ಗ್ರಾಮಾಂತರ ಕ್ಷೇತ್ರದ ಜನರಿಂದಲೇ ಶಾಸಕ ಡಿ. ಸಿ. ಗೌರಿಶಂಕರ್ ಜನ್ಮದಿನ ಆಚರಣೆ
ತುಮಕೂರು : ಗ್ರಾಮಾಂತರ ಕ್ಷೇತ್ರ ಗೂಳೂರು ಹೋಬಳಿ ನಾಲ್ಕೈದು ಗ್ರಾಮಗಳ ಜನರು ಒಗ್ಗೂಡಿ ಶಾಸಕರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗೂಳೂರು ಹೋಬಳಿ ಮಾರನಹಟ್ಟಿ,ದೇವರಟ್ಟಿ,ಬಾಳೆಗೌಡನಹಟ್ಟಿ,ಬಾಳಯ್ಯನಪಾಳ್ಯ,ಮೈಲನಹಟ್ಟಿ ಗ್ರಾಮಸ್ತರು ಮೈಲನಹಟ್ಟಿ ಗ್ರಾಮದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಶಾಸಕ ಡಿ ಸಿ ಗೌರೀಶಂಕರ್ ಜನ್ಮದಿನ ಆಚರಿಸಿ ಸಂಭ್ರಮಿಸಿದ್ದಾರೆ.
ಮೈಲನಹಟ್ಟಿ,ಮಾರನಹಟ್ಟಿ,ದೇವರಟ್ಟಿ,ಬಾಳೆಗೌಡನಹಟ್ಟಿ,ಬಾಳಯ್ಯನಪಾಳ್ಯ ಗ್ರಾಮಗಳು ಅಭಿವೃದ್ದಿಯಿಂದ ವಂಚಿತವಾಗಿದ್ದವುಡಿ ಸಿ ಗೌರೀಶಂಕರ್ ಶಾಸಕರಾದ ಮೇಲೆ ಈ ಗ್ರಾಮಗಳಲ್ಲಿ ಸುಸಜ್ಜಿತವಾದ ಸಿ ಸಿ ರಸ್ತೆ,ಚರಂಡಿ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳು ಹಂತಹಂತವಾಗಿ ಅನುಷ್ಟಾನಗೊಂಡವು,ಗ್ರಾಮಸ್ತರ ಬೇಡಿಕೆಗಳನ್ನು ಈಡೇರಿಸಿದ ಶಾಸಕರ ಜನ್ಮದಿನ ಆಚರಿಸುವ ಮೂಲಕ ಈ ಗ್ರಾಮಗಳ ಗ್ರಾಮಸ್ತರು ಗೌರವ ಸಮರ್ಪಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಡಿ ಸಿ ಗೌರೀಶಂಕರ್ ಮಾತನಾಡಿ ಮೈಲನಹಟ್ಟಿ ಎಂಬ ಸಣ್ಣ ಗ್ರಾಮದಲ್ಲಿ ಇತಿಹಾಸದಲ್ಲಿ ದಾಖಲಾಗುವಂತ ಅದ್ದೂರಿ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಷಯ ಗ್ರಾಮಸ್ತರ ಅಭಿಮಾನಕ್ಕೆ ಚಿರರುಣಿ ಎಂದರು.
ಗ್ರಾಮಾಂತರದಲ್ಲಿ ಜೆ ಡಿ ಎಸ್ ಎಂಬುದು ದೊಡ್ಡಪಡೆಈ ಪಡೆಕೆಣಕುವ ಪ್ರಯತ್ನ ಮಾಡಬೇಡಿ,ನೀವು ಕೆಣಕಿದಷ್ಟು ನಮ್ಮ ಸೈನಿಕರ ಶಕ್ತಿ ಜಾಸ್ತಿಯಾಗುತ್ತದೆ ಎಂದು ವಿರೋಧಿಗಳಿಗೆ ಕಿವಿಮಾತು ಹೇಳಿದರು
ಕಾರ್ಯಕ್ರಮದಲ್ಲಿ ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಜಿ ಪಾಲನೇತ್ರಯ್ಯ ಉದ್ದೇಶಿಸಿ ಮಾತನಾಡಿ ಡಿ ಸಿ ಗೌರೀಶಂಕರ್ ಅಂತ ಶಾಸಕರು ಸಿಕ್ಕಿರುವುದು ನಮ್ಮ ಪುಣ್ಯ,ಶಾಸಕರು ಗ್ರಾಮಾಂತರದಲ್ಲಿ ಆಯ್ಕೆಯಾದ ಮೇಲೆ ಕ್ಷೇತ್ರ ಸಮೃದ್ದವಾಗಿದೆ,ಜನರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಮುಂದಿನ ಬಾರಿಯೂ ಸಹ ಶಾಸಕರ ಕೈ ಬಲಪಡಿಸಿದರೆ ಅವರು ಸಚಿವರಾಗುವುದು ನಿಶ್ಚಿತ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತ್ ಕುಮಾರ್ ಮಾತನಾಡಿದರು.
ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್,ಬೆಳಗುಂಬ ಜಿಲ್ಲಾಪಂಚಾಯ್ತಿ ಉಸ್ತುವಾರಿ ಎನ್ ಆರ್ ಹರೀಶ್,ಜೆಡಿಎಸ್ ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ,ಜೆಡಿಎಸ್ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುವರ್ಣಗಿರಿಕುಮಾರ್ ಜೆಡಿಎಸ್ ಮುಖಂಡರಾದ ಪ್ರದೀಫ್( ದೀಪು),ತನ್ವೀರ್,
ವಿಷ್ಣುವರ್ಧನ್,ಗೂಳೂರು ಕೃಷ್ಣೇಗೌಡ,ರವಿಕುಮಾರ್,ಬೈಲಪ್ಪ,ಬಸವರಾಜು,ಸೇರಿದಂತೆ ಈ ಭಾಗದ ಎಲ್ಲಾ ಜೆಡಿಎಸ್ ಮುಖಂಡರು ಉಪಸ್ತಿತರಿದ್ದರು