ಸೀಗೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮರುಳಿಕುಪ್ಪೆ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಗಂಗಾಧರ್ ಆಯ್ಕೆ
ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿ ಸೀಗೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮರುಳಿಕುಪ್ಪೆ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಗಂಗಾಧರ್ ಆಯ್ಕೆಯಾದರು.
ಸೀಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ದೊಡ್ಡೇರಿ ರಾಜಣ್ಣನವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಸದ್ಯ 12 ಸದಸ್ಯ ಬಲವುಳ್ಳ ಪಿ.ಎ.ಸಿ.ಎಸ್. ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಮುರುಳಿಕುಪ್ಪೆ ಶ್ರೀನಿವಾಸ್, ಪುಟ್ಟೇಗೌಡ ನಾಮಪತ್ರ ಸಲ್ಲಿಸಿದರು. ಉಪಾದ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಗಂಗಾಧರ್ ಮತ್ತು ಲಕ್ಕಯ್ಯ ನಾಮಪತ್ರಸಲ್ಲಿಸಿದರು. ಅಂತಿಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬAದ ಸಿ.ಡಿ.ಓ. ಶಿವಕುಮಾರ್ ರಹಸ್ಯ ಮತದಾನ ನಡೆಸಿದರು. ಮತದಾನ ಪ್ರಕ್ರಿಯೆ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಮುರುಳಿಕುಪ್ಪೆ ಶ್ರೀನಿವಾಸ್ 7 ಮತಗಳನ್ನು ಪಡೆದರೇ, ಪುಟ್ಟೇಗೌಡ 5 ಮತಗಳನ್ನು ಪಡೆದು, ಇನ್ನು ಉಪಾಧ್ಯಕ್ಷ ಸ್ಥಾನದ ಸ್ಪರ್ದಿಗಳಾಗಿದ್ದ ಗಂಗಾಧರ್ 7 ಮತಗಳನ್ನು ಹಾಗೂ ಲಕ್ಕಯ್ಯ 5 ಮತಗಳನ್ನು ಪಡೆದರು. ಹೆಚ್ಚು ಮತಗಳನ್ನು ಪಡೆದ ಮುರುಳಿಕುಪ್ಪೆ ಶ್ರೀನಿವಾಸ್ ಅಧ್ಯಕ್ಷರಾಗಿ , ಗಂಗಾಧರ್ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಮುರುಳಿಕುಪ್ಪೆ ಶ್ರೀನಿವಾಸ್ ಮಾತನಾಡಿ ನಾನು ಅಧ್ಯಕ್ಷನಾಗಲು ಕಾರಣೀಭೂತರಾದ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿರಿಸಿ ಮತ ಚಲಾವಣೆ ಮಾಡಿದ ಸಹ ನಿರ್ದೇಶಕರುಗಳಿಗೆ ಹಾಗೂ ಹಿತೈಷಿಗಳಿಗೆ ಋಣಿಯಾಗಿರುತ್ತೇನೆ.ಸೀಗೇಹಳ್ಳಿ ವ್ಯಾಪ್ತಿಯ ರೈತಾಪಿಗಳ ಕೃಷಿ ಅಭಿವೃದ್ದಿಗೆ ಪೂರಕವಾದ ಯೋಜನೆಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ. ಕನಿಷ್ಟ ಭೂಮಿ ಹೊಂದಿರುವ ವ್ಯಾಪ್ತಿಯ ಎಲ್ಲ ರೈತರುಗಳಿಗೆ ಸಾಲ ನೀಡುವ ಮೂಲಕ ನೆರವು ನೀಡುತ್ತೇನೆ. ಸಂಘದ ಶ್ರೇಯೋಭಿವೃದ್ದಿಗೆ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರ ಹಾಗೂ ಸಹ ನಿರ್ದೇಶಕರುಗಳ ಸಲಹೆಯಂತೆ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ನೂತನ ಅಧ್ಯಕ್ಷ –ಉಪಾದ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಮುರುಳಿಕುಪ್ಪೆ ಶ್ರೀನಿವಾಸ್ ಹಾಗೂ ಗಂಗಾಧರ್ ಅವರ ಪರವಾಗಿ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಉಪಾದ್ಯಕ್ಷರನ್ನು ನಿರ್ದೇಶಕರುಗಳಾದ ತಿಮ್ಮೇಶ್, ಲಕ್ಕಮ್ಮ, ಮಾಯಮ್ಮ,ಮಕಬುಲ್ ಪಾಷ, ಮುಖಂಡರುಗಳಾದ ನಾಗೇಗೌಡನಬ್ಯಾಲದಮಂಜಣ್ಣ,ವಕೀಲನಟರಾಜ್, ಎ,ಪಿ.ಎಂ.ಸಿ. ಮಾಜನಿರ್ದೇಶಕ ಜವರೇಗೌಡ, ನಾಗರಾಜ್, ಬಾಬು,ಸಣ್ಣಪ್ಪ,ದಿಲೀಪ್, ವಿಶ್ವಣ್ಣ ಸಿ.ಇ.ಓ. ಶ್ರೀನಿವಾಸ್ ಮತ್ತಿತರರು ಅಭಿನಂಧಿಸಿದರು.