಿನಿಧಿಗಳು, ಸಂಗೀತವೇ ಇವರ ಪ್ರಧಾನ ವೃತ್ತಿ.ಪಂಚವಾದ್ಯಗಳೆಂದು ಕರೆಯಲ್ಪಡುವ ನಗಾರಿ, ಕಹಳೆ, ಡೊಳ್ಳು, ಗಂಟೆ, ಜಾಗಟೆಯಲ್ಲಿ ನಗಾರಿ ಮತ್ತು ಕಹಳೆ ನುಡಿಸುವ ಕುಲಕ್ಕೆ ಛಲವಾದಿಗಳು ಸೇರಿರುವುದು ಹೆಮ್ಮೆಯ ವಿಚಾರ. ಇಂತಹ ಛಲವಾದಿ ಸಮುದಾಯದ ಕುರಿತು ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದರು.
ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆವತಿಯಿಂದ 2022 ನೇ ಸಾಲಿನ ಒನಕೆ ಓಬವ್ವ ಪ್ರಶಸ್ತಿಯನ್ನು ತುಮಕೂರು ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಪ್ರಭಾವತಿ,ಶಿವಶೈಕ್ಷಣಿಕ ಸೇವಾಶ್ರಮದ ಶ್ರೀಮತಿ ಲಕ್ಷ್ಮಮ್ಮ, ಲಾಲಿತ್ಯ ಸಂಗೀತ ಶಾಲೆಯ ಶ್ರೀಮತಿ ಲಲಿತಾಂಬ ಅವರಿಗೆ ನೀಡಿ ಗೌರವಿಸಲಾಯಿತು. ಅಲ್ಲದೆ ಹರಿಕಥಾ ವಿದ್ವಾನ್ ಜಿ.ಸೋಮಶೇಖರದಾಸ್ ಮತ್ತು ಜಾನಪದ ಕಲಾವಿದರಾದ ಕೆ.ನಾಗರಾಜು ಅವರುಗಳಿಗೆ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 

ವೇದಿಕೆಯಲ್ಲಿ ಸ್ಪೂರ್ತಿ ಡೆವಲರ‍್ಸ್ನ ಎಸ್.ಪಿ.ಚಿದಾನಂದ್,ಡಾ.ಪಿ.ಚಂದ್ರಪ್ಪ, ನಿವೃತ್ತ ಇಂಜಿನಿಯರ್ ಆದಿನಾರಾಯಣ್, ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಎಸ್.ರಾಜಣ್ಣ,ಎನ್.ಜಗನ್ನಾಥ್, ಹೆಚ್.ಎಸ್.ಪರಮೇಶ್, ಹೆಚ್.ಬಿ.ಪುಟ್ಟ ಬೋರಯ್ಯ, ಕೆ.ಶಿವಕುಮಾರ್, ಡಿ.ಎನ್.ಭೈರೇಶ್, ಕೆ.ಕುಮಾರ್ ಮುಖಂಡರಾದ ಟಿ.ಅರ್.ನಾಗೇಶ್‌,ಟೂಡಾ ಮಾಜಿ ಸದಸ್ಯ ಟಿ.ಎಲ್.ಪ್ರತಾಪ್‌ ಕುಮಾರ್‌, ಈ ಲೇಪಾಕ್ಷಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಶಾಂತ ಚಿತ್ರಮಂದಿರದ ಬಳಿಯಿಂದ ಒನಕೆ ಓಬವ್ವ ವೇಷಧಾರಿ ಮಹಿಳೆಯರು ಮತ್ತು ಬಾಲಕಿಯರನ್ನು ಪೂರ್ಣಕುಂಬ ಸ್ವಾಗತದ ಮೆರವಣಿಗೆಯೊಂದಿಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರಕ್ಕೆ ಕರೆ ತರಲಾಯಿತು. ಸಮುದಾಯದ ಬಂಧುಗಳು ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker