ಕೊರಟಗೆರೆ
ಸೂರ್ಯಗ್ರಹಣ ಹಿನ್ನೆಲೆ ಇಂದು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನವಿಲ್ಲ
ಕೊರಟಗೆರೆ : ಸೂರ್ಯಗ್ರಹಣ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಪ್ರಸಿದ್ದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಇಂದು ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲವೆಂದು ದೇವಾಲಯದ ಆಡಳಿತ ಮಂಡಲಿ ಪರವಾಗಿ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅ.25ರಂದು ಮಂಗಳವಾರದ ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣದ ಹಿನ್ನೆಲೆ ಮಧ್ಯಾಹ್ನ 2 ಗಂಟಯಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ, 2:30 ರಿಂದ ಸಂಜೆ 5:11ಕ್ಕೆ ಸ್ಪರ್ಶವಾಗಲಿದ್ದು, ಸಂಜೆ 6:28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಭಕ್ತಾಧಿಗಳಿಗೆ ಮಧ್ಯಾಹ್ನ 2:30 ರಿಂದ ದೇವಿಯ ದರ್ಶನವಿರುವುದಿಲ್ಲ. ಇದೇ 26ರಂದು ಬೆಳಿಗ್ಗೆ ಎಂದಿನಂತೆ ದೇವಿಯ ದರ್ಶನವಾಗಲಿದೆ ಎಂದು ತಿಳಿಸಿದ್ದಾರೆ.