ತುಮಕೂರು : ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮವನ್ನು ನವೆಂಬರ್ 20 ರ ಭಾನುವಾರ ಬೆಳಗ್ಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಹಾವೇರಿ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ನೆಹರು ಚ.ಓಲೇಕಾರ್ ಉದ್ಘಾಟಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಕಲೇಶ್ವರಪುರ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ,ನೆಲಮಂಗಲ ಕ್ಷೇತ್ರದ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ,ತುಮಕೂರು ನಗರ ಶಾಸಕರಾದ ಜಿ.ಬಿ.ಜೋತಿಗಣೇಶ್,ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್,ತುಮಕೂರು ಮೇಯರ್ ಶ್ರೀಮತಿ ಪ್ರಭಾವತಿ ಎಂ.ಸುಧೀಶ್ವರ್,ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್‌ಕುಮಾರ್ ಶಹಪೂರ್ ವಾಡ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಎನ್.ಛಲವಾದಿ, ಡಿ ಸಿಎಂ.ಎಸ್.ನ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಡಾ.ಪಿ.ಚಂದ್ರಪ್ಪ, ಹಿರಿಯ ಕಲಾವಿದರು, ಹರಿಕಥಾ ವಿದ್ವಾನ್ ಡಾ.ಲಕ್ಷö್ಮಣದಾಸ್,ಆರ್.ಟಿ.ಓ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಆಹಾರ ಮತ್ತು ನಾಗರಿಕ ಇಲಾಖೆಯ ನಿರೀಕ್ಷಕರಾದ ಗಣೇಶ್, ಕೆಪಿಟಿಸಿಎಲ್ ನಿವೃತ್ತ ಮುಖ್ಯ ಎಂಜಿನಿಯರ್ ಆದಿ ನಾರಾಯಣ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷಿö್ಮನರಸಿಂಹಯ್ಯ,ಆರೋಗ್ಯ ಇಲಾಖೆಯ ನಿವೃತ್ತಿ ಆಡಳಿತಾಧಿಕಾರಿ ಶ್ರೀನಿವಾಸ್,ಹರ್ತಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಮೋಹನ್‌ಕುಮಾರ್,ತೋಟಗಾರಿಕೆ ಇಲಾಖೆಯ ಎಸ್.ಎ.ಡಿ ಶ್ರೀಮತಿ ರೂಪ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ಬಿ.ಜಿ.ಲಿಂಗರಾಜು, ಕಂದಾಯ ನಿರೀಕ್ಷಕರಾದ ಗೋಪಿನಾಥ್ ಸೇರಿದಂತೆ ಹಲವರು ಉಪಸ್ಥಿತರಿರುವರು.
ವೀರ ವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ತುಮಕೂರು ಮಹಾನಗರಪಾಲಿಕೆಯ ಮಹಾಪೌರರಾದ ಶ್ರೀಮತಿ ಪ್ರಭಾವತಿ ಎಂ.ಸುಧೀಶ್ವರ್,ಶ್ರೀಶಿವಶೈಕ್ಷಣಿಕ ಸೇವಾಶ್ರಮ ಮೈದಾಳ ಇದರ ಕಾರ್ಯದರ್ಶಿ ಶ್ರೀಮತಿ ಲಕ್ಷö್ಮಮ್ಮ ಲೇಪಾಕ್ಷಯ್ಯ, ಲಾಲಿತ್ಯ ಸಂಗೀತ ಶಾಲೆ ಮಧುಗಿರಿಯ ಶ್ರೀಮತಿ ಲಲಿತಾಂಬಲಕ್ಷಿö್ಮನರಸಯ್ಯ ಅವರುಗಳಿಗೆ ವೀರ ವನಿತೆ ಒನಕೆ ಓಬವ್ವ ಪ್ರಶಸ್ತಿ ಹಾಗೂ ಹರಿಕಥಾ ವಿದ್ವಾನ್ ಬಿ.ಸೋಮಶೇಖರದಾಸ್, ಶಂಬೋನಹಳ್ಳಿಯ ಜಾನಪದ ಕಲಾವಿದರಾದ ಕೆ.ನಾಗರಾಜು ಅವರುಗಳಿಗೆ ಸನ್ಮಾನ ಮಾಡಲಾಗುವುದು.
ವೀರ ವನಿತೆ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮದ ನಂತರ ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.