ಕುಣಿಗಲ್
ಹೆಜ್ಜೇನು ಕಚ್ಚಿ ದನ ಮೇಯಿಸುತ್ತಿದ್ದ ರೈತ ರಾಮಣ್ಣನ ಸಾವು
ಕುಣಿಗಲ್ : ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬೀಚನಹಳ್ಳಿ ಗ್ರಾಮದಲ್ಲಿ ಬುಧವಾರ 48 ವರ್ಷ ವಯಸ್ಸಿನ ರಾಮಣ್ಣ ಎಂಬ ರೈತ ತೋಟದ ಬಳಿ ಹಸುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಏಕಾ ಏಕಿ ಹೆಜ್ಜೆನು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹೆಜ್ಜೆನಿನ ಕಡಿತಕ್ಕೆ ರಾಮಣ್ಣ ಸ್ಥಳದಲ್ಲಿ ಸಾವನ್ನಪ್ಪಿದ್ದು ಮತ್ತೊಬ್ಬ ರಾಜು ಎಂಬಾತ ಸ್ಥಳದಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪರಾಗಿದ್ದಾನೆ.
ಸ್ಥಳಕ್ಕೆ ಹುಲಿಯೂರುದುರ್ಗ ರಾಜಸ್ವ ನಿರೀಕ್ಷಕ ಹರೀಶ್ ಕುಮಾರ್ ಹಾಗೂ ಗ್ರಾಮಲೆಕ್ಕಾಧಿಕಾರಿ ಹುಲಿಯೂರುದುರ್ಗ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.