ಭೂತಾನಿನಿಂದ ಅಡಿಕೆ ಆಮದು ಸ್ಥಳೀಯ ಅಡಿಕೆ ಬೆಳೆಗಾರರ ಹಿತಕ್ಕೆ ಧಕ್ಕೆ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆ : ಕೇಂಧ್ರ ಸರಕಾರವು ಭಾರತಕ್ಕೆ ಭೂತಾನಿನಿಂದ ಅಡಿಕೆ ಆಮದು ಮಾಡಿಕೊಳ್ಳುವ ತೀರ್ಮಾನ ಕೈಗೊಂಡು ಸ್ಥಳೀಯ ಅಡಿಕೆ ಬೆಳೆಗಾರರ ಹಿತಕ್ಕೆಧಕ್ಕೆ ತಂದಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ರಾಷ್ಟçದಲ್ಲಿ ಸುಮಾರು 6.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಹಳದಿ ರೋಗ, ಬೇರು ಕೊಳೆ ರೋಗ, ಎಲೆ ಚುಕ್ಕೆರೋಗ ಅಡಿಕೆಗೆ ಬಾದಿಸುತ್ತಿದ್ದು ರೈತ ಕಂಗಾಲಾಗಿದ್ದಾನೆ. ಈ ವೇಳೆ ಭೂತಾನ್‌ನಿಂದ ಸುಮಾರು 17 ದಶಲಕ್ಷ ಕ್ವಿಂಟಾಲ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ತೀರ್ಮಾನ ಕೈಗೊಂಡು ಸ್ಥಳಿಯ ಅಡಿಕೆ ಬೆಳೆಗಾರರ ಹಿತಕ್ಕೆಧಕ್ಕೆ ತಂದಿದೆ. ಭೂತಾನಿನಿಂದ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರದ ನೀತಿ ಸ್ಥಳೀಯ ಅಡಿಕೆ ಬೆಳೆಗಾರಿನಿಗೆ ಸುಟ್ಟ ಗಾಯದ ಮೇಲೆ ಸುಣ್ಣ ಸುರಿದಂತಾಗಿದೆ ಎಂದು ಬೇಸರ ವ್ಯಕ್ತಡಿಸಿದರು.
ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಗೃಹ ಸಚಿವರು ಆಗಿರುಗವ ಅರಗಜ್ಞಾನೇಂದ್ರ ಅವರಿಗೆ ರೈತ ಪರ ಕಾಳಜಿ ಇದ್ದರೇ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಮಂಗಳೂರಿನಲ್ಲಿ ಹೆಚ್ಚು ಅಡಿಕೆ ಬೆಳೆಯುವ ಮಂಗಳೂರಿನರಾದ ನಳಿನ್‌ಕುಮಾರ್ ಕಟಿಲ್ ಈ ಬಗ್ಗೆ ಚಕಾರವೆತ್ತಿಲ್ಲ, ನಮ್ಮ ರಾಜ್ಯದ ಸಂಸದರ ನಿಯೋಗ ಪ್ರಧಾನಿ ಬಳಿಗೆ ತೆರಳಿ ಮಾತನಾಡುದೇ ಮೌನಕ್ಕೆ ಶರಣಾಗಿರುವುದು ನಾಚಿಕೇಗೇಡಿನ ಸಂಗತಿ ಎಂದರು.
ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆ ಬಿದ್ದ ಹಿನ್ನಲೆಯಲ್ಲಿ ಭಿತ್ತನೆಯಾಗಿದ್ದ ರಾಗಿ ಬೆಳೆ ನಾಶವಾಗಿದೆ. ಉತ್ತಮ ರಾಗಿ ಬೆಳೆಯುವ ನಿರೀಕ್ಷೆಯಲ್ಲಿದ್ದ ರೈತನ ಆಸೆ ಕಮರಿಹೋಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಹಿನ್ನಲೆಯಲ್ಲಿ ಪ್ರತಿ ಎಕರೆ ರಾಗಿ ಬೆಳೆಗೆ 25 ಸಾವಿರ ಪರಿಹಾರ ಧನ ನೀಡಲು ಉಭಯ ಸರಕಾರಗಳು ಮುಂದಾಗಲಿ ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಭೂತಾನಿನಿಂದ ಅಡಕೆ ಆಮದು ಮಾಡಿಕೊಳ್ಳುವ ತೀರ್ಮಾನದನ್ನು ಕೈ ಬೀಡಬೇಕು. ರಾಜ್ಯದ ಅಡಿಕೆ ಬೆಳೆಗಾರರಿಗಾಗಿರುವ ಅನ್ಯಾಯವನ್ನು ನಮ್ಮ ಪಕ್ಷದ ವರಿಷ್ಟರಿಗೆ ಮನವರಿಕೆ ಮಾಡಿಕೊಟ್ಟು, ಅಡಿಕೆ ಬೆಳೆಗಾರರೊಡಗೂಡಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಕಳಪೆ ಗುಣಮಟ್ಟದ ಜಲ್ಲಿಯನ್ನು ಬಳಸಲಾಗುತ್ತಿದೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಎಂಜಿನಿಯರ್‌ಗಳು ಮುಂದಾಗಬೇಕು. ಇಲ್ಲವಾದಲ್ಲಿ ಕಾಮಗಾರಿಯನ್ನು ಪರಿಶೀಲನೆಗಾಗಿ ಮೇಲಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದರು.
ಯುವ ಜೆ.ಡಿ.ಎಸ್. ಅಧ್ಯಕ್ಷ ಬಾಣಸಂದ್ರರಮೇಶ್, ವಕ್ತಾರ ಯೋಗೀಶ್, ಎ.ಪಿ.ಎಂ.ಸಿ.ಮಾಜಿ ಆದ್ಯಕ್ಷ ಮಾಯಣ್ಣಗೌಡ, ಹರಿಕಾರನಹಳ್ಳಿ ಮಂಜುನಾಥ್ ಮತ್ತಿತರಿದ್ದರು.