ತುಮಕೂರು

ಅಸ್ಪೃಷ್ಯತೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುಲು ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ಒತ್ತಾಯ

ತುಮಕೂರು ಛಲವಾದಿ ಪತ್ತಿನ ಸೌಹಾರ್ಧ ಸಂಘದ 3ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹೇಳಿಕೆ

ತುಮಕೂರು : ಒಂದು ಸಹಕಾರಿ ಸಂಘ ಅಭಿವೃದ್ದಿ ಹೊಂದಬೇಕಾದರೆ ಸಾಲ ನೀಡುವುದು ಮತ್ತು ಮರುಪಾವತಿ ಎರಡು ಕೂಡ ಅತ್ಯಂತ ಮುಖ್ಯವಾದ ಕ್ರಿಯೆಗಳಾಗಿವೆ ಎಂದು ಶಾಸಕ ಹಾಗೂ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್.ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ದಲಿತ ಛಲವಾದಿ ಮಹಾಸಭಾ ಸಭಾಂಗಣದಲ್ಲಿ ತುಮಕೂರು ಛಲವಾದಿ ಪತ್ತಿನ ಸೌಹಾರ್ಧ ಸಂಘ(ರಿ) ಆಯೋಜಿಸಿದ್ದ ಮೂರನೇ ವರ್ಷದ ಸರ್ವ ಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸಹಕಾರಿ ಸಂಘದ ಸದಸ್ಯರುಗಳು, ಹೂಡಿಕೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಸಮುದಾಯ ಹಣವಂತರನ್ನು ಹುಡುಕಿ ಅವರು ನಿಮ್ಮ ಬ್ಯಾಂಕಿನಲ್ಲಿ ವ್ಯವಹಾರ ನಡೆಸುವಂತೆ ಪ್ರೇರೆಪಿಸಬೇಕೆಂದರು.
ರಾಜ್ಯದಲ್ಲಿ ಅಸ್ಪೃಷ್ಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ದೇವರ ಊರುಗೊಲು ಮುಟ್ಟಿದನೆಂಬ ಕಾರಣಕ್ಕೆ ದಲಿತ ಕುಟುಂಬಕ್ಕೆ ದಂಡ ಮತ್ತು ಬಹಿಷ್ಕಾರ ಹಾಕಿರುವುದೇ ಸ್ಪಷ್ಟ ಉದಾಹರಣೆಯಾಗಿದೆ.ದಲಿತ ಸಮುದಾಯಕ್ಕೆ ಸೇರಿದ ಎಲ್ಲಾ ಶಾಸಕರು ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ದೂರು ನೀಡಿ, ಅಸ್ಪೃಷ್ಯತೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಹೆಚ್.ನಾಗೇಶ್ ತಿಳಿಸಿದರು.
ರಾಜ್ಯ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿ ಇಡೀ ರಾಜ್ಯವನ್ನು ಸುತ್ತಿ,ಮಾದರಿ ಯೋಜನೆಗಳನ್ನ ಜಾರಿಗೆ ತರಲಾಗಿದೆ.ನೇರ ಸಾಲದಲ್ಲಿ ಇದುವರೆಗೂ ಇದ್ದ 50 ಸಾವಿರ ಸಹಾಯಧನವನ್ನು 1 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ50ರಷ್ಟು ಸಬ್ಸಿಡಿ ಇದೆ.ಅದೇ ರೀತಿ ಭೂ ಒಡೆತನ,ಉದ್ದಿಮೆಶೀಲತೆ,ಗಂಗಾ ಕಲ್ಯಾಣ ಯೋಜನೆಯ ಅನುದಾನ ವನ್ನು ಹೆಚ್ಚಿಸಲಾಗಿದೆ.ಬೀದಿ ಬದಿ ವ್ಯಾಪಾರಿಗಳಿಗೆ 3.50 ಕ್ಷ ರೂ ಸಾಲಸೌಲಭ್ಯ ನೀಡಲಾಗಿದೆ ಎಂದರು.

ಕಲಾಶ್ರೀ ಡಾ.ಲಕ್ಷö್ಮಣ್‌ದಾಸ್ ಮಾತನಾಡಿ,ಛಲವಾದಿ ಸಮುದಾಯ ಸಂಸ್ಕಾರವಂತ ಸಮಾಜ.ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಶಿಸ್ತನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ.ಸಮುದಾಯದ ಸಹಕಾರಿ ಸಂಘದ ಬೆಳವಣಿಗೆಗೆ ನಮ್ಮೆಲ್ಲರ ಸಹಕಾರ ಅಗತ್ಯವಿದೆ.ನಾವೆಲ್ಲರೂ ಸಹಕಾರಿ ಸಂಘದ ಸದಸ್ಯತ್ವ ಪಡೆಯುವ ಜೊತೆಗೆ, ಖಾತೆ ತೆರೆದು ವ್ಯವಹಾರ ನಡೆಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಮಾತನಾಡಿ,ಛಲವಾದಿ ಸಮುದಾಯದ ಶಿಕ್ಷಣದ ಜೊತೆಗೆ, ಅರ್ಥಿಕ ಸಬಲೀಕರಣದತ್ತಲೂ ಗಮನಹರಿಸಬೇಕಿದೆ.ಇದಕ್ಕೆ ಪೂರಕವೆಂಬಂತೆ ಸಹಕಾರಿ ಸಂಘಗಳ ಬೆಳವಣಿಗೆಗೆ ವಿದ್ಯಾವಂತರಾದ ನಾವೆಲ್ಲರೂ ಕೈಜೋಡಿಸಬೇಕಿದೆ.ಶ್ರೀಮಂತರ ಸಂಪತ್ತನ್ನು ಹೆಚ್ಚಿಸಲು ದುಡಿಯುವ ಬದಲು, ನಮ್ಮ ಅರ್ಥಿಕ ಬೆಳವಣಿಗೆಗೆ ಮುಂದಾಗೋಣ ಎಂದರು.
ಕೆಪಿಟಿಸಿಎಲ್‌ನ ನಿವೃತ್ತ ಮುಖ್ಯ ಇಂಜಿನಿಯರ್ ಆದಿನಾರಾಯಣ್ ಮಾತನಾಡಿ,ಸಣ್ಣ,ಪುಟ್ಟ ಸಮುದಾಯಗಳು ಸಂಘಟನೆ ಯಾಗುತ್ತಿವೆ.ಆದರೆ ಅಂಬೇಡ್ಕರ್ ಹೆಸರಿನಲ್ಲಿ ವಿದ್ಯೆ ಪಡೆದು,ಉದ್ಯೋಗ ಪಡೆದಿರುವ ನಾವುಗಳು ಇಂದಿಗೂ ಸಮುದಾಯದ ಜೊತೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿರುವುದು ಸರಿಯಲ್ಲ.ಸದಸ್ಯರ ಸಂಖ್ಯೆ ಹೆಚ್ಚಳದ ಜೊತೆಗೆ, ಪ್ರತಿಯೊಬ್ಬ ಸದಸ್ಯರು ಬ್ಯಾಂಕಿನೊಂದಿಗೆ ವ್ಯವಹಾರಿಸುವುದನ್ನು ಮುಂದುವರೆಸಬೇಕೆಂದರು.
ತುಮಕೂರು ಛಲವಾದಿ ಪತ್ತಿನ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಸಿ.ಭಾನುಪ್ರಕಾಶ್ ಮಾತನಾಡಿ,ಕೋರೋನ ಸಂದರ್ಭದಲ್ಲಿ ಹುಟ್ಟಿದ ನಮ್ಮ ಸಹಕಾರಿ ಸಂಘ ಆರಂಭದಲ್ಲಿ 150 ಜನ ಸದಸ್ಯರನ್ನು ಹೊಂದಿದ್ದು,ಪ್ರಸ್ತುತ 275 ಜನ ಸದಸ್ಯರನ್ನು ಹೊಂದಿದೆ.ತುಮಕೂರು ನಗರ ಮತ್ತು ಗ್ರಾಮಾಂತರ ತಾಲೂಕಿಗೆ ಸಿಮೀತವಾಗಿರುವ ಸಂಘ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗು ವಿಸ್ತರಿಸಲಾಗುವುದು.ಷೇರು ತೆಗೆದುಕೊಂಡಾಕ್ಷಣ ಸದಸ್ಯರ ಕೆಲಸ ಮುಗಿಯು ವುದಿಲ್ಲ.ಬ್ಯಾಂಕಿನೊಂದಿಗೆ ವ್ಯವಹರಿಸಿದರೆ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಜಿಲ್ಲೆಯಲ್ಲಿ ದಲಿತ ಸಮುದಾಯದ ಒಂದು ಮಹಿಳಾ ಕೋ ಅಪರೇಟಿವ್ ಬ್ಯಾಂಕ್ ಆರಂಭಿಸುವ ಉದ್ದೇಶ ಇದೆ ಎಂದರು.
ಬ್ಯಾAಕಿನ ಉಪಾಧ್ಯಕ್ಷ ರಂಗಯ್ಯ ವಾರ್ಷಿಕ ವರದಿ ಮಂಡಿಸಿದರು.ನಿರ್ದೇಶಕ ಹೆಚ್.ಎಸ್.ಪರಮೇಶ್ ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ ಗೂಳೂರು ಗ್ರಾಮಪಂಚಾಯಿತಿ ಸದಸ್ಯೆ ಮಮತ,ಬ್ಯಾಂಕಿನ ನಿರ್ದೇಶಕರಾದ ಮಂಜಾಕ್ಷಿ, ಸುವರ್ಣ,ಗಿರೀಶ್,ಸಂಪತ್ ಕುಮಾರ್,ಕೆ.ಕುಮಾರ್,ಡಿ.ಎನ್.ಭೈರೇಶ್,ಚಲುವರಾಜು, ಜಿ.ಆರ್.ಸುರೇಶ್,ಶಿವಪ್ರಸಾದ್, ಚೇತನ್, ಸಿಇಓ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

 

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker