ತುಮಕೂರು

ವಿದ್ಯಾವಂತ ಸಮೂಹ ಸಾಮಾಜಿಕ ಜವಾಬ್ದಾರಿ ಮರೆಯುತ್ತಿರುವುದು ವಿಷಾದಕರ : ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ

ಅನ್ವೇಷಣಾ ಬಯಲು ರಂಗಮಂದಿರ ಉದ್ಘಾಟನೆ

ತುಮಕೂರು : ದಬ್ಬಾಳಿಕೆ,ದೌರ್ಜನ್ಯಗಳ ನಡುವೆಯು ನಾವು ಚನ್ನಾಗಿದ್ದೆವೆ ಎಂದು ಮುಖವಾಡ ಹೊತ್ತು ತಿರುಗುವುದು,ವಿದ್ಯಾವಂತರೆನಿಸಿಕೊಂಡವರಾದ ನಾವುಗಳು ಸಮಾಜಕ್ಕೆ ಮಾಡುವ ಮೋಸ ಎಂದು ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ ಅಭಿಪ್ರಾಯಪಟ್ಟಿದ್ದಾರೆ
ತುಮಕೂರು ಹೊರವಲಯದ ಪೆರುಮನಹಳ್ಳಿಯಲ್ಲಿ ಮಾನಸ ಮಂದಿರ ಸಮಾನ ಮನಸ್ಕ ಗೆಳೆಯುರು ಆಯೋಜಿಸಿದ್ದ ಅನ್ವೇಷಣಾ ಬಯಲು ರಂಗಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ನೈತಿಕ ಯಾತನೆ ನಡುವೆಯು ನಾವು ಚನ್ನಾಗಿದ್ದವೆ ಎಂದು ತೀರಿಸಿಕೊಳ್ಳಲು ಹೆಣಗಾಡುತ್ತಾ,ನಮ್ಮ ಸಾಮಾಜಿಕ ಜವಾಬ್ದಾರಿ ಯನ್ನು ಮರೆಯುತ್ತಿದ್ದೆವೆ ಎಂದರು
ವಕೀಲರಾದ ಹೊನ್ವಪ್ಪ ಅವರ ಪತ್ನಿ ಮಾನಸ ವಕೀಲರಾಗಿ, ಗೃಹಣಿಯಾಗಿ ಅವರು ಕಂಡಿದ್ದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಗೆಳೆಯರ ಬಳಗ ದುಡಿಯುತ್ತಿದೆ.ಸಾವಿನ ನಂತರವು ಮಾನಸ ಅವರ ಆಶಯಗಳನ್ನು ಈಡೇರಿಸುವ ಮೂಲಕ ಅವರನ್ನು ಸದಾ ಜೀವಂತವಾಗಿಡುವ ಕೆಲಸವನ್ನ ಮಾನಸ ಮಂದಿರದ ಮೂಲಕ ಮಾಡುತ್ತಿದ್ದಾರೆ ಎಂದರು
ಕಾನೂನನ್ನು ಭಗವದ್ಗೀತೆ ಎಂದು ಭಾವಿಸಬೇಕಿದೆ.ಆಗ ಬದುಕು ಸುಲಭವಾಗುತ್ತದೆ.ನ್ಯಾಯಯುತ ನಡೆವಳಿಕೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಿದೆ.ವಿದ್ಯಾವಂತ ಸಮೂಹ ನಟಕಾರರ ರೀತಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು

ಅಬ್ರಾಹಂ ಲಿಂಕನ್ ಅವರು ತಮ್ಮ ಮಗನನ್ನು ಶಾಲೆಗೆ ಕಳುಹಿಸುವಾಗ ಶಾಲೆಯ ಮುಖ್ಯಶಿಕ್ಷಕರಿಗೆ ಒಂದು ಪತ್ರ ಬರೆದು ಕೋರಿರುವ ಪ್ರಮುಖ ಅಂಶಗಳು ಇಡೀ ಜಗತ್ತಿನ ಮಕ್ಕಳಿಗಾಗಿ ಮಾಡಿಕೊಂಡು ಕೋರಿಕೆಗಳಾಗಿವೆ. ಅಂದರೆ ಅಂತಹ ಉದಾರತೆಯನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕಿದೆ ಎಂದು ಸಿ.ಹೆಚ್.ಹನುಮಂತರಾಯ ತಿಳಿಸಿದರು.
ಚಿಂತಕ ವಿವೇಕಾನಂದ ಮಾತನಾಡಿ,ಪ್ರೀತಿ,ಸ್ನೇಹ,ಸಂಬಂಧ,ತ್ಯಾಗ,ಕ್ಷಮೆ ಅನ್ನುವ ಪದಗಳು ಅರ್ಥ ಕಳೆದುಕೊಂಡಿವೆ. ಭಾವತೀವ್ರತೆ ಕಡಿಮೆಯಾಗಿದೆ. ಸಿನಿಮಾ ನಟರು,ಧಾರವಾಹಿ ನಟರ ನೆಡೆ,ನುಡಿ ಅನುಕರಣೀಯವಾಗುತ್ತಿದೆ. ಸೋಷಿಯಲ್ ಮತ್ತು ಎಲೆಕ್ಟ್ರಾನಿಕ್ ಮೀಡಿಯ ನಮ್ಮನ್ನು ರೂಪಿಸುತ್ತಿವೆ.ಅವಾಸ್ತವಿಕ ಚಿಂತನೆಯಲ್ಲಿ ಯುವಜನತೆ ತೊಡಗಿ,ತಮ್ಮ ಕಣ್ಮುಂದೆ ಯೇ ದೌರ್ಜನ್ಯ, ಹಿಂಸೆ ನಡೆದರು ಕನಿಷ್ಠ ಪ್ರತಿರೋಧ ತೊರೆದೆ ಇರುವುದು ವಿಷಾದನೀಯ ಎಂದರು.
ವಿದ್ಯಾವಾಚಸ್ಪತಿ ಕವಿತಾ ಕೃಷ್ಣ ಮಾತನಾಡಿ,ಆತ್ಮದ ಹಸಿವು ತಣಿಸಲು ಇಂತಹ ಮಾನಸ ಮಂದಿರಗಳ ಅಗತ್ತವಿದೆ. ಯುವ ಜನತೆಗೆ ಪ್ರೇರಣೆಯಾದ ಈ ಮಾನಸ ಮಂದಿರದಿಂದ ಜನರಿಗೆ ಹೆಚ್ಚು ಉಪಯೋಗವಾಗಲಿ ಎಂದು ಶುಭ ಹಾರೈಸಿದರು
ಮಾನಸ ಮಂದಿರದ ಮುಖವಾಣಿ WWW.manasamandira.org  ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್,ದೇವಾಲಯಕ್ಕಿಂತ ಗ್ರಂಥಾಲಯ ನಿರ್ಮಾಣ ಹೆಚ್ಚು ಶ್ರೇಷ್ಠ ಎಂಬ ಕಾರಣಕ್ಕೆ, ನಮ್ಮ ತಂದೆ, ತಾಯಿ ಸತ್ತ ನಂತರ ದೇವಾಲಯ ನಿರ್ಮಿಸುವಂತೆ ಕೆಲವರು ಸಲಹೆ ನೀಡಿದ್ದರೂ ಅದನ್ನು ಬಿಟ್ಟು ಗ್ರಾಮದಲ್ಲಿ ಗ್ರಂಥಾಲಯ ನಿರ್ಮಿಸಿದೆ.ಗ್ರಂಥಾಲಯ ಅರಿವಿನ ಸಂಕೇತ,ಪುಸ್ತಕಗಳು ಹಣತೆಯ ಸಂಕೇತ.ಅನ್ನುವ ಕಾರಣಕ್ಕೆ, ನಮ್ಮ ಊರಿನಲ್ಲಿ ಮೊದಲಿಗೆ ಒಂದು ಗ್ರಂಥಾಲಯ ಆರಂಭಿಸಿದ್ದವು.ಅದರ ಫಲವಾಗಿ ನಮ್ಮೂರಿನಲ್ಲಿ ಅನೇಕ ಸಾಹಿತಿಗಳು, ಬರಹಗಾರರ ಉದಯಕ್ಕೆ ಕಾರಣವಾಯಿತು.ಅಂತಹದ್ದೇ ಒಂದು ಕೆಲಸವನ್ನು ಮಾನಸ ಮಂದಿರದ ಮೂಲಕ ಅದರ ಸದಸ್ಯರು ಮಾಡಲು ಹೊರಟಿರುವುದು ಸ್ವಾಗತಾರ್ಹ.ಸಾವನ್ನು ಕುರಿತು ಆಧ್ಯಾತ್ಮ ಒಂದು ರೀತಿ ಹೇಳಿದರೆ, ವಿಜ್ಞಾನ ಮತ್ತೊಂದು ರೀತಿಯಲ್ಲಿ ಹೇಳುತ್ತದೆ.ಹೊನ್ನಪ್ಪ ಮತ್ತು ಸ್ನೇಹಿತರು ಮಾನಸ ಅವರ ಸಾವನ್ನು ಸಾರ್ಥಕಗೊಳಿಸುವ ಕೆಲಸ ಮಾಡುತ್ತಿದ್ದಾರೆ.ಇದರ ಜೊತೆಗೆ ಮಹಿಳೆಯರು, ರೈತರು, ಯುವಕರ ಸಬಲೀಕರಣಕ್ಕೆ ಮುಂದಾಗಿರುವುದು ಉತ್ತಮ ಬೆಳೆವಣಿಗೆ, ಇವರ ಜೊತೆಗೆ ಎಲ್ಲರೂ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಮಾನಸ ಮಂದಿರದ ಸದಸ್ಯ ಸತ್ಯನಾರಾಯಣ, ಮಾಸನ ಮಂದಿರ ಎಂಬುದು ಸಮಾನ ಮನಸ್ಕ ಗೆಳೆಯರು ಉದಾತ್ತ ಗುರಿಗಳನ್ನು ಇಟ್ಟುಕೊಂಡು ಆರಂಭಿಸಿದ ಒಂದು ವೇದಿಕೆಯಾಗಿದೆ, ಯುವಜನತೆಗೆ ಪುಸ್ತಕ ಜ್ಞಾನದ ಜೊತೆಗೆ ವಿಜ್ಞಾನ, ತಂತ್ರಜ್ಞಾನ ಕುರಿತ ಕಾರ್ಯಕ್ರಮಗಳ ಜೊತೆಗೆ, ನಾಡಿನ ಚಿಂತಕರು, ಸಾಹಿತಿಗಳು, ರಂಗಭೂಮಿ ತಜ್ಞರುಗಳಿಂದ ಕಾರ್ಯಾಗಾರ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ.ಅನ್ವೇಷಣಾ ಬಯಲು ರಂಗಮಂದಿರ,ತೆರೆದ ಮನೆಯ ಕಾರ್ಯಗಳು ಪುಸ್ತಕಗಳ ಓದು, ಶೋಧನೆಗೆ ಸಂಬಂಧಪಟ್ಟರೆ, ಸ್ವಯಂ ಕೃಷಿ ರೈತ ,ವನ್ಯಜೀವಿ, ಪರಿಸರ ಜೀವವಿಜ್ಞಾನ ಕುರಿತ ವೇದಿಕೆಯಾಗಿದೆ ಎಂದರು
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಹೇಮಂತ್.ಎನ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ ವಾಡ್,ಮಣಿ ನಾದೂರು,ಪ್ಲೋರೆಸಿಕ್ ಸಂಸ್ಥೆಯ ಉಪನಿರ್ದೇಶಕ ಡಾ.ಪ್ರದೀಪ್,ಮಾನಸಮಂದಿರದ ಶಶಿಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker