ಕೂಬ್ಬರಿಗೆ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಲಿ : ಕೆ.ಟಿ. ಶಾಂತಕುಮಾರ್
ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರೈತರ ಬೃಹತ್ ಪ್ರತಿಭಟನೆ
ತಿಪಟೂರು : ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಕೃಷಿ ಮಾರುಕಟ್ಟೆ ಹೊಂದಿದ ತಿಪಟೂರು ತಾಲ್ಲೂಕಿನಲ್ಲಿ ಒಂದು ಲಕ್ಷದ ಐವತ್ತು ಸಾವಿರ ರೈತರಿದ್ದು, ಒಂದು ಕ್ವಿಂಟಾಲ್ ಕೂಬ್ಬರಿಗೆ ಇಪ್ಪತ್ತು ಸಾವಿರ ಬೆಂಬಲ ಬೆಲೆ ನಿಗದಿ ಮಾಡಿ ಎಂದು ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮನವಿ ಮಾಡಿದರು.
ತಿಪಟೂರಿನ ಎಪಿಎಂಸಿ ಆವರಣದಿಂದ ಸುಮಾರು 25ಕ್ಕೂ ಹೆಚ್ಚು ಟ್ರಾಕ್ಟರ್ ಗಳಿಂದ ಮಿನಿ ವಿಧಾನಸೌಧದ ವರೆಗೆ ಟ್ರಾಕ್ಟರ್ ಮೆರವಣಿಗೆ ಮೂಲಕ ನೂರಾರು ರೈತರೊಡನೆ ಬೃಹತ್ ಪ್ರತಿಭಟನೆ ನಡೆಸಿ ಮಾತನಾಡಿ ಒಂದು ಎಕರೆ ತೆಂಗು ಬೆಳೆಯಲು ವರ್ಷಕ್ಕೆ 40ಸಾವಿರ ಅಧಿಕ ಖರ್ಚು ಮಾಡಬೇಕು ಬೆಂಬಲ ಬೆಲೆ ಹನ್ನೋಂದು ಸಾವಿರ ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಮನಸೋ ಇಚ್ಛೆ ಜಿ ಎಸ್ ಟಿ ತೆರಿಗೆ ವಿಧಿಸುತ್ತಿದ್ದು ರೈತನು ತಾನು ಮಾರಾಟ ಮಾಡುವ ಬೆಳೆಗಳಿಗೆ ತೆರಿಗೆ ವಿಧಿಸಿದರೆ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗುತ್ತದೆ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ರಾಜಕಾರಣಿಗಳು ದೇಶದ ಬೆನ್ನೆಲುಬು ರೈತನಿಗೆ ಅನ್ಯಾಯ ಮಾಡಬಾರದು ರೈತನ ಶಾಪ ಒಳ್ಳೆಯದಲ್ಲ ಸರ್ಕಾರ ನೀಡುತ್ತಿರುವ ಯಾವ ರೈತ ಬೆಂಬಲ ಬೆಲೆ ರೈತನಿಗೆ ಅನುಕೂಲವಾಗಿದೆ ಎಂಬುದು ತಿಳಿಸಲಿ ತಾಲ್ಲೂಕಿನಲ್ಲಿ ರೈತರ ಸಂಕಷ್ಟಕ್ಕೆ ಹತ್ತಾರು ವರ್ಷಗಳಿಂದ ನೆರವಾಗುತ್ತಾ ಬಂದಿದ್ದೇನೆ ಮುಂದೆಯೂ ಸಹ ರೈತರ ಪರ ನಿಲ್ಲುವೆ ಎಂದು ಮಾತನಾಡಿದರು, ನಂತರ ತಾಲ್ಲೂಕು ದಂಡಾಧಿಕಾರಿ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ಗೊರಗೊಂಡನಹಳ್ಳಿ ಸುದರ್ಶನ್, ಮೋಹನ್ ಬಾಬು, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಕಾಶ್, ನೂರಾರು ರೈತರು ಇದ್ದರು.