ತಾಳಕರೆ ಸುಬ್ರಹ್ಮಣ್ಯಂ ಅವರ ತವರುನೆಲೆಯ ಅಭಿವೃದ್ದಿಗೆ ಆದ್ಯತೆ ನೀಡುವೆ : ಶಾಸಕ ಮಸಾಲಜಯರಾಮ್
ತುರುವೇಕೆರೆ : ನಾಡು ಕಂಡ ಶ್ರೇಷ್ಟ ರಾಜಕಾರಣಿ, ಮಾಜಿ ಸಚಿವರಾದ ತಾಳಕೆರೆ ಸುಬ್ರಹ್ಮಣ್ಯಂ ಅವರ ತವರು ನೆಲೆಯ ಅಭಿವೃದ್ದಿಗೆ ಆದ್ಯತೆ ನೀಡುವುದಾಗಿ ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ತಾಳಕೆರೆ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಸ್ಥಳೀಯ ಅಭಿವೃದ್ದಿ ಯೋಜನೆಯಡಿ ಸುಮಾರು 85 ಲಕ್ಷ ರೂ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಳಕೆರೆ ಸುಬ್ರಹ್ಮಣ್ಯಂ ಅವರಂತಹ ಮಹಾನ್ ವ್ಯಕ್ತಿ ತವರು ನೆಲೆಯನ್ನು ಅಭಿವೃದ್ದಿ ಪಡಿಸುವುದು ನನ್ನ ಕರ್ತವ್ಯವಾಗಿದೆ. ಗ್ರಾಮದ ಅಭಿವೃದ್ದಿಗೆ ಈ ಹಿಂದೆಯೇ ಅನುದಾನ ಬಿಡುಗಡೆಯಾಗಿದ್ದರೂ ಸ್ಥಳಿಯರ ನಿರಾಸಕ್ತಿಯಿಂದ ಅಭಿವೃದ್ದಿ ಕಾರ್ಯ ಕೈಗೊಳ್ಳಲು ವಿಳಂಬವಾಗಿತ್ತು. ಅಭಿವೃದ್ದಿಗೆ ಚಾಲನೆ ಸುಸಂದರ್ಭ ಒದಗಿ ಬಂದಿದ್ದು ಸಂತಸ ತಂದಿದೆ. ತಾಳಕೆರೆ ಗ್ರಾಮದ ಅಭಿವೃದ್ದಿಗೆ ಅಗತ್ಯ ಅನುದಾನ ನೀಡಲು ಸಿದ್ದನಿದ್ದು, ಸ್ಥಳೀಯರು ಗ್ರಾಮದ ಅಭಿವೃದ್ದಿ ವಿಚಾರದಲ್ಲಿ ಪಕ್ಷ ಬೇದ ಮರೆತು ಒಗ್ಗಟ್ಟಿನ ಮಂತ್ರ ಜಪಿಸುವಂತೆ ಶಾಸಕ ಮಸಾಲಜಯರಾಮ್ ಕಿವಿಮಾತು ಹೇಳಿದರು.
ದೇಗುಲಕ್ಕೆ ರಸ್ತೆ ನಿರ್ಮಿಸಿ:-
ಗ್ರಾಮಸ್ಥರ ಪರವಾಗಿ ಗ್ರಾ.ಪಂ. ಸದಸ್ಯ ರಾಜಶೇಖರ್ ಮಾತನಾಡಿ ತಾಳಕೆರೆ ಗ್ರಾಮ ವ್ಯಾಪ್ತಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ ಮಸಾಲಜಯರಾಮ್ ಅವರಿಗೆ ಅನಂತ ಕೃತಜ್ಷತೆಗಳು, ಗ್ರಾಮದ ಅದಿದೇವತೆ ಬಸವೇಶ್ವರ ಸ್ವಾಮಿಯವರ ದೇಗುಲಕ್ಕೆ ಭಕ್ತಾದಿಗಳು ಸಾಗಲು ರಸ್ತೆ ನಿರ್ಮಿಸಿ ಕೊಡುವ ಮೂಲಕ ಅನುಕೂಲ ಕಲ್ಪಸಿಕೊಡುವಂತೆ ಮನವಿ ಮಾಡಿದರು.
ತಾಲೂಕು ಭಾಜಪ ಅಧ್ಯಕ್ಷ ಮೃತ್ಯುಂಜಯ, ಗ್ರಾ.ಪಂ. ಸದಸ್ಯರಾದ ಸಿದ್ದಲಿಂಗಪ್ಪ, ರಾಜಶೇಖರ್, ಮುಖಂಡರಾದ ನಾಗರಾಜ್, ಮಹಾಲಿಂಗಪ್ಪ, ಗಿರಿಯಪ್ಪ, ಲಕ್ಷö್ಮಣಪ್ಪ, ವಕೀಲರಾದ ಚನ್ನಕೇಶವ,ರೈತ ಸಂಘದ ನಾಗೇಶ್, ತಾ.ಪಂ. ಮಾಜಿಅದ್ಯಕ್ಷ ಕೊಳಾಲ ಮಹೇಶ್, ವೆಂಕಟೇಶ್‌ಮೂರ್ತಿ ಮತ್ತಿತರಿದ್ದರು.