ಬೆಳಗುಂಬ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡೂವರೆ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಗೌರಿಶಂಕರ್ ರಿಂದ ಶಂಕುಸ್ಥಾಪನೆ
ತುಮಕೂರು : ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಬೆಳಗುಂಬ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಎರಡೂವರೆ ಕೋಟಿ ವೆಚ್ಚದ ಡಿ ದೇವರಾಜ ಅರಸು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಬಾಲಕರ ವಿದ್ಯಾರ್ಥಿನಿಲಯದ ಕಾಮಗಾರಿಗೆ ಶಾಸಕರಾದ ಡಿ ಸಿ ಗೌರೀಶಂಕರ್ ಶಂಕುಸ್ಥಾಪನೆ ನೆರವೇರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಶಾಸಕರ ಅನುದಾನದಡಿ ಈ ವಿದ್ಯಾರ್ಥಿ ನಿಲಯ ನಿರ‍್ಮಾಣಗೊಳ್ಳಲಿದೆ.
ಕಾರ‍್ಯಕ್ರಮ ಶಂಕುಸ್ಥಾಪನೆ ಬಳಿಕ ಶಾಸಕರಾದ ಡಿ ಸಿ ಗೌರೀಶಂಕರ್ ಮಾತನಾಡಿ ಬಡವರು ಹಾಗೂ ಶೋಷಿತ ವರ್ಗದ ಮಕ್ಕಳು ವಿದ್ಯಾಬ್ಯಾಸದಿಂದ ದೂರ ಉಳಿಯುತ್ತಿದ್ದಾರೆ, ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿದ್ದರೂ ಸಹ ಸೂಕ್ತ ವೇದಿಕೆ ಸಿಗದೆ ಕಮರಿ ಹೋಗುತ್ತಿವೆ. ಈ ಭಾಗದಲ್ಲಿ ವಿದ್ಯಾರ್ಥಿ ನಿಲಯವಾದರೆ ನೂರಾರು ಮಕ್ಕಳ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ಗ್ರಾಮಾಂತರ ಕ್ಷೇತ್ರವನ್ನು ಶೈಕ್ಷಣಿಕವಾಗಿ ಇಡೀ ಜಿಲ್ಲೆಗೆ ಮಾದರಿ ಮಾಡುವ ಗುರಿ ಹೊಂದಲಾಗಿದೆ,ಗ್ರಾಮಾಂತರ ಕ್ಷೇತ್ರದಲ್ಲಿ ಶಿಥಿಲವಾಹಿರುವ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ,ಹಲವಾರು ಹೊಸಶಾಲೆಗಳ ನಿರ‍್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೆಳ್ಳಾವಿಯಲ್ಲಿ ರ‍್ನಾಟಕ ಪಬ್ಲಿಕ್ ಶಾಲೆ ತೆರೆದು ಎಲ್ಲಾ ಮಕ್ಕಳಿಗೂ ಇಂಗ್ಲೀಷ್ ಶಿಕ್ಷಣ ಕಲಿಸಲು ವೇದಿಕೆ ಕಲ್ಪಿಸಲಾಗಿದೆ,ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸ್ವಂತ ಹಣದಲ್ಲಿ ಪ್ರೋತ್ಸಾಹ ಧನ ವಿತರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲಾಗುತ್ತಿದೆ ಎಂದರು.
ಬೆಳಗುಂಬ ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಎನ್ ಆರ್ ಹರೀಶ್ ನೇತೃತ್ವದಲ್ಲಿ ನಡೆದ ಈ ಕಾರ‍್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಕಾರ‍್ಯಾಧ್ಯಕ್ಷ ಹಾಲನೂರು ಅನಂತಕುಮಾರ್
ಉಪಮೇಯರ್ ನರಸಿಂಹಮೂರ್ತಿ ,ಬೆಳಗುಂಬ ಗ್ರಾಮಪಂಚಾಯ್ತಿ ಅಧ್ಯಕ್ಷ ಮಂಜುನಾಥ್,ಎಸ್ಟಿ ಘಟಕದ ಅಧ್ಯಕ್ಷ ಕರೇರಂಗಪ್ಪ,ಮಾಜಿ ಗ್ರಾಮಪಂಚಾಯ್ತಿಸದಸ್ಯೆ ಪುಷ್ಪಲತ,ಜೆಡಿಎಸ್ ಮುಖಂಡ ಲಕ್ಕಪ್ಪ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಹಾಗೂ ಗ್ರಾಮಸ್ತರು ಉಪಸ್ತಿತರಿದ್ದರು.