ತುಮಕೂರು

ಒನಕೆ ಓಬವ್ವರ ಮಾತೃಭೂಮಿಯ ಮೇಲಿನ ಭಕ್ತಿ ಹಾಗೂ ಶೌರ್ಯ ಮಹಿಳೆಯರಿಗೆ ಪ್ರೇರಣೆ : ಜಿಲ್ಲಾಧಿಕಾರಿ ವ್ಯೆ.ಎಸ್ ಪಾಟೀಲ್

ತುಮಕೂರು : ರಾಜ್ಯದ ಗಂಡು ಮೆಟ್ಟಿನ ವೀರ ಮಹಿಳೆ ಎಂದ ಹೆಸರಾಗಿರುವ ಒನಕೆ ಓಬವ್ವ ಜಗತ್ತಿನ ಎಲ್ಲಾ ವರ್ಗದ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವ್ಯೆ.ಎಸ್. ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರದಲ್ಲಿ ಇಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ‍್ರದಲ್ಲಿ ಆಯೋಜಿಸಿದ್ದ ಒನಕೆ ಓಬವ್ವನವರ ಜಯಂತ್ಯುತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಒನಕೆ ಓಬವ್ವನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ರಾಜ್ಯದ  ಗಂಡು ಮೆಟ್ಟಿನ ವೀರ ಮಹಿಳೆ ಎಂದ ಹೆಸರಾಗಿರುವ ಒನಕೆ ಓಬವ್ವ ಜಯಂತಿಯನ್ನು ಆಚರಣೆ ಭಾಗಿಯಾಗುವದಕ್ಕಿಂತ ಹೆಮ್ಮೆಯ ವಿಷಯ ಬೇರೆ ಇಲ್ಲ, ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅವರು ಸಮಸ್ತ ನಾರಿ ಶಕ್ತಿಯ ಪ್ರತೀಕವಾಗಿ ಎಲ್ಲರಿಗೂ ಸ್ಫೂರ್ತಿ ನೀಡಿದ್ದಾರೆ.

ಪತಿಯ ಅನುಪಸ್ಥಿತಿಯಲ್ಲಿ ಕೋಟೆಯ ನುಸುಳುಮಾರ್ಗದ ಕಾವಲಿನಲ್ಲಿ ಒನಕೆಯೊಂದಿಗೆ ತಾನೇ ನಿಂತು, ಹೈದರಾಲಿಯ ಸೇನಾನಿಗಳನ್ನು ಸದೆಬಡಿದ ವೀರವನಿತೆ, ಇತಿಹಾಸದ ಪುಟಗಳಲ್ಲಿ ಅಚ್ಚಾಗಿರುವ ಒನಕೆ ಓಬವ್ವ   ಅವರು ಸಮಯೋಚಿತ ಯುಕ್ತಿ, ಧೈರ್ಯ ಮತ್ತು ಸ್ಥೈರ್ಯದ ಮೂಲಕ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇವರ ಸ್ವಯಂ ರಕ್ಷಣ ವಿಧಾನಗಳು, ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ.ದ್ವಾರಕನಾಥ್ ಕಾರ್ಯಕ್ರಮದಲ್ಲಿ ಒನಕೆ ಓಬವ್ವನ ಬಗ್ಗೆ ಉಪನ್ಯಾಸ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿಧ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ವೈ.ಕೆ.ಬಾಲಕೃಷ್ಣ, ಮೊದಲಾದವರು ಒನಕೆ ಓಬವ್ವನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೌರವ ಸಲ್ಲಿಸಿದರು,
ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವ್ಯೆ.ಎಸ್. ಪಾಟೀಲ, ಮತ್ತಿತರರು ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದಂತಹ  ಸಮಾಜದ ಸಾಧಕರಿಗೆ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ.ರವಿಕುಮಾರ್ ಸ್ವಾಗತಿಸಿದರು
ಒನಕೆ ಓಬವ್ವನ ಜಯಂತೋತ್ಸವ ಅದ್ದೂರಿಯಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೆಳ್ಳಿರಥದ ಮೂಲಕ ಒನಕೆ ಓಬವ್ವನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ  ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದದವು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker