ಕ್ರೈಂ ನ್ಯೂಸ್ಗುಬ್ಬಿಬ್ರೇಕಿಂಗ್ ಸುದ್ದಿ
ಕೌಟುಂಬಿಕ ಕಲಹ ಹಿನ್ನಲೆ ಪತಿಯಿಂದಲೇ ಪತ್ನಿ ಪುತ್ರನ ಹತ್ಯೆ..!
ಗುಬ್ಬಿ : ಗಂಡನೇ ತನ್ನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗುವಿಗೆ ಹಾರೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ಮುಂಜಾನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಂಜಾನೆ ಹೆಂಡತಿ ಕಾವ್ಯ(25) ಪುತ್ರ ಜೀವನ್ ಮೇಲೆ ಆರೋಪಿ ಸ್ವಾಮಿ ಕೈ ಸಿಕ್ಕ ಹಾರೆಯಿಂದ ತನ್ನ ಪತ್ನಿ ಮಗುವಿನ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ರಕ್ತಸಿಕ್ತವಾಗಿ ಮನೆಯಲ್ಲಿ ಬಿದ್ದಿದ್ದ ಶವ ಕಂಡು ಇಡೀ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.
ಆರೋಪಿ ಸ್ವಾಮಿ ಪರಾರಿ ಆಗುವ ಮುನ್ನ ಸ್ಥಳೀಯರೇ ಹಿಡಿದು ಕಟ್ಟಿ ಹಾಕಿ ಚೇಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮದಲ್ಲಿ ದೇವಾಲಯ ಅರ್ಚಕ ವೃತ್ತಿ ಮಾಡುತ್ತಿದ್ದ ಆರೋಪಿ ಸ್ವಾಮಿ ಈಚೆಗೆ ಅರ್ಚಕ ವೃತ್ತಿಯಿಂದ ತೆಗೆಯಲಾಗಿತ್ತು. ನಂತರದಲ್ಲಿ ತಿರುಗಾಡಿಕೊಂಡಿದ್ದ ಸ್ವಾಮಿ ತನ್ನ ಕುಟುಂಬದೊಂದಿಗೆ ಜಗಳ ವಾಡಿಕೊಂಡಿದ್ದ ಎನ್ನಲಾಗಿದೆ. ತವರಿಗೆ ಹೋಗಿದ್ದ ಪತ್ನಿ ಕಾವ್ಯಳನ್ನು ನಾಲ್ಕು ದಿನದ ಹಿಂದೆ ರಾಜಿ ಮಾಡಿಸಿ ಕರೆ ತರಲಾಯಿತು. ಮುಂದುವರೆದ ಪತಿ-ಪತ್ನಿ ಕಲಹವೇ ಈ ಕೃತ್ಯಕ್ಕೆ ಕಾರಣ ಇರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಸ್ಥಳಕ್ಕೆ ಸಿಪಿಐ ನದಾಫ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ದೇವರಾಜು.ಎಂ.ಎಸ್.