ಸಹೋದರತೆ ಮತ್ತು ಸಹಬಾಳ್ವೆಯ ಭಾರತವನ್ನು ಒಡೆಯಲು ಎಂದಿಗೂ ಬಿಡುವುದಿಲ್ಲ : ರಾಹುಲ್ ಗಾಂಧಿ
ಕಲ್ಪತರು ನಾಡು ಪ್ರವೇಸಿಸಿದ ಜೋಡೋ ಯಾತ್ರೆ: ರಾಹುಲ್ ಗಾಂಧಿಯೊಂಧಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಕಾರ್ಯಕರ್ತರು
ತುರುವೇಕೆರೆ : ಭಾರತ್ ಜೋಡೋ ಯಾತ್ರೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಿಂದ ತಾಲೂಕಿನ ಮಾಯಸಂದ್ರಕ್ಕೆ ಇಂದು ಬೆಳಿಗ್ಗೆ 6.30 ಕ್ಕೆ ಆಗಮಿಸುವ ಮೂಲಕ ತುಮಕೂರು ಜಿಲ್ಲೆಗೆ ಪ್ರವೇಶಿಸಿತು.
ಕಲ್ಪತರು ನಾಡಿನತ್ತ ಹೆಜ್ಜೆ ಹಾಕಿದ ರಾಹುಲ್‌ಗಾಂದೀಯವರಿಗೆ ಮಾಯಸಂದ್ರದಲ್ಲಿ 108 ಮಂದಿ ಮಹಿಳೆಯರು ಪೂರ್ಣ ಕುಂಭ ಸ್ವಾಗತ ದೊರಕಿತು. ಪಾದಯಾತ್ರೆಯುದ್ದಕ್ಕೂ ಪಕ್ಷಬೇದ ಮರೆತ ಸಾರ್ವಜನಿಕರು ರಾಹುಲ್ ಗಾಂಧಿಯನ್ನು ನೋಡಲು ಮುಗಿ ಬಿದ್ದರು. ಪಾದಯಾತ್ರೆಯುದ್ದಕ್ಕೂ ಪಾದಯಾತ್ರಿಗಳ ಹಸಿವು, ನೀರಡಿಕೆ ನೀಗಿಸುವಲ್ಲಿ ತೆರೆಯಲಾಗಿದ್ದ 40 ಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ಮಜ್ಜಿಗೆ,ನೀರು, ಬಾಳೆಹರ್ಣಣು, ಸೇಬು. ಸಿದ್ದ ಆಹಾರ, ಬಿಸ್ಕೇಟ್ ಎಳನೀರು ವಿತರಿಸಲಾಯಿತು, ಜಾನಪದ ಕಲಾತಂಡಗಳು ಪಾದಯಾತ್ರೆಗೆ ಮೆರುಗುತಂದವು. ಪಾದಯಾತ್ರೆಯನ್ನು ಹಿಂಬಾಲಿಸಿದ ದೇಶಭಕ್ತಿಗೀತೆಗಳನ್ನು ಬಿತ್ತರಿಸಿದ ಡಿ.ಜೆ.ಸೌಂಡ್ ಪಾದಾಯತ್ರಿಗಳಲ್ಲಿ ಉತ್ಸಾಹ ಹೆಚ್ಚಿಸಿತು. ಪಾದಯಾತ್ರೆಯುದ್ದಕ್ಕೂ ಜೋಡೋ ಜೋಡೋ ಭಾರತ್ ಜೋಡೋ ಘೋಷಣೆಗಳು ಮುಗಿಲುಮುಟ್ಟಿದವು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್ ,ಡಿ.ಕೆ.ಶಿವಕುಮಾರ್, ಕೆ.ಎನ್ ರಾಜಣ್ಣ, ಬೆಮೆಲ್ ಕಾಂತರಾಜ್, ಮಯೂರಜಯಕುಮಾರ್, ಹಿರಿಯ ಮುಖಂಡ ಚೌದ್ರಿರಂಗಪ್ಪ, ಜಿಲ್ಲಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಮಹಿಳಾಘಟಕದ ಅಧ್ಯಕ್ಷೆ ಗೀತಾರಾಜಣ್ಣ, ಬೆಸ್ಕಾಂ ಮಾಜಿ ನಿರ್ದೇಶಕ ವಸಂತಕುಮಾರ್, ಸೇರಿದಂತೆ ಅನೇಕ ಪ್ರಮುಖರು ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಯುವ ನಾಯಕ ರಾಹುಲ್‌ಗಾಂಧಿಯವರಿಗೆ ಸಾಥ್ ನೀಡಿದರು.
ಬುದ್ದನ ಮೂರ್ತಿ ನೀಡಿದ ದ.ಸಂ.ಸ :-
ತುರುವೇಕೆರೆಯತ್ತ ಹೆಜ್ಜೆ ಹಾಕುತ್ತಿದ್ದ ರಾಹುಲ್ ಗಾಂಧಿಯವರನ್ನು ದ.ಸಂ.ಸ ಮುಖಮಡರುಗಳಾದ ಕುಂದೂರು ಮುರುಳಿ, ದಂಡಿನಶಿವರಕುಮಾರ್, ಮಂಜಯ್ಯ, ಗುರುದತ್ ಮುಂತಾದವರು ಸ್ವಾಗತಿಸಿದರು. ಬುದ್ದನ ಮೂರ್ತಿಯನ್ನು ನೀಡುವ ಮೂಲಕ ಜೋಡೋಯಾತ್ರೆಗೆ ಶುಭಕೋರಿದರು. ಮತ್ತೆ ಅವರೊಂದಿಗೆ ಹೆಜ್ಜೆ ಹಾಕುತ್ತಾ ಜಿಲ್ಲೆಯಲ್ಲಿನಡೆದ ದಲಿತರ ಹತ್ಯಾಕಾಂಡ ಮತ್ತಿತರ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
ದೇಶ ವಿಭಜಿಸಲು ಬಿಡುವುದಿಲ್ಲ :-
ಪಟ್ಟಣದಲ್ಲಿ ಜೋಡೋ ಯಾತ್ರೆ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಾಹುಲ್‌ಗಾಂಧಿ ಬಸವತತ್ವಗಳು, ನಾರಾಯಣಗುರುರವರ ಚಿಂತನೆಗಳು ಹಾಗೂ ಅಂಬೇಡ್ಕರ್‌ರವರ ಆಶಯಗಳನ್ನು ಅರ್ಥ ಮಾಡಿಕೊಳ್ಳದ ಬಿ.ಜೆ.ಪಿ ಯವರು ದ್ವೇಷದ ವಿಷ ಬೀಜ ಬಿತ್ತುತ್ತಿದೆ. ಜಾತ್ಯಾತೀತ ರಾಷ್ಟçವದ ಭಾರತದಲ್ಲಿ ಒಂದು ಸಂಪ್ರದಾಯ, ಒಂದು ಭಾಷೆ, ಒಂದು ಧರ್ಮವನ್ನು ಬಲವಂತವಾಗಿ ಹೇರುವ ಮೂಲಕ ದೇಶವನ್ನು ಮತ್ತೆ ಆಳಬೇಕೆಂದು ಬಿ.ಜೆ.ಪಿ.ಕನಸು ಕಾಣುತ್ತಿದೆ. ಸಹೋದರತೆ ಸಹಬಾಳ್ವೆಯ ಭಾರತವನ್ನು ಬಿ.ಜೆ.ಪಿ.ಯವರು ಒಡೆಯಲು ನಾವು ಎಂದಿಗೂ ಬಿಡುವುದಿಲ್ಲ ಎಂದರು.
ಅನಂತ ಧನ್ಯವಾದಗಳು:-
ದೇಶದ ಐಕ್ಯತೆಗಾಗಿ ನಾವು ಹಮ್ಮಿಕೊಂಡಿರುವ ಜೋಡೋ ಯಾತ್ರೆಯಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ನಿಮಗೆ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಜೋಡೋ ಯಾತ್ರೆಯುದ್ದಕ್ಕೂ ಜನತೆ ತೋರುತ್ತಿರುವ ಪ್ರೀತಿಗೆ ನಾನು ಋಣಿ. ಕನ್ಯಾಕುಮಾರಿಯಿಂದ ಆರಂಭವಾಗಿರುವ ಪಾದಯಾತ್ರೆಗೆ ಉತ್ತಮ ಜನಸ್ಪಂದನೆ ವ್ಯಕ್ತವಾಗುತ್ತಿರುವುದು ಹರ್ಷ ತಂದಿದೆ.
ಮತ್ತೊಮ್ಮೆ ಮಾತನಾಡುವೆ.
ರಾಹುಲ್ ಗಾಂಧಿಯವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುವಂತೆ ಅಭಿಮಾನಿಗಳು ಒತ್ತಾಯಿಸಿದರು. ಈ ವೇಳೆ ರಾಹುಲ್ ಗಾಂಧಿಯವರು ಮಾತನಾಡಿದ ನಂತರ ನಾನು ಮಾತನಾಡಿದರೇ ಅದು ಶಿಷ್ಟಾಚಾರ ಉಲ್ಲಂಘೆಯಾಗುತ್ತದೆ. ನಾನು ಇನ್ನೋಮ್ಮೆ ಬಂದು ನಿಮ್ಮನ್ನುದ್ದೇಶಿಸಿ ಮಾತನಾಡುತ್ತೇನೆ, ಬನ್ನಿ ನಮ್ಮೊಂದಿಗೆ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿ ಎಂದು ಹುರಿದುಂಬಿಸಿದರು.
ಶ್ರೀ ಮಠದ ಸೇವೆ ಅನನ್ಯ:-
ನಾನು ನಿನ್ನೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಹೋಗಿದ್ದೆ. ಅಲ್ಲಿ ಶ್ರೀಗಳನ್ನು ಬೇಟಿ ಮಾಡಿ ಅಲ್ಲಿನ ಜನಮುಖಿ ಕಾರ್ಯಗಳ ಬಗ್ಗೆ ತಿಳಿದುಕೊಂಡೆ, ಶ್ರೀ ಆದಿಚುಂಚನಗಿರಿ ಮಠದ ಸೇವಾ ಕಾರ್ಯಗಳು ಅನನ್ಯವಾದುದು ಎಂದರು.