ಕೊರಟಗೆರೆ

ಪ್ಲಕ್ಸ್, ಬ್ಯಾನರ್,ಬಟಿಂಗ್ ಅಳವಡಿಕೆಗೆ ಕಡಿವಾಣ ಹಾಕಲು ಪ.ಪಂ ಸಾಮಾನ್ಯ ಸಭೆ ನಿರ್ಣಯ

ಕೊರಟಗೆರೆ : ಕೊರಟಗೆರೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಪ್ಲಕ್ಸ್ ಗಳ ಆರ್ಭಟಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಂಡು, ಪಟ್ಟಣದಲ್ಲಿನ ಹಲವು ವರ್ಷಗಳ ನ್ಯೂನತೆಗಳನ್ನು ಸರಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು.
ಬುಧವಾರದಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕಾವ್ಯಶ್ರೀ ಅವರ ಅಧ್ಯಕ್ಷ ತೆಯಲ್ಲಿ   ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡರೂ ಅವುಗಳನ್ನು ಪಾಲಿಸುವಲ್ಲಿ ನಿರ್ವಹಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಕಾದು ನೋಡಬೇಕಿದೆ. ಸಭೆಯಲ್ಲಿ ಸದಸ್ಯ ನಂದೀಶ್ ಮಾತನಾಡಿ ಪಟ್ಟಣದಲ್ಲಿ ಇತ್ತೀಚೆಗೆ ಅನಗತ್ಯ ಪ್ಲಕ್ಸ್ ಗಳು ತಿಂಗಳು ಗಟ್ಟಲೆ ಇರುವುದರಿಂದ ಸಾರ್ವಜನಿಕರಿಗೆ ಗೊಂದಲ ಕಿರಿಕಿರಿ ಬಗ್ಗೆ ಪ್ರಸ್ತಾಪಿಸಿದಾಗ, ಇನ್ನು ಮುಂದೆ ಪಟ್ಟಣದಲ್ಲಿ ಪ್ಲಕ್ಸ್,  ಬ್ಯಾನರ್, ಬಟಿಂಗ್ ಕಟ್ಟುವರು ಅವರ ಕಾರ್ಯಕ್ರಮಕ್ಕೆ ಎರಡು ದಿನಗಳ ಹಿಂದೆ ಕಟ್ಟಿ ಎರಡು ದಿನ ನಂತರ ತರೆವು ಗೊಳಿಸಬೇಕು, ಅದಕ್ಕೂ ಮುಂಚೆ ಪಟ್ಟಣ ಪಂಚಾಯತಿಗೆ ಅಡಿಗೆ ೨ರೂ ನಂತೆ ಶಲ್ಕ ಪಾವತಿಸಬೇಕು, ಈ ನಿಯಮ ಮೀರಿದರೆ ಅವುಗಳನ್ನು ಪ.ಪಂ ಯಿಂದ ತೆರವು ಗೊಳಿಸಲಾಗುತ್ತದೆ ಎಂದರು.
ಸದಸ್ಯ ಪುಟ್ಟನರಸಯ್ಯ ಮಾತನಾಡಿ ಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಅನಧಿಕೃತ ನಲ್ಲಿ ಸಂಪರ್ಕಗಳಿದ್ದು ಅವುಗಳನ್ನು ಬಂದ್ ಮಾಡಬೇಕು, ಇಲ್ಲವೇ ಅಧಿಕೃತಗೊಳಿಸಿ ಪಟ್ಟಣ ಪಂಚಾಯಿತಿಗೆ ಆದಾಯ ಬರುವಂತೆ ಮಾಡಬೇಕು ಹಾಗೂ ಹಲವಾರು ಮನೆಗಳ ಮುಂದೆ ಅನಗತ್ಯವಾಗಿ ನಲ್ಲಿಗಳಲ್ಲಿ ನೀರು ಪೋಲಾಗಿ ಚಂರಡಿಗಳಲ್ಲಿ ಹರಿಯುತ್ತಿದೆ, ಮುಖ್ಯ ಪೈಪ್ ಲೈನ್‌ನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಆದರೂ ವಾಟರ್‌ಮ್ಯಾನ್‌ಗಳು ಇವುಗಳ ಬಗ್ಗೆ ಹಲವು ಬಾರಿ ಹೇಳಿದರೂ ಗಂಬೀರವಾಗಿ ತೆಗೆದುಕೊಳ್ಳದೆ ಇದ್ದು ಇನ್ನು ಮುಂದೆ ಇದರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು, ಪಟ್ಟಣದಲ್ಲಿನ ಹಲವು ಬಡವರಿಗೆ ಹಳೆ ಮನೆ ರೀಪೇರಿಗೆ ಹಣ ಮಂಜೂರಿಗೆ ಸದಸ್ಯ ನಟರಾಜು ಆಗ್ರಹಿಸಿದರು, ಪಟ್ಟಣದಲ್ಲಿನ ನಿರ್ಮಾಣ ವಾಗಬೇಕಾಗಿರುವ ಪಟ್ಟಣ ಪಂಚಾಯತಿ ಆಶ್ರಯ ಯೋಜನೆ ಮನೆಗಳು, ಪ.ಪಂ. ಜಾಗದಲ್ಲಿ ನಿರ್ಮಾಣವಾಗಿರುವ ಹಲವು ಮನೆಗಳ ಖಾತೆಯ ಗೊಂದಲದ ಬಗ್ಗೆ, ಕೊಳಚೆ ಪ್ರದೇಶದ ಮನೆಗಳ ನಿರ್ಮಾಣದ ಲೋಪದೋಷಗಳನ್ನು ಕೂಡಲೆ ಮುಖ್ಯಾಧಿಕಾರಿಗಳು ಸರಿಪಡಿಸುವಂತೆ ಸದಸ್ಯ ಕೆ.ಆರ್. ಓಬಳರಾಜು ಪ್ರಸ್ತಾಪಿಸಿದರು.
ಹಿರಿಯ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಪಟ್ಟಣದ ಅಭಿವೃದ್ದಿಗೆ ಪ.ಪಂಗೆ ೬ ಕೋಟಿ ರೂ ವಿಶೇಷ ಅನುದಾನ ಶಾಸಕರು ಮುಂಜೂರು ಮಾಡಿಸಿದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ, ಈ ಬಗ್ಗೆ ಇಂಜಿನಿಯರ್ ಚುರುಕುಗೊಳ್ಳಬೇಕು, ಸಿಬ್ಬಂದಿಗಳ ಕೊರತೆ, ಇದರಿಂದ ಜನರ ಮುಂದೆ ನಾವುಗಳು ತಲೆ ತಗ್ಗಿಸಬೇಕಿದೆ ಎಂದರು. ಸಭೆಯಲ್ಲಿ ಗೌರಿಬಿದನೂರು ಮುಖ್ಯ ರಸ್ತೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಮದ್ಯೆ ರಸ್ತೆಯ ಜಾಗದಲ್ಲಿ ನಿರ್ಮಾಣವಾಗಿರುವ ಮತ್ತು ಆಗುತ್ತಿರುವ ಅನಧಿಕೃತ ಮನೆಗಳ ತೆರವು ಬಗ್ಗೆ, ಬೀದಿ ಬದಿ ವ್ಯಾಪಾರಿಗಳ ನಿರ್ದಿಷ್ಟ ಜಾಗದ ಬಗ್ಗೆ, ನ್ಯಾಯಾಲಯದಲ್ಲಿರುವ ಕಸ ವಿಲೇವಾರಿ ಘಟಕದ ಬಗ್ಗೆ, ಅಗ್ರಹಾರ ಕುಡಿಯುವ ನೀರಿನ ಘಟಕದ ಭೂಸ್ವಾಧೀನದ ಪರಿಹಾರದ ವಿಳಂಬ ಬಗ್ಗೆ ಹಾಗೂ ನೂತನ ಸ್ಥಾಯಿ ಸಮಿತಿ ಬಗ್ಗೆ ಪ್ರಸ್ತಾಪಿಸಲಾಯಿತು.
ನಂತರ ಅದ್ಯಕ್ಷೆ ಕಾವ್ಯಶ್ರೀ ಮಾತನಾಡಿ ಪಟ್ಟಣದಲ್ಲಿ ಹಲವಾರು ಅಭಿವೃದಿ ಕಾಮಗಾರಿಗಳು ಅಗಿವೆ, ಅದರೆ ಅವುಗಳ ಉದ್ಘಾಟನೆ ಕಾರ್ಯಕ್ರಮಗಳು ಆಗಿಲ್ಲ, ಅದೇ ರೀತಿ ನ್ಯಾಯಾಲಯದಲ್ಲಿ ಇರುವ ಹಲವು ಪ್ರಕರಣಗಳನ್ನು ನ್ಯಾಯಲಯದಲ್ಲೇ ಹೋರಾಟ ಮಾಡಿ ಸರಿಪಡಿಸಿಕೊಳ್ಳಲಾಗುವುದು ಎಂದರು.
ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ ನಾನು ಪ.ಪಂಗೆ ಏಪ್ರಿಲ್ ತಿಂಗಳಿಂದ ಅಧಿಕಾರಿಯಾಗಿ ಬಂದ ಮೇಲೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹಾಗೂ ಪಟ್ಟಣ ಪಂಚಾಯಿತಿ ನಿರ್ಣಯಗಳನ್ನು ಅದ್ಯಕ್ಷರ ಮತ್ತು ಸದಸ್ಯರ ರೊಂದಿಗೆ ಜಾರಿ ತರುವುದಾಗಿ ತಿಳಿಸಿದರು.
ಸಭೆಯಲ್ಲಿ ಪ.ಪಂ ಉಪಾದ್ಯಕ್ಷೆ ಭಾರತಿ, ಸದಸ್ಯರುಗಳಾದ ನಾಗರಾಜು, ಲಕ್ಷ್ಮೀನಾರಾಯಣ. ಹೇಮಲತಾ, ಅನಿತಾ, ಹುಸ್ನಾಪರಿಯಾ, ರಂಗನಾಥ್, ಮಂಜುಳಾ, ಗೋವಿಂದರಾಜು, ವೇಣು ಗೋಪಾಲ್ , ಅಧಿಕಾರಿಗಳು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker