ಕೊರಟಗೆರೆ

ಕನಕದಾಸರ ಸಮಾನತೆಯ ತತ್ವ ಮತ್ತು ಒನಕೆ ಓಬವ್ವಳ ದೇಶ ಪ್ರೇಮ, ಶೌರ್ಯ ವಿಶ್ವಕ್ಕೆ ಮಾದರಿ : ತಹಶೀಲ್ದಾರ್ ನಾಹಿದಾ ಜಮ್ ಜಮ್

ಕೊರಟಗೆರೆ : ಕನಕದಾಸರ ಸಾಮಾಜಿಕ ಸಮಾನತೆಯ ತತ್ವ ಸಿದ್ದಾಂತದ ಕೀರ್ತನೆಗಳು, ಮತ್ತು ಒನಕೆ ಓಬವ್ವರ ದೇಶ ಪ್ರೇಮ, ಪರಾಕ್ರಮ, ಶೌರ್ಯ ವಿಶ್ವಕ್ಕೆ ಮಾದರಿ ಎಂದು ತಹಶೀಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು.
ಅವರು ಪಟ್ಟಣದ ತಾಲೂಕು ಕಛೇರಿಯಲ್ಲಿ ಕನಕದಾಸರ  535 ನೇ ಜಯಂತಿ ಮತ್ತು ಸರ್ಕಾರದ ಮೊದಲ ಒನಕೆ ಓಬವ್ವ ಜಯಂತಿಯನ್ನು ಆಚರಿಸಿ ಮಾತನಾಡಿ ಕನಕದಾಸರ ಜೀವನ ಚರಿತ್ರೆ ನಮಗೆಲ್ಲಾ ಆದರ್ಶವಾಗಿದೆ, ಅವರು ಸಮಾಜದಲ್ಲಿ ಜಾತಿ ಪದ್ದತಿ, ವರ್ಣ ಬೇಧ ನೀತಿ, ಅಸ್ಪಶ್ಯತೆ ವಿರುದ್ದ ಕೀರ್ತನೆ ಮುಖಾಂತರ ಸಮಾಜದಲ್ಲಿ ಅರಿವು ಮೂಡಿಸಿದವರು, ದೇವರಲ್ಲಿ ನಿರ್ಮಲ ಭಕ್ತಿ ಇದ್ದರೆ ಸಾಕು ಒಲಿಯುತ್ತಾರೆ ಎಂದು ತೋರಿಸಿ ಕೊಟ್ಟಿರುವುದು ಉಡುಪಿಯಲ್ಲಿ ಶ್ರೀ ಕೃಷ್ಣರ ದೇವಾಲಯದಲ್ಲಿ ಇಂದು ಸಹ ಸಾಕ್ಷಿಯಾಗಿದೆ, ಇದರಿಂದಲೇ ಕನಕದಾಸರು ದಾಸ ಶ್ರೇಷ್ಟರಾಗಿದ್ದಾರೆ ಎಂದರು.
ಅದೇ ರೀತಿ ಚಿತ್ರದುರ್ಗದ ಒನಕೆ ಓಬವ್ವ ತೋರಿಸದ ಶೌರ್ಯ ಬೇರೆ ಯಾರು ತೋರಲಾರರು, ಯಾರಿಗೂ ತಿಳಿಯದೆ ತಕ್ಷಣ ಬಂದ ಶತ್ರು ಸೈನಿಕರ ಬಗ್ಗೆ ಗಂಡನಿಗೆ ಹೇಳದೆ, ಮನೆಯಲ್ಲಿ ಇದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ತನ್ನ ರಾಜ್ಯ ರಕ್ಷಣೆಗೆ ಹೋರಾಡಿ ತಾಯಿ ನಾಡಿಗಾಗಿ ಮಡಿದ ಓಬವ್ವ  ಸ್ತ್ರೀ ಕುಲದ ಸ್ವಾಭಿಮಾನದ ಸಂಕೇತವಾಗಿದ್ದಾರೆ, ಅವರ ಜಯಂತಿಯನ್ನು ಸರ್ಕಾರ ಜಾರಿಗೆ ತಂದಿರುವುದು ನಾವೆಲ್ಲಾರೂ ಧನ್ಯವಾದ ತಿಳಿಸಿಬೇಕಿದೆ ಎಂದರು.
ತಾಲೂಕು ಕುರುಬ ಸಂಘದ ಅದ್ಯಕ್ಷ ಮೈಲಾರಪ್ಪ ಮಾತನಾಡಿ ಕನಕದಾಸರ ಕೃತಿ ಕೀರ್ತನೆಗಳು ಎಲ್ಲಾ ಕಾಲದ ಜನರಿಗೆ ಮಾದರಿ ಎಂದರು. ತಾಲೂಕು ಕನಕ ಯುವ ಸೇನೆ ಅದ್ಯಕ್ಷ ರಂಗಧಾಮಯ್ಯ ಮಾತನಾಡಿ ಕನಕದಾಸರು ಒಂದು ವರ್ಗಕ್ಕೆ ಸೀಮಿತವಲ್ಲ ನೊಂದ ಶೋಷಿತರ ಪರ ಹೋರಾಡಿದವರಾಗಿದ್ದಾರೆ ಎಂದರು. ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾ ನಿರ್ದೇಶಕ ನಾಗಭೂಷಣ್ ಮಾತನಾಡಿ ಕನಕದಾಸರು 535 ವರ್ಷಗಳಿಂದ ಜನರ ಮನಸ್ಸಿನಲ್ಲಿ ಇದ್ದು ಅವರ ತತ್ವ ಸಿದ್ದಾಂತ ನಮಗೆ ದಾರಿ ದೀಪ ಎಂದರು, ತಾಲೂಕು ಸಂಗೋಳ್ಳಿ ರಾಯಣ್ಣ ಯುವ ವೇದಿಕೆ ಕಾರ್ಯದರ್ಶಿ ನಂಜುಂಡಯ್ಯ ಮಾತನಾಡಿ ಕನಕ ದಾಸರ ಜೀವನ ಚರಿತ್ರೆ ಮನುಕುಲದ ಎಲ್ಲಾರಿಗೂ ಅದರ್ಶವಾಗಿದೆ, ಬ್ರಾಹ್ಮಣರ ಜಾತಿ ಕಿರುಕುಳ ಮದ್ಯೆ ಸಮಾನತೆಗೆ ಹೋರಾಡಿದ ಮಹಾನ್ ಚೇತನ ಎಂದರು.
ತಾಲೂಕು ಛಲವಾದಿ ಸಂಘದ ಕಾರ್ಯದರ್ಶಿ ಪುಟ್ಟರಾಜ ಮಾತನಾಡಿ ಒನಕೆ ಓಬವ್ವ ದೇಶದ ಸಮಸ್ತ ಎಲ್ಲಾ ನಾರಿಯರಿಗೆ ಆದರ್ಶವಾಗಿದ್ದಾರೆ, ಹೈದರಾಲಿ ಸೈನಿಕರು ಮೋಸದಿಂದ ಚಿತ್ರದುರ್ಗದ ಕೋಟೆಗೆ ನುಸುಳಿದಾಗ ಯಾವುದೇ ಪೂರ್ವ ತಯಾರಿ ಇಲ್ಲದೆ ಕೈಗೆ ಸಿಕ್ಕ ಒನಕೆಯಲ್ಲೇ ಶತ್ರುಗಳನ್ನು ನಾಶ ಮಾಡಿ ಕೋಟೆ ರಕ್ಷಿದ ಓಬವ್ವ ಜಯಂತಿಯನ್ನು ಸರ್ಕಾರ ಮಾಡುತ್ತಿರುವುದು ಹರ್ಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಎ.ಇ,ಇ, ರವಿಕುಮಾರ್, ಪಶುವೈದ್ಯಾಧಿಕಾರಿ ಡಾ, ಸಿದ್ದನಗೌಡ, ಪ.ಪಂ. ಮುಖ್ಯಾಧಿಕಾರಿ ಭಾಗ್ಯಮ್ಮ, ಸಮಾಜಕಲ್ಯಾಣಧಿಕಾರಿ ಉಮಾದೇವಿ, ಕಂದಾಯ ಇಲಾಖೆಯ ರಂಗನಾಥ್, ಪ್ರತಾಪ್, ಬಸವರಾಜು, ನಕುಲ್,  ಛಲವಾದಿ ಸಂಘದ ಅದ್ಯಕ್ಷ ಹನುಮಮೂರ್ತಿ, ಉಪಾದ್ಯಕ್ಷ ಹನುಮಂತ, ಕುರುಬ , ಲಕ್ಷೀಪ್ರಸಾದ್, ಅನಂದ್, ರಂಗರಾಜು, ಮಧುನಂದನ್, ಶಿವಣ್ಣ ಮುಂತಾದವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker