ಮಧುಗಿರಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತೊಮ್ಮೆ ರೈತರ ಸಾಲಮನ್ನಾ : ಕೆ.ಎನ್.ರಾಜಣ್ಣ

ಮಧುಗಿರಿ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮತ್ತೊಮ್ಮೆ ಮನ್ನಾ ಮಾಡಲು ಕ್ರಮ ಕೈಗೊಳ್ಳುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕಿನ ಪ್ರಥಮ ಎಟಿಎಂ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟವನ್ನು ಅನುಭವಿಸಿದವನಿಗೆ ಬಡವರ ನೋವು ತಿಳಿಯುತ್ತಿದೆ . ಅದರಂಂತೆ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದು 50 ಸಾವಿರದ ವರೆಗೂ ರೈತದ ಸಾಲಿ ಮನ್ನಾ ಮಾಡಿದ್ದೇವೆ . ಮುಂದೆಯೂ ಅಧಿಕಾರಕ್ಕೆ ಬಂದರೆ ಮತ್ತೆ ಸಾಲಮನ್ನಾ ಮಾಡುತ್ತೇವೆ ಮಧುಗಿರಿ ಉಪವಿಭಾಗ 167 ಕೋಟಿಗೂ ಹೆಚ್ಚು ಸಾಲ ನೀಡಿದ್ದೇವೆ . ಯಾವುದೇ ಪಕ್ಷ ಹಾಗೂ ಜಾತಿ ನೋಡಿ ಸಾಲ ನೀಡಿಲ್ಲ . ಈ ಬಾರಿ ಸಾಲ ನೀಡಬಾರದು ಎಂದು ಸಹಕಾರ ಇಲಾಖೆ ಸೂಚಿಸಿದೆ . ಆದರೂ ನಾನು ಬಡವರ ಪರವಾಗಿದ್ದು ಸಾಲ ನೀಡುತ್ತೇನೆ ಗ್ರಾಹಕರು ನೀಡಿರುವ ಠೇವಣಿ ಹಣದಿಂದ ಸಾಲ ನೀಡುತ್ತಿದ್ದೇವೆ ಹೊರೆತು ಸರ್ಕಾರದಿಂದ ಯಾವುದೇ ಸಾಲ ಪಡೆದಿಲ್ಲ. ಗ್ರಾಹಕರಿಗಾಗಿ ಚಿನ್ನದ ಸಾಲವನ್ನು ನೀಡುತ್ತಿದ್ದು , ಜೊತೆಗೆ ವಾಹನ ಸಾಲವನ್ನು ನೀಡುತ್ತಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಿ ಯಾವುದೇ ಕಾರಣಕ್ಕೂ ಖಾಸಗಿ ಬ್ಯಾಂಕಿನಲ್ಲಿ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಬೇಡಿ . ನನ್ನ ರಾಜಕೀಯ ಶಕ್ತಿಯೇ ಸಹಕಾರಿಗಳು ಇವರಿಂದಲೇ ಈ ಸ್ಥಾನಕ್ಕೆ ಬಂದಿದ್ದು ಮತ್ತೆ ನಿಮ್ಮ ಸೇವೆಗೆ ಸಿದ್ಧನಿದ್ದೇನೆ ಹಿಂದೆ ಶಾಸಕನಾಗಿದ್ದಾಗ ಇದ್ದ ಜನರ ಪ್ರೀತಿ ಸೋತಗ ಹೆಚ್ಚಾಗಿದ್ದು ಇಷ್ಟು ನನಗೆ ನಾನು ಕಳೆದ ಚುನಾವಣೆಯಂತೆ ಯಾರೂ ಮತ್ತೆ ಆಮಿಷಕ್ಕೆ ಒಳಗಾಗದೇ ಯೋಚಿಸಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸಿಂಗನಹಳ್ಳಿ ಕಾಂತರಾಜು ಮಾತನಾಡಿ, ಕೆ.ಎನ್.ಆರ್.ರಾಜಣ್ಣ ತೀರಾ ಹಿಂದುಳಿದ ಹೋಬಳಿಯಾದ ಕೊಡಿಗೇನಹಳ್ಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು ಅಲ್ಲಿನ ಬಡವರ ಪರವಾಗಿ ಈ ಎಟಿಎಂ ಘಟಕ ನೀಡಿದ್ದಾರೆ . ಇದರೊಂದಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದು ಯಾರೂ ಮರೆಯಬಾರದು ಎಂದರು .
ಈ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕಿನ ಎಂಡಿ ಶ್ರೀಧರ್, ಮಹಾಪ್ರಭಂದರೆ ರಾಮಕೃಷ್ಣ ನಾಯಕ, ಆಡಳಿತ ಸಲಹೆಗಾರ,ನೆಲಹೇಗಾರ ಜಂಗಮಪ್ಪ ನಿರ್ದೇಶಕರಾದ ಲಕ್ಷ್ಮೀನಾರಾಯಣ್, ರಾಜಕುಮಾರ್, ನಾಗೇಶ್ ಬಾಬು, ಕೇಂದ್ರ ಕಚೇರಿಯ ಹಿರಿಯ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರೇಣುರೇಶ್, ರಘುಪ್ರಸಾದ್, ಭಾನುಪ್ರಕಾಶ್, ಉಮೇಶ್, ಮೇಲ್ವಿಚಾರಕರಾದ ಸೀನಪ್ಪ, ನರಸಿಂಹಮೂರ್ತಿ, ರಾಮಕೃಷ್ಣ ಕಾಂಗ್ರೆಸ್ ಮುಖಂಡರಾದ ಆದಿನಾರಾಯಣರೆಡ್ಡಿ, ಜಯರಾಮರೆಡ್ಡಿ, ಲಕ್ಷ್ಮಿ ನರಸೇಗೌಡ, ಅಶ್ವತ್ ನಾರಾಯಣ್, ನಾರಾಯಣರೆಡ್ಡಿ, ಕಾಂತರಾಜು, ತಿಮ್ಮರಾಜು ಪ್ರಕಾಶ್, ನರಸಿಂಹಯ್ಯ, ಚಲಪತಿ, ಪೀರುನಾಬ್, ಬಾಲಾಜಿ, ದಾನಪ್ಪ, ಲಕ್ಷ್ಮೀರಂಗಯ್ಯ, ಹಾಗೂ ಇತರರು ಇದ್ದರು .

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker